Asianet Suvarna News Asianet Suvarna News

Success Mantra: ವ್ಯಾಪಾರದ ಬಗ್ಗೆ ಉಚಿತ ಪ್ರಚಾರ ಹೇಗ್ಮಾಡ್ಬೇಕು ಗೊತ್ತಾ?

ವ್ಯವಹಾರ ಶುರು ಮಾಡಿದ್ಮೇಲೆ ಅದ್ರ ಪ್ರಚಾರ ಹೇಗೆ ಎಂಬ ಚಿಂತೆ ಕಾಡುತ್ತದೆ. ಮೊದಲಿದ್ದಷ್ಟು ಸಮಸ್ಯೆ ಈಗಿಲ್ಲ. ಕೈನಲ್ಲೇ ಇಡೀ ಪ್ರಪಂಚವಿರುವಾಗ ಚಿಂತೆ ಏಕೆ. ನಿಮ್ಮ ಬ್ಯುಸಿನೆಸ್ ಸಕ್ಸಸ್ ಆಗ್ಬೇಕೆಂದ್ರೆ ನೀವು ಕೆಲ ಟಿಪ್ಸ್ ಫಾಲೋ ಮಾಡ್ಬೇಕು.
 

How To Advertise Your Business Free Of Cost
Author
First Published Sep 2, 2022, 3:51 PM IST

ವ್ಯಾಪಾರ ಶುರು ಮಾಡೋದೇ ಲಾಭ ಸಿಗ್ಲಿ ಅಂತಾ. ಆದ್ರೆ ಎಲ್ಲ ವ್ಯಾಪಾರದಲ್ಲಿ ಬಲುಬೇಗ ಲಾಭ ಸಿಗೋದಿಲ್ಲ. ಇದಕ್ಕೆ ಪ್ರಚಾರ ಕೂಡ ಕಾರಣವಾಗಿರುತ್ತೆ. ನಮ್ಮ ಬ್ಯುಸಿನೆಸ್ ಬಗ್ಗೆ ಸರಿಯಾಗಿ ಪ್ರಚಾರ ಮಾಡ್ದೆ ಹೋದ್ರೆ ಅಥವಾ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ವ್ಯವಹಾರದ ಬಗ್ಗೆ ಯಾರೂ ಕೇಳೆ ಇಲ್ಲ ಎಂದಾದ್ರೆ ಲಾಭ ಗಳಿಸೋದಿರಲಿ ವ್ಯಾಪಾರ ಮುನ್ನಡೆಸೋದೇ ಕಷ್ಟವಾಗುತ್ತೆ. ಹಾಗಂತ ವ್ಯಾಪಾರ ಶುರು ಮಾಡಿದ ತಕ್ಷಣ ಜಾಹಿರಾತು ನೀಡೋದು ಸುಲಭವಲ್ಲ. ಸ್ಟಾರ್ಟ್ ಅಪ್ ಗಳಲ್ಲಿ ವ್ಯವಹಾರಕ್ಕೆ ತಕ್ಕಷ್ಟು ಹಣ ಹೊಂದಿಸೋದೇ ಕಷ್ಟವಾಗಿರುತ್ತದೆ. ಹಾಗಿರುವಾಗ ಜಾಹಿರಾತಿಗೆ ಎಲ್ಲಿ ಹಣ ಹಾಕೋದು? ಟಿವಿ, ಪತ್ರಿಕೆ ಸೇರಿದಂತೆ ಅನೇಕ ಜಾಹಿರಾತು ವೆಬ್ ಸೈಟ್ ಗಳಿವೆ. ಅವುಗಳಿಗೆ ನೀವು ಹಣ ನೀಡ್ಬೇಕು. ಹಣವಿಲ್ಲ ಆದ್ರೆ ವ್ಯವಹಾರದ ಪ್ರಚಾರ ಬೇಕು ಎನ್ನುವವರು ಉಚಿತ ಜಾಹಿರಾತಿನ ಮೊರೆ ಹೋಗ್ಬೇಕು. ಅಲ್ಲಿ ಬಿಡಿಗಾಸು ಖರ್ಚು ಮಾಡದೆ ನೀವು ನಿಮ್ಮ ವ್ಯವಹಾರದ ಬಗ್ಗೆ ಮಾಹಿತಿ ನೀಡಬಹುದು. ನಾವಿಂದು ಉಚಿತ ಜಾಹಿರಾತಿನ ಬಗ್ಗೆ ಮಾಹಿತಿ ನೀಡ್ತೇವೆ.

ವೆಬ್ಸೈಟ್ (Website) : ಇಂಟರ್ನೆಟ್ (Internet ) ಮೂಲೆ ಮೂಲೆ ತಲುಪಿದೆ. ಜನರು ಯಾವುದೇ ವಸ್ತು ಬೇಕೆಂದ್ರೂ ಮೊದಲು ಇಂಟರ್ನೆಟ್ ಸರ್ಚ್ ಮಾಡ್ತಾರೆ. ಹಾಗಾಗಿ ನಿಮ್ಮ ಕಂಪನಿ ವೆಬ್ಸೈಟ್ ಶುರು ಮಾಡಿ. ವೆಬ್ಸೈಟ್ ಗಳನ್ನು ಕಡಿಮೆ ಬೆಲೆಗೆ ಮಾಡಿಸಬಹುದು. ನಿಮಗೆ ಜ್ಞಾನವಿದ್ರೆ ನೀವೇ ಮಾಡಿಕೊಳ್ಳಬಹುದು. ಅದ್ರಲ್ಲಿ ನಿಮ್ಮ ಕಂಪನಿಯ ಎಲ್ಲ ಮಾಹಿತಿಯನ್ನು ನೀವು ನೀಡ್ಬಹುದು. ವೆಬ್ಸೈಟ್ ಡೆವಲ್ಮೆಂಟ್ ಕಂಪನಿಯಿಂದಲೂ ನೀವು ವೆಬ್ಸೈಟ್ ಸಿದ್ಧಪಡಿಸಬಹುದು. ಆದ್ರೆ ಕೆಲವೊಂದು ಎಚ್ಚರಿಕೆ ತೆಗೆದುಕೊಳ್ಳಬೇಕು. ಕೆಲ ಕಂಪನಿಗಳು ಮೋಸ ಮಾಡುವ ಸಾಧ್ಯತೆಯಿರುತ್ತದೆ.

ಸಾಮಾಜಿಕ ಜಾಲತಾಣ (Social Network) : ಮಾಧ್ಯಮ ದೇಶದ ನಾಲ್ಕನೇ ಸ್ತಂಭವಾದ್ರೆ ಸಾಮಾಜಿಕ ಜಾಲತಾಣ ಐದನೇ ಸ್ತಂಭ. ಇದನ್ನು ಸರಿಯಾಗಿ ಬಳಸಿಕೊಂಡು ನೀವು ವ್ಯಾಪಾರದ ಪ್ರಚಾರ ಮಾಡಬಹುದು. ಫೇಸ್ಬುಕ್, ಟ್ವಿಟರ್ (Tweeter), ಗೂಗಲ್ ಪ್ಲಸ್,ಲಿಂಕ್ಡ್ ಇನ್ ಹೀಗೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ನೀವು ಪುಕ್ಕಟ್ಟೆ ಜಾಹಿರಾತು ನೀಡ್ಬಹುದು. 

Business Plan: ವ್ಯಾಪಾರ ಶುರು ಮಾಡೋ ಪ್ಲಾನ್ ಇದ್ರೆ ಇದನ್ನೋದಿಯೊಮ್ಮೆ

ಗೂಗಲ್ ಸೇವೆ  (Google Service ) ಬಳಸಿಕೊಳ್ಳಿ : ಗೂಗಲ್ ಹಲವು ಉಚಿತ ಸೇವೆಗಳನ್ನು ಹೊಂದಿದೆ. ಇದನ್ನು ಬಳಸಿಕೊಂಡು ನೀವು ಸುಲಭವಾಗಿ ವ್ಯಾಪಾರವನ್ನು ಉಚಿತವಾಗಿ ಪ್ರಚಾರ ಮಾಡಬಹುದು. ಗೂಗಲ್ ಪ್ಲಸ್, ಗೂಗಲ್ ಮೈ ಬ್ಯುಸಿನೆಸ್, ಗೂಗಲ್  ಬ್ರ್ಯಾಂಡ್ ಪೇಜ್, ಯುಟ್ಯೂಬ್ ಇವುಗಳಲ್ಲಿ ಒಂದನ್ನು ಬಳಸಿಕೊಂಡು ನೀವು ವ್ಯಾಪಾರದ ಪ್ರಚಾರವನ್ನು ಮಾಡಬಹುದಾಗಿದೆ.

ಬ್ಯುಸಿನೆಸ್ ಡೈರೆಕ್ಟರಿ (Business Directory) :  ಬ್ಯುಸಿನೆಸ್ ಡೈರೆಕ್ಟರಿ ಮೂಲಕ ಕೂಡ ನೀವು ವ್ಯಾಪಾರದ ಪ್ರಚಾರ ಮಾಡಬಹುದಾಗಿದೆ.  ಬ್ಯುಸಿನೆಸ್ ಡೈರೆಕ್ಟರಿಯಲ್ಲಿ ನೀವು ನಿಮ್ಮ ಬ್ಯುಸಿನೆಸ್ ಬಗ್ಗೆ ಮಾಹಿತಿ ನೀಡ್ಬೇಕಾಗುತ್ತದೆ.  ವ್ಯಾಪಾರದಲ್ಲಿ ಹೆಚ್ಚು ಗಳಿಸ್ಬೇಕು, ಲಾಭ ಮಾಡ್ಬೇಕು ಎನ್ನುವವರು ಕೂಪ ಮಂಡೂಕದಂತೆ ಇರಲು ಸಾಧ್ಯವಿಲ್ಲ. ಆನ್ಲೈನ್ ಗೆ ಬರಲೇಬೇಕಾಗುತ್ತದೆ. ಡಿಜಿಟಲ್ ದುನಿಯಾವನ್ನು ಅರಿಯಬೇಕಾಗುತ್ತದೆ.

ಬ್ಯುಸಿನೆಸ್ ಕಮ್ಯೂನಿಟಿ (Business Community) : ನೀವು ಬ್ಯುಸಿನೆಸ್ ಕಮ್ಯೂನಿಟಿಗೆ ಸೇರಬಹುದು. ಇದು ಕೂಡ ಆನ್ಲೈನ್. ಇಲ್ಲಿ ವ್ಯಾಪಾರಸ್ಥರು ತಮ್ಮ ಸಮಸ್ಯೆ ಬಗ್ಗೆ ಚರ್ಚೆ ನಡೆಸ್ತಾರೆ. ಹಾಗೆಯೇ ಇಲ್ಲಿ ನಿಮಗೆ ಉಚಿತ ಕೌನ್ಸಿಲಿಂಗ್ ಕೂಡ ಸಿಗುತ್ತದೆ. ಅದ್ರ ಸಹಾಯದಿಂದ ನೀವು ವ್ಯವಹಾರವನ್ನು ಲಾಭದತ್ತ ಕೊಂಡೊಯ್ಯಬಹುದು. 

ಬರೀ ಬಟ್ಟೆ ಅಂಗಡಿ ಮಾತ್ರವಲ್ಲ, ಈಸಿಯಾಗಿ ಶುರು ಮಾಡ್ಬಹುದು ಈ ಬ್ಯುಸಿನೆಸ್

ಸೆಮಿನಾರ್ ಮತ್ತು ಇವೆಂಟ್ಸ್ (Seminar and Events) : ನಿಮ್ಮ ವ್ಯಾಪಾರದ ಬಗ್ಗೆ ಜನರಿಗೆ ತಿಳಿಯಬೇಕೆಂದ್ರೆ ನೀವು ನಿಮ್ಮ ನಗರದಲ್ಲಿ ಸೆಮಿನಾರ್ ಅಥವಾ ಇವೆಂಟ್ಸ್ ಮಾಡಬಹುದು. ಅಲ್ಲಿ ನಿಮ್ಮ ವ್ಯಾಪಾರದ ಬಗ್ಗೆ ಜನರಿಗೆ ಮಾಹಿತಿ ನೀಡಬಹುದು. 
 

Follow Us:
Download App:
  • android
  • ios