ಕೊರೋನಾ ಕಾರಣಕ್ಕೆ ಇಂದು ಬಹುತೇಕರು ಆನ್‌ಲೈನ್‌ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಬ್ಯಾಂಕ್‌ಗಳು ಕೂಡ ಇದನ್ನುಮನಗಂಡಿದ್ದು,ಆನ್‌ಲೈನ್‌ ಮೂಲಕವೇ ಪರ್ಸನಲ್‌ ಲೋನ್‌ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಿವೆ.

ಡಿಜಿಟಲೈಸೇಷನ್‌ ಪರಿಣಾಮವಾಗಿ ಬ್ಯಾಂಕ್‌ಗೆ ಹೋಗದೆ ಮನೆಯಲ್ಲೇ ಕುಳಿತು ಆನ್‌ಲೈನ್‌ ಮುಖಾಂತರ ಪರ್ಸನಲ್‌ ಲೋನ್ ಪಡೆಯೋ ಅವಕಾಶವಿದೆ. ಈ ಪೆಂಡಾಮಿಕ್‌ ಸಮಯದಲ್ಲಿ ಪ್ರತಿಯೊಂದು ಕೂಡ ಟಚ್‌ಲೆಸ್ ಸೇವೆಯಾಗಿ ಪರಿವರ್ತನೆಯಾಗುತ್ತಿದ್ದು,ವೈಯಕ್ತಿಕ ಸಾಲ ಕೂಡ ಈ ಸಾಲಿಗೆ ಸೇರಿದೆ.ಮನೆಯಲ್ಲೇ ಕುಳಿತು ಸುರಕ್ಷಿತ ಹಾಗೂ ತ್ವರಿತವಾಗಿ ಬ್ಯಾಂಕ್‌ನಿಂದ ಸಾಲ ಪಡೆಯಲು ಈ ವ್ಯವಸ್ಥೆ ನೆರವು ನೀಡುತ್ತದೆ. 

ಯಾರು ಆರ್ಹರು?
ಸಾಮಾನ್ಯವಾಗಿ ಪರ್ಸನಲ್‌ ಲೋನ್ ಪಡೆಯಲು ಯಾರು ಅರ್ಹರಾಗಿರುತ್ತಾರೋ ಅವರು ಆನ್‌ಲೈನ್‌ ಸಾಲಕ್ಕೂ ಅರ್ಹರು. ಹೀಗಾಗಿ ಪ್ರತಿ ತಿಂಗಳು ನಿಗದಿತ ಸಂಬಳ ಪಡೆಯೋ ವೃತ್ತಿಪರರು ಆನ್‌ಲೈನ್ ಪರ್ಸನಲ್‌ ಲೋನ್ಗೆ ಅರ್ಜಿ ಹಾಕ್ಬಹುದು. ಈ ಸಾಲದ ಇನ್ನೊಂದು ವಿಶೇಷತೆ ಏನಂದ್ರೆ ಸಾಮಾನ್ಯ ವೈಯಕ್ತಿಕ ಸಾಲಕ್ಕಿರುವಂತೆ ಇದಕ್ಕೆ ಯಾವುದೇ ಭೌಗೋಳಿಕ ಮಿತಿಯಿಲ್ಲ. ಎಲ್ಲಿಂದ ಬೇಕಾದ್ರೂ ಅಪ್ಲೈ ಮಾಡ್ಬಹುದು. 

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಇಎಂಐ ಆಯ್ಕೆ ಮಾಡಿದ್ರಾ? 

ಎಲ್ಲಿಂದ ಪಡೆಯಬಹುದು?
ಈ ಸಾಲವನ್ನು ಎಲ್ಲ ಪ್ರಮುಖ ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳು ಹಾಗೂ ಫೈನಾನ್ಸ್‌ ಕಂಪನಿಗಳು ನೀಡುತ್ತವೆ. ಗ್ರಾಹಕ ತನ್ನ ಸಂಬಳದ ಖಾತೆಯಿರೋ ಬ್ಯಾಂಕ್‌ನಲ್ಲೇ ಈ ಸಾಲ ಪಡೆದುಕೊಳ್ಳಬೇಕು ಎಂಬ ಕಡ್ಡಾಯ ನಿಯಮವೇನೂ ಇಲ್ಲ. ಹೀಗಾಗಿ ಗ್ರಾಹಕ ಕಡಿಮೆ ಬಡ್ಡಿ ದರ ಹೊಂದಿರೋ, ತನ್ನಿಷ್ಟದ ಸಂಸ್ಥೆಯಿಂದ ಡಿಜಿಟಲ್‌ ಪರ್ಸನಲ್‌ ಲೋನ್‌ ಪಡೆಯಬಹುದು.

ಬಡ್ಡಿ ಎಷ್ಟು?
ಆನ್‌ಲೈನ್‌ ಪರ್ಸನಲ್‌ ಲೋನ್‌ ಬಡ್ಡಿದರ ಅಥವಾ ಬ್ಯಾಂಕ್ ಪ್ರಕ್ರಿಯೆಗಳಿಗೆ ತಗಲುವ ಶುಲ್ಕ ಹೆಚ್ಚಿರುತ್ತದೆ ಎಂದು ಭಾವಿಸಬೇಕಾದ ಅಗತ್ಯವಿಲ್ಲ. ನಿಜ ಹೇಳಬೇಕೆಂದ್ರೆ ಇವು ಸಾಮಾನ್ಯ ವೈಯಕ್ತಿಕ ಸಾಲಕ್ಕಿಂತ ಅಗ್ಗ. ಸಾಲ ಪಡೆಯೋ ವ್ಯಕ್ತಿಯ ಆದಾಯ, ಆತ ಕೆಲಸ ಮಾಡುತ್ತಿರೋ ಸಂಸ್ಥೆ, ಅಗತ್ಯವಿರೋ ಸಾಲದ ಪ್ರಮಾಣ ಹಾಗೂ ಕ್ರೆಡಿಟ್‌ ಸ್ಕೋರ್‌ ಆಧಾರದಲ್ಲಿ ಬಡ್ಡಿ ದರ ವಾರ್ಷಿಕ ಕನಿಷ್ಠ ಶೇ.10.25ರಿಂದ ಗರಿಷ್ಠ ಶೇ.36ರಷ್ಟಿರುತ್ತದೆ. 

ನವೀಕರಿಸಿದ ಡಿಜಿಟಲ್‌ ಕೆವೈಸಿ ಅಗತ್ಯ
ಆಕರ್ಷಕ ಬಡ್ಡಿ, ತ್ವರಿತ ಹಾಗೂ ಆರಾಮವಾಗಿ ಸಾಲ ಪಡೆಯಲು ಸರ್ಮಪಕ ಹಾಗೂ ನವೀಕರಿಸಿದ ಕೆವೈಸಿ ದಾಖಲೆ ಹೊಂದಿರೋದು ಅಗತ್ಯ. 

ಇಳಿಸಂಜೇಲಿ ಹೆತ್ತವರ ನೆಮ್ಮದಿ ಜೀವನಕ್ಕೆ ಮಕ್ಕಳೇನು ಮಾಡ್ಬಹುದು?

ಪಡೆಯೋದು ಹೇಗೆ?
ಯಶಸ್ವಿಯಾಗಿ ಆನ್‌ಲೈನ್‌ ಪರ್ಸನಲ್‌ ಸಾಲ ಪಡೆಯಲು ಈ 5 ಸರಳ ವಿಷಯಗಳನ್ನು ಗಮನಿಸಿ.
-ನಿಮ್ಮ ಆಧಾರ್‌ ಹಾಗೂ ಬ್ಯಾಂಕ್‌ ಖಾತೆ ದಾಖಲೆಗಳಲ್ಲಿ ನಿಮ್ಮ ಮೊಬೈಲ್‌ ಸಂಖ್ಯೆ ಅಪ್ಡೇಟ್‌ ಆಗಿರಬೇಕು. 
-ಪ್ರತಿ ತಿಂಗಳ ನಿಮ್ಮ ವೇತನ ಸಂದಾಯವಾಗೋ ಉಳಿತಾಯ ಖಾತೆಯಿರೋ ಬ್ಯಾಂಕ್‌ನಲ್ಲಿ ನೀವು ಸಕ್ರಿಯ ನೆಟ್‌ ಬ್ಯಾಂಕಿಂಗ್ ಸೌಲಭ್ಯ ಹೊಂದಿರಬೇಕು. ಬ್ಯಾಂಕ್‌ಗೆ ನೀಡಿರೋ ಮೊಬೈಲ್‌ ಸಂಖ್ಯೆಯನ್ನೇ ನೀವು ಸಾಲದ ಅರ್ಜಿಯಲ್ಲಿ ನಮೂದಿಸಿರಬೇಕು. ಇದೇ ಮೊಬೈಲ್‌ ಸಂಖ್ಯೆ ಆಧಾರ್‌ ಕಾರ್ಡ್‌ಗೂ ಲಿಂಕ್‌ ಆಗಿರಬೇಕು.
-ನಿಮ್ಮ ಪ್ರಸಕ್ತ ವಿಳಾಸವನ್ನು ಆಧಾರ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಉಳಿತಾಯ ಖಾತೆ ದಾಖಲೆಗಳಲ್ಲೂ ಅಪ್ಡೇಟ್‌ ಮಾಡಿರಬೇಕು.
-ನಿಮ್ಮ ಇ-ಮೇಲ್‌ ವಿಳಾಸದಿಂದ ಇ-ಮೇಲ್ಸ್‌ ರಿಸೀವ್‌ ಹಾಗೂ ಸೆಂಡ್‌ ಆಗಬೇಕು. ಅಂದ್ರೆ ನೀವು ಸಕ್ರಿಯ ಇ-ಮೇಲ್‌ ಐಡಿಯನ್ನೇ ಒದಗಿಸಬೇಕು.
-ನಿಮ್ಮ ಬಳಿ ಪ್ರಮುಖ ಕೆವೈಸಿ ದಾಖಲೆಗಳಾದ ಪಾನ್‌ ಕಾರ್ಡ್, ಪ್ರಸಕ್ತ ವಿಳಾಸ ಹೊಂದಿರೋ ಆಧಾರ್ ಕಾರ್ಡ್‌ಗಳ ಮೂಲಪ್ರತಿಗಳಿರಬೇಕು. ಇದ್ರಿಂದ ವಿಡಿಯೋ ಮೂಲಕ ಕೆವೈಸಿ ದಾಖಲೆಗಳ ಪರಿಶೀಲನೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. 

ಕೊರೋನಾ ಕಾಲದಲ್ಲೂ ಭಾರತಕ್ಕೆ ಭರ್ಜರಿ ಹೂಡಿಕೆ

ಸಂಪೂರ್ಣ ಪ್ರಕ್ರಿಯೆ ಯಾವಾಗ ಅಸಾಧ್ಯ?
ಈ ಮೇಲಿನ 5 ಷರತ್ತುಗಳನ್ನು ಪೂರ್ಣಗೊಳಿಸಲು ನೀವು ವಿಫಲರಾದ್ರೆ, ಆನ್‌ಲೈನ್‌ ಮೂಲಕ ಪರ್ಸನಲ್‌ ಸಾಲ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಂತ ನಿಮಗೆ ಪರ್ಸನಲ್‌ ಲೋನ್ ಸಿಗೋದಿಲ್ಲ ಎಂದರ್ಥವಲ್ಲ. ಆದ್ರೆ ನೀವು ಸಾಲದ ಪ್ರಕ್ರಿಯೆಗಳನ್ನು ಬ್ಯಾಂಕ್‌ಗೆ ಹೋಗಿಯೇ ಪೂರ್ಣಗೊಳಿಸಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ರೂ ಸಾಲದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಬ್ಯಾಂಕ್‌ಗೆ ದೌಡಾಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲು ಕೆಲವು ಕಾರಣಗಳಿವೆ. 
1.ಆಧಾರ್‌, ಬ್ಯಾಂಕ್‌ ಖಾತೆ ಹಾಗೂ ಸಾಲದ ಅರ್ಜಿಯಲ್ಲಿ ನಮೂದಿಸಿರೋ ಮೊಬೈಲ್‌ ಸಂಖ್ಯೆಗಳು ಬೇರೆ ಬೇರೆಯಾಗಿರೋದು. ಇಂಥ ಸಂದರ್ಭಗಳಲ್ಲಿ ಆನ್‌ಲೈನ್‌ ಕೆವೈಸಿ ಅಥವಾ ದಾಖಲೆಗಳ ಪರಿಶೀಲನೆ ಪೂರ್ಣಗೊಳ್ಳೋದಿಲ್ಲ.
2. ನೆಟ್‌ ಬ್ಯಾಂಕಿಂಗ್‌ ಸೌಲಭ್ಯ ಸಕ್ರಿಯವಾಗಿಲ್ಲದಿರೋದು ಅಥವಾ ರದ್ದುಗೊಂಡಿರೋದು. ಇಂಥ ಪ್ರಕರಣದಲ್ಲಿ ನೀವು ಬ್ಯಾಂಕ್‌ ಸ್ಟೇಟ್‌ಮೆಂಟ್‌ಗಳನ್ನು ಸಾಲ ನೀಡೋ ಬ್ಯಾಂಕ್‌ ವೆಬ್‌ಸೈಟ್ ಅಥವಾ ಆಪ್‌ನಲ್ಲಿ ಅಪ್ಲೋಡ್‌ ಮಾಡ್ಬೇಕು, ಇದನ್ನು ಸಂಬಂಧಪಟ್ಟವರು ಪರಿಶೀಲಿಸುತ್ತಾರೆ. ಆದ್ರೆ ಇದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಹೀಗಾಗಿ ನಿಮಗೆ ಸಾಲ ಸಿಗಲು ತಡವಾಗಬಹುದು.
3. ಆಧಾರ್‌ ಹಾಗೂ ಬ್ಯಾಂಕ್‌ ಸ್ಟೇಟ್‌ಮೆಂಟ್‌ನಲ್ಲಿ ಬಹುತೇಕರು ಖಾಯಂ ವಿಳಾಸವನ್ನು ಅಪ್ಡೇಟ್‌ ಮಾಡಿರುತ್ತಾರೆಯೇ ಹೊರತು ಪ್ರಸಕ್ತ ವಿಳಾಸವನ್ನು ಮಾಡಿರೋದಿಲ್ಲ. ಉದಾಹರಣೆಗೆ ಬೆಂಗಳೂರಿನಲ್ಲಿ ವಾಸವಿರೋ ವ್ಯಕ್ತಿಯ ಆಧಾರ್‌ ಕಾರ್ಡ್‌ನಲ್ಲಿಆತನ ಹುಟ್ಟೂರಿನ ವಿಳಾಸ ಇರುತ್ತೆ. ಇಂಥ ಸಂದರ್ಭಗಳಲ್ಲಿ ನಿಮ್ಮ ಅರ್ಜಿ ನಿರಾಕರಿಸಲ್ಪಡೋ ಸಾಧ್ಯತೆಗಳು ಹೆಚ್ಚಿರುತ್ತವೆ. ಹೀಗಾಗಿ ನೀವು ಆನ್‌ಲೈನ್ ಪರ್ಸನಲ್‌ ಲೋನ್ಗೆ ಅರ್ಜಿ ಸಲ್ಲಿಸೋವಾಗ ಈ ಮೇಲಿನ ವಿಷಯಗಳನ್ನು ಪರಿಶೀಲಿಸೋದು ಅಗತ್ಯ.