Asianet Suvarna News Asianet Suvarna News

ಸುಸ್ತಿದಾರರಿಂದ ಬ್ಯಾಂಕ್‌ಗಳಿಗೆ 92 ಸಾವಿರ ಕೋಟಿ ರು. ಬಾಕಿ

ಸುಸ್ತಿದಾರರ ಪಟ್ಟಿಯಲ್ಲಿ ಮೊದಲ 50 ಸ್ಥಾನಗಳಲ್ಲಿರುವ ಉದ್ದೇಶಪೂರ್ವಕ ಸುಸ್ತಿದಾರರಿಂದ ದೇಶದ ಬ್ಯಾಂಕುಗಳಿಗೆ 92,570 ಕೋಟಿ ರು. ಬರುವುದು ಬಾಕಿ ಇದೆ’ ಎಂದು ಸರ್ಕಾರ ಬುಧವಾರ ಸಂಸತ್ತಿಗೆ ತಿಳಿಸಿದೆ.

Govt informed parliament that 7800 crore money was pending by intentionally defaulter to bank akb
Author
First Published Dec 22, 2022, 6:56 AM IST

ನವದೆಹಲಿ: ‘ಸುಸ್ತಿದಾರರ ಪಟ್ಟಿಯಲ್ಲಿ ಮೊದಲ 50 ಸ್ಥಾನಗಳಲ್ಲಿರುವ ಉದ್ದೇಶಪೂರ್ವಕ ಸುಸ್ತಿದಾರರಿಂದ ದೇಶದ ಬ್ಯಾಂಕುಗಳಿಗೆ 92,570 ಕೋಟಿ ರು. ಬರುವುದು ಬಾಕಿ ಇದೆ’ ಎಂದು ಸರ್ಕಾರ ಬುಧವಾರ ಸಂಸತ್ತಿಗೆ ತಿಳಿಸಿದೆ.ಈ ಕುರಿತಾಗಿ ಲೋಕಸಭೆಗೆ ಲಿಖಿತ ಉತ್ತರ ಬರೆದಿದರುವ ಹಣಕಾಸು ಸಚಿವಾಲಯದ ರಾಜ್ಯ ಖಾತೆ ಸಚಿವ ಭಾಗವತ್‌ ಕರಾಡ್‌, ‘ಈ ವರ್ಷ ಮಾ.31ರವರೆಗೆ ದೇಶ ಭ್ರಷ್ಟ ವಜ್ರದ ವ್ಯಾಪಾರಿ, ಗೀತಾಂಜಲಿ ಜೆಮ್ಸ್‌ನ ಮುಖ್ಯಸ್ಥ ಮೆಹುಲ್‌ ಚೋಕ್ಸಿಯಿಂದ ಅತಿ ಹೆಚ್ಚು 7,848 ಕೋಟಿ ರು. ಬಾಕಿಯಿದೆ’ ಎಂದಿದ್ದಾರೆ.

‘ಸುಸ್ತಿದಾರ ಸಂಸ್ಥೆಗಳಾದ ಎರಾ ಇನ್ಫ್ರಾ ದಿಂದ (Era Infra) 5,879 ಕೋಟಿ ರು. ಬಾಕಿ ಮತ್ತು ರಿಗೋ ಆಗ್ರೋದಿಂದ (Rigo Agro) 4,803 ಕೋಟಿ  ರೂ ಬಾಕಿ ಇದ್ದು ಇವು ಕ್ರಮವಾಗಿ ನಂತರದ ಸ್ಥಾನಗಳಲ್ಲಿರುವ ಕಂಪನಿಗಳಾಗಿವೆ. ನಿಗದಿತ ಅವಧಿಗಾಗಿ ಬ್ಯಾಂಕುಗಳಿಂದ ಸಾಲ ಪಡೆದಿದ್ದ ಇವರು ಸರಿಯಾದ ಸಮಯಕ್ಕೆ ಸಾಲ ತೀರಿಸಿಲ್ಲ. ಹಾಗಾಗಿ ಇವರನ್ನು ಎಲ್ಲಾ ಬ್ಯಾಂಕುಗಳಿಂದ ಹಾಗೂ ಹಣಕಾಸು ಸಂಸ್ಥೆಗಳಿಂದ ಬಹಿಷ್ಕರಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಕಾನ್ಕಾಸ್ಟ್‌ ಸ್ಟೀಲ್‌ ಮತ್ತು ಪವರ್‌ (4,596 ಕೋಟಿ ರು.), ಎಬಿಜಿ ಶಿಪ್‌ಯಾರ್ಡ್‌ (3,708 ಕೋಟಿ ರು.), ಫ್ರಾಸ್ಟ್‌ ಇಂಟರ್‌ನ್ಯಾಷನಲ್‌ (3,311 ಕೋಟಿ ರು.), ವಿನ್‌ಸಮ್‌ ಡೈಮಂಡ್ಸ್ ಮತ್ತು ಜ್ಯುವೆಲರಿ (4,596 ಕೋಟಿ ರು.), ರೋಟೋಮ್ಯಾಕ್‌ ಗ್ಲೋಬಲ್‌ (2,893 ಕೋಟಿ ರು.), ಕೋಸ್ಟಲ್‌ ಪ್ರಾಜೆಕ್ಟ್ (2,311 ಕೋಟಿ ರು.) ಮತ್ತು ಜೂಮ್‌ ಡೆವೆಲಪ​ರ್ಸ್ (2,147 ಕೋಟಿ ರು.) ಕಂಪನಿಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಬ್ಯಾಂಕುಗಳು ಇಲ್ಲಿಯವರೆಗೆ 10.1 ಲಕ್ಷ ಕೋಟಿ ರು. ಸಾಲವನ್ನು ರೈಟ್‌ ಆಫ್‌ ಮಾಡಿವೆ’ ಎಂದು ಅವರು ಹೇಳಿದ್ದಾರೆ.

ಖಾಸಗಿ ಕ್ರಿಪ್ಟೋಕರೆನ್ಸಿಯಿಂದ ಮುಂದಿನ ಆರ್ಥಿಕ ಬಿಕ್ಕಟ್ಟು; ಅದನ್ನು ಬ್ಯಾನ್‌ ಮಾಡ್ಬೇಕು ಎಂದ ಆರ್‌ಬಿಐ ಗವರ್ನರ್‌

ಅನರ್ಹ ರೈತರ ಖಾತೆಗೆ ಪಿಎಂ ಕಿಸಾನ್ ಹಣ

ಆದಾಯ ತೆರಿಗೆ (Income Tax) ಪಾವತಿಸುವ ರಾಜ್ಯದ 95,830 ಮಂದಿ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ (Pradhan Mantri Kisan Samman Yojana) (ಪಿಎಂ ಕೆಎಸ್‌ವೈ) ಅಡಿ ನಿಯಮಬಾಹಿರವಾಗಿ ಆರ್ಥಿಕ ನೆರವು ಪಡೆದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿದ ಕೃಷಿ ಇಲಾಖೆಯು (Agriculture Department) ಇದೀಗ ಅವರಿಂದ ಹಣ ವಸೂಲಾತಿಗೆ ಸಜ್ಜಾಗಿದೆ.ಕೃಷಿ ಭೂಮಿ ಹೊಂದಿರುವ ರೈತರು ಯೋಜನೆಯ ಫಲಾನುಭವಿಗಳಾಗಿದ್ದು, ಆದಾಯ ತೆರಿಗೆ ಪಾವತಿದಾರರು ಯೋಜನೆಯಡಿ ಹಣ ಪಡೆಯಲು ಅನರ್ಹರು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೂ ಇದನ್ನು ಮುಚ್ಚಿಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿಯಮ ಬಾಹಿರವಾಗಿ ಕೋಟ್ಯಂತರ ರುಪಾಯಿ ನೆರವು ಪಡೆಯಲಾಗಿದೆ. ಇದನ್ನು ವಸೂಲಿ ಮಾಡಲು ಮುಂದಾಗಿರುವ ಇಲಾಖೆ, ಮತ್ತೊಂದೆಡೆ ಇಂತಹ ಅನರ್ಹರಿಗೆ ಭವಿಷ್ಯದಲ್ಲಿ ಹಣ ಪಡೆಯಲು ಸಾಧ್ಯವಾಗದಂತೆ ತಡೆ ಹಾಕಿದೆ.

ಪಾವತಿಯಾಗಿರುವ ಹಣ ವಸೂಲಿ ಮಾಡಲು ಕೃಷಿ ಇಲಾಖೆಯು ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಗೆ (ಎಸ್‌ಎಲ್‌ಬಿಸಿ) ಐಟಿ ಪಾವತಿದಾರರ ವಿವರ ನೀಡಿದ್ದು, ಇದನ್ನು ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ರವಾನಿಸಿ ಕ್ರಮ ಕೈಗೊಳ್ಳಲು ಕೋರಿದೆ. ಈಗಾಗಲೇ ಎಷ್ಟುಹಣ ಪಡೆದಿದ್ದಾರೋ ಅಷ್ಟುಮೊತ್ತವನ್ನು ಫಲಾನುಭವಿಗಳಾಗಿದ್ದವರ ಬ್ಯಾಂಕ್‌ ಖಾತೆಯಿಂದ ಕಡಿತಗೊಳಿಸಿ ವಾಪಸ್‌ ಸರ್ಕಾರಕ್ಕೆ ಜಮಾ ಮಾಡುವಂತೆ ಪತ್ರ ಬರೆಯಲಾಗಿದೆ.

ಹೊಸ ವರ್ಷದಲ್ಲಿ ಹೂಡಿಕೆ ಮಾಡಲು ಹೊರಟಿರೋರಿಗೆ ಇಲ್ಲಿದೆ 8 ಟಿಪ್ಸ್

ಅಧಿಕಾರಿಗಳಿಗೆ ಸೂಚನೆ:

ಮತ್ತೊಂದೆಡೆ, ಇಲಾಖೆ ಜಂಟಿ ಕೃಷಿ ನಿರ್ದೇಶಕರು ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೂ ಹಣ ವಸೂಲಿ ಬಗ್ಗೆ ಸೂಚನೆ ನೀಡಿದ್ದು ಅವರೂ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ, ಆದಾಯ ತೆರಿಗೆ ಪಾವತಿಸುವ 7748 ಮಂದಿ ಹಣ ಪಡೆದಿದ್ದಾರೆ. ಕಲಬುರಗಿಯಲ್ಲಿ 5109, ವಿಜಯಪುರದಲ್ಲಿ 5033 ಮತ್ತು ಬೀದರ್‌ ಜಿಲ್ಲೆಯಲ್ಲಿ 4951 ಅನರ್ಹರನ್ನು ಪತ್ತೆ ಮಾಡಲಾಗಿದೆ. ಚಾಮರಾಜನಗರದಲ್ಲಿ ಅತಿ ಕಡಿಮೆ ಎಂದರೆ 1269 ಅನರ್ಹರು ಪತ್ತೆಯಾಗಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯನ್ನು ಕೇಂದ್ರ ಸರ್ಕಾರ 2019 ರಲ್ಲಿ ಪ್ರಾರಂಭಿಸಿದ್ದು ಕೃಷಿ ಭೂಮಿ ಹೊಂದಿರುವ ರೈತರಿಗೆ ಪ್ರತಿ ವರ್ಷ 4 ತಿಂಗಳಿಗೊಮ್ಮೆಯಂತೆ ವಾರ್ಷಿಕ 6 ಸಾವಿರ ರು. ಸಹಾಯಧನ ನೀಡುತ್ತಿದೆ. ಬಳಿಕ ರಾಜ್ಯ ಸರ್ಕಾರವೂ ಇದಕ್ಕೆ ಪೂರಕವಾಗಿ ಯೋಜನೆ ಜಾರಿಗೊಳಿಸಿದ್ದು ವಾರ್ಷಿಕ 4 ಸಾವಿರ ರು. ಪಾವತಿಸಲಿದೆ. ರಾಜ್ಯದಲ್ಲಿ ಸುಮಾರು 54 ಲಕ್ಷ ಫಲಾನುಭವಿಗಳಿದ್ದು ಇಲ್ಲಿಯವರೆಗೂ 15 ಸಾವಿರ ಕೋಟಿ ರು. ನೆರವು ನೀಡಲಾಗಿದೆ. ರೈತರಿಗೆ ಉಪಯುಕ್ತವಾದ ಯೋಜನೆ ಇದಾಗಿದ್ದು ಸ್ವಯಂ ನೋಂದಣಿಗೆ ಅವಕಾಶ ನೀಡಲಾಗಿದೆ. ಆದರೆ ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರೂ ಹೆಚ್ಚಿದ್ದು ಪತ್ತೆ ಹಚ್ಚಿ ಕ್ರಮಕೈಗೊಳ್ಳಲು ಕೃಷಿ ಇಲಾಖೆ ಮುಂದಾಗಿದೆ.

ರೂಲ್ ಆಫ್ 72 ಅಂದ್ರೇನು? ಎಫ್ ಡಿ ಯಲ್ಲಿ ಹೂಡಿಕೆ ಮಾಡೋರು ಈ ನಿಯಮದ ಬಗ್ಗೆ ತಿಳಿಯಲೇಬೇಕು

Follow Us:
Download App:
  • android
  • ios