ಕ್ರೆಡಿಟ್ ಕಾರ್ಡ್ ಸಾಲದ ಹೊರೆ ನೆಮ್ಮದಿ ಕೆಡಿಸಿದೆಯಾ? ಡೋಂಟ್ ವರಿ, ಈ 5 ಟಿಪ್ಸ್ ಫಾಲೋ ಮಾಡಿ ಸಾಲ ತೀರಿಸಿ

ಕ್ರೆಡಿಟ್ ಕಾರ್ಡ್ ಬಳಸೋದು ತುಂಬಾ ಸುಲಭ. ಆದರೆ, ಮುಂದೆ ಬಿಲ್ ಪಾವತಿಸೋದು ಮಾತ್ರ ಅಷ್ಟು ಕಷ್ಟದ ಕೆಲಸವಲ್ಲ. ಕ್ರೆಡಿಟ್ ಕಾರ್ಡ್ ಸಾಲದ ಸುಳಿಯಿಂದ ಹೊರಬರೋದು ಸುಲಭದ ಕೆಲಸವಂತೂ ಅಲ್ಲ. ಆದರೆ, ಸೂಕ್ತ ಯೋಜನೆಗಳನ್ನು ಅನುಸರಿಸುವ ಮೂಲಕ ಸಾಲವನ್ನು ಮರುಪಾವತಿ ಮಾಡಬಹುದು. 
 

Struggling with high credit card debt Here are 5 tips for you anu

Business Desk:ಕಿಸೆಯಲ್ಲಿ ಮಾತ್ರವಲ್ಲ, ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ ಬಯಸಿದ ವಸ್ತುಗಳನ್ನು ಖರೀದಿಸುವ ಅವಕಾಶವನ್ನು ಕ್ರೆಡಿಟ್ ಕಾರ್ಡ್ ಕಲ್ಪಿಸಿದೆ. ಹೀಗಾಗಿ ಇಂದು ಕಂಡಿದ್ದೆಲ್ಲವನ್ನೂ ಖರೀದಿಸುವ, ಆಸೆ ಪಟ್ಟಿದ್ದೆಲ್ಲವನ್ನೂ ಪಡೆದುಕೊಳ್ಳುವ ಅಭ್ಯಾಸ ಕೆಲವರಿಗೆ ಹೆಚ್ಚಿದೆ. ಆದರೆ, ಈ ಅಭ್ಯಾಸ ಮುಂದೆ ದೊಡ್ಡ ಸಾಲದ ಹೊರೆಯನ್ನೇ ಸೃಷ್ಟಿಸಬಲ್ಲದು. ಹೌದು, ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಸಾಧ್ಯವಾಗದೆ ಹೋದರೆ ಅದರ ಮೇಲಿನ ಅಧಿಕ ಬಡ್ಡಿಯಿಂದ ಸಾಲದ ಮೊತ್ತ ಹೆಚ್ಚುತ್ತಲೇ ಹೋಗುತ್ತದೆ. ಇದು ಮುಂದೆ ದೊಡ್ಡ ಸಮಸ್ಯೆಯಾಗಿ ಕಾಡಬಲ್ಲದು. ಆದರೆ, ಸೂಕ್ತ ಯೋಜನೆ ಮೂಲಕ ಕ್ರೆಡಿಟ್ ಕಾರ್ಡ್ ಸಾಲವನ್ನು ನಿರ್ವಹಣೆ ಮಾಡಬಹುದು. ಹಾಗೆಯೇ ಹಣಕಾಸಿನ ಮೇಲೆ ನಿಮ್ಮ ನಿಯಂತ್ರಣವನ್ನು ಸಾಧಿಸಬಹುದು ಕೂಡ. ಹಾಗಾದ್ರೆ ಕ್ರೆಡಿಟ್ ಕಾರ್ಡ್ ಸಾಲದ ಹೊರೆಯನ್ನು ತಗ್ಗಿಸಿಕೊಳ್ಳಲು ಏನು ಮಾಡಬೇಕು? ಇದಕ್ಕೆ ಈ 5 ಅಗತ್ಯ ಕ್ರಮಗಳನ್ನು ಅನುಸರಿಸಬೇಕು.

1.ಸಮಸ್ಯೆಯನ್ನು ಅರಿತುಕೊಳ್ಳಿ: ಕ್ರೆಡಿಟ್ ಕಾರ್ಡ್ ಸಾಲದ ಸುಳಿಯಿಂದ ಹೊರಬರಲು ಮೊದಲು ನೀವು ಮಾಡಬೇಕಾದ ಕೆಲಸವೆಂದ್ರೆ ಸಮಸ್ಯೆಯನ್ನು ವಿಶ್ಲೇಷಿಸುವುದು. ನಿಮ್ಮ ಸಾಲದ ಒಟ್ಟು ಮೊತ್ತ ಎಷ್ಟು? ಬಡ್ಡಿದರವೆಷ್ಟು ಹಾಗೂ ಪ್ರತಿ ಕಾರ್ಡ್ ಗೆ ಕನಿಷ್ಠ ಮಾಸಿಕ ಪಾವತಿಗಳು ಎಷ್ಟು ಎಂಬುದನ್ನು ಲೆಕ್ಕ ಹಾಕಿ. ಇದು ನಿಮಗೆ ಯೋಜನೆಯೊಂದನ್ನು ರೂಪಿಸಲು ನೆರವು ನೀಡುತ್ತದೆ. 

ಯುಪಿಐಗೆ ಎಸ್ ಬಿಐ ರುಪೇ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಸರಳ ವಿಧಾನ

2.ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ: ನಿಮ್ಮ ಅಗತ್ಯ ವೆಚ್ಚಗಳನ್ನು ಪೂರೈಸುವಂತಹ ನೈಜ್ಯತೆಗೆ ಹತ್ತಿರವಾದ ಬಜೆಟ್ ರೂಪಿಸಿ. ಅದರಲ್ಲಿ ಒಂದು ಭಾಗವನ್ನು ಸಾಲದ ಮರುಪಾವತಿಗೆ ಮೀಸಲಿಡಿ. ನಿಮ್ಮ ಅಗತ್ಯಗಳನ್ನು ಆದ್ಯತೆಗೆ ಅನುಗುಣವಾಗಿ ಪಟ್ಟಿ ಮಾಡಿ. ಇನ್ನು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಿ. ಇದ್ರಿಂದ ಉಳಿದ ಹಣವನ್ನು ಕ್ರೆಡಿಟ್ ಕಾರ್ಡ್ ಸಾಲ ತೀರಿಸಲು ಬಳಸಬಹುದು.

3.ಮರುಪಾವತಿ ಪ್ಲ್ಯಾನ್ ಮಾಡಿ: ಸಾಮಾನ್ಯವಾಗಿ ಸಾಲದ ಮರುಪಾವತಿಗೆ ಎರಡು ವಿಧಾನಗಳನ್ನು ಅನುಸರಿಸಲಾಗುತ್ತದೆ. ಒಂದು ವಿಧಾನದಲ್ಲಿ ಸಣ್ಣ ಸಾಲವನ್ನು ಮೊದಲು ತೀರಿಸಲಾಗುತ್ತದೆ. ಇನ್ನೊಂದರಲ್ಲಿ ಹೆಚ್ಚಿನ ಬಡ್ಡಿದರ ಹೊಂದಿರುವ ಸಾಲವನ್ನು ಮೊದಲು ತೀರಿಸಲಾಗುತ್ತದೆ. ಇವೆರಡರಲ್ಲಿ ನಿಮ್ಮ ಹಣಕಾಸಿನ ಸ್ಥಿತಿ ಹಾಗೂ ಅಗತ್ಯಗಳಿಗೆ ಅನುಗುಣವಾದ ವಿಧಾನ ಆರಿಸಿಕೊಳ್ಳಿ.

4.ಕ್ರೆಡಿಟ್ ಕಾರ್ಡ್ ಕಂಪನಿಗಳ ಜೊತೆಗೆ ಸಮಾಲೋಚಿಸಿ: ನಿಮ್ಮ ಕ್ರೆಡಿಟ್ ಕಾರ್ಡ್ ಕಂಪನಿಗಳನ್ನು ಸಂಪರ್ಕಿಸಿ ಹಾಗೂ ಅವರ ಜೊತೆಗೆ ಕಡಿಮೆ ಬಡ್ಡಿದರ ಅಥವಾ ಮರುಪಾವತಿಯನ್ನು ಹೆಚ್ಚು ಸಮರ್ಪಕವಾಗಿ ಮಾಡುವ ಸಂಬಂಧ ಮಾತುಕತೆ ನಡೆಸಿ. ಅನೇಕ ಕ್ರೆಡಿಟ್ ಕಾರ್ಡ್ ಕಂಪನಿಗಳು ಇಂಥ ಮಾತುಕತೆಗೆ ಮುಂದೆ ಬರುತ್ತವೆ ಕೂಡ. ಗ್ರಾಹಕರನ್ನು ಕಳೆದುಕೊಳ್ಳಲು ಇಂಥ ಕಂಪನಿಗಳು ಇಷ್ಟಪಡುವುದಿಲ್ಲ ಕೂಡ.

ಹಳೆಯ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಿದ್ರೆ ಇಳಿಕೆಯಾಗುತ್ತೆ ಕ್ರೆಡಿಟ್ ಸ್ಕೋರ್, ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

5.ತಜ್ಞರ ನೆರವು ಪಡೆಯಿರಿ: ಒಂದ ವೇಳೆ ನಿಮ್ಮ ಕ್ರೆಡಿಟ್ ಕಾರ್ಡ್ ಸಾಲ ತುಂಬಾ ಹೆಚ್ಚಾಗಿದ್ದು, ನಿರ್ವಹಣೆ ಮಾಡೋದು ಕಷ್ಟ ಅನಿಸಿದ ಸಂದರ್ಭದಲ್ಲಿ ಹಣಕಾಸು ತಜ್ಞರ ನೆರವು ಪಡೆಯಿರಿ. ಅವರು ನಿಮಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ ಹಾಗೂ ಸಾಲದ ಹೊರೆಯಿಂದ ಮುಕ್ತರಾಗಲು ನೆರವು ನೀಡುತ್ತಾರೆ.

ಕ್ರೆಡಿಟ್ ಕಾರ್ಡ್ ಸಾಲವಾಗಲಿ ಅಥವಾ ಇನ್ಯಾವುದೇ ಸಾಲವಾಗಲಿ ತಕ್ಷಣಕ್ಕೆ ತೀರಿಸಲು ಸಾಧ್ಯವಿಲ್ಲ. ಅದಕ್ಕೆ ಸಾಕಷ್ಟು ಸಮಯಾವಕಾಶದ ಅಗತ್ಯವಿದೆ. ಹೀಗಾಗಿ ಸಾಲಮುಕ್ತರಾಗಲು ನಿರಂತರ ಪ್ರಯತ್ನವನ್ನು ಸೂಕ್ತ ಯೋಜನೆಗಳ ಜೊತೆಗೆ ಮಾಡುತ್ತಲಿರಿ. ಸೂಕ್ತ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ಸಾಲದಿಂದ ಮುಕ್ತರಾಗಬಹುದು.ಆದಕಾರಣ ತಾಳ್ಮೆಯಿಂದ ಪರಿಸ್ಥಿತಿಯನ್ನು ನಿರ್ವಹಿಸಿ. 

ಕ್ರೆಡಿಟ್ ಕಾರ್ಡ್ ಸಾಲದ ಮೇಲಿನ ಅಧಿಕ ಬಡ್ಡಿಯಿಂದ ಮೊತ್ತ ಹೆಚ್ಚುತ್ತಲೇ ಹೋಗುತ್ತದೆ. ಆದರೆ, ಈ ಸಂದರ್ಭದಲ್ಲಿ ದೃತಿಗೆಡದೆ ಅದನ್ನು ತೀರಿಸಲು ಸೂಕ್ತ ಕ್ರಮ ಕೈಗೊಂಡರೆ ಕ್ರೆಡಿಟ್ ಕಾರ್ಡ್ ಸಾಲದ ಹೊರೆಯಿಂದ ಹೊರಬರುವುದು ಕಷ್ಟದ ಕೆಲಸವೇನಲ್ಲ. 

Latest Videos
Follow Us:
Download App:
  • android
  • ios