ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇಂದು ಚಿನ್ನದ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದ್ರೆ, ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ.
ಬೆಂಗಳೂರು (ಡಿ.16): ಚಿನ್ನ (Gold) ಮತ್ತು ಬೆಳ್ಳಿ (Silver) ಖರೀದಿಸೋರು(Purchase), ಹೂಡಿಕೆ(Invest) ಮಾಡೋರು ಪ್ರತಿದಿನ ಮಾರುಕಟ್ಟೆ ದರವನ್ನು(Price) ಪರಿಶೀಲಿಸುತ್ತಲೇ ಇರುತ್ತಾರೆ. ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಏರಿಳಿತಗಳು ಸಹಜ. ಒಮ್ಮೆ ಬೆಲೆಯಲ್ಲಿ ಜಿಗಿತವಾದ್ರೆ, ಇನ್ನೊಮ್ಮೆ ಇಳಿಕೆ ಸಹಜ. ಆದ್ರೆ ಕೊರೋನಾ ಕಾಲಿಟ್ಟ ಬಳಿಕ ಚಿನ್ನದ ದರದಲ್ಲಿ ಗಮನಾರ್ಹ ಏರಿಕೆಯಾಯ್ತು. ಬೆಳ್ಳಿ ಬೆಲೆಯಲ್ಲಿ ಕೂಡ ಹೆಚ್ಚಳ ಕಂಡುಬಂದಿದೆ. ಆದ್ರೆ ಈ ವರ್ಷದ ಪ್ರಾರಂಭದಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡುಬರೋ ಮೂಲಕ ಜನಸಾಮಾನ್ಯರಿಗೆ ಸ್ವಲ್ಪ ಮಟ್ಟಿನ ನೆಮ್ಮದಿ ಸಿಕ್ಕಿತು. ಆದ್ರೆ ಒಮಿಕ್ರಾನ್ ವೈರಸ್ ಪ್ರಕರಣಗಳು ಜಗತ್ತಿನಲ್ಲಿ ಹೆಚ್ಚುತ್ತಿರೋದು ಈಗ ಚಿನ್ನ ಹಾಗೂ ಬೆಳ್ಳಿ ಬೆಲೆ ಮೇಲೆ ಪರಿಣಾಮ ಬೀರೋ ಸಾಧ್ಯತೆಯಿದೆ. ಅದಕ್ಕೆ ಪೂರಕವೆಂಬಂತೆ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡುಬಂದಿದೆ. ಇನ್ನು ಬೆಳ್ಳಿ ಬೆಲೆಯಲ್ಲಿ ಒಂದು ದಿನ ಏರಿಕೆ, ಮತ್ತೊಂದು ದಿನ ಇಳಿಕೆ ಪ್ರಕ್ರಿಯೆ ನಿರಂತರವಾಗಿ ನಡೆದಿದೆ. ನಿನ್ನೆ (ಡಿ.15) ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿತ್ತು. ಆದ್ರೆ ಇಂದು ಚೆನ್ನೈ ಹೊರತುಪಡಿಸಿ ಉಳಿದ ನಗರಗಳಲ್ಲಿ ಮತ್ತೆ ಇಳಿಕೆ ದಾಖಲಾಗಿದೆ. ಇನ್ನು ಬೆಳ್ಳಿ ಬೆಲೆಯಲ್ಲಿ ಹಾವು-ಏಣಿ ಆಟ ಇಂದು ಕೂಡ ಮುಂದುವರಿದಿದೆ. ನಿನ್ನೆ ಇಳಿಕೆ ಕಂಡಿದ್ದ ಬೆಳ್ಳಿ ಬೆಲೆಯಲ್ಲಿ ಇಂದು ಏರಿಕೆಯಾಗಿದೆ. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು (ಡಿ.16) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ(Bengaluru) ದರ ಎಷ್ಟಿದೆ?
ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 45,000ರೂ. ಇದ್ದು,ಇಂದು 10ರೂ. ಇಳಿಕೆ ಕಾಣೋ ಮೂಲಕ 44, 990ರೂ. ತಲುಪಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 49,100ರೂ. ಇದ್ದು,ಇಂದು 10ರೂ. ಇಳಿಕೆ ದಾಖಲಿಸೋ ಮೂಲಕ 49,090ರೂ. ತಲುಪಿದೆ. ಒಂದು ಕೆ.ಜಿ. ಬೆಳ್ಳಿ ಬೆಲೆಯಲ್ಲಿ 500ರೂ. ಏರಿಕೆಯಾಗಿದೆ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 60,900ರೂ. ಇತ್ತು. ಇಂದು 61,400ರೂ. ಇದೆ.
Petrol Diesel Rate: ರಾಜ್ಯದಲ್ಲಿ ಇಂದು ಪೆಟ್ರೋಲ್ ದರದಲ್ಲಿ ಏರಿಕೆಯಾಗಿದೆಯಾ? ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?
ದೆಹಲಿಯಲ್ಲಿ(Delhi) ಹೇಗಿದೆ?
ದೆಹಲಿಯಲ್ಲಿ ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 47,150ರೂ. ಇತ್ತು. ಇಂದು 10ರೂ. ಇಳಿಕೆ ಕಂಡು 47,140ರೂ. ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ. ಇಳಿಕೆಯಾಗಿದೆ. ನಿನ್ನೆ 51,430ರೂ. ಇದ್ದ ಚಿನ್ನದ ದರ ಇಂದು 51,420ರೂ. ತಲುಪಿದೆ. ಒಂದು ಕೆ.ಜಿ. ಬೆಳ್ಳಿ ದರದಲ್ಲಿ ನಿನ್ನೆಗಿಂತ ಇಂದು 500ರೂ. ಏರಿಕೆಯಾಗಿದ್ದು, 61,400ರೂ. ಆಗಿದೆ. ನಿನ್ನೆ 60,900ರೂ. ಇತ್ತು.
ಮುಂಬೈನಲ್ಲಿ(Mumbai) ಎಷ್ಟಿದೆ?
ಮುಂಬೈನಲ್ಲಿ ಕೂಡ ಇಂದು ಚಿನ್ನದ ದರದಲ್ಲಿ 10ರೂ. ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 46,910ರೂ.ಇದ್ದು, ಇಂದು 46,900ರೂ. ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 47,910ರೂ. ಇತ್ತು, ಇಂದು 10ರೂ. ಇಳಿಕೆಯಾಗಿ 47,900ರೂ. ಆಗಿದೆ. ಬೆಳ್ಳಿ ದರದಲ್ಲಿಇಂದು 500ರೂ. ಏರಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 60,900ರೂ. ಇದ್ದು, ಇಂದು 61,400ರೂ. ಆಗಿದೆ.
ಚಾನೆಲ್ ಸಿಇಒ ಹುದ್ದೆಗೆ ಭಾರತೀಯ ಮೂಲದ Leena Nair ನೇಮಕ
ಚೆನ್ನೈಯಲ್ಲಿ(Chennai) ದರ ಹೀಗಿದೆ
ಚೆನ್ನೈಯಲ್ಲಿ ಕೂಡ ಇಂದು ಚಿನ್ನದ ದರದಲ್ಲಿ 260ರೂ. ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 45,450ರೂ.ಇದೆ. ನಿನ್ನೆ 45,190ರೂ. ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 49,300ರೂ. ಇದ್ದು, ಇಂದು 290ರೂ.ಏರಿಕೆಯಾಗಿ 49,300ರೂ. ಆಗಿದೆ. ಬೆಳ್ಳಿ ದರದಲ್ಲಿ 500ರೂ. ಏರಿಕೆಯಾಗಿದ್ದು, ಇಂದು ಒಂದು ಕೆ.ಜಿ. ಬೆಳ್ಳಿಗೆ 65,100ರೂ.ಇದೆ. ನಿನ್ನೆ 64,600ರೂ. ಇತ್ತು.
"
