Asianet Suvarna News Asianet Suvarna News

ಜೂ.1ರಿಂದ ಚಿನ್ನಾಭರಣಕ್ಕೆ ಹಾಲ್‌ಮಾರ್ಕ್ ಕಡ್ಡಾಯ ಜಾರಿ: ಕೇಂದ್ರದ ಸ್ಪಷ್ಟನೆ

ಚಿನ್ನಾಭರಣಗಳು ಮತ್ತು ಕಲಾಕೃತಿಗಳಿಗೆ ಹಾಲ್‌ ಮಾರ್ಕ್ ಮುದ್ರೆ ಬಳಕೆ| ಜೂ.1ರಿಂದ ಚಿನ್ನಾಭರಣಕ್ಕೆ ಹಾಲ್‌ಮಾರ್ಕ್ ಕಡ್ಡಾಯ ಜಾರಿ: ಕೇಂದ್ರದ ಸ್ಪಷ್ಟನೆ

Gold Hallmark Mandatory From June 1 pod
Author
Bangalore, First Published Apr 15, 2021, 1:49 PM IST

ನವದೆಹಲಿ(ಏ.15): ಚಿನ್ನಾಭರಣಗಳು ಮತ್ತು ಕಲಾಕೃತಿಗಳಿಗೆ ಹಾಲ್‌ ಮಾರ್ಕ್ ಮುದ್ರೆ ಬಳಕೆ ಜೂ.1ರಿಂದ ಕಡ್ಡಾಯಗೊಳಿಸಲಾಗುವುದು ಎಂದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

70 ವರ್ಷದ ವಿದ್ಯಾರ್ಥಿನಿಗೆ ಚಿನ್ನದ ಪದಕ!

ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್ ಪ್ರಮಾಣಪತ್ರ ನೀಡುವ ವ್ಯವಸ್ಥೆಯನ್ನು 2019ರ ನವೆಂಬರ್‌ನಲ್ಲೇ ಘೋಷಿಸಿದ್ದ ಸರ್ಕಾರ, ಚಿನ್ನಭರಣ ವರ್ತಕರು ಬ್ಯೂರೋ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್‌ (ಬಿಐಎಸ್‌)ನಲ್ಲಿ ನೋಂದಣಿ ಮಾಡಿಕೊಳ್ಳಲು ಒಂದು ವರ್ಷಕ್ಕಿಂತ ಹೆಚ್ಚಿನ ಕಾಲಾವಕಾಶ ನೀಡತ್ತು. ಬಳಿಕ 2021 ಜ.15ರಂದು ಹಾಲ್‌ಮಾರ್ಕ್ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಯೋಜಿಸಿತ್ತು.

ಅಧಿಕಾರಿಗಳ ಕಣ್ತಪ್ಪಿಸಲು ಪಾದದಲ್ಲಿ ಚಿನ್ನವಿಟ್ಟ ಖದೀಮನ ಬಂಧನ

ಬಳಿಕ ಗಡುವನ್ನು ಜೂ.1ರ ವರೆಗೆ ಮುಂದೂಡಿತ್ತು. ಇದೀಗ ಮತ್ತೊಮ್ಮೆ ಗಡುವು ವಿಸ್ತರಿಸುವ ಪ್ರಶ್ನೆಯೇ ಇಲ್ಲ. ಹಾಲ್‌ಮಾರ್ಕ್ ಜಾರಿಗೆ ಸರ್ಕಾರ ಸಂಪೂರ್ಣ ಸಜ್ಜಾಗಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಲೀನಾ ನಂದನ್‌ ತಿಳಿಸಿದ್ದಾರೆ.

Follow Us:
Download App:
  • android
  • ios