ಹಬ್ಬ ಹಿಂಗಾಗ್ಬೇಕು: ಚಿನ್ನದ ದರದಲ್ಲಿ ಭಾರೀ ಇಳಿಕೆ!
ಚಿನ್ನ, ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆ! ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಯ ಪರಿಣಾಮ! ಸತತ ನಾಲ್ಕು ದಿನಗಳಿಂದ ಚಿನ್ನದ ದರದಲ್ಲಿ ಇಳಿಕೆ! 10 ಗ್ರಾಂ ಶುದ್ಧ ಚಿನ್ನದ ದರದಲ್ಲಿ 180 ರೂ. ಇಳಿಕೆ! ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 400 ರೂ. ಇಳಿಕೆ! ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ
ಮುಂಬೈ(ನ.10): ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಯ ಪರಿಣಾಮ, ಭಾರತೀಯ ಮಾರುಕಟ್ಟೆಯಲ್ಲಿ ಸತತ ನಾಲ್ಕು ದಿನಗಳಿಂದ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.
10 ಗ್ರಾಂ ಶುದ್ಧ ಚಿನ್ನದ ದರದಲ್ಲಿ 180 ರೂ. ಇಳಿಕೆ ಕಂಡುಬಂದಿದ್ದು, ಬರೋಬ್ಬರಿ 32,070 ರೂ. ಆಗಿದೆ. ಅದರಂತೆ ಬೆಳ್ಳಿ ದರದಲ್ಲೂ ಗಮನಾರ್ಹ ಇಳಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 400 ರೂ. ಇಳಿಕೆಯಾಗಿ ಬರೋಬ್ಬರಿ 38 ಸಾವಿರ ರೂ. ಆಗಿದೆ.
ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾದ ಕಾರಣ ಮತ್ತು ಗ್ರಾಹಕರ ಕೊಳ್ಳುವಿಕೆ ಪ್ರಮಾಣ ಕಡಿಮೆಯಾದ ಪರಿಣಾಮ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಂಡುಬಂದಿದೆ.