ಕಾಲಿವುಡ್ ನಟನಿಗೆ ಸುಂದರ್ ಪಿಚೈ ಹುಟ್ಟಿದ ಚೆನ್ನೈ ಮನೆ ಮಾರಾಟ, ಕಣ್ಣೀರಿಟ್ಟ ಗೂಗಲ್ ಸಿಇಒ ಅಪ್ಪ!
ಗೂಗಲ್ ಸಿಇಒ ಸುಂದರ್ ಪಿಚೈ ಚೆನ್ನೈನಲ್ಲಿನಲಿದ್ದ ತಮ್ಮ ಪೂರ್ವಜರ ಮನೆಯನ್ನು ಮಾರಾಟ ಮಾಡಿದ್ದಾರೆ. ಕಾಲಿವುಡ್ ನಟ ಈ ಮನೆಯನ್ನು ಖರೀದಿಸಿದ್ದಾರೆ. ಆದರೆ ಮನೆ ಮಾರಾಟದಿಂದ ತಂದೆ ರೆಘುನಾಥ ಪಿಚೈ ಭಾವುಕರಾಗಿದ್ದಾರೆ. ದಾಖಲೆ ಪತ್ರಗಳನ್ನು ಹಸ್ತಾಂತರಿಸುವ ವೇಳೆ ಕಣ್ಣೀರಿಟ್ಟಿದ್ದಾರೆ.
ಚೆನ್ನೈ(ಮೇ.19): ವಿಶ್ವದ ಟೆಕ್ ದೈತ್ಯ ಗೂಗಲ್‌ಗೆ ಭಾರತೀಯ ಮೂಲದ ಸುಂದರ್ ಪಿಚೈ ಸಿಇಒ. ಸುಂದರ್ ಪಿಚೈ ವಾರ್ಷಿಕ ಸ್ಯಾಲರಿ ಬರೋಬ್ಬರಿ 2 ಮಿಲಿಯನ್ ಅಮೆರಿಕನ್ ಡಾಲರ್. ಸುಂದರ್ ಪಿಚೈಗೆ ವಿಶ್ವದ ಯಾವುದೇ ದೇಶದ ಅತ್ಯಂತ ದುಬಾರಿ ವಲಯದಲ್ಲಿ ಮನೆ ಖರೀದಿಸುವ ಶಕ್ತಿ ಇದೆ. ಆದರೆ ಸುಂದರ್ ಪಿಚೈ ತಾವು ಹುಟ್ಟಿ ಬೆಳೆದ, ತಮ್ಮ ತಂದೆ ತಾಯಿ ಬದುಕು ಕಟ್ಟಿಕೊಂಡ, ಪೂರ್ವಜರ ಮನೆಯನ್ನೇ ಮಾರಾಟ ಮಾಡಿದ್ದಾರೆ. ಕಾಲಿವುಡ್ ನಟ ಈ ಮನೆಯನ್ನು ಖರೀದಿಸಿದ್ದಾರೆ. ದಾಖಲೆ ಪತ್ರಗಳನ್ನು ಹಸ್ತಾಂತರಿಸುವ ವೇಳೆ ಸುಂದರ್ ಪಿಚೈ ತಂದೆ ರೆಘುನಾಥ್ ಪಿಚೈ ಕಣ್ಣೀರಿಟ್ಟಿದ್ದಾರೆ.
ಚೆನ್ನೈನ ಅಶೋಕನಗರದಲ್ಲಿದ್ದ ಈ ಮನೆಯಲ್ಲಿ 1972ರ ಜೂನ್ 10 ರಂದು ಸುಂದರ್ ಪಿಚೈ ಹುಟ್ಟಿದ್ದರು. ಇದೇ ಮನೆಯಲ್ಲಿ ಬೆಳೆದ ಪಿಚೈ 1989ರಲ್ಲಿ ಚೆನ್ನೈ ತೊರೆದು ಖರಗಪುರದ ಐಐಟಿಯಲ್ಲಿ ಎಂಜಿನೀಯರಿಂಗ್ ವಿದ್ಯಾಭ್ಯಾಸ ಮುಂದುವರಿಸಿದರು. ಇದೇ ಮನೆಯನ್ನು ಇದೀಗ ಮಾರಾಟ ಮಾಡಲಾಗಿದೆ. ಈ ಮನೆಯನ್ನು ಕಾಲಿವುಡ್ ನಟ ಹಾಗೂ ನಿರ್ಮಾಕ ಮಣಿಕಂಠನ್ ಖರೀದಿಸಿದ್ದಾರೆ.
ಗೂಗಲ್ ಉದ್ಯೋಗ ಕಡಿತ ಮಾಡಿದ್ರೂ ಸಿಇಒ ಗಳಿಕೆಗೇನೂ ಧಕ್ಕೆಯಾಗಿಲ್ಲ; 2022ರಲ್ಲಿ ಪಿಚೈ ಪಡೆದ ಹಣವೆಷ್ಟು ಗೊತ್ತಾ?
ಈ ಮನೆ ಮಾರಾಟಕ್ಕಿದೆ ಅನ್ನೋ ಮಾಹಿತಿ ತಿಳಿಯುತ್ತಿದ್ದಂತೆ ಮಣಿಕಂಠನ್ ಖರೀದಿಗೆ ಆಸಕ್ತಿ ತೋರಿದ್ದಾರೆ. ಭಾರತದ ಹೆಮ್ಮೆಯಾಗಿರುವ ಸುಂದರ್ ಪಿಚೈ ಬೆಳೆದ ಮನೆಯನ್ನು ಖರೀದಿಸುತ್ತಿದ್ದೇನೆ ಅನ್ನೋ ಹೆಮ್ಮೆಯಾಗಿತ್ತು. ಅವರ ಮನೆಗೆ ಹೋದಾಗ ಪಿಚೈ ತಾಯಿ ಫಿಲ್ಟರ್ ಕಾಫಿ ಮಾಡಿಕೊಟ್ಟರು. ಪಿಚೈ ತಂದೆ ಆತ್ಮೀಯವಾಗಿ ಮಾತನಾಡಿಸಿದರು. ಅವರ ಸರಳತೆಗೆ ನನ್ನಲ್ಲಿ ಮಾತುಗಳೇ ಬರಲಿಲ್ಲ ಎಂದು ಮಣಿಕಂಠನ್ ಹೇಳಿದ್ದಾರೆ.
ದಾಖಲೆ ಪತ್ರಗಳ ಹಸ್ತಾಂತರ, ಆಸ್ತಿ ನೋಂದಣಿ ವೇಳೆ ರೆಘುನಾಥ್ ಪಿಚೈ ಗೂಗಲ್ ಸಿಇಒ ಸುಂದರ್ ಪಿಚೈ ಹೆಸರನ್ನು ಎಲ್ಲೂ ಬಳಸಿಲ್ಲ. ಜನಸಾಮಾನ್ಯರಂತೆ ಸರದಿ ಸಾಲಲ್ಲಿ ನಿಂತು ನೋಂದಣಿ ಮಾಡಿಸಿದ್ದಾರೆ. ನೋಂದಣಿ ಮಾಡಲು ಕೆಲ ಗಂಟೆಗಳ ಕಾಲ ರೆಘುನಾಥ್ ಪಿಚೈ ಅಧಿಕಾರಿಗಳನ್ನು ಕಾದಿದ್ದಾರೆ. ಎಲ್ಲಾ ಶುಲ್ಕವನ್ನು ಪಾವತಿಸಿ ನನಗೆ ದಾಖಲೆಯನ್ನ ಹಸ್ತಾಂತರಿಸಿದ್ದಾರೆ ಎಂದು ಮಣಿಕಂಠನ್ ಹೇಳಿದ್ದಾರೆ.
ಅಶೋಕನಗರದಲ್ಲಿರುವ ಈ ಆಸ್ತಿ ಸುಂದರ್ ಪಿಚೈ ಅವರ ಹೆಸರಲ್ಲಿ ಇರಲಿಲ್ಲ. ಇದು ಪಿಚೈ ತಂದೆ ರೆಘುನಾಥ್ ಪಿಚೈ ಹೆಸರಿನ ಆಸ್ತಿಯಾಗಿದೆ. ರೆಘುನಾಥ್ ಪಿಚೈ ಈ ಆಸ್ತಿ ಮಾರಾಟ ಮಾಡಲು ಬಯಸಿದ್ದರು. ಸುಂದರ್ ಪಿಚೈ ಹುಟ್ಟಿ ಬೆಳೆದ ಮನೆ ಎಂದಾಗ ನಾನು ಪುಳಕಿತನಾದೆ ಎಂದು ಮಣಿಕಂಠನ್ ಹೇಳಿದ್ದಾರೆ. ಎಲ್ಲಾ ನೋಂದಣಿ ಮುಗಿಸಿದ ರೆಘುನಾಥ್ ಪಿಚೈ, ದಾಖಲೆ ಪತ್ರಗಳನ್ನು ಹಸ್ತಾಂತರಿಸಿದ್ದಾರೆ. ಈ ವೇಳೆ ರೆಘುನಾಥ್ ಪಿಚೈ ಭಾವುಕರಾದರು. ತಾವು ಬದುಕು ಕಟ್ಟಿಕೊಂಡ ಮನೆ ಮಾರಾಟದಿಂದ ಗದ್ಗತಿರಾಗಿ ಕಣ್ಣೀರಿಟ್ಟರು ಎಂದು ಮಣಿಕಂಠನ್ ಹೇಳಿದ್ದಾರೆ.
ಗೂಗಲ್ ಸರ್ಚ್‌ನಲ್ಲಿ ಕೃತಕ ಬುದ್ಧಿಮತ್ತೆ ಸೇರ್ಪಡೆ; ಚಾಟ್‌ಬಾಟ್‌ನಿಂದ ಅವಕಾಶ ಸೃಷ್ಟಿ: ಸುಂದರ್ ಪಿಚೈ
ರೆಘುನಾಥ್ ಪಿಚೈ ಭಾವುಕ ಕ್ಷಣ ಎದುರಿಸಲು ಸಾಧ್ಯವಾಗಲಿಲ್ಲ. ನಾನೂ ಕೂಡ ಭಾವುಕನಾದೆ. ಇದೀಗ ನನಗೆ ಹೆಮ್ಮೆ ಇದೆ. ವಿಶ್ವದ ದಿಗ್ಗಜ ಗೂಗಲ್ ಕಂಪನಿಯ ಸಿಇಒ ಹುಟ್ಟಿದ ಮನೆಯನ್ನು ನಾನು ಖರೀದಿಸಿದ್ದೇನೆ ಅನ್ನೋ ಹೆಮ್ಮೆ ಇದೆ ಎಂದು ಮಣಿಕಂಠನ್ ಹೇಳಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮಣಿಕಂಠನ್ ರಿಯಲ್ ಎಸ್ಟೇಟ್ ಉದ್ಯಮವನ್ನು ನಡೆಸುತ್ತಿದ್ದಾರೆ. 300ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿದ್ದಾರೆ. ಇದೀಗ ಹೊಸದಾಗಿ ಖರೀದಿಸಿದ ಮನೆ ಪ್ರದೇಶದಲ್ಲೂ ಹೊಸ ಕಟ್ಟಡ ಕಟ್ಟುವ ಸಾಧ್ಯತೆ ಇದೆ.