ಬರೀ ಬಟ್ಟೆ ಅಂಗಡಿ ಮಾತ್ರವಲ್ಲ, ಈಸಿಯಾಗಿ ಶುರು ಮಾಡ್ಬಹುದು ಈ ಬ್ಯುಸಿನೆಸ್

ಬಟ್ಟೆ ಮಾರುಕಟ್ಟೆ ಬಹಳ ವಿಸ್ತಾರವಾಗಿದೆ. ಮಾರುಕಟ್ಟೆಯಲ್ಲಿ ಸಾಕಷ್ಟು ವೆರೈಟಿ ರೆಡಿಮೆಡ್ ಬಟ್ಟೆ ಸಿಗುತ್ತದೆ. ಬಟ್ಟೆ ಮಾತ್ರವಲ್ಲದೆ ಅದಕ್ಕೆ ಅಗತ್ಯವಿರುವ ಅನೇಕ ಸೇವೆಗಳು ಲಭ್ಯವಿದೆ. ಅದ್ರಲ್ಲಿ ನೀವೊಂದನ್ನು ಆಯ್ಕೆ ಮಾಡಿಕೊಂಡು ಬ್ಯುಸಿನೆಸ್ ಶುರು ಮಾಡ್ಬಹುದು.
 

Laundry clothing busiess ideas that can be started with low investment

ಗಾರ್ಮೆಂಟ್ ವ್ಯಾಪಾರದಲ್ಲಿ ಸಾಕಷ್ಟು ಲಾಭವಿದೆ. ಇದು ಮಾರುಕಟ್ಟೆಯಲ್ಲಿ ಸದಾ ಬೇಡಿಕೆಯಲ್ಲಿರುವ ವ್ಯಾಪಾರವಾಗಿದೆ.  ಆರ್ಥಿಕ ಹಿಂಜರಿತದ ಸಮಯದಲ್ಲೂ ಜನರು ಬಟ್ಟೆ ಖರೀದಿಸುವುದನ್ನು ನಿಲ್ಲಿಸುವುದಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಬಟ್ಟೆ ಉದ್ಯಮ  ವಿಶೇಷವಾಗಿ ಸಿದ್ಧ ಉಡುಪು ವ್ಯಾಪಾರವು ಗಮನಾರ್ಹವಾಗಿ ಬೆಳೆದಿದೆ.  ಪುರುಷರ ಉಡುಪು, ಮಹಿಳೆಯರ ಉಡುಪು, ಮಕ್ಕಳ ಉಡುಪಿನ ಸಗಟು ಪೂರೈಕೆಯು ವಿಶ್ವಾದ್ಯಂತ ಬೆಳೆಯುತ್ತಿದೆ. ಏಷ್ಯಾದ ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ಜವಳಿ ಉದ್ಯಮವನ್ನು ವಿಸ್ತರಿಸಲು ಮುಂದಾಗ್ತಿವೆ. ಯಾಕೆಂದ್ರೆ ಇವುಗಳ ವೆಚ್ಚ ಕಡಿಮೆ.  ವಿವಿಧ ರೀತಿಯ ಗಾರ್ಮೆಂಟ್ಸ್ ವ್ಯವಹಾರ ಕಲ್ಪನೆಗಳ ಬಗ್ಗೆ ನಾವಿಂದು ಹೇಳ್ತೇವೆ. ಬಟ್ಟೆ ಉದ್ಯಮಕ್ಕೆ ಕಾಲಿಡಲು ಬಯಸುವವರು ಇದ್ರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ವ್ಯಾಪಾರ ಶುರು ಮಾಡಬಹುದು.  

ಬಟ್ಟೆ (Clothes) ವ್ಯಾಪಾರ ಶುರು ಮಾಡಲು ಐಡಿಯಾ : 
ಲಾಂಡ್ರಿ (Laundry) ಮತ್ತು ಡ್ರೈ ಕ್ಲೀನಿಂಗ್ ವ್ಯಾಪಾರ (Business) :
ಲಾಂಡ್ರಿ ಮತ್ತು ಡ್ರೈ ಕ್ಲೀನಿಂಗ್ ಸೇವೆಗಳು ಜನರಿಗೆ ಸದಾ ಬೇಕು. ಪ್ರಪಂಚದಾದ್ಯಂತ ಯಾವುದೇ ಸ್ಥಳದಿಂದ ನೀವು ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಅಂಗಡಿ ತೆರೆದು ಅಥವಾ ಮನೆಯಲ್ಲಿಯೇ ನೀವು ಈ ವ್ಯಾಪಾರ ಶುರು ಮಾಡಬಹುದು. ಹೆಸರಾಂತ ಬ್ರ್ಯಾಂಡ್‌ನ ಫ್ರ್ಯಾಂಚೈಸಿ ಕೂಡ ನಿಮಗೆ ಸಿಗುತ್ತದೆ. ಇದ್ರ ಮಾರುಕಟ್ಟೆ ಗಾತ್ರ ದೊಡ್ಡದಿರುವ ಕಾರಣ ಅನೇಕ ಆನ್‌ಲೈನ್ ಸ್ಟಾರ್ಟ್‌ಅಪ್‌ಗಳು ಈ ಕ್ಷೇತ್ರಕ್ಕೆ ಕಾಲಿಟ್ಟಿವೆ.  

ಸಮವಸ್ತ್ರ (Uniform) ತಯಾರಿ : ಸಮವಸ್ತ್ರ ತಯಾರಿ ವ್ಯಾಪಾರ ಶುರು ಮಾಡಬಹುದು. ನೀವು ಮನೆಯಲ್ಲಿಯೇ ಸಮವಸ್ತ್ರ ತಯಾರಿಸಿ ಮಾರಾಟ ಮಾಡಬಹುದು. ಪ್ರತಿಯೊಂದು ಸಂಸ್ಥೆ, ಶಾಲೆ ಮತ್ತು ಇತರ ಸ್ಥಳಗಳಲ್ಲಿ ಸಮವಸ್ತ್ರದ ಅಗತ್ಯವಿದೆ. ಅಂತಹ ಸಂಸ್ಥೆಗಳೊಂದಿಗೆ ಟೈ-ಅಪ್ ಮಾಡಿಕೊಂಡು ನೀವು ವ್ಯಾಪಾರ ಆರಂಭಿಸಬಹುದು. 

ಬ್ಯುಸಿನೆಸ್ ಮಾಡ್ಬೇಕಾ? ಸ್ಟೇಷನರಿ ಅಂಗಡಿ ಹೇಗೆ ತೆರೆಯೋದು?

ಟಿ-ಶರ್ಟ್ (Tea Shirt) ಪ್ರಿಂಟಿಂಗ್  : ಇಂದಿನ ಕಾಲದಲ್ಲಿ ಟಿ ಶರ್ಟ್ ಪ್ರಿಂಟಿಂಗ್ ವ್ಯಾಪಾರವು ಸಾಕಷ್ಟು ಪ್ರಸಿದ್ಧಿಯಲ್ಲಿದೆ. ಟಿ ಶರ್ಟ್ ಮೇಲೆ ಗ್ರಾಹಕರಿಗೆ ಬೇಕಾದ ಹೆಸರು, ಡಿಸೈನ್ ಮಾಡಿಕೊಡಬೇಕು. ಇದ್ರಲ್ಲಿ ಅನೇಕ ವಿಧಗಳಿವೆ. ಅದನ್ನು ಪರಿಶೀಲಿಸಿ, ನಿಮಗೆ ಯೋಗ್ಯವಾದದ್ದನ್ನು ಆಯ್ಕೆ ಮಾಡಬೇಖು.  

ಬಾಡಿಗೆಗೆ ವೇಷಭೂಷಣ: ನೀವು ಬಟ್ಟೆಯನ್ನು ಬಾಡಿಗೆಗೆ ನೀಡಿಯೂ ಹಣ ಗಳಿಸಬಹುದು. ಮೊದಲು ಸಣ್ಣ ಮಟ್ಟದಲ್ಲಿ ಶುರು ಮಾಡಿ ನಂತ್ರ ವ್ಯವಹಾರವನ್ನು ವಿಸ್ತರಿಸಬಹುದು. ಶಾಲೆಗಳಿಗೆ, ಕಾರ್ಯಕ್ರಮಗಳಿಗೆ ಜನರು ದುಬಾರಿ ಹಣ ನೀಡಿ ಬಟ್ಟೆ ಖರೀದಿಸುವುದಿಲ್ಲ. ಒಂದು ದಿನದ ಅವಶ್ಯಕತೆ ಪೂರೈಸಲು ಬಾಡಿಗೆ ಬಟ್ಟೆ ಖರೀದಿಗೆ ಮುಂದಾಗ್ತಾರೆ. ಹಾಗಾಗಿ ಕಡಿಮೆ ವೆಚ್ಚದಲ್ಲಿ ನೀವು ಈ ವ್ಯವಹಾರ ಶುರು ಮಾಡ್ಬಹುದು.    

ಬಟ್ಟೆ ಅಂಗಡಿ: ಬಟ್ಟೆಗೆ ಯಾವಾಗ್ಲೂ ಬೇಡಿಕೆಯಿದೆ. ನೀವು ಸಣ್ಣ ಬಟ್ಟೆ ಅಂಗಡಿ ತೆರೆಯುವ ಮೂಲಕ ವ್ಯಾಪಾರ ಶುರು ಮಾಡಬಹುದು. ಗುಣಮಟ್ಟದ ಹಾಗೂ ಅನೇಕ ಕಲೆಕ್ಷನ್ ಇರುವ ಬಟ್ಟೆಗೆ ಯಾವಾಗ್ಲೂ ಬೇಡಿಕೆಯಿದೆ. ನೀವೇ ಬಟ್ಟೆಗಳನ್ನು ವಿನ್ಯಾಸಗೊಳಿಸಿ ಮಾರಾಟ ಮಾಡಬಹುದು.  

ಕಸ್ಟಮ್ ಬಟನ್: ಕಸ್ಟಮ್ ಬಟನ್ ಮಾಡುವ ವ್ಯವಹಾರವನ್ನು ನೀವು ಆರಂಭಿಸಬಹುದು, ಉಡುಪುಗಳನ್ನು ಅಲಂಕರಿಸಲು ಕಸ್ಟಮ್ ಬಟನ್‌ಗಳಿಗೆ ಭಾರಿ ಬೇಡಿಕೆಯಿದೆ. ವಿವಿಧ ರೀತಿಯ ಬಟನ್‌ಗಳನ್ನು ಹಾಕುವ ಮೂಲಕ ಬಟ್ಟೆಯನ್ನು ಸುಂದರಗೊಳಿಸಲಾಗುತ್ತದೆ.

Senior Citizens Savings Scheme: 60 ವರ್ಷ ಮೇಲ್ಪಟ್ಟವರಿಗೆ ಈ ಯೋಜನೆ ಬೆಸ್ಟ್; ಅಧಿಕ ಬಡ್ಡಿ ಜೊತೆಗೆ ತೆರಿಗೆ ಉಳಿತಾಯ

ಬೆಲ್ಟ್ ಬಕಲ್ಸ್ ವ್ಯಾಪಾರ : ಬೆಲ್ಟ್ ಬಕಲ್ ಉತ್ಪಾದನಾ ವ್ಯವಹಾರವನ್ನು ಮನೆಯಲ್ಲಿಯೇ ನೀವು ಶುರು ಮಾಡ್ಬಹುದು. ಪಾರ್ಟ್ ಟೈಂ ರೀತಿಯಲ್ಲೂ ಈ ವ್ಯವಹಾರ ನಡೆಸಬಹುದು. ಬೆಲ್ಟ್ ಬಕಲ್‌ಗಳನ್ನು ಫ್ಯಾಷನ್ ಮತ್ತು ಜೀವನಶೈಲಿ ಬಿಡಿಭಾಗಗಳಾಗಿ ಪರಿಗಣಿಸಲಾಗುತ್ತದೆ. 

ಹರಿದ ಬಟ್ಟೆ ಹೊಲಿಗೆ : ಎಲ್ಲರ ಮನೆಯಲ್ಲೂ ಮೆಷಿನ್ ಇರೋದಿಲ್ಲ. ಎಲ್ಲರಿಗೂ ಸ್ಟಿಚಿಂಗ್ ಬರುವುದಿಲ್ಲ. ಬಟ್ಟೆಗಳು ಅಂಗಡಿಯಲ್ಲಿ ಸಿಗ್ತವೆ. ಬೂಟಿಕ್ ಗಳಲ್ಲಿ ಬಟ್ಟೆ ಸ್ಟಿಚ್ ಮಾಡ್ತಾರೆ. ಆದ್ರೆ ಹರಿದ ಬಟ್ಟೆಗಳನ್ನು ಸ್ಟಿಚ್ ಮಾಡುವವರ ಸಂಖ್ಯೆ ಕಡಿಮೆ. ಸ್ವಲ್ಪ ಪ್ರಮಾಣದಲ್ಲಿ ನಿಮಗೆ ಹೊಲಿಗೆ ಬಂದ್ರೆ ನೀವು ಸ್ಟಿಚಿಂಗ್ ಶುರು ಮಾಡ್ಬಹುದು. ಹರಿದ ಬಟ್ಟೆಗಳಿಗೆ ಹೊಲಿಗೆ ಹಾಕಿ ಹಣ ಗಳಿಸಬಹುದು. ಇದನ್ನು ಮನೆಯಿಂದಲೂ ಮಾಡ್ಬಹುದು. 
 

Latest Videos
Follow Us:
Download App:
  • android
  • ios