'2018ರಿಂದಲೇ ಭಾರತದಲ್ಲಿ ಆರ್ಥಿಕ ಹಿಂಜರಿಕೆ, ಮುಂದೆ ಇನ್ನಷ್ಟು ಅಪಾಯ!'
2018ರಿಂದಲೇ ಭಾರತದಲ್ಲಿ ಆರ್ಥಿಕ ಹಿಂಜರಿಕೆ!| ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಪತನ ಆರ್ಥಿಕ ಹಿಂಜರಿಕೆಯ ಮೊದಲ ಲಕ್ಷಣ| ಮುಂದಿನ ದಿನಗಳಲ್ಲಿ ಇನ್ನಷ್ಟುಅಪಾಯ ಖಚಿತ: ಗೋಲ್ಡ್‌ಮನ್ ಸ್ಯಾಚ್ಸ್ ವರದಿ
ನವದೆಹಲಿ[ಆ.28]: ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶಗಳು ಆರ್ಥಿಕ ಹಿಂಜರಿಕೆಗೆ ತುತ್ತಾಗುವ ಆತಂಕ ಎದುರಿಸುತ್ತಿವೆ ಎಂಬ ವರದಿಗಳ ಬೆನ್ನಲ್ಲೇ, 2018ರಿಂದಲೇ ಭಾರತದಲ್ಲಿ ಆರ್ಥಿಕ ಹಿಂಜರಿಕೆ ಆರಂಭವಾಗಿತ್ತು ಎಂದು ಜಾಗತಿಕ ಹಣಕಾಸು ಸೇವಾ ಸಂಸ್ಥೆಯಾದ ಗೋಲ್ಡ್‌ಮನ್ ಸ್ಯಾಚ್‌್ಸ ಹೇಳಿದೆ. ಅಲ್ಲದೆ ಆರ್ಥಿಕತೆಗೆ ಚೇತರಿಕೆ ನೀಡಲು ಕೇಂದ್ರ ಸರ್ಕಾರ ಇತ್ತೀಚೆಗೆ ಹಲವಾರು ಉತ್ತೇಜನಾ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ, ದೇಶದ ಆರ್ಥಿಕತೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟುಅಪಾಯಕ್ಕೆ ಸಿಕ್ಕಿ ಹಾಕಿಕೊಳ್ಳುವುದು ಖಚಿತ ಎಂದು ಸಂಸ್ಥೆ ಹೇಳಿದೆ.
2017-18ನೇ ಸಾಲಿನ 3ನೇ ತ್ರೈಮಾಸಿಕದಲ್ಲೇ ಭಾರತದಲ್ಲಿ ಆರ್ಥಿಕ ಹಿಂಜರಿಕೆಯ ಲಕ್ಷಣಗಳು ಕಾಣಿಸಿಕೊಂಡಿದ್ದವು. ಜಿಎಸ್‌ಟಿ ಜಾರಿಯಾದ ಬೆನ್ನಲ್ಲೇ ಹಣಕಾಸಿನ ಸರಾಗ ಹರಿವಿಗೆ ಅಡ್ಡಿಯಾಗಿತ್ತು. ಇದಕ್ಕೆ ಮೊದಲು ಬಲಿಯಾಗಿದ್ದು ಐಎಲ್‌ಎಫ್‌ಎಸ್ (ಇನಾ್ೊ್ರಸ್ಟ್ರಕ್ಚರ್ ಲೀಸಿಂಗ್ ಆ್ಯಂಡ್ ಫೈನಾನ್ಷಿಯಲ್ ಸವೀರ್‍ಸಸ್). ಪ್ರಸಕ್ತ ಭಾರತದಲ್ಲಿ ಕಾಣಿಸಿಕೊಂಡಿರುವ ಆರ್ಥಿಕ ಹಿಂಜರಿತಕ್ಕೆ 18 ತಿಂಗಳು ತುಂಬಿದೆ. 2006ರ ಬಳಿಕ ಅತ್ಯಂತ ಸುದೀರ್ಘ ಅವಧಿಯ ಹಿಂಜರಿಕೆ ಇದು ಎಂದು ಗೋಲ್ಡ್‌ಮನ್ ಸ್ಯಾಚ್‌್ಸನ ಏಷ್ಯಾ-ಪೆಸಿಫಿಕ್ ವಲಯದ ಆರ್ಥಿಕ ತಜ್ಞ ಆ್ಯಂಡ್ರ್ಯೂ ಟಿಲ್ಟನ್, ಪ್ರಾಚಿ ಮಿಶ್ರಾ, ಸಾಕ್ಷಿ ಗೋಯೆಂಕಾ ಬಿಡುಗಡೆ ಮಾಡಿರುವ ವರದಿಯಲ್ಲಿ ವಿಶ್ಲೇಷಿಸಿದ್ದಾರೆ.
ಆರ್ಥಿಕ ಕುಸಿತ: ಹೀರೋ, ಟಿವಿಎಸ್ ಘಟಕ ಸ್ಥಗಿತ!
ಆಟೋಮೊಬೈಲ್ ವಲಯದಲ್ಲಿ ಭಾರೀ ಕುಸಿತ, ಇಡೀ ಆರ್ಥಿಕ ಹಿಂಜರಿಕೆಯ ಒಂದು ಭಾಗವಷ್ಟೇ. ಇತರೆ ಬಳಕೆ ಸೂಚ್ಯಂಕಗಳಾದ ವಿಮಾನ ಪ್ರಯಾಣಿಕರ ದಟ್ಟಣೆ, ತೆರಿಗೆ ಸಂಗ್ರಹ, ದಿನಬಳಕೆ ವಸ್ತುಗಳ ಮಾರಾಟವು ಆರ್ಥಿಕ ಹಿಂಜರಿಕೆಯಲ್ಲಿ ಆಟೋಮೊಬೈಲ್ ವಲಯಕ್ಕಿಂತ ದುಪ್ಪಟ್ಟು ಪ್ರಮಾಣವನ್ನು ವಿವರಿಸುತ್ತವೆ. ಒಟ್ಟಾರೆ ಆರ್ಥಿಕ ಪ್ರಗತಿ ದರ ಕುಸಿತದಲ್ಲಿ ಆಟೋಮೊಬೈಲ್ ವಲಯದ ಪಾಲು ಶೇ.17ರಷ್ಟಿದ್ದರೆ, ಬ್ಯಾಂಕ್ ಕೃಷಿ ಸಾಲ, ವಾಹನ ಮಾರಾಟ, ಗ್ರಾಮೀಣ ವೇತನ, ಇಂಧನ ಬಳಕೆ, ಕೃಷಿ ರಫ್ತು, ರಸಗೊಬ್ಬರ ಮಾರಾಟ ರೈಲು, ವಿಮಾನ ಪ್ರಯಾಣ, ಗೃಹ ಸಾಲ, ಎಲೆಕ್ಟ್ರಾನಿಕ್ ವಸ್ತುಗಳ ಪಾಲು ಶೇ.36ರಷ್ಟಿದೆ ಎಂದು ವರದಿ ಹೇಳಿದೆ.
ಆಟೋ ಮೊಬೈಲ್, ಷೇರು ಮಾರುಕಟ್ಟೆ ತಲ್ಲಣ: ಮತ್ತೊಂದು ಆರ್ಥಿಕ ಹಿಂಜರಿಕೆಯ ಛಾಯೆ!
ದೇಶೀಯ ಸಂಗತಿಗಳ ಜೊತೆಗೆ ಜಾಗತಿಕ ಆರ್ಥಿಕ ಕುಸಿತ, ಜೊತೆಗೆ ಭಾರತದ ಪಾಲುದಾರ ದೇಶಗಳಲ್ಲಿನ ಆರ್ಥಿಕ ಬೆಳವಣಿಗೆಗಳು ಕೂಡಾ ಭಾರತದಲ್ಲಿ ಆರ್ಥಿಕ ಹಿಂಜರಿಕೆಗೆ ತಮ್ಮ ಪಾಲನ್ನು ನೀಡಿವೆ. ಹೀಗಾಗಿ ಆರ್ಥಿಕತೆ ಉತ್ತೇಜನಕ್ಕೆ ಆರ್‌ಬಿಐ ಎಷ್ಟೇ ಕ್ರಮಗಳನ್ನು ಕೈಗೊಂಡರೂ, ಇನ್ನೂ ಕೆಲ ತ್ರೈಮಾಸಿಗಳವರೆಗೆ ಇದೇ ಪರಿಸ್ಥಿತಿ ಮುಂದುವರೆಯುವ ಎಲ್ಲಾ ಲಕ್ಷಣಗಳಿವೆ ಎಂದು ವರದಿ ಹೇಳಿದೆ.