Asianet Suvarna News Asianet Suvarna News

70 ವರ್ಷದ ವಿದ್ಯಾರ್ಥಿನಿಗೆ ಚಿನ್ನದ ಪದಕ!

70 ವರ್ಷದ ವೃದ್ಧೆಯೋರ್ವರು ಸಂಸ್ಕೃತದಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಪ್ರಧಾನ ಮಾಡಲಾಗಿದೆ. 

70 year old  Sanskrit Student Gets Gold Medal in bengaluru snr
Author
Bengaluru, First Published Apr 11, 2021, 8:29 AM IST

ಬೆಂಗಳೂರು (ಏ.11):  ಶನಿವಾರ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ 70 ವರ್ಷದ ಹಿರಿಯ ವಿದ್ಯಾರ್ಥಿನಿ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಯುವ ಜನರಿಗೆ ಸ್ಫೂರ್ತಿಯಾದರು.

ಮೈಸೂರು ಮಹಾರಾಜ ಕಾಲೇಜಿನ ಆರ್‌. ಅನುಸೂಯ ಅವರು ಶುಕ್ಲಯಜುರ್ವೇದ ಕ್ರಮಾಂತ(ಬಿ.ಎ) ವಿಷಯದಲ್ಲಿ ಪರಮಪೂಜ್ಯ ಶ್ರೀ ಚಿದಂಬರಮೂರ್ತಿ ಚಕ್ರವರ್ತಿ ಮಹಾಸ್ವಾಮಿ ಸ್ವರ್ಣ ಪದಕ ಪಡೆದಿದ್ದಾರೆ. ಮುಂದೆ ಧನಂತ ವಿಷಯವಾಗಿ ಉನ್ನತಾಧ್ಯಯನ ಮಾಡುವ ಅಭಿಲಾಷೆಯನ್ನು ಹೊಂದಿದ್ದಾರೆ.

ಖಾಸಗಿ ಶಾಲಾ ಶಿಕ್ಷಕರಿಗೆ ಗುಡ್‌ ನ್ಯೂಸ್ ನೀಡಿದ ಸರ್ಕಾರ! .

ಸ್ತ್ರೀರೋಗ ತಜ್ಞೆಯಾಗಿರುವ ಅನುಸೂಯ ಅವರು, ಮಹಾರಾಷ್ಟ್ರದ ಪುಣೆ, ಗುಜರಾತ್‌ ಸೇರಿದಂತೆ ದೇಶದ ವಿವಿಧೆಡೆ 36 ವರ್ಷಗಳ ಕಾಲ ಸೇನಾ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಮೈಸೂರಿನಲ್ಲಿ ತಮ್ಮ ವೈದ್ಯ ಸೇವೆ ಮುಂದುವರಿಸುತ್ತಿದ್ದಾರೆ. ಸಂಸ್ಕೃತದಲ್ಲಿ ಪದವಿ ಪಡೆಯಬೇಕೆಂಬ ಹಂಬಲದಿಂದ ವ್ಯಾಸಂಗ ಮಾಡಿ ಚಿನ್ನದ ಗೆಲವು ಪಡೆದಿದ್ದಾರೆ.

ಹಲವು ಪದವಿ:  ಅನುಸೂಯ ಅವರು ಎಂ.ಎ. ಪಿಎಚ್‌.ಡಿ, ಅಪ್ತಮಾಲಜಿಯಲ್ಲಿ ಎಂ.ಎಸ್‌, ಪ್ರಸೂತಿ ವಿಭಾಗದಲ್ಲಿ ಎಂ.ಡಿ ಹಾಗೂ ಆಕ್ಯೂಪಂಚರ್‌ ವಿಭಾಗದಲ್ಲಿ ಎಂ.ಡಿ ಪದವಿಯನ್ನು ಪಡೆದು, ಸ್ತ್ರೀರೋಗ ಹಾಗೂ ನೇತ್ರತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಸೇನೆಯಲ್ಲಿ ಸೇವೆ ಸಲ್ಲಿಸಿದ್ದರಿಂದ ಉತ್ಸಾಹ ಎಂದೂ ಕುಂದಲಿಲ್ಲ. ಗಾಯಾಳು ಯೋಧರಿಗೆ ಗುಜರಾತ್‌ನಲ್ಲಿದ್ದಾಗ ಚಿಕಿತ್ಸೆ ನೀಡಿದ್ದು ಇಂದಿಗೂ ಸ್ಮೃತಿಪಟಲದಲ್ಲಿ ಅಚ್ಚಾಗಿ ಉಳಿದೆ. ಸಂಸ್ಕೃತದ ಬಗ್ಗೆ ಆಸಕ್ತಿ ಹುಟ್ಟಿನಿಂದಲೂ ಇತ್ತು. ವೈದ್ಯೆಯಾಗಿ ಸಂಸ್ಕೃತ ಅಧ್ಯಯನಕ್ಕೆ ವಿಶೇಷ ಆಸಕ್ತಿ ವಹಿಸಿದ್ದೆ. ಮುಂದೆಯೂ ಸಂಸ್ಕೃತದಲ್ಲಿ ಉನ್ನತಾಧ್ಯಯನ ಮಾಡುತ್ತೇನೆ’ ಎಂದು ಆರ್‌. ಅನುಸೂಯ ಅವರು ಹೇಳಿದರು.

Follow Us:
Download App:
  • android
  • ios