Asianet Suvarna News Asianet Suvarna News

WPI Inflation:ಜುಲೈನಲ್ಲಿ ಸಗಟು ಹಣದುಬ್ಬರ ಕೂಡ ಇಳಿಕೆ; ಜನಸಾಮಾನ್ಯರು ತುಸು ನಿರಾಳ

*ಜುಲೈ ತಿಂಗಳಲ್ಲಿ ಭಾರತದ ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಶೇ.13.93ಕ್ಕೆ ಇಳಿಕೆ
*ಜೂನ್ ನಲ್ಲಿ ಶೇ.15.18ರಷ್ಟಿದ್ದ ಸಗಟು ಹಣದುಬ್ಬರ
*ಸತತ ಎರಡು ತಿಂಗಳಿಂದ ಸಗಟು ಹಣದುಬ್ಬರ ಇಳಿಕೆ

WPI inflation edges lower to 13.93percent in July against 15.18percent in June
Author
Bangalore, First Published Aug 16, 2022, 5:58 PM IST

ನವದೆಹಲಿ (ಆ.16): ಜುಲೈ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆಯಾದ ಬೆನ್ನಲ್ಲೇ ಸಗಟು ಹಣದುಬ್ಬರ ಕೂಡ ತಗ್ಗಿದೆ. ಜುಲೈಯಲ್ಲಿ ಭಾರತದ ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಶೇ.13.93ಕ್ಕೆ ಇಳಿಕೆಯಾಗಿದೆ. ಜೂನ್ ನಲ್ಲಿ ಶೇ.15.18ರಷ್ಟಿದ್ದ ಸಗಟು ಹಣದುಬ್ಬರ ಜುಲೈನಲ್ಲಿ ಶೇ.1.25ರಷ್ಟು ಇಳಿಕೆಯಾಗಿ ಶೇ.13.93 ತಲುಪಿದೆ. ಮೇನಲ್ಲಿ ದಾಖಲೆಯ ಶೇ.15.88ಕ್ಕೆ ತಲುಪಿದ್ದ ಸಗಟು ಹಣದುಬ್ಬರ, ನಿರಂತರ ಎರಡನೇ ತಿಂಗಳು ಕೂಡ ಇಳಿಕೆಯಾಗಿದೆ. ಸರ್ಕಾರದ ಮಾಹಿತಿ ಅನ್ವಯ ಜುಲೈನಲ್ಲಿ ಹಣದುಬ್ಬರ ಹೆಚ್ಚಳಕ್ಕೆ ಪ್ರಾಥಮಿಕ ಕೊಡುಗೆ ನೀಡಿರೋದು ಖನಿಜ ತೈಲಗಳು, ಆಹಾರ ಪದಾರ್ಥಗಳು, ಕಚ್ಚಾ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ, ವಿದ್ಯುತ್, ಕೆಮಿಕಲ್ಸ್ ಹಾಗೂ ಕೆಮಿಕಲ್ಸ್ ಉತ್ಪನ್ನಗಳು, ಆಹಾರ ಉತ್ಪನ್ನಗಳು ಇತ್ಯಾದಿಗಳ ಬೆಲೆ ಹೆಚ್ಚಳ. ಖನಿಜಗಳ ಬೆಲೆಗಳಲ್ಲಿ ಜುಲೈನಲ್ಲಿ ಶೇ.0.96ರಷ್ಟು ಹೆಚ್ಚಳವಾಗಿದೆ. ಇನ್ನು ಆಹಾರ ಪದಾರ್ಥಗಳ ಬೆಲೆಗಳು, ಆಹಾರೇತರ ಉತ್ಪನ್ನಗಳು, ಕಚ್ಚಾ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಬೆಲೆಗಳಲ್ಲಿ ಕ್ರಮವಾಗಿ ಶೇ.2.56 , ಶೇ.2.61 ಹಾಗೂ ಶೇ.5.05 ಇಳಿಕೆಯಾಗಿದೆ. ಏರಿಕೆ ಕಂಡಿದ್ದ ತರಕಾರಿಗಳ ಬೆಲೆ ಜುಲೈನಲ್ಲಿ ಶೇ.18.25 ಕ್ಕೆ ಇಳಿಕೆಯಾಗಿದೆ. ಇದಕ್ಕೂ ಹಿಂದಿನ ತಿಂಗಳು ಶೇ.56.75ರಷ್ಟಿತ್ತು.

ಚಿಲ್ಲರೆ ಹಣದುಬ್ಬರ ಇಳಿಕೆ
ಭಾರತದ ಚಿಲ್ಲರೆ ಹಣದುಬ್ಬರ ಸತತ ಮೂರು ತಿಂಗಳಿಂದ ಇಳಿಕೆಯ ಹಾದಿ ಹಿಡಿದಿದ್ದು, ಜುಲೈನಲ್ಲಿ ಶೇ.6.7ಕ್ಕೆ ತಗ್ಗಿದೆ. ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಚಿಲ್ಲರೆ ಹಣದುಬ್ಬರ ಜೂನ್ ನಲ್ಲಿ ಶೇ.7.01ರಷ್ಟಿತ್ತು. ಜುಲೈನಲ್ಲಿ ಆಹಾರ ಹಣದುಬ್ಬರ ಕೂಡ ಶೇ.6.75 ಕ್ಕೆ ಇಳಿಕೆಯಾಗಿದೆ. ಜೂನ್ ನಲ್ಲಿ ಆಹಾರ ಹಣದುಬ್ಬರ ಶೇ.7.75ರಷ್ಟಿತ್ತು. ಸಿಪಿಐ (CPI) ಆಧಾರಿತ ಚಿಲ್ಲರೆ ಹಣದುಬ್ಬರ ಆರ್ ಬಿಐ (RBI) ನಿಗದಿಪಡಿಸಿರುವ ಗರಿಷ್ಠ ಸಹನಾ ಮಟ್ಟವನ್ನು ಮೀರುತ್ತಿರೋದು ಇದು ಸತತ ಏಳನೇ ಬಾರಿಯಾಗಿದೆ. ಮಾರ್ಚ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 6.95ಕ್ಕೆ ಏರಿಕೆಯಾಗಿದ್ರೆ, ಫೆಬ್ರವರಿಯಲ್ಲಿ ಶೇ.6.07ಕ್ಕೆ ಹೆಚ್ಚಳವಾಗಿತ್ತು. ಆರ್ ಬಿಐ ಚಿಲ್ಲರೆ ಹಣದುಬ್ಬರ ಸಹನಾ ಮಿತಿಯನ್ನು ಶೇ.4ಕ್ಕೆ ನಿಗದಿಪಡಿಸಿದ್ದು, ಉಭಯ ಕಡೆ ಶೇ.2ರಷ್ಟು ಮಾರ್ಜಿನ್ (Margin) ನೀಡಿದೆ. 

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಖುಷಿ ಹೆಚ್ಚಿಸಿದ ಸಾಧನೆ ಇದು; ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ನಂ.1

ತರಕಾರಿ ಬೆಲೆ ಇಳಿಕೆ
ತರಕಾರಿ (Vegetable) ಬೆಲೆಯಲ್ಲಿ (Price) ಕೂಡ ಜುಲೈನಲ್ಲಿ ಇಳಿಕೆಯಾಗಿದೆ. ತರಕಾರಿ ಬೆಲೆ ಜೂನ್ ನಲ್ಲಿ ಶೇ. 17.37ರಿಂದ ಶೇ.10.9ಕ್ಕೆ ಇಳಿಕೆಯಾಗಿದೆ. 'ಕಾಳುಗಳು ಹಾಗೂ ಉತ್ಪನ್ನಗಳ' ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಜೂನ್ ನಲ್ಲಿ -ಶೇ.1.02ರಷ್ಟಿದ್ದು, ಜುಲೈನಲ್ಲಿ ಶೇ.0.18ಕ್ಕೆ ಹೆಚ್ಚಳವಾಗಿದೆ. 'ಧಾನ್ಯಗಳು ಹಾಗೂ ಉತ್ಪನ್ನಗಳ' ಹಣದುಬ್ಬರ ಶೇ.5.66 ರಿಂದ ಶೇ. 6.90ಕ್ಕೆ ಏರಿಕೆಯಾಗಿದೆ. 'ಇಂಧನ ಹಾಗೂ ವಿದ್ಯುತ್' ಹಣದುಬ್ಬರ ಶೇ.11.76ಕ್ಕೆ ಹೆಚ್ಚಿದೆ. ಜೂನ್ ನಲ್ಲಿ ಇದು ಶೇ.10.39ರಷ್ಟಿತ್ತು. ಇನ್ನು ಹಣ್ಣುಗಳ ಬೆಲೆಯಲ್ಲಿ ಹಿಂದಿನ ತಿಂಗಳಿಗಿಂತ ಭಾರೀ ಹೆಚ್ಚಳ ಕಂಡುಬಂದಿದೆ. ಜೂನ್ ನಲ್ಲಿ ಶೇ.3.10ರಷ್ಟಿದ್ದ ಹಣ್ಣುಗಳ ಹಣದುಬ್ಬರ ಜುಲೈನಲ್ಲಿ ಶೇ.6.41ಕ್ಕೆ ಏರಿಕೆಯಾಗಿದೆ. 

Milk Price Hike: ಅಮುಲ್, ಮದರ್‌ ಡೈರಿ ಹಾಲಿನ ದರ ಹೆಚ್ಚಳ: ನಾಳೆಯಿಂದಲೇ ಪರಿಷ್ಕೃತ ದರ ಜಾರಿ

ರೆಪೋ ದರ ಹೆಚ್ಚಳ
ಆರ್ ಬಿಐ ಹಣಕಾಸು ನೀತಿ ಸಮಿತಿ (MPC) ನಿರೀಕ್ಷೆಯಂತೆ ಆಗಸ್ಟ್ ನಲ್ಲಿ ರೆಪೋ ದರವನ್ನು ( repo rate) 50 ಮೂಲ ಅಂಕಗಳಷ್ಟು (50 basis points) ಹೆಚ್ಚಿಸಿದೆ. ಈ ಹಿನ್ನೆಲೆ ಸದ್ಯದ ರೆಪೋ ದರವು ಶೇಕಡಾ 5.40 ಕ್ಕೆ ಏರಿಕೆಯಾಗಿದೆ. ಈ ಆರ್ಥಿಕ ಸಾಲಿನಲ್ಲಿ ಆರ್ ಬಿಐ ಮೂರು ಬಾರಿ ರೆಪೋ ದರ ಏರಿಕೆ ಮಾಡಿದೆ. ಜೂನ್ ನಲ್ಲಿ ರೆಪೋ ದರವನ್ನು 50 ಮೂಲ ಅಂಕಗಳಷ್ಟು ಹೆಚ್ಚಿಸಿತ್ತು. ಮೇನಲ್ಲಿ ಕೂಡ ಆರ್ ಬಿಐ ರೆಪೋ ದರದಲ್ಲಿ 40  ಮೂಲ ಅಂಕಗಳಷ್ಟು ಹೆಚ್ಚಳ ಮಾಡಿತ್ತು. 
 

Follow Us:
Download App:
  • android
  • ios