Asianet Suvarna News Asianet Suvarna News

Card Stuck in ATM : ಎಟಿಎಂ ಯಂತ್ರದಲ್ಲಿ ಕಾರ್ಡ್ ಸಿಕ್ಕಿಬಿದ್ರೆ ಚಿಂತೆ ಬೇಡ,ಹೀಗೆ ಮಾಡಿ!

ಹಣ ಬೇಕು ಎಂದ ತಕ್ಷಣ ಎಟಿಎಂ ಯಂತ್ರ ಎಲ್ಲಿದೆ ಅಂತಾ ಹುಡುಕಾಡ್ತೆವೆ. ಕಾರ್ಡ್ ಹಾಕಿ,ಹಣವನ್ನು ಪರ್ಸ್ ಗೆ ಹಾಕಿ ಬರ್ತೆವೆ. ಕೆಲವೊಮ್ಮೆ ಅರ್ಜೆಂಟ್ ಹಣ ಬೇಕು ಅಂದಾಗ ಯಂತ್ರ ಕೈಕೊಡುತ್ತೆ. ಎಟಿಎಂ ಮಶಿನ್ ನಲ್ಲಿ ಕಾರ್ಡ್ ಸಿಕ್ಕಿಬೀಳುತ್ತೆ. ಟೆನ್ಷನ್ ನಲ್ಲಿ ಬೆವರು ಒರೆಸುವ ಬದಲು, ಈ ಟ್ರಿಕ್ ಉಪಯೋಗಿಸಿ,ರಿಲ್ಯಾಕ್ಸ್ ಆಗಿ. 
 

What To Do If ATM debit  credit Card Is Stuck In The ATM follow these steps
Author
Bangalore, First Published Dec 21, 2021, 12:16 PM IST

Tech Desk: ಗ್ರಾಹಕ (Customer)ರ ಅನುಕೂಲಕ್ಕಾಗಿ ಬ್ಯಾಂಕ್ (Bank) ಅನೇಕ ಸೌಲಭ್ಯಗಳನ್ನು ಶುರು ಮಾಡಿದೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ (Digital )ವ್ಯವಹಾರ ಹೆಚ್ಚಾಗಿದೆ. ಆದ್ರೂ ನಗದು ಅವಶ್ಯಕ. ಬ್ಯಾಂಕ್ ಶಾಖೆಗೆ ಹೋಗಿ ಸರತಿ ಸಾಲಿನಲ್ಲಿ ನಿಂತು ನಗದು ಪಡೆಯುವ ಅಗತ್ಯ ಈಗಿಲ್ಲ. ಎಟಿಎಂ(ATM)ಗೆ ಹೋಗಿ ಕಾರ್ಡ್ (Card) ಉಜ್ಜಿದ್ರೆ ಹಣ ಬರುತ್ತದೆ. ಜನರು ನಗದು ಪಡೆಯುವುದು ಸುಲಭವಾಗಿದೆ. ಕೆಲವೊಮ್ಮೆ ಡೆಬಿಟ್ ಕಾರ್ಡ್ (Debit card )ಅಥವಾ ಕ್ರೆಡಿಟ್ ಕಾರ್ಡ್ (Credit card )ಎಟಿಎಂನಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಈ ಕಡೆ ಕಾರ್ಡೂ ಇಲ್ಲ,ಆ ಕಡೆ ಹಣವೂ ಇಲ್ಲ. ಅಂಥ ಪರಿಸ್ಥಿತಿಯಲ್ಲಿ ಗಾಬರಿಯಾಗುವುದು ಸಹಜ. ಏನೇ ಮಾಡಿದ್ರೂ ಕಾರ್ಡ್ ಹೊರಗೆ ಬರದಾಗ ಗೊಂದಲ ಸೃಷ್ಟಿಯಾಗುತ್ತದೆ. ಎಟಿಎಂನಲ್ಲಿ ಸಿಲುಕಿಕೊಂಡಿರುವ ಕಾರ್ಡನ್ನು ಹೇಗೆ ತೆಗೆಯಬೇಕು ಎಂಬುದು ಗೊತ್ತಿದ್ದರೆ ಟೆನ್ಷನ್ ಆಗುವುದಿಲ್ಲ. ಇಂದು ನಾವು ಎಟಿಎಂನಲ್ಲಿ ಸಿಕ್ಕಿಬಿದ್ದ ಕಾರ್ಡ್ ಹೇಗೆ ಮರಳಿ ಪಡೆಯುವುದು ಎಂಬುದನ್ನು ತಿಳಿಸುತ್ತೇವೆ.ಮೊದಲು ಯಾವ ಕಾರಣಕ್ಕೆ ಎಟಿಎಂನಲ್ಲಿ ಕಾರ್ಡ್ ಸಿಲುಕಿಕೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. 

 ಈ ಕೆಳಗಿನ ಕಾರಣಗಳಿಂದಾಗಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಎಟಿಎಂ ಯಂತ್ರದಲ್ಲಿ ಸಿಲುಕಿಕೊಳ್ಳಬಹುದು :

1)ಎಟಿಎಂಗೆ ಹೋದ ನಾವು ಅನೇಕ ಬಾರಿ ಕಾರ್ಡ್ ಒಳಗೆ ಹಾಕಿ,ವಿವರ ನಮೂದಿಸಲು ತಡಕಾಡುತ್ತೇವೆ. ಕಾರ್ಡ್ ಯಂತ್ರದಲ್ಲಿಟ್ಟು ವಿವರವನ್ನು ಫಟಾಫಟ್ ನೀಡದೆ ಹೋದಲ್ಲಿ ಕಾರ್ಡ್ ಸಿಲುಕಿಕೊಳ್ಳುವ ಸಾಧ್ಯತೆಗಳಿರುತ್ತವೆ.

2)ಎಟಿಎಂ ಕಾರ್ಡ್ ಸರಿಯಾದ ಬಳಕೆ ಕೆಲವರಿಗೆ ತಿಳಿದಿರುವುದಿಲ್ಲ. ಇಲ್ಲವೆ ಪಿನ್ ಮರೆತಿರುತ್ತಾರೆ. ಪದೇ ಪದೇ ತಪ್ಪು ಮಾಹಿತಿ ಅಥವಾ ಪಿನ್ ನಮೂದಿಸುತ್ತಾರೆ. ಇದರಿಂದಲೂ ಕಾರ್ಡ್ ಸಿಲುಕಿಕೊಳ್ಳುತ್ತದೆ.

3)ನೀವು ಎಟಿಎಂ ಬಳಸುವ ವೇಳೆ ವಿದ್ಯುತ್ ಸಂಪರ್ಕದಲ್ಲಿ ಸಮಸ್ಯೆಯಾದರೆ,ವಿದ್ಯುತ್ ಕೈಕೊಟ್ಟರೂ ಕಾರ್ಡ್ ನಿಮ್ಮ ಕೈಗೆ ಸಿಗುವುದಿಲ್ಲ.

 4)ಇತರ ತಾಂತ್ರಿಕ ಸಮಸ್ಯೆಗಳು ಮತ್ತು ಆ ಸರ್ವರ್‌ ಸಮಸ್ಯೆಯಿಂದಲೂ ಕಾರ್ಡ್ ಅಲ್ಲಿಯೇ ಉಳಿಯುವ ಸಾಧ್ಯತೆಗಳಿರುತ್ತವೆ.

ಕಾರ್ಡ್ ವಾಪಸ್ ಪಡೆಯುವುದು ಹೀಗೆ : ಡೆಬಿಟ್ ಕಾರ್ಡ್ ಎಟಿಎಂ ಯಂತ್ರದಲ್ಲಿ ಸಿಲುಕಿಕೊಂಡರೆ ತಕ್ಷಣ ಬ್ಯಾಂಕ್‌ (Bank)ಗೆ ತಿಳಿಸಬೇಕು.  ಬ್ಯಾಂಕಿನ ಕಸ್ಟಮರ್ ಕೇರ್ (Customer Care) ಸಂಖ್ಯೆಗೆ ಕರೆ ಮಾಡಬೇಕು.ಯಾವ ನಗರದಲ್ಲಿ,ಯಾವ ಬ್ಯಾಂಕ್ ಎಟಿಎಂನಲ್ಲಿ,ಯಾವ ಸಮಯದಲ್ಲಿ ಕಾರ್ಡ್ ಸಿಲುಕಿಕೊಂಡಿದೆ ಎಂಬ ಮಾಹಿತಿ ನೀಡಬೇಕು. ಖಾತೆ ಹೊಂದಿರುವ ಬ್ಯಾಂಕ್ ನ ಎಟಿಎಂ ಯಂತ್ರದಲ್ಲಿ ನಿಮ್ಮ ಕಾರ್ಡ್ ಸಿಲುಕಿಕೊಂಡಿದ್ದರೆ ಅದನ್ನು ಪಡೆಯುವುದು ನಿಮಗೆ ಸುಲಭ. ಆದರೆ ಬೇರೆ ಬ್ಯಾಂಕ್‌ನ ಎಟಿಎಂ ಯಂತ್ರದಲ್ಲಿ ಸಿಲುಕಿದ್ದರೆ ಸ್ವಲ್ಪ ಕಾಯಬೇಕಾಗುತ್ತದೆ.

ಕಾರ್ಡ್ ಪಡೆಯಲು ಎರಡು ಆಯ್ಕೆ : ಬ್ಯಾಂಕ್ ಕಸ್ಟಮರ್ ಕೇರ್ ಗೆ ನೀವು ಕರೆ ಮಾಡಿದಾಗ ಅವರು ನಿಮ್ಮ ಮುಂದೆ ಎರಡು ಆಯ್ಕೆಗಳನ್ನು ಇಡುತ್ತಾರೆ. ಒಂದು ಕಾರ್ಡ್ ರದ್ದುಗೊಳಿಸುವ ಆಯ್ಕೆ. ಇನ್ನೊಂದು ಮರಳಿ ಪಡೆಯುವುದು. ನಿಮ್ಮ ಕಾರ್ಡನ್ನು ಬೇರೆಯವರು ದುರುಪಯೋಗ ಪಡಿಸಿಕೊಳ್ಳಬಹುದು ಎಂಬ ಭಯವಿದ್ದರೆ ನೀವು ಕಾರ್ಡ್ ರದ್ದುಗೊಳಿಸಬಹುದು. ಮತ್ತೊಂದು ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಒಂದು ವಾರದಲ್ಲಿ ಮನೆ ವಿಳಾಸಕ್ಕೆ ಕಾರ್ಡ್ ಬರುತ್ತದೆ. ತುರ್ತಾಗಿ ಬೇಕೆನ್ನುವವರು ಬ್ಯಾಂಕ್ ಶಾಖೆಗೆ ಭೇಟಿ ನೀಡಬಹುದು.ಎಟಿಎಂ ಯಂತ್ರಗಳಲ್ಲಿ ಸಿಲುಕಿದ್ದ ಕಾರ್ಡ್ ಗಳನ್ನು ಆಯಾ ಬ್ಯಾಂಕ್ ಗಳಿಗೆ ತಲುಪಿಸಲಾಗುತ್ತದೆ. ನಿಮ್ಮ ಬ್ಯಾಂಕ್ ಶಾಖೆಗೆ ಕಾರ್ಡ್ ಬಂದ ಮೇಲೆ ನೀವು ನಿಮ್ಮ ಕಾರ್ಡ್ ಪಡೆಯಬಹುದು. ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ನಿಮಗಿದೆ. ಎಟಿಎಂ ಯಂತ್ರದಲ್ಲಿ ಕಾರ್ಡ್ ಸಿಲುಕಿಬಿದ್ದಾಗ ಅದನ್ನು ಎಳೆಯಲು ಪ್ರಯತ್ನಿಸಬೇಡಿ. ಕಸ್ಟಮರ್ ಕೇರ್ ಗೆ ಕರೆ ಮಾಡುವುದನ್ನು ಮಾತ್ರ ಮರೆಯಬೇಡಿ.

ಇದನ್ನೂ ಓದಿ:

1) ATM Transactions: ಜ.1ರಿಂದ ಎಟಿಎಂ ಹಣ ವಿತ್ ಡ್ರಾ ಶುಲ್ಕ ಹೆಚ್ಚಳ

2) PM Modi meets top CEOs ಬಜೆಟ್‌ಗೂ ಮುನ್ನ ಪ್ರಮುಖ ಖಾಸಗಿ ಕಂಪನಿ ಸಿಇಒ ಜೊತೆ ಪ್ರಧಾನಿ ಮೋದಿ ಸಂವಾದ

3) Electric Vehicle Plant: ಧಾರವಾಡದಲ್ಲಿ ಶೀಘ್ರ ಎಲೆಕ್ಟ್ರಿಕ್‌ ವಾಹನ ತಯಾರಿಕಾ ಘಟಕ ಸ್ಥಾಪನೆ..!

Follow Us:
Download App:
  • android
  • ios