GST Rules: ಏ.1ರಿಂದ ಹೊಸ ನಿಯಮ ಜಾರಿ; ಭಾರತದ ಲಕ್ಷಾಂತರ ಕಂಪೆನಿಗಳಿಗೆ ಎದುರಾಗಲಿದೆ ಹೊಸ ಸವಾಲು
* 20 ಕೋಟಿ ರೂ. ವ್ಯವಹಾರ ಮೀರಿದ ಕಂಪೆನಿಗಳು ಬಿ2ಬಿ ವಹಿವಾಟುಗಳಿಗೆ ಇ-ಇನ್ ವಾಯ್ಸ್ ಸೃಷ್ಟಿಸೋದು ಕಡ್ಡಾಯ
* ಪರೋಕ್ಷ ತೆರಿಗೆಗಳು ಹಾಗೂ ಸುಂಕಗಳ ಕೇಂದ್ರೀಯ ಮಂಡಳಿಯಿಂದ ಮಾಹಿತಿ
*ಇನ್ ವಾಯ್ಸ್ ಮಾನ್ಯವಾಗಿರದಿದ್ರೆ ಖರೀದಿದಾರರಿಗೆ ಸಿಗದು ತೆರಿಗೆ ಪ್ರಯೋಜನ
ನವದೆಹಲಿ (ಮಾ.30): ಜಿಎಸ್ ಟಿ (GST) ನಿಯಮಗಳಲ್ಲಿ ಏಪ್ರಿಲ್ 1ರಿಂದ ಬದಲಾವಣೆಯಾಗಲಿದ್ದು,ಲಕ್ಷಾಂತರ ಕಂಪೆನಿಗಳ ಮೇಲೆ ನೇರ ಪರಿಣಾಮ ಬೀರಲಿದೆ. 20 ಕೋಟಿ ರೂ.ಗಿಂತ ಹೆಚ್ಚಿನ ವ್ಯವಹಾರ (Transaction) ನಡೆಸೋ ಉದ್ಯಮಗಳು ಬಿ2ಬಿ (B2B) ವಹಿವಾಟುಗಳಿಗೆ ಏಪ್ರಿಲ್ 1ರಿಂದ ಕಡ್ಡಾಯವಾಗಿ ಎಲೆಕ್ಟ್ರಾನಿಕ್ ಇನ್ ವಾಯ್ಸ್ ( e-invoicing) ಸೃಷ್ಟಿಸಬೇಕೆಂದು ಪರೋಕ್ಷ ತೆರಿಗೆಗಳು ಹಾಗೂ ಸುಂಕಗಳ ಕೇಂದ್ರೀಯ ಮಂಡಳಿ (CBITC) ತಿಳಿಸಿದೆ.
ಸರಕು ಹಾಗೂ ಸೇವೆಗಳ ತೆರಿಗೆ (GST) ಕಾನೂನು ಅಡಿಯಲ್ಲಿ 500 ಕೋಟಿ ರೂ.ಗಿಂತ ಅಧಿಕ ವಹಿವಾಟು ನಡೆಸೋ ಕಂಪೆನಿಗಳು ಉದ್ಯಮದಿಂದ ಉದ್ಯಮ (B2B) ವಹಿವಾಟುಗಳಿಗೆ 2020ರ ಅಕ್ಟೋಬರ್ 1ರಿಂದ ಇ-ಇನ್ ವಾಯ್ಸ್ ಸೃಷ್ಟಿಸೋದು ಕಡ್ಡಾಯ ಮಾಡಲಾಗಿತ್ತು. ಆ ಬಳಿಕ ಇದನ್ನು 2021ರ ಜನವರಿ 1ರಂದು 100 ಕೋಟಿ ರೂ.ಗಿಂತ ಅಧಿಕ ಮೊತ್ತದ ವಹಿವಾಟು ಹೊಂದಿರೋ ಉದ್ಯಮಗಳಿಗೆ ವಿಸ್ತರಿಸಲಾಯಿತು.ಕಳೆದ ವರ್ಷ ಏಪ್ರಿಲ್ 1ರಿಂದ 50 ಲಕ್ಷ ರೂ.ಗಿಂತ ಅಧಿಕ ವಹಿವಾಟು ನಡೆಸೋ ಕಂಪೆನಿಗಳು ಬಿ2ಬಿ ಇ-ಇನ್ ವಾಯ್ಸ್ ಸೃಷ್ಟಿಸುತ್ತಿವೆ. ಈಗ ಇದನ್ನು 20 ಕೋಟಿ ರೂ.ಗಿಂತ ಹೆಚ್ಚಿನ ವ್ಯವಹಾರ ನಡೆಸೋ ಉದ್ಯಮಗಳಿಗೆ ವಿಸ್ತರಿಸಲಾಗಿದೆ. ಈ ಹೊಸ ಜಿಎಸ್ ಟಿ (GST) ನಿಯಮ ಭಾರತದ (India) ಲಕ್ಷಾಂತರ ಕಂಪೆನಿಗಳ ಮೇಲೆ ಪರಿಣಾಮ ಬೀರಲಿದೆ.
Changes In GST:ಜನವರಿ 1ರಿಂದ ಪರೋಕ್ಷ ತೆರಿಗೆ ಪದ್ಧತಿ ಬಿಗಿ; ಜಿಎಸ್ ಟಿಯಲ್ಲಿ 12 ಬದಲಾವಣೆಗಳು
ಈ ಹೊಸ ಜಿಎಸ್ ಟಿ (GST) ನಿಯಮದ ಪರಿಣಾಮ ಏಪ್ರಿಲ್ 1ರಿಂದ ಹೆಚ್ಚಿನ ಪೂರೈಕೆದಾರರು ಇ-ಇನ್ ವಾಯ್ಸ್ ಸೃಷ್ಟಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಇನ್ ವಾಯ್ಸ್ (Invoice) ಮಾನ್ಯವಾಗಿರದಿದ್ರೆ ಖರೀದಿದಾರರಿಗೆ (Purchaser) ತೆರಿಗೆ (Tax) ಪ್ರಯೋಜನ ಸಿಗೋದಿಲ್ಲ. ಅಲ್ಲದೆ, ದಂಡ (Penalty) ಕೂಡ ಪಾವತಿಸಬೇಕಾಗುತ್ತದೆ.
ಕೇಂದ್ರ ಸರ್ಕಾರ ಈ ವರ್ಷದ ಜನವರಿಯಿಂದ ಪರೋಕ್ಷ ತೆರಿಗೆ ( indirect tax) ಪದ್ಧತಿಯನ್ನು ಬಿಗಿಗೊಳಿಸಿದೆ. ಉದ್ಯಮಿಗಳು ಪಾವತಿಸೋ ತೆರಿಗೆಗೆ ನೀಡೋ ಗ್ರ್ಯಾಂಟ್ ಆಫ್ ಕ್ರೆಡಿಟ್ಸ್ (grant of credits) ಸೇರಿದಂತೆ ಅನೇಕ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಯಾವುದೇ ಒಂದು ವಸ್ತುವಿನ ಮಾರಾಟಗಾರ ತನ್ನ ಮಾಸಿಕ ಮಾರಾಟ ರಿಟರ್ನ್ಸ್ ನಲ್ಲಿ (monthly sales return)ಇನ್ ವಾಯ್ಸ್ (INvoice)ಮಾಹಿತಿ ಬಹಿರಂಗಪಡಿಸದಿದ್ರೆ ಖರೀದಿದಾರ ಆ ವಸ್ತುವಿಗೆ ಪಾವತಿಸಿದ ತೆರಿಗೆ ಮೇಲೆ ಯಾವುದೇ ಕ್ರೆಡಿಟ್(Credit) ಪಡೆಯಲು ಸಾಧ್ಯವಾಗೋದಿಲ್ಲ.ಯಾವುದೇ ಒಂದು ವಸ್ತುವಿನ ಮಾರಾಟಗಾರ ತನ್ನ ಮಾಸಿಕ ಮಾರಾಟ ರಿಟರ್ನ್‌ನಲ್ಲಿ (monthly sales return)ಇನ್ ವಾಯ್ಸ್ (INvoice)ಮಾಹಿತಿ ಬಹಿರಂಗಪಡಿಸದಿದ್ರೆ ಖರೀದಿದಾರ ಆ ವಸ್ತುವಿಗೆ ಪಾವತಿಸಿದ ತೆರಿಗೆ ಮೇಲೆ ಯಾವುದೇ ಕ್ರೆಡಿಟ್(Credit) ಪಡೆಯಲು ಸಾಧ್ಯವಾಗೋದಿಲ್ಲ.
UPI Tap to Pay: ಗೂಗಲ್ ಪೇ ಹೊಸ ಫೀಚರ್: ಹಣ ಪಾವತಿ ಈಗ ಇನ್ನೂ ಸುಲಭ!
ತೆರಿಗೆ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ತೆರಿಗೆ ಕ್ರೆಡಿಟ್ ಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಿದ್ದಾರೆ. ಕೆಲವು ಸಂಸ್ಥೆಗಳು ನಕಲಿ ಇನ್ ವಾಯ್ಸ್ ಸೃಷ್ಟಿಸೋ ಮೂಲಕ ಪರೋಕ್ಷ ತೆರಿಗೆಯನ್ನು ವಂಚಿಸುತ್ತಿರೋದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಸರ್ಕಾರ ಮಾಸಿಕ ಮಾರಾಟ ರಿಟರ್ನ್ಸ್ನಲ್ಲಿ ಮಾರಾಟ ಮಾಡಿದ ಪ್ರತಿ ವಸ್ತುವಿನ ಇನ್ ವಾಯ್ಸ್ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸುವಂತೆ ನಿಯಮವನ್ನು ಬಿಗಿಗೊಳಿಸಿದೆ.
ವರದಿ ವಿಧಾನ ಹಾಗೂ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳೋ ಮೂಲಕ ತೆರಿಗೆ ಅನುಸರಣೆಯನ್ನು ಉತ್ತಮಗೊಳಿಸೋದು ಸರ್ಕಾರದ ಈ ಕ್ರಮದ ಹಿಂದಿನ ಉದ್ದೇಶವಾಗಿದೆ. ಅಲ್ಲದೆ, ಇದು ಕಾನೂನುಬದ್ಧವಾಗಿ ನಿಯಮಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸೋ ಪೂರೈಕೆದಾರರಿಂದ ಸರಕು ಹಾಗೂ ಸೇವೆಗಳನ್ನು ಖರೀದಿಸಲು ಉದ್ಯಮಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತದೆ.