ಚಿನ್ನದ ದರದಲ್ಲಿ ಭಾರೀ ಇಳಿಕೆ: ಹೀಗೆ ಇಳಿಯಲಿ ಎಂಬುದೇ ಹಾರೈಕೆ!
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿದ ಚಿನ್ನದ ದರ! ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಗಮನಾರ್ಹ ಇಳಿಕೆ! ಸ್ಥಳೀಯ ವ್ಯಾಪಾರಸ್ಥರಿಂದ ಚಿನ್ನಕ್ಕಾಗಿ ಹೆಚ್ಚಿದ ಬೇಡಿಕೆ! ಬೆಳ್ಳಿ ದರದಲ್ಲೂ ಗಮನಾರ್ಹ ಇಳಿಕೆ ಕಂಡು ಬಂದಿದೆ
ನವದೆಹಲಿ(ನ.25): ಸತತ ಎರಡು ದಿನಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ ಕಂಡು ಬರುತ್ತಿದ್ದು, ಇಂದೂ ಕೂಡ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಯತ್ತ ಮುಖ ಮಾಡಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ ಚಿನ್ನ ಮತ್ತು ಬೆಳ್ಳಿ ದರ ಇಳಿಯುತ್ತಿದ್ದು, ಇದರ ಪರಿಣಾಮ ಭಾರತೀಯ ಮಾರುಕಟ್ಟೆ ಮೇಲೂ ಆಗಿದೆ ಎಂಬುದು ತಜ್ಞರ ಅಂಬೋಣ.
ಇದೇ ಕಾರಣಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಸ್ಥಳೀಯ ವ್ಯಾಪಾರಿಗಳಿಂದ ಚಿನ್ನಕ್ಕಾಗಿ ಬೇಡಿಕೆ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಬೆಲೆಗಳು ಇಳಿಕೆಯತ್ತ ಮುಖ ಮಾಡಿದೆ ಎನ್ನಲಾಗಿದೆ.
ಅದರಂತೆ ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ದರದತ್ತ ಗಮನಹರಿಸುವುದಾದರೆ...
ರಾಷ್ಟ್ರ ರಾಜಧಾನಿ ನವದೆಹಲಿ-
10 ಗ್ರಾಂ 99.9 % ಶುದ್ಧ ಚಿನ್ನ-31,750 ರೂ.(200 ರೂ.ಇಳಿಕೆ)
10 ಗ್ರಾಂ 99.5 % ಶುದ್ಧ ಚಿನ್ನ-31,600 ರೂ.(200 ರೂ.ಇಳಿಕೆ)
8 ಗ್ರಾಂ ಸಾವರಿನ್ ಗೋಲ್ಡ್- 24,700 ರೂ.(100 ರೂ.ಇಳಿಕೆ )
ಇನ್ನು ಬೆಳ್ಳಿ ದರದಲ್ಲೂ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಇಂದಿನ ಮಾರುಕಟ್ಟೆ ದರದತ್ತ ಗಮನಹರಿಸುವುದಾದರೆ...
1 ಕೆಜಿ ಬೆಳ್ಳಿ-37,300(500 ರೂ.ಇಳಿಕೆ)
100 ಬೆಳ್ಳಿ ನಾಣ್ಯ-73,000(ಕೊಳ್ಳುವಿಕೆ), 74,000(ಮಾರಾಟ)