ಅಧಿಕಾರಿಗಳ ಕಣ್ತಪ್ಪಿಸಲು ಪಾದದಲ್ಲಿ ಚಿನ್ನವಿಟ್ಟ ಖದೀಮನ ಬಂಧನ
ದುಬೈನಿಂದ ಬೆಂಗಳೂರಿಗೆ ಬಂದಿದ್ದ ಆರೋಪಿ| ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ| ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ| ಪರಿಶೀಲನೆ ವೇಳೆ ಚಿನ್ನ ಪತ್ತೆ|
ಬೆಂಗಳೂರು(ಏ.14): ಪ್ರಯಾಣಿಕನೊಬ್ಬ ತನ್ನ ಕಾಲಿನ ಪಾದದಲ್ಲಿಟ್ಟುಕೊಂಡು ಬಂದಿದ್ದ ಚಿನ್ನವನ್ನ ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ ವಶಪಡಿಸಿಕೊಂಡ ಘಟನೆ ಇಂದು(ಬುಧವಾರ) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಬಂಧಿತನಿಂದ 5.42 ಲಕ್ಷ ರೂ. ಮೌಲ್ಯದ ಚಿನ್ನವನ್ನ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಲು ಪಾದದಲ್ಲಿ ಚಿನ್ನವಿಟ್ಟು ಬ್ಯಾಂಡೆಜ್ ಹಾಕಿದ್ದ ಎಂದು ತಿಳಿದು ಬಂದಿದೆ.
ಬೆಂಗಳೂರು: ಕೇರಳದಿಂದ ಬಸ್ಸಿನ ಲಗೇಜ್ ಬಾಕ್ಸಲ್ಲಿ ಗಾಂಜಾ ಸಾಗಾಟ
ಪರಿಶೀಲನೆ ವೇಳೆ ಅನುಮಾನಗೊಂಡು ಪರಿಶೀಲಿಸಿದಾಗ ಚಿನ್ನ ಪತ್ತೆಯಾಗಿದೆ ಎಂದು ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಯನ್ನ ವಶಕ್ಕೆ ಪಡೆದು ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.