ಗೂಗಲ್ ಉದ್ಯೋಗಿಗಳ ಸ್ಯಾಲರಿ ರಹಸ್ಯ ಲೀಕ್, ಎಂಜಿನಿಯರ್ ಆರಂಭಿಕ ವೇತನ ವಾರ್ಷಿಕ 6 ಕೋಟಿ!
ಗೂಗಲ್ ಸಿಇಒ ಸುಂದರ್ ಪಿಚೈ ವೇತನ ಹೆಚ್ಚು ಕಡಿಮೆ ಬಹಿರಂಗವಾಗಿದೆ. ಆದರೆ ಉದ್ಯೋಗಿಗಳ ವೇತನ ಎಷ್ಟು? ಇಲ್ಲಿರುವ ಬೇಸಿಕ್ ಸ್ಯಾಲರಿ ಎಷ್ಟು? ಇದೀಗ ಗೂಗಲ್ ಉದ್ಯೋಗಿಗಳ ಸ್ಯಾಲರಿ ಪಟ್ಟಿ ಲೀಕ್ ಆಗಿದೆ. ಈಗಷ್ಟೇ ಗೂಗಲ್‌ನಲ್ಲಿ ಎಂಜಿನಿಯರ್ ಆಗಿ ಕೆಲಸ ಗಿಟ್ಟಿಸಿಕೊಂಡರೆ ಎಷ್ಟು ಸ್ಯಾಲರಿ ಸಿಗುತ್ತೆ ಗೊತ್ತಾ?
ಕ್ಯಾಲಿಫೋರ್ನಿಯಾ(ಜು.20) ಟೆಕ್ ದಿಗ್ಗಜ ಗೂಗಲ್ ವಿಶ್ವದ ಅತೀ ದೊಡ್ಡ ಕಂಪನಿ. ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಬಹುತೇಕ ಎಂಜಿನೀಯರ್ ಹಾತೊರೆಯುತ್ತಾರೆ. ಕಾರಣ ಗೂಗಲ್ ನೀಡುವ ವೇತನ, ಇತರ ಸೌಲಭ್ಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿದೆ. ಗೂಗಲ್ ಸಿಇಒ ಸುಂದರ್ ಪಿಚೈ ಪಡೆಯುತ್ತಿರುವ ವಾರ್ಷಿಕ ವೇತನ 1,600 ಕೋಟಿ ರೂಪಾಯಿಗಿಂತಲೂ ಹೆಚ್ಚು. ಹೀಗಿರುವಾಗ ಗೂಗಲ್ ಉದ್ಯೋಗಿಗಳ ಸ್ಯಾಲರಿ ಎಷ್ಟಿರಬಹುದು. ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಗೂಗಲ್ ಸ್ಯಾಲರಿ ಪಟ್ಟಿಯೊಂದು ಲೀಕ್ ಆಗಿದೆ. ಈ ಪಟ್ಟಿಯಲ್ಲಿ ಗೂಗಲ್ ಎಂಜಿನೀಯರ್ಸ್‌ಗೆ ಆರಂಭಿಕ ವೇತನ ವಾರ್ಷಿಕ 6 ಕೋಟಿ ರೂಪಾಯಿ.
ಗೂಗಲ್ ಸ್ಯಾಲರಿ ಕುರಿತ ಆತಂರಿಕ ಪಟ್ಟಿಯೊಂದು ಬಹಿರಂಗವಾಗಿದೆ. ಈ ಪಟ್ಟಿಯಲ್ಲಿ ಗೂಗಲ್‌ನ ಬೇಸಿಕ್ ಸ್ಯಾಲರಿ ಮಾಹಿತಿ ನೀಡಲಾಗಿದೆ. ಇದೀಗ ಭಾರಿ ವೈರಲ್ ಆಗಿದೆ. ಇಷ್ಟೇ ಅಲ್ಲ ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಇದೀಗ ಪ್ರಯತ್ನಗಳು ಜೋರಾಗುತ್ತಿದೆ. ಕಾರಣ ಗೂಗಲ್ ಬೇಸ್ ಸ್ಯಾಲರಿ ಲಿಸ್ಟ್‌ನಲ್ಲಿ ಎಲ್ಲವೂ ಕೋಟಿ ಕೋಟಿ ರೂಪಾಯಿ ಮೇಲಿದೆ.
ಕಾಲಿವುಡ್ ನಟನಿಗೆ ಸುಂದರ್ ಪಿಚೈ ಹುಟ್ಟಿದ ಚೆನ್ನೈ ಮನೆ ಮಾರಾಟ, ಕಣ್ಣೀರಿಟ್ಟ ಗೂಗಲ್ ಸಿಇಒ ಅಪ್ಪ!
2022ರಲ್ಲಿ ಗೂಗಲ್‌ನಲ್ಲಿನ ಬೇಸಿಕ್ ಸ್ಯಾಲರಿಯ ಮಾಹಿತಿ ಈ ಪಟ್ಟಿಯಲ್ಲಿದೆ. ಎಂಜಿನೀಯರ್ ಬೇಸಿಕ್ ಸ್ಯಾಲರಿ 5.90 ಕೋಟಿ ರೂಪಾಯಿ, ಇನ್ನು ಎಂಜಿನಿಯರಿಂಗ್ ಮ್ಯಾನೇಜರ್ ವಾರ್ಷಿತ ವೇತನ 3.28 ಕೋಟಿ ರೂಪಾಯಿ, ಎಂಟರ್ಪ್ರೈಸ್ ಡೈರೆಕ್ಟ್ ಸೇಲ್ಸ್ ವಾರ್ಷಿಕ ವೇತನ 3.09 ಕೋಟಿ ರೂಪಾಯಿ, ಲೀಗಲ್ ಕಾರ್ಪೋರೇಟ್ ಕೌನ್ಸೆಲ್ ವಾರ್ಷಿಕ ಸ್ಯಾಲರಿ 2.62 ಕೋಟಿ ರೂಪಾಯಿ. ಸೇಲ್ಸ್ ಸ್ಟ್ರಾಟರ್ಜಿ ವಾರ್ಷಿಕ ವೇತನ 2.53 ಕೋಟಿ ರೂಪಾಯಿ, UX ಡಿಸೈನ್ ವಾರ್ಷಿಕ ಸ್ಯಾಲರಿ 2.47 ಕೋಟಿ ರೂಪಾಯಿ, ಇನ್ನು ಪ್ರೋಗ್ರಾಂ ಮ್ಯಾನೇಜರ್ ವಾರ್ಷಿಕ ಸ್ಯಾಲರಿ 2.46 ಕೋಟಿ ರೂಪಾಯಿ.
ಈ ಪಟ್ಟಿಯಲ್ಲಿರುವುದು ಬೇಸಿಕ್ ಸ್ಯಾಲರಿ ಮಾತ್ರ. ಇದರ ಜೊತೆಗೆ ಇತರ ಭತ್ಯೆಗಳು ಸೇರಿಕೊಳ್ಳಲಿದೆ. ಇವೆಲ್ಲಾ ಒಟ್ಟೂಗೂಡಿಸಿದರೆ ಗೂಗಲ್ ಉದ್ಯೋಗಿ ವಾರ್ಷಿಕವಾಗಿ ಕೋಟಿ ಕೋಟಿ ರೂಪಾಯಿ ವೇತನರೂಪದಲ್ಲಿ ಪಡೆಯುತ್ತಿರುವುದು ಬಹಿರಂಗವಾಗಿದೆ.
ಗೂಗಲ್ ಉದ್ಯೋಗ ಕಡಿತ ಮಾಡಿದ್ರೂ ಸಿಇಒ ಗಳಿಕೆಗೇನೂ ಧಕ್ಕೆಯಾಗಿಲ್ಲ; 2022ರಲ್ಲಿ ಪಿಚೈ ಪಡೆದ ಹಣವೆಷ್ಟು ಗೊತ್ತಾ?
ಗೂಗಲ್ ಸಿಇಒ ಸುಂದರ್ ಪಿಚೈ 2023ರ ಸಾಲಿನಲ್ಲಿ 16,40,38,890 ಕೋಟಿ ರೂಪಾಯಿ ವೇತನ ರೂಪದಲ್ಲಿ ಪಡೆಯುತ್ತಿದ್ದಾರೆ. ಕೊರೊನಾ ಬಳಿಕ ವೇತನ ಕಡಿತಗೊಳಿಸಲಾಗಿತ್ತು. ಆದರೆ ಅದಕ್ಕೂ ಮುನ್ನ ಪಿಚೈ 2,140 ಕೋಟಿ ರೂಪಾಯಿ ವಾರ್ಷಿಕ ವೇತನ ಪಡೆದಿದ್ದಾರೆ. 2020ರಲ್ಲಿ ವಿಶ್ವದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಗಳ ಪೈಕಿ ಒಂದಾದ ಆಲ್ಫಬೆಟ್ (ಗೂಗಲ್‌ನ ಮಾತೃಸಂಸ್ಥೆ)ನ ಸಿಇಒ, ಭಾರತೀಯ ಮೂಲದ ಸುಂದರ್ ಪಿಚೈಗೆ ಕಂಪನಿಯು ಭರ್ಜರಿ 2140 ಕೋಟಿ ರು. ವೇತನ ಘೋಷಿಸಿತ್ತು. ಅಮೆರಿಕದ ಷೇರು ಮಾರುಕಟ್ಟೆನಿಯಂತ್ರಣ ಸಂಸ್ಥೆಗೆ ಆಲ್ಫಬೆಟ್ ಸಲ್ಲಿಸಿದ ಮಾಹಿತಿಯಲ್ಲಿ ಈ ಅಂಶವನ್ನು ಉಲ್ಲೇಖಿಸಿತ್ತು.
ಆದರೆ ಇದು ಕೇವಲ ವೇತನ ಮಾತ್ರವಲ್ಲ. ವೇತನದ ಜೊತೆಗೆ ಕಂಪನಿ ಹಣಕಾಸು ವರ್ಷದಲ್ಲಿ ಗಳಿಸುವ ಒಟ್ಟಾರೆ ಆದಾಯವನ್ನು ಅಂದಾಜಿಸಿ ನೀಡುವ ಬೋನಸ್ ಸೇರಿದಂತೆ ವಿವಿಧ ಭತ್ಯೆಗಳು ಸೇರಿವೆ. ಹೀಗಾಗಿ ಕಂಪನಿ ಉತ್ತಮ ಸಾಧನೆ ಮಾಡಿದ ಕಾರಣ ಪಿಚೈ 2020ರಲ್ಲಿ 2140 ಕೋಟಿ ರು. ಆದಾಯ ಪಡೆದಿದ್ದರು.. ಒಂದು ವೇಳೆ ಕಂಪನಿಯ ಆದಾಯ ನಿರೀಕ್ಷೆಗಿಂತ ಕಡಿಮೆ ಇದ್ದಲ್ಲಿ ಅವರ ಆದಾಯದಲ್ಲೂ ಕಡಿಮೆ ಆಗುವ ಸಾಧ್ಯತೆ ಇದ್ದೇ ಇರುತ್ತದೆ. 2019ರಲ್ಲಿ ಪಿಚೈ 1840 ಕೋಟಿ ರು. ವೇತನ ಮತ್ತು ಭತ್ಯೆ ಪಡೆದುಕೊಂಡಿದ್ದರು. ಪಿಚೈ ಅವರ ಆದಾಯವು ಕಂಪನಿಯ ಓರ್ವ ಸಾಮಾನ್ಯ ಉದ್ಯೋಗಿಯ 1085 ಪಟ್ಟು ಹೆಚ್ಚಿದೆ.