Asianet Suvarna News Asianet Suvarna News

Gold Silver Price Today: ಇಳಿಕೆಯ ಹಾದಿಯಲ್ಲಿ ಚಿನ್ನ,ಬೆಳ್ಳಿ ದರ; ಇಂದಿನ ಬೆಲೆ ಎಷ್ಟಿದೆ?

ಚಿನ್ನ, ಬೆಳ್ಳಿ ಖರೀದಿಗೆ ಪ್ಲ್ಯಾನ್ ಮಾಡುತ್ತಿರೋರಿಗೆ ಇದು ಶುಭಕಾಲ.ಎರಡು ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಅಲ್ಪ ಮಟ್ಟಿನ ಇಳಿಕೆ ಕಂಡುಬಂದಿದೆ. ಹೀಗಾಗಿ ಚಿನ್ನ, ಬೆಳ್ಳಿ ಖರೀದಿಗೆ ಪ್ಲ್ಯಾನ್ ಮಾಡುತ್ತಿರೋರಿಗೆ ಸ್ವಲ್ಪ ಮಟ್ಟಿನ ನಿರಾಳತೆಯಂತೂ ಸಿಕ್ಕಿದೆ. ಹಾಗಾದ್ರೆ ರಾಜ್ಯದಲ್ಲಿ ಇಂದು ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ? 
 

Gold Silver price in Karnataka August 17th 2022
Author
Bangalore, First Published Aug 17, 2022, 11:27 AM IST

Business Desk:ಚಿನ್ನ ಹಾಗೂ ಬೆಳ್ಳಿ ಜೊತೆಗಿನ ಭಾರತೀಯರ ಬಾಂಧವ್ಯ ಅತ್ಯಂತ ಪುರಾತನವಾದದ್ದು. ಚಿನ್ನ ಹಾಗೂ ಬೆಳ್ಳಿ ಭಾರತೀಯರಿಗೆ ಬರೀ ಹೂಡಿಕೆ ಸಾಧನವಲ್ಲ, ಅದರೊಂದಿಗೆ ಅವರ ಧಾರ್ಮಿಕ ಹಾಗೂ ಭಾವನಾತ್ಮಕ ಸಂಬಂಧವಿದೆ. ಪೂಜೆ, ಪುನಸ್ಕಾರ, ಮದುವೆ, ಮುಂಜಿ ಸೇರಿದಂತೆ ಎಲ್ಲ ಶುಭ ಕಾರ್ಯಕ್ರಮಗಳಿಗೂ ಚಿನ್ನ ಹಾಗೂ ಬೆಳ್ಳಿ ಅತ್ಯಗತ್ಯ. ಚಿನ್ನ ಹಾಗೂ ಬೆಳ್ಳಿ ಅದೆಷ್ಟೇ ದುಬಾರಿಯಾಗಿದ್ರೂ ಕೆಲವೊಂದು ಸಂದರ್ಭಗಳಿಗೆ ಅದು ಅಗತ್ಯವಾದ ಕಾರಣ ಖರೀದಿಗೆ ಭಾರತೀಯರು ಹಿಂದೆ ಮುಂದೆ ನೋಡೋದಿಲ್ಲ. ಇದೇ ಕಾರಣಕ್ಕೆ ಚಿನ್ನಕ್ಕೆ ಅತ್ಯಧಿಕ ಬೇಡಿಕೆಯಿರುವ ರಾಷ್ಟ್ರಗಳಲ್ಲಿ ಭಾರತ ಟಾಪ್ ಸ್ಥಾನ ಗಳಿಸಿರೋದು. ಆದರೆ, ಕೊರೋನಾ ಕಾಣಿಸಿಕೊಂಡ ಬಳಿಕ ಚಿನ್ನ ಹಾಗೂ ಬೆಳ್ಳಿ ಬೆಲೆ ಕೂಡ ಗಗನಕ್ಕೇರಿತ್ತು. ಆದರೆ, ನಂತರದ ದಿನಗಳಲ್ಲಿ ಇಳಿಕೆ ದಾಖಲಿಸಿದ್ರೂ ಕೂಡ ಕೊರೋನಾಪೂರ್ವ ಸಮಯದ ದರಕ್ಕೆ ಮಾತ್ರ ಮರಳಿಲ್ಲ. ಕಳೆದ ಕೆಲವು ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಗಳಲ್ಲಿ ಏರಿಳಿತ ಕಂಡುಬರುತ್ತಿದ್ದು, ಖರೀದಿಗೆ ಪ್ಲ್ಯಾನ್ ಮಾಡುತ್ತಿರೋರು ಸ್ವಲ್ಪ ಮಟ್ಟಿಗೆ ಗೊಂದಲಕ್ಕೆ ಒಳಗಾಗಿರೋದು ನಿಜ. ಆದ್ರೆ, ನಿನ್ನೆಯಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಗಳಲ್ಲಿ ಅಲ್ಪ ಮಟ್ಟಿನ ಇಳಿಕೆ ಕಂಡುಬಂದಿದೆ. ಹಾಗಾದ್ರೆ ಬೆಂಗಳೂರು ಹಾಗೂ ದೇಶದ ಇತರ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಹೇಗಿದೆ? 

ಒಂದು ಗ್ರಾಂ ಚಿನ್ನ (1GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,795
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ.5,231

ಎಂಟು ಗ್ರಾಂ ಚಿನ್ನ (8GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 38,360
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,848

ಹತ್ತು ಗ್ರಾಂ ಚಿನ್ನ (10GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 47,950
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 52,310

ನೂರು ಗ್ರಾಂ ಚಿನ್ನ (100GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,79,500
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,23,100

ಜಗತ್ತಿನ 6 ಕಾಸ್ಮೋಪಾಲಿಟನ್‌ ಹಾಟ್‌ಸ್ಪಾಟ್‌ಗಳಲ್ಲಿ ಬೆಂಗಳೂರಿಗೆ ಸ್ಥಾನ..!

ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ.47,950 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,490, ರೂ. 47,900, ರೂ.47,900, ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ  48,050ರೂ. ಆಗಿದೆ. 

ಇಂದಿನ ಬೆಳ್ಳಿ ದರ
ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ದರ ಕೆಜಿಗೆ 100ರೂ. ಇಳಿಕೆಯಾಗಿದೆ. ನಿನ್ನೆ 1ಕೆಜಿ ಬೆಳ್ಳಿಗೆ 63,400 ರೂ. ಇತ್ತು. ಇಂದು 63,300ರೂ. ಆಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ - ಇಳಿಕೆಯಾದಂತೆಯೂ ಚಿನ್ನ - ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ. 

WPI Inflation:ಜುಲೈನಲ್ಲಿ ಸಗಟು ಹಣದುಬ್ಬರ ಕೂಡ ಇಳಿಕೆ; ಜನಸಾಮಾನ್ಯರು ತುಸು ನಿರಾಳ

ಬೆಂಗಳೂರು ಹಾಗೂ ಇತರ ನಗರಗಳಲ್ಲಿ ಬೆಳ್ಳಿ ದರ
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕೂಡ  ಒಂದು ಕೆಜಿ ಬೆಳ್ಳಿ ದರದಲ್ಲಿ100 ರೂ. ಇಳಿಕೆಯಾಗಿ ಇಂದಿನ ದರ 63,300ರೂ. ಆಗಿದೆ. ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 633, ರೂ. 6,330 ಹಾಗೂ ರೂ. 63,300 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 63,300 ಆಗಿದ್ದರೆ, ಮುಂಬೈನಲ್ಲಿ ರೂ. 57,600 ಹಾಗೂ ಕೋಲ್ಕತ್ತದಲ್ಲಿ ಸಹ ರೂ. 57,600 ಗಳಾಗಿದೆ. ಇನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೂಡ ಇಂದಿನ ಬೆಳ್ಳಿ ದರ ರೂ. 57,600 ಆಗಿದೆ.

Follow Us:
Download App:
  • android
  • ios