Asianet Suvarna News Asianet Suvarna News

ಖಾಸಗಿ ಕ್ರಿಪ್ಟೋಕರೆನ್ಸಿಯಿಂದ ಮುಂದಿನ ಆರ್ಥಿಕ ಬಿಕ್ಕಟ್ಟು; ಅದನ್ನು ಬ್ಯಾನ್‌ ಮಾಡ್ಬೇಕು ಎಂದ ಆರ್‌ಬಿಐ ಗವರ್ನರ್‌

ಆರ್‌ಬಿಐ ಗವರ್ನರ್‌ ಈ ಹಿಂದೆಯೂ ಕ್ರಿಪ್ಟೋಕರೆನ್ಸಿಗಳ ವಿರುದ್ಧ ತೀವ್ರ ಹರಿಹಾಯ್ದಿದ್ದರು. ಈ ಡಿಜಿಟಲ್ ಸ್ವತ್ತುಗಳು ವಿತ್ತೀಯ ನೀತಿಯನ್ನು ನಿರ್ಧರಿಸುವ ಆರ್‌ಬಿಐ ಸಾಮರ್ಥ್ಯದ ವಿಷಯದಲ್ಲಿ ಸಾಕಷ್ಟು ಹಣಕಾಸಿನ ಅಸ್ಥಿರತೆಯನ್ನು ಉಂಟುಮಾಡಬಹುದು ಎಂದೂ ಅವರು ಹೇಳಿದ್ದರು. 

next financial crisis will come from private cryptocurrencies says rbi governor shaktikanta das ash
Author
First Published Dec 21, 2022, 9:59 PM IST

ಆರ್‌ಬಿಐ ಗವರ್ನರ್ (RBI Governor)  ಶಕ್ತಿಕಾಂತ ದಾಸ್ (Shaktikanta Das) ಅವರು ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು (Private Crypto Currencies) ನಿಷೇಧಿಸಬೇಕು ಎಂದು ಒಲವು ವ್ಯಕ್ತಪಡಿಸಿದ್ದಾರೆ. ಬಿಟ್‌ಕಾಯಿನ್ (Bitcoin) ಮತ್ತು ಎಥೆರಿಯಮ್‌ನಂತಹ (Etherium) ಖಾಸಗಿ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಶಕ್ತಿಕಾಂತ ದಾಸ್, ದೊಡ್ಡ ಮಟ್ಟದ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಕ್ರಿಪ್ಟೋಕರೆನ್ಸಿಗಳು ಯಾವುದೇ ಆಧಾರವಾಗಿರುವ ಮೌಲ್ಯವನ್ನು ಹೊಂದಿಲ್ಲ ಮತ್ತು ಅವುಗಳನ್ನು ಬೆಳೆಯಲು ಬಿಟ್ಟರೆ, ಮುಂದಿನ ಆರ್ಥಿಕ ಬಿಕ್ಕಟ್ಟು (Financial Crisis) ಅವುಗಳಿಂದಲೇ ಬರಲಿದೆ ಎಂದೂ ಅವರು ಹೇಳಿದ್ದಾರೆ.

BFSI ಇನ್‌ಸೈಟ್‌ ಶೃಂಗಸಭೆ 2022 ರಲ್ಲಿ ಮಾತನಾಡಿದ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ , “ಕ್ರಿಪ್ಟೋಕರೆನ್ಸಿಗಳು ವ್ಯವಸ್ಥೆಯನ್ನು ಬುಡಮೇಲು ಮಾಡಲು, ವ್ಯವಸ್ಥೆಯನ್ನು ಮುರಿಯಲು ತಮ್ಮ ಮೂಲವನ್ನು ನೀಡಬೇಕಿದೆ ಮತ್ತು ಅವರು ನಿಯಮಾವಳಿಗಳನ್ನು ನಂಬುವುದಿಲ್ಲ ಎಂದೂ ಹೇಳಿದರು. ಅಲ್ಲದೆ, ಇದು ಯಾವ ಉತ್ತಮ ಸಾರ್ವಜನಿಕ ಉದ್ದೇಶವನ್ನು ಪೂರೈಸುತ್ತದೆ ಎಂಬುದರ ಕುರಿತು ನಾನು ಇನ್ನೂ ಯಾವುದೇ ಉತ್ತಮ ವಾದವನ್ನು ಈವರೆಗೆ ಕೇಳಿಲ್ಲ. ಇದು 100 ಪ್ರತಿಶತ ಊಹಾತ್ಮಕ ಚಟುವಟಿಕೆಯಾಗಿದೆ ಮತ್ತು ಈ ಹಿನ್ನೆಲೆ ಇದನ್ನು ನಿಷೇಧಿಸಬೇಕು. ನೀವು ಅದನ್ನು ಬೆಳೆಯಲು ಬಿಟ್ಟರೆ, ಮುಂದಿನ ಆರ್ಥಿಕ ಬಿಕ್ಕಟ್ಟು ಖಾಸಗಿ ಕ್ರಿಪ್ಟೋಕರೆನ್ಸಿಗಳಿಂದ ಬರುತ್ತದೆ ಎಂದೂ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.

ಇದನ್ನು ಓದಿ: Digital Rupee: ಡಿ.1 ರಿಂದ ಪ್ರಾಯೋಗಿಕವಾಗಿ ರಿಟೇಲ್‌ ಡಿಜಿಟಲ್‌ ರೂಪಾಯಿ ಆರಂಭ: ಆರ್‌ಬಿಐ ಘೋಷಣೆ!

ಆರ್‌ಬಿಐ ಗವರ್ನರ್‌ ಈ ಹಿಂದೆಯೂ ಕ್ರಿಪ್ಟೋಕರೆನ್ಸಿಗಳ ವಿರುದ್ಧ ತೀವ್ರ ಹರಿಹಾಯ್ದಿದ್ದರು. ಈ ಡಿಜಿಟಲ್ ಸ್ವತ್ತುಗಳು ವಿತ್ತೀಯ ನೀತಿಯನ್ನು ನಿರ್ಧರಿಸುವ ಕೇಂದ್ರೀಯ ಬ್ಯಾಂಕಿನ (ಆರ್‌ಬಿಐ) ಸಾಮರ್ಥ್ಯದ ವಿಷಯದಲ್ಲಿ ಸಾಕಷ್ಟು ಹಣಕಾಸಿನ ಅಸ್ಥಿರತೆಯನ್ನು ಉಂಟುಮಾಡಬಹುದು ಎಂದೂ ಅವರು ಹೇಳಿದ್ದರು. 

ಈ ಮಧ್ಯೆ, ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC), ಅಥವಾ ಡಿಜಿಟಲ್ ರೂಪಾಯಿ, ಪ್ರಸ್ತುತ ಡಿಜಿಟಲ್ ಪಾವತಿ ವ್ಯವಸ್ಥೆಗಳಿಗಿಂತ ಹೇಗೆ ಭಿನ್ನವಾಗಿದೆ ಎಂದು ಕೇಳಿದ್ದಕ್ಕೆ, ‘’UPI ಒಂದು ಪಾವತಿ ವ್ಯವಸ್ಥೆಯಾಗಿದೆ, ಆದರೆ CBDC ಒಂದು ಕರೆನ್ಸಿಯಾಗಿದೆ. UPI ಬ್ಯಾಂಕ್‌ಗಳ ಮಧ್ಯಸ್ಥಿಕೆಯನ್ನು ಒಳಗೊಂಡಿರುತ್ತದೆ, ಆದರೆ CBDC ಒಂದು ಕಾಗದದ ಕರೆನ್ಸಿಯಂತಿದ್ದು, ಅದು ವಹಿವಾಟು ಮಾಡುವವರ ನಡುವೆ ಇತ್ಯರ್ಥಗೊಳ್ಳುತ್ತದೆ ಮತ್ತು ಸ್ವಯಂಚಾಲಿತ ಸ್ವೀಪ್-ಇನ್ ಮತ್ತು ಸ್ವೀಪ್-ಔಟ್ ಸೌಲಭ್ಯವಿದೆ. ಡಿಜಿಟಲ್ ರೂಪಾಯಿ ಕಾಗದದ ಕರೆನ್ಸಿಗಳನ್ನು ಮುದ್ರಿಸುವ ವೆಚ್ಚವನ್ನು ಸಹ ಉಳಿಸುತ್ತದೆ, ಹಾಗೂ ತ್ವರಿತ ವರ್ಗಾವಣೆ ಇರುತ್ತದೆ ಎಂದೂ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಬುಧವಾರ ಹೇಳಿದ್ದಾರೆ.

ಇದನ್ನೂ ಓದಿ: E - Rupi ಪ್ರಾಯೋಗಿಕ ಪರೀಕ್ಷೆ ಆರಂಭ: 275 ಕೋಟಿ ರೂ. ಮೊತ್ತದ ಸರ್ಕಾರಿ ಬಾಂಡ್‌ ಸೆಟಲ್‌ಮೆಂಟ್‌

ಈ ತಿಂಗಳ ಆರಂಭದಲ್ಲಿ, RBI ಭಾರತದ ಡಿಜಿಟಲ್ ಕರೆನ್ಸಿಯನ್ನು ಪ್ರಾಯೋಗಿಕ ಆಧಾರದ ಮೇಲೆ ಬಿಡುಗಡೆ ಮಾಡಿದೆ. CBDC ಎಂಬುದು ಸೆಂಟ್ರಲ್ ಬ್ಯಾಂಕ್ ಹೊರಡಿಸಿದ ಕರೆನ್ಸಿಯ ಡಿಜಿಟಲ್ ರೂಪವಾಗಿದೆ ಮತ್ತು ಕ್ರಿಪ್ಟೋಕರೆನ್ಸಿಗಳು ವಿಕೇಂದ್ರೀಕೃತ ನೆಟ್‌ವರ್ಕ್‌ನಲ್ಲಿರುವ ಡಿಜಿಟಲ್ ಸ್ವತ್ತುಗಳಾಗಿವೆ. ಇದು ಸರ್ಕಾರ ಹಾಗೂ ಆರ್‌ಬಿಐನ ಸಂಕೋಲೆಯಿಂದ ಹೊರಬರುತ್ತವೆ. 

ಇನ್ನು, ಡಿಜಿಟಲ್ ಕರೆನ್ಸಿಯು ಸಾರ್ವಭೌಮ ಕರೆನ್ಸಿಯಂತೆಯೇ ಇರುತ್ತದೆ ಮತ್ತು ಪ್ರಸ್ತುತ ಕರೆನ್ಸಿಗೆ ಸಮಾನವಾಗಿ ವಿನಿಮಯ ಮಾಡಿಕೊಳ್ಳಬಹುದು. ಮತ್ತೊಂದೆಡೆ, ಕ್ರಿಪ್ಟೋಕರೆನ್ಸಿ ಎಂಬುದು ಕರೆನ್ಸಿಯ ಒಂದು ರೂಪವಾಗಿದ್ದು, ಅದು ತನ್ನದೇ ಆದ ಪಂಗಡವನ್ನು ಹೊಂದಿದೆ ಮತ್ತು ವಹಿವಾಟುಗಳನ್ನು ಸುರಕ್ಷಿತಗೊಳಿಸಲು ಕ್ರಿಪ್ಟೋಗ್ರಫಿಯನ್ನು ಬಳಸುತ್ತದೆ ಎಂದು ತಿಳಿದುಬಂದಿದೆ. “24 ಗಂಟೆಗಳಲ್ಲಿ ನೀವು CBDC ಅನ್ನು ಪಡೆಯಬಹುದು. ಮತ್ತು ನೀವು ಹೆಚ್ಚುವರಿ CBDC ಅನ್ನು ಸಾಗಿಸುತ್ತಿದ್ದರೆ, ಅದನ್ನು ಬ್ಯಾಂಕಿನಲ್ಲಿ ಠೇವಣಿ ಮಾಡಬಹುದು" ಎಂದೂ ಆರ್‌ಬಿಐ ಗವರ್ನರ್ ಹೇಳಿದರು.

ಇದನ್ನೂ ಓದಿ: ಇಂದಿನಿಂದ ಡಿಜಿಟಲ್‌ ರುಪಾಯಿ ಯುಗ ಶುರು: ಪ್ರಾಯೋಗಿಕವಾಗಿ ಆರ್‌ಬಿಐನಿಂದ E- Rupi ಬಿಡುಗಡೆ

Follow Us:
Download App:
  • android
  • ios