ಹೊಸವರ್ಷದಂದು ರಾತ್ರಿಯೆಲ್ಲಾ ಪಾರ್ಟಿಯಲ್ಲಿ ತೊಡಗಿದ್ದ ಜನ ಅಡುಗೆ ಮಾಡಿದ್ದಕ್ಕಿಂತ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದ್ದೇ ಹೆಚ್ಚು. ಹೀಗೆ ಆಹಾರ ಪೂರೈಕೆ ಮಾಡಿದ ಡೆಲಿವರಿ ಬಾಯ್ಸ್‌ಗೆ ಜನ ಹೊಸವರ್ಷದಂದು ಭರ್ಜರಿಯಾಗಿಯೇ ಟಿಪ್ಸ್ ನೀಡಿದ್ದಾರೆ.

ಹೊಸವರ್ಷದಂದು ರಾತ್ರಿಯೆಲ್ಲಾ ಪಾರ್ಟಿಯಲ್ಲಿ ತೊಡಗಿದ್ದ ಜನ ಅಡುಗೆ ಮಾಡಿದ್ದಕ್ಕಿಂತ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದ್ದೇ ಹೆಚ್ಚು. ಜನ ಹೊಸವರ್ಷದ ಸಂಭ್ರಮದಲ್ಲಿ ತೂರಾಡುತ್ತಿದ್ದರೆ, ಇತ್ತ ವಿವಿಧ ಆನ್‌ಲೈನ್‌ ಆಹಾರ ಪೂರೈಕೆ ಘಟಕಗಳಲ್ಲಿ ಕೆಲಸ ಮಾಡುವ ಡೆಲಿವರಿ ಸಿಬ್ಬಂದಿ ರಾತ್ರಿಯೆಲ್ಲಾ ಆಹಾರ ಆರ್ಡರ್‌ ಮಾಡಿದ ಜನರಿಗೆ ಆಹಾರ ಪೂರೈಕೆಯಲ್ಲಿ ತೊಡಗಿದ್ದರು. ಹೀಗೆ ಆಹಾರ ಪೂರೈಕೆ ಮಾಡಿದ ಡೆಲಿವರಿ ಬಾಯ್ಸ್‌ಗೆ ಜನ ಹೊಸವರ್ಷದಂದು ಭರ್ಜರಿಯಾಗಿಯೇ ಟಿಪ್ಸ್ ನೀಡಿದ್ದಾರೆ. ಇದಕ್ಕೆ ಆನ್‌ಲೈನ್ ಆಹಾರ ಪೂರೈಕೆ ಮಾಡುವ ಝೊಮ್ಯಾಟೋ ಸಂಸ್ಥೆಯ ಸಿಇಒ ದೀಪಿಂದರ್ ಗೋಯಲ್‌ ಸಂತಸ ವ್ಯಕ್ತಪಡಿಸಿದ್ದು, ಭಾರತೀಯರಿಗೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ತಮ್ಮ ಸಂಸ್ಥೆಯ ಡೆಲಿವರಿ ಪಾರ್ಟನರ್‌ಗಳಿಗೆ ಎಷ್ಟು ಮೊತ್ತದ ಹಣ ಸಿಕ್ಕಿದೆ ಎಂಬ ವಿಚಾರವನ್ನು ಹೇಳಿಕೊಂಡಿರುವ ದೀಪೇಂದರ್ ಸ್ವತಃ ಟ್ವಿಟ್ಟರ್‌ನಲ್ಲಿ ಈ ವಿಚಾರ ತಿಳಿಸಿದ್ದಾರೆ.

ಹೊಸವರ್ಷದ ಮುನ್ನಾದಿನದಂದು ಅನೇಕ ಆನ್‌ಲೈನ್ ಡೆಲಿವರಿ ಸಂಸ್ಥೆಗಳು ಒಂದೇ ದಿನ ಜನರಿಂದ ಅತೀಹೆಚ್ಚು ಡೆಲಿವರಿ ಆರ್ಡರ್‌ ಪಡೆದುಕೊಂಡಿದ್ದವು. ಅನೇಕರು ಮನೆಯಲ್ಲೇ ಸ್ನೇಹಿತರು ಕುಟುಂಬ, ಬಂಧುಗಳೊಂದಿಗೆ ಪಾರ್ಟಿ ಮಾಡಿದ್ದು, ಸ್ವಿಗ್ಗಿ ಝೊಮ್ಯಾಟೋ ಮುಂತಾದ ಆನ್‌ಲೈನ್ ಆಹಾರ ಪೂರೈಕೆ ಸಂಸ್ಥೆಗಳಿಂದ ಆಹಾರ ಡೆಲಿವರಿ ಪಡೆದುಕೊಂಡಿದ್ದರು. ಇಂತಹ ಫುಡ್ ಡೆಲಿವರಿ ಆಪ್‌ಗಳ ಸಿಇಒಗಳು ಈ ವೇಳೆಯ ಕೆಲ ಆಸಕ್ತಿದಾಯಕ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

Zomato ನೂತನ ಜಾಹೀರಾತಿನಲ್ಲಿ ದಲಿತರಿಗೆ ನಿಂದನೆ, ರಾಷ್ಟ್ರೀಯ ಆಯೋಗದಿಂದ ನೋಟಿಸ್‌!

ಅದೇ ರೀತಿ ಝೊಮ್ಯಾಟೋ ಸಿಇಒ ದೀಪಿಂದರ್ ಗೊಯಲ್ ಅವರು ನ್ಯೂ ಇಯರ್ ಹಿಂದಿನ ರಾತ್ರಿ ಭಾರತೀಯರು 97 ಲಕ್ಷಕ್ಕೂ ಅಧಿಕ ಹಣವನ್ನು ಡೆಲಿವರಿ ಪಾರ್ಟನರ್‌ಗಳಿಗೆ ಟಿಪ್ಸ್‌ ಆಗಿ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಅವವರು ಲವ್ ಯೂ ಇಂಡಿಯಾ, ನೀವು ನಮಗೆ 97 ಲಕ್ಷಕ್ಕೂ ಅಧಿಕ ಹಣವನ್ನು ಟಿಪ್ಸ್‌ ಆಗಿ ನೀಡಿದ್ದೀರಿ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಬಳಕೆದಾರರು ಕೂಡ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಭಾರತದಲ್ಲಿ ಪ್ರತಿ ಆರ್ಡರ್‌ಗೆ ಎಷ್ಟು ಟಿಪ್ಸ್ ನೀಡುತ್ತಾರೆ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಅವರು ಇದಕ್ಕೆ ಅರ್ಹರು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಗ್ರೇಟ್ ತುಂಬಾ ಖುಷಿಯಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇದು ಒಳ್ಳೆಯ ಸುದ್ದಿ ಈ ಹಣದಲ್ಲಿ ಡೆಲಿವರಿ ಪಾಲುದಾರರಿಗೆ ಪಾಲು ನೀಡುತ್ತೀರಾ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಆನ್‌ಲೈನ್‌ ಫುಡ್‌ ಬುಕ್ಕಿಂಗ್‌ ಇನ್ನು ದುಬಾರಿ, ಫ್ಲಾಟ್‌ಫಾರ್ಮ್‌ ಫೀ ಏರಿಸಿದ Zomato!

ಅನೇಕರು ನಗದು ಪಾವತಿ ಮಾಡುತ್ತಾರೆ. ಮೊತ್ತ ಎಷ್ಟೇ ಇದ್ದರೂ ಜನ ಕೆಲವೊಮ್ಮೆ ಕೋಟಿಗೆ ಸಮೀಪ ಟಿಪ್ಸ್ ನೀಡುತ್ತಾರೆ. ಆದ್ದರಿಂದಲೇ ಜಗತ್ತು ಕಷ್ಟ, ಅನ್ಯಾಯ, ನೀಚ ಎನಿಸಿದಾಗಲೂ ಕೆಲವರ ಒಳ್ಳೆತನ ಮತ್ತೆ ನಂಬುವಂತೆ ಮಾಡುತ್ತದೆ. ಇಲ್ಲದಿದ್ದರೆ ಜಗತ್ತು ಸುಗಮವಾಗಿ ಚಲಿಸುವುದಿಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. 
ಇನ್ನು 2015ರಿಂದ ಕ್ರಮವಾಗಿ 2020ರವರೆಗೂ ಹೊಸ ವರ್ಷದ ಮುನ್ನಾ ದಿನ ಅತೀಹೆಚ್ಚು ಆಹಾರ ಪೂರೈಕೆ ಮಾಡಿದ್ದೇವೆ. ಹಾಗೆಯೇ ಭವಿಷ್ಯದ ಬಗ್ಗೆ ಉತ್ಸುಕನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಗೋಯಲ್.

Scroll to load tweet…