ದೇಶದಲ್ಲಿ ಮತ್ತೆ ಚಿನ್ನದ ಬೆಲೆಯು ಏರಿಕೆಯಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ 99.5 ಶುದ್ಧತೆಯ ಚಿನ್ನದ ಬೆಲೆಯು 2400 ರು. ಏರಿಕೆಯಾಗಿ, 10 ಗ್ರಾಂಗೆ 1,14,800 ರು.ಗೆ ತಲುಪಿದೆ. ಇದು ಸಾರ್ವಕಾಲಿಕ ದಾಖಲೆ. ಜೊತೆಗೆ ಬೆಳ್ಳಿ ಬೆಲೆಯು 2500 ರು. ಏರಿಕೆಯಾಗಿ ಕೇಜಿಗೆ ದಾಖಲೆಯ 1,32,700 ರು.ಗೆ ಜಿಗಿದಿದೆ.
ನವದೆಹಲಿ : ದೇಶದಲ್ಲಿ ಮತ್ತೆ ಚಿನ್ನದ ಬೆಲೆಯು ಏರಿಕೆಯಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ 99.5 ಶುದ್ಧತೆಯ ಚಿನ್ನದ ಬೆಲೆಯು 2400 ರು. ಏರಿಕೆಯಾಗಿ, 10 ಗ್ರಾಂಗೆ 1,14,800 ರು.ಗೆ ತಲುಪಿದೆ. ಇದು ಸಾರ್ವಕಾಲಿಕ ದಾಖಲೆ. ಜೊತೆಗೆ ಬೆಳ್ಳಿ ಬೆಲೆಯು 2500 ರು. ಏರಿಕೆಯಾಗಿ ಕೇಜಿಗೆ ದಾಖಲೆಯ 1,32,700 ರು.ಗೆ ಜಿಗಿದಿದೆ.
ಅಮೆರಿಕದಲ್ಲಿನ ಕಾರ್ಮಿಕ ನೀತಿ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತದಿಂದಾಗಿ ಹೂಡಿಕೆದಾರರು ಅಮೂಲ್ಯ ಲೋಹದ ಕಡೆಗೆ ಚಿತ್ತ ಹರಿಸಿದ್ದಾರೆ. ಹೀಗಾಗಿ ಚಿನ್ನದ ಬೆಲೆಯು ಜಿಗಿದಿದೆ. ಸೋಮವಾರ ಬೆಂಗಳೂರಿನಲ್ಲಿ 10 ಗ್ರಾಂ 99.5 ಶುದ್ಧತೆಯ ಚಿನ್ನ 1,12,400 ರು. ಇತ್ತು.
ಇದೇ ವೇಳೆ, ಬೆಳ್ಳಿ ಕೇಜಿಗೆ 1,30,200 ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 99.9 ಶುದ್ಧತೆಯ ಚಿನ್ನ 10 ಗ್ರಾಂಗೆ 5,080 ರು. ಏರಿಕೆಯಾಗಿ 1,12,750 ರು.ಗೆ ತಲುಪಿದೆ. ಬೆಳ್ಳಿ 2,800 ರು. ಜಿಗಿದು, ಕೇಜಿಗೆ 1,28,800 ರು.ಗೆ ತಲುಪಿದೆ.
21.43 ಕೆಜಿ ತೂಕದ 24 ಕ್ಯಾರೆಟ್ ಚಿನ್ನದ ಗಟ್ಟಿಗಳು ವಶ
ಬೆಂಗಳೂರು : ಅಕ್ರಮ ಆನ್‌ಲೈನ್ ಬೆಟ್ಟಿಂಗ್ ದಂಧೆಯ ಆರೋಪದಲ್ಲಿ ಬಂಧಿತರಾಗಿರುವ ಶಾಸಕ ಕೆ.ಸಿ. ವೀರೇಂದ್ರ ಮತ್ತು ಇತರರ ವಿರುದ್ಧ ತನಿಖೆ ತೀವ್ರಗೊಂಡಿದ್ದು, ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಚಳ್ಳಕೆರೆಯಲ್ಲಿ ನಡೆಸಿದ ದಾಳಿಯಲ್ಲಿ ಬರೋಬ್ಬರಿ ರೂ. 24 ಕೋಟಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಗಟ್ಟಿಗಳನ್ನು ಜಪ್ತಿ ಮಾಡಿದ್ದಾರೆ. ಈ ಜಪ್ತಿಯೊಂದಿಗೆ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ ಒಟ್ಟು ಅಕ್ರಮ ಸಂಪತ್ತಿನ ಮೌಲ್ಯ ರೂ. 100 ಕೋಟಿಗೂ ಅಧಿಕವಾಗಿದೆ.
ಚಿನ್ನ ಮತ್ತು ಬೆಳ್ಳಿ ಜಪ್ತಿ:
ಸೆಪ್ಟೆಂಬರ್ 6, 2025 ರಂದು ಚಳ್ಳಕೆರೆಯಲ್ಲಿ ದಾಳಿ ನಡೆಸಿದ ಇ.ಡಿ ಅಧಿಕಾರಿಗಳು 21.43 ಕೆಜಿ ತೂಕದ 24 ಕ್ಯಾರೆಟ್ ಚಿನ್ನದ ಗಟ್ಟಿಗಳು, 10.985 ಕೆಜಿ ತೂಕದ 11 ಚಿನ್ನ ಲೇಪಿತ ಬೆಳ್ಳಿ ಗಟ್ಟಿಗಳು ಮತ್ತು ಸುಮಾರು 1 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಎಲ್ಲಾ ವಸ್ತುಗಳ ಮೌಲ್ಯ ಸುಮಾರು ರೂ. ₹24 ಕೋಟಿ ಎಂದು ಅಂದಾಜಿಸಲಾಗಿದೆ.
