SBI ಡೆಬಿಟ್ ಕಾರ್ಡ್ ಕಳೆದು ಹೋಗಿದೆಯಾ? ನೆಟ್ ಬ್ಯಾಂಕಿಂಗ್ ಬಳಸಿ ಬ್ಲಾಕ್ ಮಾಡೋದು ಹೇಗೆ?
ನಿಮ್ಮ ಎಸ್ ಬಿಐ ಡೆಬಿಟ್ ಕಾರ್ಡ್ ಕಳೆದು ಹೋಗಿದ್ದರೆ ಮಾಹಿತಿ ನೀಡಲು ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಾಗಿಲ್ಲ. ಬದಲಿಗೆ ನೆಟ್ ಬ್ಯಾಂಕಿಂಗ್ ಅಥವಾ ಎಸ್ ಎಂಎಸ್ ಮೂಲಕ ಡೆಬಿಟ್ ಕಾರ್ಡ್ ಬ್ಲಾಕ್ ಮಾಡಬಹುದು.ಅದು ಹೇಗೆ? ಇಲ್ಲಿದೆ ಮಾಹಿತಿ.
Business Desk: ಡೆಬಿಟ್ ಕಾರ್ಡ್ ಬಳಸಿ ಎಟಿಎಂನಿಂದ ಕ್ಷಣ ಮಾತ್ರದಲ್ಲಿ ಹಣ ಪಡೆಯಬಹುದು. ನಗದು ಬೇಕಿದ್ರೆ ಈಗ ಮೊದಲಿನಂತೆ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಾಗಿಲ್ಲ. ಬದಲಿಗೆ ಎಟಿಎಂ ಕೇಂದ್ರಗಳಲ್ಲೇ ಹಣ ವಿತ್ ಡ್ರಾ ಮಾಡಬಹುದು. ಇನ್ನು ಡೆಬಿಟ್ ಕಾರ್ಡ್ ಬಳಸಿ ಆನ್ ಲೈನ್ ಪಾವತಿ ಕೂಡ ಮಾಡಬಹುದು.ಆದರೆ, ಡೆಬಿಟ್ ಕಾರ್ಡ್ ಕಳವಾಗುವ ಅಥವಾ ಕಳೆದುಹೋಗುವ ಸಾಧ್ಯತೆಯೂ ಇರುತ್ತದೆ. ಇಂಥ ಸಂದರ್ಭದಲ್ಲಿ ಸಂಬಂಧಪಟ್ಟ ಬ್ಯಾಂಕ್ ಗೆ ಈ ಬಗ್ಗೆ ಮಾಹಿತಿ ನೀಡುವ ಜೊತೆಗೆ ಆ ಕಾರ್ಡ್ ಅನ್ನು ಬ್ಲಾಕ್ ಅಥವಾ ನಿಷ್ಕ್ರಿಯಗೊಳಿಸೋದು ಅಗತ್ಯ. ಇಲ್ಲವಾದರೆ ಬೇರೆಯವರು ನಿಮ್ಮ ಕಾರ್ಡ್ ದುರ್ಬಳಕೆ ಮಾಡಿಕೊಂಡು ನಿಮ್ಮ ಖಾತೆಯಲ್ಲಿರುವ ಹಣಕ್ಕೆ ಕನ್ನ ಹಾಕುವ ಸಾಧ್ಯತೆ ಇರುತ್ತದೆ. ನೀವು ಎಸ್ ಬಿಐ ಡೆಬಿಟ್ ಕಾರ್ಡ್ ಹೊಂದಿದ್ದರೆ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ. ನೆಟ್ ಬ್ಯಾಂಕಿಂಗ್ ಅಥವಾ ಎಸ್ ಎಂಎಸ್ ಸೇವೆ ಮೂಲಕ ಆನ್ ಲೈನ್ ನಲ್ಲೇ ಡೆಬಿಟ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಬಹುದು. ಆದರೆ, ಈ ಪ್ರಕ್ರಿಯೆ ಪೂರ್ಣಗೊಳಿಸಲು ನಿಮ್ಮ ಬ್ಯಾಂಕ್ ಖಾತೆ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರೋದು ಅಗತ್ಯ.
ಎಸ್ ಬಿಐ ಡೆಬಿಟ್ ಕಾರ್ಡ್ ಬ್ಲಾಕ್ ಮಾಡೋದು ಹೇಗೆ?
ಹಂತ 1: ಎಸ್ ಬಿಐ ಅಧಿಕೃತ ವೆಬ್ ಸೈಟ್ onlinesbi.sbiಭೇಟಿ ನೀಡಿ.
ಹಂತ 2: ವೈಯಕ್ತಿಕ ಬ್ಯಾಂಕಿಂಗ್ ( personal banking) ಆಯ್ಕೆ ಆರಿಸಿ. ಆ ಬಳಿಕ personal banking ಲಾಗಿನ್ ಆಗಿ.
ಹಂತ 3: ಲಾಗಿನ್ ಆಗಲು ನಿಮ್ಮ ಕ್ರೆಡಿನ್ಷಿಯಲ್ಸ್ ಹಾಗೂ ಕ್ಯಾಪ್ಚ ಕೋಡ್ ನಮೂದಿಸಿ.
ಹಂತ 4: ಇ-ಸರ್ವೀಸ್ ಮೆನುವಿಂದ ಎಟಿಎಂ ಕಾರ್ಡ್ ಸೇವೆಗಳನ್ನು ಆಯ್ಕೆ ಮಾಡಿ. ಆ ಬಳಿಕ ಬ್ಲಾಕ್ ಎಟಿಎಂ ಕಾರ್ಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 5: ಈಗ ನಿಮ್ಮ ಎಸ್ ಬಿಐ ಡೆಬಿಟ್ ಕಾರ್ಡ್ ನಿಷ್ಕ್ರಿಯಗೊಳಿಸಲು ಬಯಸುವ ಖಾತೆ ಆಯ್ಕೆ ಮಾಡಿ.
ITR ಸಲ್ಲಿಕೆಗೆ ಜು.31 ಅಂತಿಮ ಗಡುವು; ಸಮಯಕ್ಕೆ ಸರಿಯಾಗಿ ಐಟಿಆರ್ ಸಲ್ಲಿಕೆ ಮಾಡೋದ್ರಿಂದ ಏನೆಲ್ಲ ಪ್ರಯೋಜನಗಳಿವೆ?
ಹಂತ 6: ಈಗ ಪರದೆ ಮೇಲೆ ನಿಮಗೆ ಬ್ಲಾಕ್ ಹಾಗೂ ಸಕ್ರಿಯವಾಗಿರುವ ಎಲ್ಲ ಕಾರ್ಡ್ ಗಳ ವಿವರ ಕಾಣಿಸುತ್ತದೆ.
ಹಂತ 7: ನೀವು ಬ್ಲಾಕ್ ಮಾಡಲು ಬಯಸುವ ಡೆಬಿಟ್ ಕಾರ್ಡ್ ಆಯ್ಕೆ ಮಾಡಿ. ಆ ಬಳಿಕ ಸಲ್ಲಿಕೆ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 8: ಒಮ್ಮೆ ಪೂರ್ಣಗೊಂಡ ಬಳಿಕ ಮಾಹಿತಿ ಓದಿ ಹಾಗೂ ದೃಢೀಕರಣ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 9: ಆ ಬಳಿಕ ದೃಢೀಕರಣದ ವಿಧಾನ, ಎಸ್ ಎಂಎಸ್ ಒಟಿಪಿ ಅಥವಾ ಪ್ರೊಫೈಲ್ ಪಾಸ್ ವರ್ಡ್ ಮೇಲೆ ಕ್ಲಿಕ್ ಮಾಡಿ ಮನವಿ ಪೂರ್ಣಗೊಳಿಸಿ.
ಹಂತ 10: ಒಟಿಪಿ ಪಾಸ್ ವರ್ಡ್ ಅಥವಾ ಪ್ರೊಫೈಲ್ ಪಾಸ್ ವರ್ಡ್ ನೀಡಿ ಆ ಬಳಿಕ ದೃಢೀಕರಣ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 11: ಡೆಬಿಟ್ ಕಾರ್ಡ್ ಯಶಸ್ವಿಯಾಗಿ ಬ್ಲಾಕ್ ಆದ ಬಳಿಕ ಸಂದೇಶ ಹಾಗೂ ಪರದೆಯಲ್ಲಿ ಕಾಣಿಸುವ ಟಿಕೆಟ್ ಸಂಖ್ಯೆ ದೃಢೀಕರಿಸಿ.
ಹಂತ 12: ಭವಿಷ್ಯದ ರೆಫರೆನ್ಸ್ ಗಾಗಿ ಟಿಕೆಟ್ ಸಂಖ್ಯೆಯನ್ನು ನಮೂದಿಸಿಕೊಳ್ಳಿ.
ಉತ್ತಮ ಕ್ರೆಡಿಟ್ ಸ್ಕೋರ್ ಸಾಲ ಪಡೆಯಲು ಮಾತ್ರವಲ್ಲ, ಉಳಿತಾಯಕ್ಕೂ ನೆರವು ನೀಡುತ್ತೆ; ಹೇಗೆ? ಇಲ್ಲಿದೆ ಮಾಹಿತಿ
ಎಸ್ ಎಂಎಸ್ ಮೂಲಕ
ನೀವು ಬ್ಯಾಂಕ್ ಗೆ ಎಸ್ಎಂಎಸ್ ಕಳುಹಿಸುವ ಮೂಲಕ ಕೂಡ ಎಸ್ ಬಿಐ ಎಟಿಎಂ/ಡೆಬಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಬಹುದು. BLOCK ಎಂದು ಟೈಪ್ ಮಾಡಿ, ಡೆಬಿಟ್ ಕಾರ್ಡ್ ನ ಕೊನೆಯ ನಾಲ್ಕು ಸಂಖ್ಯೆಗಳನ್ನು ನಮೂದಿಸಿ 567676 ಕಳುಹಿಸಿ. ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದಲೇ ಎಸ್ ಎಂಎಸ್ ಕಳುಹಿಸಬೇಕು. ಬ್ಯಾಂಕ್ ಗೆ ನಿಮ್ಮ ಎಸ್ ಎಂಎಸ್ ತಲುಪಿದ ಬಳಿಕ ದೃಢೀಕರಣ ಎಸ್ ಎಂಎಸ್ ಬರುತ್ತದೆ. ಈ ಎಸ್ ಎಂಎಸ್ ನೋಟಿಫಿಕೇಷನ್ ನಲ್ಲಿ ಟಿಕೆಟ್ ಸಂಖ್ಯೆ, ಬ್ಲಾಕಿಂಗ್ ದಿನಾಂಕ ಹಾಗೂ ಸಮಯ ಕೂಡ ಇರುತ್ತದೆ.