Business Ideas: ಕಡಿಮೆ ಹೂಡಿಕೆ ಮಾಡಿ ಹೆಚ್ಚು ಶ್ರಮ ವಹಿಸಿದ್ರೆ ಲಾಭ ನಿಶ್ಚಿತ
ಸ್ವಂತ ವ್ಯಾಪಾರ ಶುರು ಮಾಡಲು ಕೈತುಂಬ ಹಣವಿರ್ಬೇಕೆಂದು ಕೆಲವರು ಭಾವಿಸ್ತಾರೆ. ಮತ್ತೆ ಕೆಲವರು ಬ್ಯಾಂಕ್ ಲೋನ್ ಬಗ್ಗೆ ಆಲೋಚನೆ ಮಾಡ್ತಾರೆ. ಆದ್ರೆ ಎಲ್ಲ ವ್ಯವಹಾರಕ್ಕೆ ಹೆಚ್ಚಿನ ಹೂಡಿಕೆ ಅಗತ್ಯವಿರೋದಿಲ್ಲ. ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಶುರು ಮಾಡಿ ನಂತ್ರ ಹೆಚ್ಚು ಗಳಿಕೆ ಮಾಡ್ಬಹುದಾದ ವ್ಯಾಪಾರವೂ ಸಾಕಷ್ಟಿದೆ.
ಕೊರೊನಾ (Corona) ನಂತ್ರ ಜನರ ಮನಸ್ಥಿತಿ ಬದಲಾಗ್ತಿದೆ. ಅನೇಕರು ಕಚೇರಿ (Office) ಕೆಲಸಕ್ಕಿಂತ ಸ್ವಂತ ವ್ಯವಹಾರ ಶುರು ಮಾಡಲು ಆಸಕ್ತಿ ತೋರುತ್ತಿದ್ದಾರೆ. ಸರ್ಕಾರ (Government) ದಿಂದಲೂ ಇದಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗ್ತಿದೆ. ಬ್ಯಾಂಕ್ (Bank) ಗಳು ವ್ಯವಹಾರ ನಡೆಸಲು ಸಾಲ ಸೌಲಭ್ಯವನ್ನು ನೀಡ್ತಿವೆ. ವ್ಯವಹಾರವೆಂದ್ಮೇಲೆ ಲಾಭ – ನಷ್ಟ ಸಾಮಾನ್ಯ. ಆದ್ರೆ ವ್ಯವಹಾರದ ಯಶಸ್ಸು ನಿಮ್ಮ ಉತ್ಸಾಹ, ಸಮರ್ಪಣೆ ಮತ್ತು ತಾಳ್ಮೆಯ ಮೇಲೆ ಅವಲಂಬಿತವಾಗಿರುತ್ತದೆ. ಗುರಿಯನ್ನು ಸಾಧಿಸುವಲ್ಲಿ ನಿಮ್ಮ ಪ್ರತಿಭೆ ತುಂಬಾ ಮುಖ್ಯ. ಕಡಿಮೆ ಹೂಡಿಕೆ ಮತ್ತು ಹೆಚ್ಚಿನ ಸಮರ್ಪಣೆ ಅಗತ್ಯವಿರುವ ಕೆಲ ಸಣ್ಣ ವ್ಯವಹಾರಗಳ ಬಗ್ಗೆ ನಾವಿಂದು ಹೇಳ್ತೇವೆ. ನೀವೂ ವ್ಯಾಪಾರ (Business) ದಲ್ಲಿ ಆಸಕ್ತಿ ಹೊಂದಿದ್ದರೆ ಅದ್ರಲ್ಲಿ ಒಂದನ್ನು ಶುರು ಮಾಡ್ಬಹುದು.
ಭಾರತದಲ್ಲಿ ಅತ್ಯಂತ ಯಶಸ್ವಿ ಸಣ್ಣ ವ್ಯಾಪಾರ ಐಡಿಯಾಗಳು :
ಬ್ರೇಕ್ಫಾಸ್ಟ್ ಜಾಯಿಂಟ್ (Breakfast Joint) : ಜೀವನದ ಮೂಲಭೂತ ಅವಶ್ಯಕತೆಗಳಲ್ಲಿ ಒಂದು ಆಹಾರ. ನೀವು ಎಲ್ಲಿಯವರೆಗೆ ಉತ್ತಮ ರುಚಿ ಹಾಗೂ ಗುಣಮಟ್ಟದ ಆಹಾರವನ್ನು ಸರ್ವ್ ಮಾಡ್ತೀರೋ ಅಲ್ಲಿಯವರೆಗೆ ನಿಮಗೆ ಈ ವ್ಯಾಪಾರದಲ್ಲಿ ನಷ್ಟವಿಲ್ಲ. ಸಣ್ಣ ಹೂಡಿಕೆಯಲ್ಲಿಯೇ ನೀವು ವ್ಯಾಪಾರ ಶುರು ಮಾಡ್ಬಹುದು. ಇದಕ್ಕೆ ದೊಡ್ಡ ಮೆನು ಪಟ್ಟಿ ನೀಡ್ಬೇಕಾಗಿಲ್ಲ.
ಜ್ಯೂಸ್ ಪಾಯಿಂಟ್ (Juice Point) : ಜನರ ಆರೋಗ್ಯ ಪ್ರಜ್ಞೆ ಹೆಚ್ಚಾಗ್ತಿದೆ. ಹಾಗಾಗಿ ತಂಪು ಪಾನೀಯಗಳ ಬದಲು ತಾಜಾ ಜ್ಯೂಸ್ ಗೆ ಬೇಡಿಕೆ ಹೆಚ್ಚಿದೆ. ನೀವು ನಿಮ್ಮ ನಗರದಲ್ಲಿ ಜ್ಯೂಸ್ ಪಾಯಿಂಟ್ ವ್ಯವಹಾರ ಶುರು ಮಾಡಬಹುದು. ಅನೇಕ ಬಗೆಯ ಜ್ಯೂಸ್ ಗಳನ್ನು ನೀವು ಸರ್ವ್ ಮಾಡ್ಬಹುದು.
ಟೈಲರಿಂಗ್ / ಕಸೂತಿ (Tailoring/ Embroidery) : ಜನರ ಮೂಲಭೂತ ಅಗತ್ಯತೆಗಳಲ್ಲಿ ಬಟ್ಟೆ ಕೂಡ ಒಂದು. ಎಲ್ಲ ಸಂದರ್ಭದಲ್ಲೂ ಇದಕ್ಕೆ ಬೇಡಿಕೆ ಇದ್ದೇ ಇರುತ್ತದೆ. ನೀವು ಟೈಲರಿಂಗ್ ಮತ್ತು ಎಂಬ್ರಾಯ್ಡರಿ ವ್ಯವಹಾರ ಶುರು ಮಾಡ್ಬಹುದು. ನೀವು ಮನೆಯಲ್ಲಿಯೇ ಟೈಲರಿಂಗ್ ಶುರು ಮಾಡಬಹುದು. ಗ್ರಾಹಕರ ಸಂಖ್ಯೆ ಹೆಚ್ಚಾಗೋದು ನಿಮ್ಮ ಹೊಲಿಗೆ ಕಲೆಯನ್ನು ಅವಲಂಭಿಸಿರುತ್ತದೆ.
Pension Scheme:ದಿನಕ್ಕೆ ಕೇವಲ 2ರೂ. ಹೂಡಿಕೆ ಮಾಡಿದ್ರೆ 36 ಸಾವಿರ ಲಾಭ; ಹೇಗೆ? ಯಾವ ಯೋಜನೆ? ಇಲ್ಲಿದೆ ಮಾಹಿತಿ
ಆನ್ಲೈನ್ ವ್ಯಾಪಾರ (Online Business) : ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್‌ಗೆ ಸಂಪರ್ಕ ಅನಿವಾರ್ಯವಾಗಿದೆ. ಆದ್ದರಿಂದ ಹೆಚ್ಚಿನ ವ್ಯವಹಾರಗಳು ಆನ್ಲೈನ್‌ನಲ್ಲಿ ನಡೆಯುತ್ತವೆ. ಸಾಮಾಜಿಕ ಮಾಧ್ಯಮ ತಜ್ಞರು, ಬ್ಲಾಗರ್‌ಗಳು, ವೆಬ್‌ಸೈಟ್ ಡಿಸೈನರ್ ಮತ್ತು ಡೆವಲಪರ್‌ಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆಯಲ್ಲಿದ್ದಾರೆ. ಅಂತಹ ವ್ಯವಹಾರಗಳಿಗೆ ಮೂಲಭೂತ ಕಂಪ್ಯೂಟರ್ ವ್ಯವಸ್ಥೆ, ಸಾಫ್ಟ್ವೇರ್ ಮತ್ತು ಹೆಚ್ಚಿನ ವೇಗದ ಇಂಟರ್ನೆಟ್ ಬೇಕಾಗುತ್ತದೆ. ಘೋಸ್ಟ್ ರೈಟಿಂಗ್, ಫ್ರೀಲ್ಯಾನ್ಸಿಂಗ್ ಮತ್ತು ಆನ್‌ಲೈನ್ ಅನುವಾದ ಸೇವೆಗಳಂತಹ ವ್ಯವಹಾರಗಳನ್ನು ಆನ್‌ಲೈನ್‌ನಲ್ಲಿ ಯಶಸ್ವಿಯಾಗಿ ನಡೆಸಬಹುದು.
ಡೇಕೇರ್ ಸೇವೆಗಳು (Daycare Services) : ಕೊರೊನಾ ನಂತ್ರ ಎಲ್ಲ ಕಚೇರಿ ಹಾಗೂ ಶಾಲೆಗಳು ಶುರುವಾಗ್ತಿವೆ. ಕಚೇರಿ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಮಕ್ಕಳನ್ನು ಡೇಕೇರ್ ನಲ್ಲಿ ಬಿಡುವುದು ಅನಿವಾರ್ಯವಾಗಿದೆ. ಹಾಗಾಗಿ ನೀವು ಈ ವ್ಯವಹಾರ ಕೂಡ ಶುರು ಮಾಡ್ಬಹುದು. ಮಕ್ಕಳೊಂದಿಗೆ ಸುಲಭವಾಗಿ ಬೆರೆಯುವ ಸಿಬ್ಬಂದಿಯನ್ನು ನೀವು ನೇಮಕ ಮಾಡಿಕೊಳ್ಳಬೇಕು. ಮಕ್ಕಳಿಗೆ ಸ್ನೇಹಿ ಮತ್ತು ಸುರಕ್ಷಿತ ವಾತಾವರಣವನ್ನು ನಿರ್ಮಿಸಬೇಕು.
Earn Money : ವಾಟ್ಸ್ ಆ್ಯಪ್ ಸ್ಟೇಟಸ್ ನೋಡೋ ಬದಲು ಸ್ಟೇಟಸ್ ಹಾಕಿ ,ಹಣ ಗಳಿಸಿ
ಡಾನ್ಸ್ ಕ್ಲಾಸ್ (Dance Centre) : ನೀವು ಉತ್ತಮ ನರ್ತಕಿ ಅಥವಾ ನೃತ್ಯ ಸಂಯೋಜಕರಾಗಿದ್ದರೆ ಬಾಡಿಗೆ ಸ್ಥಳವನ್ನು ತೆಗೆದುಕೊಂಡು ನೀವು ಸುಲಭವಾಗಿ ಡಾನ್ಸ್ ಕ್ಲಾಸ್ ಪ್ರಾರಂಭಿಸಬಹುದು. ಜಾಗದ ಬಾಡಿಗೆ ಬಿಟ್ಟರೆ ಪ್ರಚಾರಕ್ಕೆ ಮಾತ್ರ ನೀವು ಖರ್ಚು ಮಾಡ್ಬೇಕಾಗುತ್ತದೆ. ಒಂದ್ವೇಳೆ ನಿಮಗೆ ನೃತ್ಯ ಬರ್ತಿಲ್ಲವೆಂದ್ರೆ ನೀವು ನೃತ್ಯ ಶಿಕ್ಷಕರನ್ನು ನೇಮಿಸಿಕೊಂಡು ನೃತ್ಯ ಅಕಾಡೆಮಿ ನಡೆಸಬಹುದು.