Asianet Suvarna News Asianet Suvarna News

Business Plan: ವ್ಯಾಪಾರ ಶುರು ಮಾಡೋ ಪ್ಲಾನ್ ಇದ್ರೆ ಇದನ್ನೋದಿಯೊಮ್ಮೆ

ಬ್ಯುಸಿನೆಸ್ ಮಾಡ್ತೀನಿ ಅಂತಾ ಯಾವ್ದೋ ಅಂಗಡಿನಾ, ಎಲ್ಲೋ ಶುರು ಮಾಡಿ, ನಂತ್ರ ಲಾಭ ಆಗ್ತಿಲ್ಲ ಅಂತಾ ಬೊಬ್ಬೆ ಹಾಕಿದ್ರೆ ಕೇಳೋರು ಯಾರೂ ಇರೋದಿಲ್ಲ. ವ್ಯಾಪಾರ ಶುರು ಮಾಡೋದು ಮುಖ್ಯವಾದ್ರೂ ಅದಕ್ಕೊಂದಿಷ್ಟು ತಯಾರಿ ಅಗತ್ಯ. ಮಾರುಕಟ್ಟೆ ಬಗ್ಗೆ ಸರಿಯಾಗಿ ತಿಳಿದಿದ್ದರೆ ಮಾತ್ರ ಲಾಭ ಪಡೆಯಲು ಸಾಧ್ಯ.
 

How To Do Business simple ideas to get more profit from low investment
Author
Bangalore, First Published Jul 22, 2022, 3:42 PM IST

ತಾನೂ ಒಂದು ಬ್ಯುಸಿನೆಸ್ ಮಾಡ್ಬೇಕೆಂಬ ಬಯಕೆ ಅನೇಕರಿಗಿರುತ್ತದೆ. ಆದ್ರೆ ಆರಂಭದಲ್ಲಿಯೇ ಎಡವುತ್ತಾರೆ. ವ್ಯಾಪಾರದ ಬಗ್ಗೆ ಜ್ಞಾನ ಇರೋದಿಲ್ಲ. ಯಾವ ವ್ಯವಹಾರ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ತಿಳಿದಿರುವುದಿಲ್ಲ. ವ್ಯಾಪಾರ ಮಾಡುವ ಬಯಕೆ ನಿಮಗೂ ಇದ್ದರೆ ಕೆಲವೊಂದು ವಿಷ್ಯಗಳನ್ನು ಮೊದಲೇ ತಿಳಿದಿರಬೇಕು. ಮೊದಲು ನೀವು ವ್ಯಾಪಾರ ಮಾಡುವ ವಿಧಾನದ ಬಗ್ಗೆ ತಿಳಿದುಕೊಳ್ಳಬೇಕು,. ವ್ಯವಹಾರವನ್ನು ಹೇಗೆ ಪ್ರಾರಂಭಿಸಬೇಕು? ಯಾವ ರೀತಿಯ ವ್ಯವಹಾರವು ಉತ್ತಮವಾಗಿರುತ್ತದೆ ? ಮತ್ತು ಅದನ್ನು ಹೇಗೆ ನಡೆಸಬೇಕು? ಈ ಎಲ್ಲ ಜ್ಞಾನ ನಿಮಗೆ ಸ್ವಲ್ಪ ಮಟ್ಟಿಗೆ ಇರಲೇಬೇಕು.   ವ್ಯಾಪಾರ ಶುರು ಮಾಡಿ, ಹೆಚ್ಚು ಪ್ರಗತಿ ಸಾಧಿಸಬೇಕೆಂದ್ರೆ ನಾವು ಇಂದು ಹೇಳುವ ಟಿಪ್ಸ್ ಪಾಲನೆ ಮಾಡಿ.

ಬ್ಯುಸಿನೆಸ್ ಐಡಿಯಾ (Business Idea) : ವ್ಯಾಪಾರ ಕಲ್ಪನೆ ಮೊದಲ ಆರಂಭವಾಗಿದೆ. ನಿಮ್ಮ ಹೊಸ ವ್ಯಾಪಾರದ ರಚನೆ ಮತ್ತು ಬೆಳವಣಿಗೆಗೆ ವ್ಯಾಪಾರದ ಕಲ್ಪನೆ ನಕ್ಷೆ.  ನೀವು ಯಾವುದರಲ್ಲಿ ಹೆಚ್ಚು ಪರಿಣಿತಿ ಹೊಂದಿದ್ದೀರಿ ಅದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಅಗತ್ಯವಿರುವ ಆದ್ರೆ ಮಾರುಕಟ್ಟೆ (Market) ಯಲ್ಲಿ ಕಡಿಮೆ ಲಭ್ಯವಿರುವ ವ್ಯಾಪಾರ ಶುರು ಮಾಡಬಹುದು. ಭವಿಷ್ಯದಲ್ಲಿ ಅನಿವಾರ್ಯವಾಗುವ ವಸ್ತುಗಳ ತಯಾರಿಯನ್ನು ನೀವು ಈಗ ಶುರು ಮಾಡಬಹುದು. ಒಟ್ಟಿನಲ್ಲಿ ಗ್ರಾಹಕರಿಗೆ ಅನುಕೂಲವಾಗುವ ಹಾಗೂ ಅಗತ್ಯವಿರುವ ವಸ್ತುಗಳ ವ್ಯಾಪಾರವನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. 

ಮಾರುಕಟ್ಟೆಯ ಸಂಶೋಧನೆ : ಯಾವ ರೀತಿಯ ವ್ಯವಹಾರವನ್ನು ಮಾಡಲು ಯೋಜಿಸುತ್ತಿದ್ದೀರಿ, ಮೊದಲು ಆ ವಸ್ತುವಿನ ಬಗ್ಗೆ ಮಾರುಕಟ್ಟೆ ಸಂಶೋಧನೆ ಮಾಡಿ. ಮಾರುಕಟ್ಟೆಯಲ್ಲಿ ಆ ವಸ್ತುವಿನ ಸ್ಥಿತಿ ಏನು ಮತ್ತು ಆ ವಸ್ತುವಿನ ಬಗ್ಗೆ ಜನರ ಆಲೋಚನೆ ಏನು ಮತ್ತು ಅಗತ್ಯವೇನು ಎಂಬುದನ್ನು ಅರಿತುಕೊಳ್ಳಿ. ಜನರು ಆ ವಸ್ತುವನ್ನು ಏಕೆ ಖರೀದಿಸುತ್ತಾರೆ? ಅವರ ಅಗತ್ಯವೇನು? ಅವರ ಬೇಡಿಕೆ ಏನು? ಆ ಐಟಂಗೆ ಸಂಬಂಧಿಸಿದ ಎಲ್ಲಾ ಮಾಹಿತಿ ನಿಮ್ಮ ಬಳಿ ಇರಬೇಕು. 

ಬರೀ ಬಟ್ಟೆ ಅಂಗಡಿ ಮಾತ್ರವಲ್ಲ, ಈಸಿಯಾಗಿ ಶುರು ಮಾಡ್ಬಹುದು ಈ ಬ್ಯುಸಿನೆಸ್

ನೀವು ಯಾವುದೋ ಒಂದು ವ್ಯವಹಾರ ಶುರು ಮಾಡಿರ್ತೀರಿ, ನಿಮ್ಮ ಪ್ರಕಾರ ಅದು ಉತ್ತಮ ಕಲ್ಪನೆಯಾಗಿರುತ್ತದೆ. ಆದ್ರೆ ಮಾರುಕಟ್ಟೆಯಲ್ಲಿ ಅದು ಹೆಚ್ಚು ಓಡುವುದಿಲ್ಲವೆಂದಾದ್ರೆ ನೀವು ನಷ್ಟ ಅನುಭವಿಸಬೇಕಾಗುತ್ತದೆ. ಪ್ರತಿಸ್ಪರ್ಧಿಗಳು ಯಾರು?, ವ್ಯಾಪಾರದಿಂದ ಹಣವನ್ನು ಹೇಗೆ ಗಳಿಸಬಹುದು?, ಎಷ್ಟು ಲಾಭ ಗಳಿಸಬಹುದು?, ವ್ಯವಹಾರದಿಂದ ಲಾಭ ಬರಲು ಸಾಧ್ಯವೆ ಎಂಬ ನಾಲ್ಕು ವಿಷ್ಯದ ಬಗ್ಗೆ ನೀವು ಸಂಶೋಧನೆ ಮಾಡ್ಬೇಕು. ಒಂದ್ವೇಳೆ ಲಾಭವಿಲ್ಲವೆಂದಾದ್ರೆ ವ್ಯಾಪಾರ ಆರಂಭಿಸಿ ಕಷ್ಟಪಟ್ಟು ದುಡಿಯುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. 

ವ್ಯಾಪಾರದ ಸ್ಥಳ : ವ್ಯಾಪಾರದ ಬಗ್ಗೆ ಪ್ಲಾನ್ ಮಾಡಿ, ಸಂಶೋಧನೆ ಮಾಡಿದ ನಂತ್ರ ನೀವು ಸ್ಥಳವನ್ನು ಆಯ್ಕೆ ಮಾಡಬೇಕು. ನೀವು ಯಾವ ಸ್ಥಳದಲ್ಲಿ ವ್ಯಾಪಾರ ಮಾಡ್ತೀರಿ ಎಂಬುದು ಕೂಡ ಮುಖ್ಯವಾಗುತ್ತದೆ.  ಉತ್ತಮ ಸ್ಥಳದಲ್ಲಿ, ಜನನಿಬಿಡ ಸ್ಥಳದಲ್ಲಿ ಮಾಡಬೇಕಾದ ವ್ಯವಹಾರವನ್ನು ಅಲ್ಲಿಯೇ ಮಾಡಬೇಕು. ಸ್ಥಳದ ಆಯ್ಕೆಯಿಂದ ಮಾತ್ರ  ವ್ಯಾಪಾರ ಪ್ರಗತಿ ಹಾದಿಯಲ್ಲಿ ಹೋಗಲು ಸಾಧ್ಯ.  

ವ್ಯಾಪಾರ ರಚನೆ : ಯಾವುದೇ ವ್ಯವಹಾರವನ್ನು ಪ್ರಾರಂಭಿಸುವ ಮೊದಲು ವ್ಯವಹಾರದ ರಚನೆ ಮುಖ್ಯ. ವ್ಯವಹಾರ ಹೇಗೆ ಇರುತ್ತದೆ?, ವ್ಯಾಪಾರ ಎಷ್ಟು ದೊಡ್ಡದಾಗಿರುತ್ತದೆ? ಅದರಲ್ಲಿ ಎಷ್ಟು ಜನ ಇರುತ್ತಾರೆ? ವಸ್ತುಗಳನ್ನು ಹೇಗೆ ಇರಿಸಬೇಕು? ಎಲ್ಲಿ ಇಡಬೇಕು? ಹೀಗೆ ಅನೇಕ ವಿಷ್ಯಗಳನ್ನು ನೀವು ಮೊದಲೇ ಪ್ಲಾನ್ ಮಾಡ್ಬೇಕು.  

Instagram ಮೂಲಕವೂ ಹಣ ಗಳಿಸಬಹುದು, ಅದಕ್ಕೇನು ಮಾಡಬೇಕು?

ವ್ಯಾಪಾರದ ಹೆಸರು : ಯಾವುದೇ ವ್ಯವಹಾರವನ್ನು ಪ್ರಾರಂಭಿಸಲು, ವ್ಯವಹಾರದ ಹೆಸರನ್ನು ಹೊಂದಿರುವುದು ಬಹಳ ಮುಖ್ಯ. ವ್ಯವಹಾರದ ಹೆಸರು ಆಕರ್ಷಕವಾಗಿರಬೇಕು ಮತ್ತು ಸುಲಭವಾಗಿ ನೆನಪಿಟ್ಟುಕೊಳ್ಳವಂತಿರಬೇಕು. ಅದು ಬೇರೆ ಯಾವುದೇ ವ್ಯವಹಾರಕ್ಕೆ ಸಂಬಂಧಿಸದ ಹೆಸರಾಗಿರಬೇಕು. ವ್ಯಾಪಾರದ ಹೆಸರು ಚಿಕ್ಕದಾಗಿರಬೇಕು ಮತ್ತು ಉತ್ತಮವಾಗಿರಬೇಕು. ಹೆಸರಿನೊಂದಿಗೆ, ಬೋರ್ಡ್ ಕೂಡ ಆಕರ್ಷಕ ಮತ್ತು ಉತ್ತಮವಾಗಿರಬೇಕು.  

ವ್ಯಾಪಾರ ನೋಂದಾವಣೆ : ವ್ಯಾಪಾರವನ್ನು ಕಾನೂನುಬದ್ಧಗೊಳಿಸುವುದು ಬಹಳ ಮುಖ್ಯ. ಇದ್ರಿಂದ ನಿಮಗೆ ಮುಂದೆ ಯಾವುದೇ ಸಮಸ್ಯೆಯಾಗುವುದಿಲ್ಲ.   

ಬಜೆಟ್ (Budget) ನಿರ್ಧಾರ : ಯಾವುದೇ ವ್ಯವಹಾರವನ್ನು ಪ್ರಾರಂಭಿಸುವ ಮೊದಲು ಅತ್ಯಂತ ಮುಖ್ಯವಾದ ವಿಷಯವೆಂದರೆ ಬಜೆಟ್. ನಿಮ್ಮ ಬಳಿ ಬಜೆಟ್ ಇದ್ದರೆ ನೀವು ಯಾವುದೇ ವ್ಯವಹಾರವನ್ನು ಸುಲಭವಾಗಿ ಶುರು ಮಾಡಬಹುದು. ಬಜೆಟ್ ಎಷ್ಟಿದೆ? ಸಾಲ ಎಷ್ಟು ಸಿಗ್ತಿದೆ ಎಂಬ ಆಧಾರದ ಮೇಲೆ ನೀವು ವ್ಯಾಪಾರದ ರೂಪುರೇಷೆ ಮಾಡ್ಬೇಕಾಗುತ್ತದೆ.  
 

Follow Us:
Download App:
  • android
  • ios