SIPಯಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದೀರಾ? ತಪ್ಪದೇ ಈ ಟಿಪ್ಸ್ ಫಾಲೋ ಮಾಡಿ
ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡೋರು ತಪ್ಪದೇ ಎಸ್ ಐಪಿ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಹಾಗಾದ್ರೆ ಎಸ್ ಐಪಿಯಲ್ಲಿ ಹೂಡಿಕೆ ಮಾಡುವಾಗ ಯಾವೆಲ್ಲ ವಿಚಾರಗಳನ್ನು ಪರಿಗಣಿಸಬೇಕು? ಇಲ್ಲಿದೆ ಮಾಹಿತಿ.
ನವದೆಹಲಿ (ಫೆ.2): ಹೂಡಿಕೆ ಎಂಬ ವಿಚಾರ ಬಂದ ತಕ್ಷಣ ಇತ್ತೀಚಿನ ದಿನಗಳಲ್ಲಿ ಬಹುತೇಕರು ಎಸ್ ಐಪಿ ಹೂಡಿಕೆ ಬಗ್ಗೆ ಮಾತನಾಡೋದನ್ನು ನೀವು ಕೇಳಿರುತ್ತೀರಿ. ಹಾಗಾದ್ರೆ ಈ ಎಸ್ ಐಪಿ ಅಂದ್ರೇನು? ಎಸ್ ಐಪಿ ಅಂದ್ರೆ ಸಿಸ್ಟಮೆಟಿಕ್ ಇನ್ವೆಸ್ಟ್ ಮೆಂಟ್ ಪ್ಲ್ಯಾನ್ . ಇದು ಮ್ಯೂಚುವಲ್ ಫಂಡ್ ಗಳು ಬಳಸುವ ಹೂಡಿಕೆ ತಂತ್ರಜ್ಞಾನವಾಗಿದೆ. ಎಸ್ ಐಪಿ ಮೂಲಕ ಹೂಡಿಕೆದಾರರು ಪ್ರತಿ ತಿಂಗಳು ನಿರ್ದಿಷ್ಟ ಹೂಡಿಕೆಯನ್ನು ಮ್ಯೂಚುವಲ್ ಫಂಡ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಹೂಡಿಕೆದಾರರು ನಿಯಮಿತವಾಗಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಸಂಪತ್ತು ನಿರ್ಮಿಸಲು ಎಸ್ ಐಪಿ ಅನುವು ಮಾಡಿಕೊಡುತ್ತದೆ. ಒಂದೇ ಬಾರಿಗೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವ ಬದಲು ಈ ರೀತಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಸಂಪತ್ತನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ.
ಈ ಯೋಜನೆ ಯುನಿಟ್ಸ್ ಮೇಲಿನ ಖರೀದಿ ವೆಚ್ಚ ತಗ್ಗಿಸಲು ನೆರವು ನೀಡುತ್ತದೆ ಹಾಗೂ ಹೂಡಿಕೆ ಮೇಲೆ ಮಾರುಕಟ್ಟೆ ಅಸ್ಥಿರತೆ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಶಿಸ್ತುಬದ್ಧ ಹಾಗೂ ವ್ಯವಸ್ಥಿತ ಹೂಡಿಕೆಗೆ ಎದುರು ನೋಡೋರಿಗೆ ಅವರ ಹಣಕಾಸಿನ ಗುರಿ ಸಾಧಿಸಲು ಎಸ್ ಐಪಿ ನೆರವು ನೀಡುತ್ತದೆ.
ಮ್ಯೂಚುವಲ್ ಫಂಡ್ಸ್ ನಲ್ಲಿ ಹೂಡಿಕೆ ಮಾಡೋ ಬಹುತೇಕರಿಗೆ ತಿಳಿದಿಲ್ಲ ಈ 5 SIPs;ಇವುಗಳ ವಿಶೇಷತೆಯೇನು?
ಎಸ್ಐಪಿಯಲ್ಲಿ ಹೂಡಿಕೆ ಮಾಡಲು ಅನೇಕ ಹಂತಗಳಿವೆ:
1. ಅಧ್ಯಯನ ಹಾಗೂ ಗುರಿ ನಿಗದಿ: ನಿಮ್ಮ ಹಣಕಾಸಿನ ಗುರಿಗಳು, ಅಪಾಯ ಎದುರಿಸುವ ಸಹಿಷ್ಣುತೆ ಹಾಗೂ ಹೂಡಿಕೆ ಮಿತಿಯನ್ನು ನಿರ್ಧರಿಸಿ. ನಿಮ್ಮ ಉದ್ದೇಶಗಳಿಗೆ ಹೊಂದಿಕೆಯಾಗುವ ವಿವಿಧ ಮ್ಯೂಚುವಲ್ ಫಂಡ್ ಗಳನ್ನು ಪತ್ತೆ ಹಚ್ಚಿ.
2.ಮ್ಯೂಚುವಲ್ ಫಂಡ್ ಆಯ್ಕೆ ಮಾಡಿ: ನಿಮ್ಮ ಹೂಡಿಕೆ ಗುರಿಗಳು ಹಾಗೂ ಅಪಾಯದ ಮಟ್ಟಕ್ಕೆ ಹೊಂದಾಣಿಕೆಯಾಗುವ ಮ್ಯೂಚುವಲ್ ಫಂಡ್ ಯೋಜನೆ ಆಯ್ಕೆ ಮಾಡಿ. ಫಂಡ್ ನಿರ್ವಹಣೆ, ಫಂಡ್ ನಿರ್ವಹಣೆ ಅನುಭವ, ವೆಚ್ಚದ ಅನುಪಾತ ಹಾಗೂ ಫಂಡ್ ಹೌಸ್ ಗೌರವ ಮುಂತಾದ ವಿಚಾರಗಳನ್ನು ಗಮನಿಸಿ,
3.ಕೆವೈಸಿ ಪೂರ್ಣಗೊಳಿಸಿ: ಗುರುತು ದೃಢೀಕರಣ ದಾಖಲೆ, ವಿಳಾಸ ದೃಢೀಕರಣ, ಪ್ಯಾನ್ ಕಾರ್ಡ್ ಮುಂತಾದ ಅಗತ್ಯ ದಾಖಲೆಗಳನ್ನು ಮ್ಯೂಚುವಲ್ ಫಂಡ್ ಹೌಸ್ ಗೆ ಸಲ್ಲಿಕೆ ಮಾಡುವ ಮೂಲಕ ನಿಮ್ಮ ಕೆವೈಸಿ ಪೂರ್ಣಗೊಳಿಸಿ.
4.ಎಸ್ ಐಪಿ ಅರ್ಜಿ ನಮೂನೆ ಭರ್ತಿ ಮಾಡಿ: ಮ್ಯೂಚುವಲ್ ಫಂಡ್ ಹೌಸ್ ನೀಡುವ ಎಸ್ ಐಪಿ ಅರ್ಜಿ ಭರ್ತಿ ಮಾಡಿ. ಹೂಡಿಕೆ ಮೊತ್ತ, ಎಸ್ ಐಪಿ ಅವಧಿ (ಮಾಸಿಕ, ತ್ರೈಮಾಸಿಕ ಇತ್ಯಾದಿ) ಹಾಗೂ ಪ್ರಾರಂಭ ದಿನಾಂಕ ಭರ್ತಿ ಮಾಡಿ.
5.ಪಾವತಿ ವಿಧಾನ ಆಯ್ಕೆ ಮಾಡಿ: ಎಸ್ ಐಪಿಯಲ್ಲಿ ನೀವು ಹೇಗೆ ಹೂಡಿಕೆ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ. ಒಂದೇ ಬಾರಿಗೆ ಹೂಡಿಕೆ ಮಾಡುತ್ತೀರಾ ಅಥವಾ ಇಸಿಎಸ್ ಎಂಬುದನ್ನು ಆಯ್ಕೆ ಮಾಡಿ.
6.ಅರ್ಜಿ ಸಲ್ಲಿಕೆ: ಎಸ್ ಐಪಿ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಿ. ಅದರ ಜೊತೆಗೆ ಅಗತ್ಯ ದಾಖಲೆಗಳು ಹಾಗೂ ಹೂಡಿಕೆ ಮೊತ್ತವನ್ನು ಕೂಡ ಮ್ಯೂಚುವಲ್ ಫಂಡ್ ಹೌಸ್ ಅಥವಾ ಅದರ ಅಧಿಕೃತ ಏಜೆಂಟ್ ಗೆ ನೀಡಿ.
2023 ರಲ್ಲಿ ಹೂಡಿಕೆ ಮಾಡಲು ಅತ್ಯುತ್ತಮ ಮ್ಯೂಚುಯಲ್ ಫಂಡ್‌ಗಳ ವಿವರ ಹೀಗಿದೆ..
7.ನಿರ್ವಹಣೆ ಹಾಗೂ ವಿಮರ್ಶೆ: ನಿಮ್ಮ ಎಸ್ ಐಪಿ ಹೂಡಿಕೆಗಳ ನಿರ್ವಹಣೆಯನ್ನು ನಿಯಮಿತವಾಗಿ ನಿಭಾಯಿಸಿ. ನಿಮ್ಮ ಪೋರ್ಟ್ ಫೋಲಿಯೋವನ್ನು ವಿಮರ್ಶಿಸಿ. ನಿಮ್ಮ ಹಣಕಾಸಿನ ಪರಿಸ್ಥಿತಿ ಅಥವಾ ಮಾರುಕಟ್ಟೆ ಪರಿಸ್ಥಿತಿಗಳಲ್ಲಿನ ಬದಲಾವಣೆಗಳನ್ನು ಆಧರಿಸಿ ಅಗತ್ಯವೆನಿಸಿದರೆ ಹೊಂದಾಣಿಕೆ ಮಾಡಿ.
8.ಶಿಸ್ತಿನಿಂದ ಇರಿ: ನಿಮ್ಮ ಎಸ್ ಐಪಿ ಹೂಡಿಕೆ ಯೋಜನೆಗೆ ಬದ್ಧರಾಗಿರಿ, ನಿರಂತರಾಗಿ ನಿಯಮಿತ ಹೂಡಿಕೆ ಮಾಡಿ. ಕಿರು ಅವಧಿಯ ಮಾರುಕಟ್ಟೆ ಏರಿಳಿತಗಳನ್ನು ಪರಿಗಣಿಸದೆ ಹೂಡಿಕೆ ಮಾಡಿ. ನೀವು ಶಿಸ್ತು ಕಾಪಾಡುವ ಜೊತೆಗೆ ನಿಯಮಿತವಾಗಿ ಹೂಡಿಕೆ ಮಾಡಿದಾಗ ದೀರ್ಘಾವಧಿಯಲ್ಲಿ ಎಸ್ಐಪಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
9.ರಿಬ್ಯಾಲೆನ್ಸ್ ಪೋರ್ಟ್ ಫೋಲಿಯೋ: ನಿಮ್ಮ ಪೋರ್ಟ್ ಫೋಲಿಯೋವನ್ನು ರಿಬ್ಯಾಲೆನ್ಸ್ ಮಾಡಿ. ಇದರಿಂದ ನಿರೀಕ್ಷಿತ ಆಸ್ತಿ ಹಂಚಿಕೆ ಹಾಗೂ ರಿಸ್ಕ್ ರಿಟರ್ನ್ ಪ್ರೊಫೈಲ್ ನಿರ್ವಹಣೆ ಮಾಡಿ.
10.ತಜ್ಞರ ಸಲಹೆ ಪಡೆಯಿರಿ: ಎಸ್ ಐಪಿ ಹೂಡಿಕೆ ಮೇಲೆ ವೈಯಕ್ತಿಕ ಸಲಹೆಗಳನ್ನು ಪಡೆಯಲು ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಅದರಲ್ಲೂ ನೀವು ಹೂಡಿಕೆಗೆ ಹೊಸಬರಾಗಿದ್ದರೆ ಅಥವಾ ನಿಮ್ಮ ಹೂಡಿಕೆ ನಿರ್ಧಾರಗಳ ಬಗ್ಗೆ ಸ್ಪಷ್ಟತೆಯಿಲ್ಲದಿದ್ದಾಗ ತಪ್ಪದೆ ತಜ್ಞರ ಸಲಹೆ ಪಡೆಯಿರಿ.