ಹೂಡಿಕೆ ಮಾಡುವಾಗ ತಪ್ಪದೇ ಈ ಟಿಪ್ಸ್ ಫಾಲೋ ಮಾಡಿದ್ರೆ ನೀವು ಗುರಿ ತಲುಪೋದು ಗ್ಯಾರಂಟಿ
ಹೂಡಿಕೆ ಮಾಡೋ ಮುನ್ನ ಸಾಕಷ್ಟು ಅಂಶಗಳನ್ನು ಪರಿಗಣಿಸೋದು ಅಗತ್ಯ. ಇಲ್ಲವಾದರೆ ತೊಂದರೆ ಖಚಿತ. ಒಂದು ವೇಳೆ ನೀವು ನಿರ್ದಿಷ್ಟ ಗುರಿ ಈಡೇರಿಕೆಗಾಗಿ ಹೂಡಿಕೆ ಮಾಡುತ್ತಿದ್ದರೆ ಉತ್ತಮ ರಿಟರ್ನ್ಸ್ ಪಡೆಯಲು ಈ ಟಿಪ್ಸ್ ಫಾಲೋ ಮಾಡಿ.
Business Desk:ಮೊದಲ ಬಾರಿಗೆ ಹೂಡಿಕೆ ಮಾಡಲು ಮುಂದಾಗೋರಿಗೆ ಅನೇಕ ಗೊಂದಲಗಳು ಕಾಡೋದು ಸಹಜ. ಎಲ್ಲಿ ಹೂಡಿಕೆ ಮಾಡಬೇಕು? ಎಷ್ಟು ಹೂಡಿಕೆ ಮಾಡಬೇಕು? ಎಂಬ ಪ್ರಶ್ನೆಗಳು ಅವರನ್ನು ಕಾಡುತ್ತವೆ. ಹೂಡಿಕೆ ಅನ್ನೋದು ಸಂಪೂರ್ಣವಾಗಿ ಅವರವರ ಆರ್ಥಿಕ ಸ್ಥಿತಿ, ಗುರಿಗಳು ಹಾಗೂ ಆಸಕ್ತಿಯನ್ನು ಅವಲಂಭಿಸಿದೆ. ಹಣದ ಕುರಿತ ನಿಮ್ಮ ಯೋಚನೆ, ಅಭಿಪ್ರಾಯಗಳು ಇಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಇನ್ನು ನೀವು ಹೂಡಿಕೆಯಲ್ಲಿ ಎಷ್ಟು ಪರಿಣತಿ ಹೊಂದಿದ್ದೀರಿ ಎಂಬುದು ಕೂಡ ಬಹುಮುಖ್ಯ ಪಾತ್ರ ವಹಿಸುತ್ತದೆ. ಹೂಡಿಕೆಯಲ್ಲಿ ಸಾಕಷ್ಟು ಪರಿಣತಿ ಹೊಂದಿರುವ ವ್ಯಕ್ತಿ 10 ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ನಿರ್ದಿಷ್ಟ ಗುರಿಗಳನ್ನು ತಲುಪಲು ಶೇ.100ರಷ್ಟು ಈಕ್ವಿಟಿ ಪೋರ್ಟ್ ಪೊಲಿಯೋ ಹೊಂದಬಹುದು. ಇನ್ನೊಂದೆಡೆ ನೀವು ಕೆಲವು ಸಮಯದಿಂದ ಹೂಡಿಕೆ ಮಾಡುತ್ತಿದ್ದು, ಅಧಿಕ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲು ಅಷ್ಟೊಂದು ಇಷ್ಟಪಡದೆ ಇರಬಹುದು. ಅಲ್ಲದೆ, ನೀವು ಸ್ಥಿರ ಆದಾಯ ಬರುವಂತಹ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡಬಹುದು. ಹೀಗಿರುವಾಗ ಯಾವುದೋ ಒಂದು ನಿರ್ದಿಷ್ಟ ಗುರಿ ಸಾಧನೆಗಾಗಿ ಅಥವಾ ಉದ್ದೇಶದ ಈಡೇರಿಕೆಗೆ ನೀವು ಹೂಡಿಕೆ ಮಾಡಲು ಬಯಸುತ್ತೀರಿ. ಇಂಥ ಸಂದರ್ಭದಲ್ಲಿ ಹೂಡಿಕೆ ಮಾಡೋದು ಹೇಗೆ? ಯಾವೆಲ್ಲಅಂಶಗಳನ್ನು ಪರಿಗಣಿಸಬೇಕು? ಇಲ್ಲಿದೆ ಮಾಹಿತಿ.
ಗುರಿ ಅವಧಿ ಆಧರಿಸಿ ಹೂಡಿಕೆ
ಹೂಡಿಕೆ ಮಾಡುವ ಮೊದಲು ಎಷ್ಟು ವರ್ಷಗಳ ಬಳಿಕ ನಿಮಗೆ ಹಣ ಬೇಕು ಎಂಬುದನ್ನು ಮೊದಲು ನಿರ್ಧರಿಸಿ. ಒಂದು ವೇಳೆ ನಿಮಗೆ ಕಡಿಮೆ ಅವಧಿಯಲ್ಲಿ ಹಣದ ಅಗತ್ಯವಿದ್ದರೆ ಆಗ ಬಾಂಡ್ ಗಳಲ್ಲಿ ಹೂಡಿಕೆ ಮಾಡೋದು ಹೆಚ್ಚು ಸುರಕ್ಷಿತ ಹಾಗೂ ಪ್ರಯೋಜನಕಾರಿ. ಒಂದು ವೇಳೆ ನಿಮಗೆ ದೀರ್ಘಾವಧಿಯಲ್ಲಿ ಹಣದ ಅಗತ್ಯವಿದ್ದರೆ ಈಕ್ವಿಟಿ ಅಥವಾ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಹೂಡಿಕೆ ಮಾಡೋದು ಸೂಕ್ತ.
*ಮೂರು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಹಣದ ಅವಶ್ಯಕತೆಯಿದ್ದರೆ ಅಲ್ಪಾವಧಿ ಡೆಬ್ಟ್ ಫಂಡ್ ಅಥವಾ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಿ.
*ಒಂದು ವೇಳೆ 4ರಿಂದ 5 ವರ್ಷಗಳ ಅವಧಿಯಲ್ಲಿ ಬೇಕಿದ್ದರೆ ಕನ್ಸರೇಟಿವ್ ಹೈಬ್ರೀಡ್ ಹಾಗೂ ಬ್ಯಾಲೆನ್ಸಡ್ ಫಂಡ್ ಗಳಲ್ಲಿ ಹೂಡಿಕೆ ಮಾಡಿ. ಇದು ಬಾಂಡ್ ಗಳು ಹಾಗೂ ಈಕ್ವಿಟಿಗಳ ಸಮ್ಮಿಶ್ರಣ.
ಜಂಟಿ ಗೃಹ ಸಾಲ ಪಡೆಯೋದು ನಿಜಕ್ಕೂ ಒಳ್ಳೆಯದಾ? ಅದ್ರಿಂದ ಏನೆಲ್ಲ ಪ್ರಯೋಜನಗಳಿವೆ?
*ಒಂದು ವೇಳೆ 6ರಿಂದ 7 ವರ್ಷಗಳ ಅವಧಿಯಲ್ಲಿ ಬೇಕಿದ್ದರೆ ಇಂಡೆಕ್ಸ್ ಫಂಡ್ ನಲ್ಲಿ ಶೇ.60, ಮಿಡ್ ಕ್ಯಾಪ್ ಫಂಡ್ಸ್ ನಲ್ಲಿ ಶೇ.20 ಹಾಗೂ ಬಾಂಡ್ ಫಂಡ್ಸ್ ನಲ್ಲಿ ಶೇ.20ರಷ್ಟು ಹೂಡಿಕೆ ಮಾಡಿ.
*ಇನ್ನು 8-10 ವರ್ಷಗಳ ಅವಧಿಯಲ್ಲಿ ಅಗತ್ಯವಿದ್ದರೆ ಶೇ.50ರಷ್ಟನ್ನು ಇಂಡೆಕ್ಸ್ ಫಂಡ್ ನಲ್ಲಿ, ಮಿಡ್ ಕ್ಯಾಪ್ ಫಂಡ್ಸ್ ನಲ್ಲಿ ಶೇ.20, ಸ್ಮಾಲ್ ಕ್ಯಾಪ್ ಫಂಡ್ ನಲ್ಲಿ ಶೇ.10 ಹಾಗೂ ಡೆಟ್ ಫಂಡ್ಸ್ ನಲ್ಲಿ ಶೇ.20ರಷ್ಟು ಹೂಡಿಕೆ ಮಾಡಿ.
*10 ವರ್ಷಗಳಿಗಿಂತ ಮೇಲ್ಪಟ್ಟು ಬೇಕಿದ್ದರೆ ಇಂಡೆಕ್ಸ್ ಫಂಡ್ಸ್ (ಶೇ.40), ಮಿಡ್ ಕ್ಯಾಪ್ ಫಂಡ್ಸ್ (ಶೇ.30), ಸ್ಮಾಲ್ ಕ್ಯಾಪ್ ಫಂಡ್ಸ್ (ಶೇ.20) ಹಾಗೂ ಡೆಟ್ ಫಂಡ್ ನಲ್ಲಿ( ಶೇ.10 ) ಹೂಡಿಕೆ ಮಾಡಿ.
ಕ್ರೆಡಿಟ್ ಕಾರ್ಡ್ ಸಾಲದ ಹೊರೆ ನೆಮ್ಮದಿ ಕೆಡಿಸಿದೆಯಾ? ಡೋಂಟ್ ವರಿ, ಈ 5 ಟಿಪ್ಸ್ ಫಾಲೋ ಮಾಡಿ ಸಾಲ ತೀರಿಸಿ
ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ
*ನೀವು ಸುರಕ್ಷಿತವಾಗಿರಲು ಬಯಸಿದ್ದರೆ ನಿಮ್ಮ ಡೆಟ್ ಹೂಡಿಕೆ ಹೆಚ್ಚಿಸಿಕೊಳ್ಳಿ.
*ಹೆಚ್ಚು ಡೆಟ್ ಅಂದರೆ ಹೆಚ್ಚು ಸುರಕ್ಷಿತ.
*ಇನ್ನೊಬ್ಬರ ಹೂಡಿಕೆಯನ್ನು ಗಮನಿಸಿ ನೀವು ಮಾಡಬೇಡಿ. ಬದಲಿಗೆ ನಿಮ್ಮ ಹಣಕಾಸಿನ ಸ್ಥಿತಿಗತಿಗಳಿಗೆ ಅನುಗುಣವಾಗಿ ಮಾಡಿ.
*ಹೂಡಿಕೆಗೂ ಮುನ್ನ ಯಾವುದರಲ್ಲಿ ಹೂಡಿಕೆ ಮಾಡುತ್ತಿದ್ದಿರೋ ಅದರ ಬಗ್ಗೆ ತಿಳಿದುಕೊಳ್ಳಿ. ಅಂದರೆ ಈಕ್ವಿಟಿಯಲ್ಲಿ ಹೂಡಿಕೆ ಮಾಡೋದಾದ್ರೆ ಆ ಬಗ್ಗೆ ಸಾಕಷ್ಟು ಮಾಹಿತಿ ಡೆದ ಬಳಿಕವೇ ಹೂಡಿಕೆ ಮಾಡಿ.