GST Council Meeting: ಕ್ಯಾನ್ಸರ್ ಮೆಡಿಸಿನ್‌ಗೆ ವಿನಾಯಿತಿ, ಸಿನಿಮಾ ಹಾಲ್‌ಗಳಲ್ಲಿ ಆಹಾರದ ಮೇಲಿನ ತೆರಿಗೆ ಕಡಿತ
ಸಿನಿಮಾ ಹಾಲ್‌ಗಳಲ್ಲಿ ಮಾರಾಟ ಮಾಡುವ ಆಹಾರ ಮತ್ತು ಪಾನೀಯಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಲು ಕೌನ್ಸಿಲ್ ನಿರ್ಧರಿಸಿದೆ ಎಂದು ಪಶ್ಚಿಮ ಬಂಗಾಳದ ಹಣಕಾಸು ಸಚಿವ ಚಂದ್ರಿಮಾ ಭಟ್ಟಾಚಾರ್ಯ ತಿಳಿಸಿದ್ದಾರೆ. ಅದರೊಂದಿಗೆ ಪ್ರಮುಖ ಕ್ಯಾನ್ಸರ್ ಔಷಧಿ ಮೇಲಿನ ತೆರಿಗೆಯನ್ನೂ ಕಡಿಮೆ ಮಾಡಲು ನಿರ್ಧಾರ ಮಾಡಲಾಗಿದೆ.
ನವದೆಹಲಿ (ಜು.11): ಜಿಎಸ್‌ಟಿ ಕೌನ್ಸಿಲ್ ತನ್ನ 50ನೇ ಸಭೆಯಲ್ಲಿ ಅಪರೂಪದ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲಾಗುವ ಕ್ಯಾನ್ಸರ್ ಔಷಧ ದಿನುಟುಕ್ಸಿಮಾಬ್ ಮತ್ತು ಫುಡ್ ಫಾರ್ ಸ್ಪೆಷಲ್ ಮೆಡಿಕಲ್ ಪರ್ಪಸಸ್ (ಎಫ್‌ಎಸ್‌ಎಂಪಿ) ಮೇಲಿನ ತೆರಿಗೆ ದರಗಳನ್ನು ಕಡಿಮೆ ಮಾಡಲು ನಿರ್ಧರಿಸಿದೆ ಮತ್ತು ಸಿನಿಮಾ ಹಾಲ್‌ಗಳಲ್ಲಿ ನೀಡಲಾಗುವ ಆಹಾರ ಮತ್ತು ಪಾನೀಯಗಳ ಮೇಲಿನ ಜಿಎಸ್‌ಟಿ ದರವನ್ನು ದೊಡ್ಡ ಮಟ್ಟದಲ್ಲಿ ಕಡಿತ ಮಾಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಜಿಎಸ್‌ಟಿ ಕೌನ್ಸಿಲ್‌ನ 50 ನೇ ಸಭೆಯ ಅಧ್ಯಕ್ಷತೆ ವಹಿಸಿ ಈ ನಿರ್ಧಾರ ಮಾಡಿದ್ದಾರೆ. ಸಭೆಯ ನಂತರ, ಪಶ್ಚಿಮ ಬಂಗಾಳದ ಹಣಕಾಸು ಸಚಿವ ಚಂದ್ರಿಮಾ ಭಟ್ಟಾಚಾರ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸಿಂಗ್‌ಗಳಿಗೆ ಸಂಪೂರ್ಣ ಮುಖಬೆಲೆಯ ಮೇಲೆ ಶೇಕಡಾ 28 ರಷ್ಟು ತೆರಿಗೆ ವಿಧಿಸಲು ಕೌನ್ಸಿಲ್ ನಿರ್ಧರಿಸಿದೆ ಎಂದು ಹೇಳಿದರು. ಸಿನಿಮಾ ಹಾಲ್‌ಗಳಲ್ಲಿ ನೀಡಲಾಗುವ ಆಹಾರ ಮತ್ತು ಪಾನೀಯಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಲು ಕೌನ್ಸಿಲ್ ನಿರ್ಧರಿಸಿದೆ ಎಂದು ಇದೇ ವೇಳೆ ತಿಳಿಸಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಚಂದ್ರಿಮಾ ಭಟ್ಟಾಚಾರ್ಯ, ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸಿಂಗ್‌ಗಳಿಗೆ ಸಂಪೂರ್ಣ ಮುಖಬೆಲೆಯ ಮೇಲೆ ಶೇಕಡಾ 28 ರಷ್ಟು ತೆರಿಗೆ ವಿಧಿಸಲು ಕೌನ್ಸಿಲ್ ನಿರ್ಧರಿಸಿದೆ ಎಂದು ಹೇಳಿದರು. ಸಿನಿಮಾ ಹಾಲ್‌ಗಳಲ್ಲಿ ನೀಡಲಾಗುವ ಆಹಾರ ಮತ್ತು ಪಾನೀಯಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಲು ಕೌನ್ಸಿಲ್ ನಿರ್ಧರಿಸಿದೆ ಎಂದು ಅವರು ಹೇಳಿದರು. ಆನ್‌ಲೈನ್‌ನಲ್ಲಿ ಚಾನ್ಸ್‌ಗಳ ಗೇಮ್ ಹಾಗೂ ಕೌಶಲದ ಗೇಮ್‌ಗಳ ನಡುವಿನ ವ್ಯತ್ಯಾಸವನ್ನು ತೆಗೆದುಹಾಕಲು ಕೌನ್ಸಿಲ್ ನಿರ್ಧಾರ ಮಾಡಿದೆ ಎಂದು ಮಹಾರಾಷ್ಟ್ರ ಅರಣ್ಯ ಸಾಂಸ್ಕೃತಿಕ ಮತ್ತು ಮೀನುಗಾರಿಕೆ ಸಚಿವ ಸುಧೀರ್ ಮುಂಗಂತಿವಾರ್ ತಿಳಿಸಿದ್ದಾರೆ. ಇದರರ್ಥ ಎಲ್ಲಾ ಆನ್‌ಲೈನ್ ಗೇಮ್‌ಗಳು, ಅವು ಕೌಶಲ್ಯ ಆಧಾರಿತ ಅಥವಾ ಅವಕಾಶ ಆಧಾರಿತವಾಗಿರುವುದನ್ನು ಲೆಕ್ಕಿಸದೆ, ಒಂದೇ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ಇದರಿಂದಾಗಿ ಕ್ರಿಕೆಟ್‌ನ ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ಗಳೂ ಕೂಡ ದೊಡ್ಡ ಮಟ್ಟದ ತೆರಿಗೆ ವ್ಯಾಪ್ತಿಯಲ್ಲಿ ಬರುತ್ತದೆ.
ಪಶ್ಚಿಮ ಬಂಗಾಳದ ಎಫ್‌ಎಂ ಪ್ರಕಾರ, ಅಪರೂಪದ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲಾಗುವ ಕ್ಯಾನ್ಸರ್ ಔಷಧ ದಿನುಟುಕ್ಸಿಮಾಬ್ ಮತ್ತು ಫುಡ್ ಫಾರ್ ಸ್ಪೆಷಲ್ ಮೆಡಿಕಲ್ ಪರ್ಪಸಸ್ (ಎಫ್‌ಎಸ್‌ಎಂಪಿ) ಆಮದು ಮೇಲಿನ ಜಿಎಸ್‌ಟಿ ವಿನಾಯಿತಿಯನ್ನು ಜಿಎಸ್‌ಟಿ ಕೌನ್ಸಿಲ್ ಅನುಮೋದಿಸಿದೆ. ಪ್ರಸ್ತುತ, ವೈಯಕ್ತಿಕ ಬಳಕೆಗಾಗಿ ಕ್ಯಾನ್ಸರ್ ಔಷಧಿ ದಿನುಟುಕ್ಸಿಮಾಬ್ (ಕ್ವಾರ್ಜಿಬಾ) ನ ವೈಯಕ್ತಿಕ ಆಮದುಗಳಿಗೆ ಶೇ. 12 ಐಜಿಎಸ್ಟಿಗೆ ಒಳಪಟ್ಟಿವೆ. ಸಿನಿಮಾ ಹಾಲ್‌ಗಳಲ್ಲಿ ನೀಡಲಾಗುವ ಆಹಾರ ಮತ್ತು ಪಾನೀಯಗಳ ಮೇಲಿನ ಜಿಎಸ್‌ಟಿಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸಲು ಕೌನ್ಸಿಲ್ ಅನುಮೋದನೆ ನೀಡಿದೆ.
ಸಿನಿಮಾ ಟಿಕೆಟ್‌ನ ಮಾರಾಟವನ್ನು ಪಾಪ್‌ಕಾರ್ನ್ ಅಥವಾ ತಂಪು ಪಾನೀಯಗಳಂತಹ ತಿನ್ನಬಹುದಾದ ವಸ್ತುಗಳ ಮಾರಾಟದೊಂದಿಗೆ ಸಂಯೋಜಿಸಿದರೆ, ಸಂಪೂರ್ಣ ಪೂರೈಕೆಯನ್ನು ಸಂಯೋಜಿತ ಪೂರೈಕೆಯಾಗಿ ನಿರ್ವಹಿಸಬೇಕು ಮತ್ತು ಮುಖ್ಯ ಪೂರೈಕೆಯ ಸಂಬಂಧಿತ ದರದಲ್ಲಿ ತೆರಿಗೆ ವಿಧಿಸಬೇಕು ಎಂದು ಹೇಳಿದೆ. ಅಂದರೆ, ಸಿನಿಮಾ ಟಿಕೆಟ್‌ಗೆ ವಿಧಿಸಲಾಗುವ ದರದ ತೆರಿಗೆಯೂ ಕೂಡ ಇದಕ್ಕೆ ಒಳಪಡುತ್ತದೆ. ಪ್ರಸ್ತುತ, 100 ಕ್ಕಿಂತ ಕಡಿಮೆ ಬೆಲೆಯ ಚಲನಚಿತ್ರ ಟಿಕೆಟ್‌ಗಳಿಗೆ ಶೇಕಡಾ 12 ರಷ್ಟು ತೆರಿಗೆ ವಿಧಿಸಲಾಗುತ್ತದೆ, ಆದರೆ 100 ಕ್ಕಿಂತ ಹೆಚ್ಚು ದರದ ಮೇಲೆ 18 ಶೇಕಡಾ ತೆರಿಗೆ ವಿಧಿಸಲಾಗುತ್ತದೆ. ವರದಿಯ ಪ್ರಕಾರ ಆನ್‌ಲೈನ್ ಗೇಮಿಂಗ್ ಮತ್ತು ಸಿನಿಮಾ ಹಾಲ್‌ಗಳಲ್ಲಿ ನೀಡಲಾಗುವ ಆಹಾರ ಮತ್ತು ಪಾನೀಯಗಳ ಮೇಲಿನ ಹೊಸ ಜೆಎಸ್‌ಟಿ ದರಗಳು ಜುಲೈ 18 ರಿಂದ ಜಾರಿಗೆ ಬರಲಿವೆ. ಜಿಎಸ್‌ಟಿ ಸಂಬಂಧಿತ ನಿರ್ಧಾರಗಳ ವಿರುದ್ಧ ಮೇಲ್ಮನವಿಗಳನ್ನು ಆಲಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲು ಕೌನ್ಸಿಲ್ ಅನುಮೋದನೆ ನೀಡಿದೆ.
ಬರೋಬ್ಬರಿ 25,000 ಕೋಟಿ ರೂ. ಮೊತ್ತದ ನಕಲಿ ಜಿಎಸ್‌ಟಿ ಕ್ಲೇಮ್ ಪತ್ತೆ: ನಕಲಿ ದಾಖಲೆ ಸಲ್ಲಿಸಿ ವಂಚನೆ
ಸರ್ಕಾರವು ಇತ್ತೀಚೆಗೆ ಜಾರಿ ನಿರ್ದೇಶನಾಲಯ (ED) ಮತ್ತು ಸರಕು ಮತ್ತು ಸೇವಾ ತೆರಿಗೆ ನೆಟ್‌ವರ್ಕ್ (GSTN) ನಡುವೆ ಮನಿ ಲಾಂಡರಿಂಗ್ ತಡೆ ಕಾಯ್ದೆ, 2002 (PMLA) ಅಡಿಯಲ್ಲಿ ತನಿಖೆಯಲ್ಲಿ ಸಹಾಯ ಮಾಡಲು ಮಾಹಿತಿಯ ವಿನಿಮಯವನ್ನು ಸಕ್ರಿಯಗೊಳಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಅಧಿಸೂಚನೆಯು ನಿರ್ದಿಷ್ಟವಾಗಿ PMLA ನ ವಿಭಾಗ 66(1)(iii) ಅಡಿಯಲ್ಲಿ ED ಮತ್ತು GSTN ನಡುವಿನ ಮಾಹಿತಿಯ ಹಂಚಿಕೆಗೆ ಸಂಬಂಧಿಸಿದೆ.ಪಿಎಂಎಲ್‌ಎ ಅಡಿಯಲ್ಲಿ ಜಿಎಸ್‌ಟಿಎನ್ ಅನ್ನು ಸೇರಿಸುವ ನಿರ್ಧಾರವನ್ನು ಅಂತಿಮಗೊಳಿಸುವ ಮೊದಲು ಹಲವಾರು ಹಣಕಾಸು ಮಂತ್ರಿಗಳು ಚರ್ಚೆಯ ಅಗತ್ಯವನ್ನು ಪ್ರಸ್ತಾಪ ಮಾಡಿದ್ದಾರೆ. ದೆಹಲಿ, ಪಂಜಾಬ್, ತಮಿಳುನಾಡು, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಕರ್ನಾಟಕ, ಛತ್ತೀಸ್‌ಗಢ ಮತ್ತು ರಾಜಸ್ಥಾನದ ಹಣಕಾಸು ಮಂತ್ರಿಗಳು ಈ ವಿಷಯವನ್ನು ಪ್ರಸ್ತಾಪ ಮಾಡಿದರು.
ಮೇ ತಿಂಗಳ ಜಿಎಸ್ ಟಿ ಸಂಗ್ರಹದಲ್ಲಿ ಶೇ.12ರಷ್ಟು ಏರಿಕೆ;1.57 ಲಕ್ಷ ಕೋಟಿ ರೂ. ಸಂಗ್ರಹ