ಬೆಂಗಳೂರು: ಚಿನ್ನವೂ ಹಣದುಬ್ಬರದ ವಿರುದ್ಧದ ಒಂದು ಪರಿಪೂರ್ಣ ಅಸ್ತ್ರವಾಗಿದೆ. ಹೂಡಿಕೆದಾರರು ಚಿನ್ನವನ್ನು ಪ್ರಮುಖ ಹೂಡಿಕೆಯಾಗಿ ನೋಡುತ್ತಿದ್ದಾರೆ. ಹೀಗಾಗಿ ಪ್ರತಿದಿನವೂ ಚಿನ್ನದ ದರದಲ್ಲಿ ಪ್ರತಿದಿನವೂ ಏರಿಳಿತವಿರುತ್ತದೆ. ಇಂದಿನ ಚಿನ ಬೆಳ್ಳಿ ದರ ಹೇಗಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. 

ಬೆಂಗಳೂರು: ಚಿನ್ನವೂ ಹಣದುಬ್ಬರದ ವಿರುದ್ಧದ ಒಂದು ಪರಿಪೂರ್ಣ ಅಸ್ತ್ರವಾಗಿದೆ. ಹೂಡಿಕೆದಾರರು ಚಿನ್ನವನ್ನು ಪ್ರಮುಖ ಹೂಡಿಕೆಯಾಗಿ ನೋಡುತ್ತಿದ್ದಾರೆ. ಹೀಗಾಗಿ ಪ್ರತಿದಿನವೂ ಚಿನ್ನದ ದರದಲ್ಲಿ ಪ್ರತಿದಿನವೂ ಏರಿಳಿತವಿರುತ್ತದೆ. ಇಂದಿನ ಚಿನ ಬೆಳ್ಳಿ ದರ ಹೇಗಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. 

ಹೆಣ್ಮಕ್ಕಳಿಗೆ ಚಿನ್ನವೆಂದರೆ ಅಚ್ಚುಮೆಚ್ಚು ಆದರೀಗ ಚಿನ್ನ ಹಾಗೂ ಬೆಳ್ಳಿ ದರ ಏರಿಕೆಯಾಗುತ್ತಿದ್ದು, ಚಿನ್ನ ಪ್ರಿಯರನ್ನು ನಿರಾಸೆಗೊಳಿಸಿದೆ. ಶುಭ ಕಾರ್ಯಗಳನ್ನಿಟ್ಟುಕೊಂಡವರು ಬೇರೆ ದಾರಿ ಇಲ್ಲದೇ ಚಿನ್ನ ಖರೀದಿಸುತ್ತಿದ್ದರೆ, ಇತ್ತ ಹೂಡಿಕೆಗಾಗಿ ಚಿನ್ನ ಖರೀದಿಸ ಹೊರಟವರು ತಮ್ಮ ಯೋಜನೆಯನ್ನು ಮುಂದಕ್ಕೆ ದೂಡುತ್ತಿದ್ದಾರೆ.

Sovereign Gold Bond:ಚಿನ್ನದ ಮೇಲಿನ ಹೂಡಿಕೆಗೆ ಒಳ್ಳೆಯ ಅವಕಾಶ; ಸೋಮವಾರ ಸಾವರಿನ್ ಗೋಲ್ಡ್ ಬಾಂಡ್ ಬಿಡುಗಡೆ

ಕೊರೋನಾ ಬಳಿಕ ಪೆಟ್ರೋಲ್‌ ಡಿಸೇಲ್ ಹಾಗೂ ಚಿನ್ನಾಭರಣಗಳ ದರದಲ್ಲಿ ಏರಿಕೆ ಕಂಡಿತ್ತು. ಪ್ರಸ್ತುತ ಪೆಟ್ರೋಲ್ ಡಿಸೇಲ್ ದರಗಳಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಂಡಿದೆ. ಆದರೆ ಚಿನ್ನದ ಬೆಲೆಯಲ್ಲಿ ಮಾತ್ರ ಯಾವುದೇ ಇಳಿಕೆ ಆಗಿಲ್ಲ. ಅದು ನಿರಂತರ ಏರುಮುಖವಾಗಿ ಸಾಗಿದೆ. ಇದು ಚಿನ್ನ ಕೊಳ್ಳುವವರಿಗೆ ಆಘಾತ ಉಂಟು ಮಾಡಿದೆ. ಬೆಂಗಳೂರಿನಲ್ಲಿ ಇಂದು ಚಿನ್ನ ದರ ಎಷ್ಟಿದೆ? ದೇಶದ ಪ್ರಮುಖ ನಗರಗಳಲ್ಲಿ ದರ ಹೇಗಿದೆ? ಎಂಬುದರ ವಿವರ ಇಲ್ಲಿದೆ. 

ಒಂದು ಗ್ರಾಂ (1GM)

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,765
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,198

ಎಂಟು ಗ್ರಾಂ (8GM)

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 38,120
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,584

ಹತ್ತು ಗ್ರಾಂ (10GM)

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 47,650
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 51,980

ನೂರು ಗ್ರಾಂ (100GM)

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,76,500
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,19,800

ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್

ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,680 ಆಗಿದ್ದರೆ ಚೆನ್ನೈನಲ್ಲಿ 47,750, ಮುಂಬೈ 47,650 ಹಾಗೂ ಕೋಲ್ಕತ್ತಾ ನಗರಗಳಲ್ಲಿ 47,680 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,680 ರೂ. ಆಗಿದೆ.

ಚಿನ್ನ ಖರೀದಿಸುವಾಗ ಹುಷಾರು, ಹೆಚ್ಚಿಗೆ ತೆಗೆದುಕೊಂಡ್ರೆ ಬೀಳುತ್ತೆ ಟ್ಯಾಕ್ಸ್ ಬರೆ

ಇಂದಿನ ಬೆಳ್ಳಿ ದರ

ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.

ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್

ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 609, ರೂ. 6,090 ಹಾಗೂ ರೂ. 60,900 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 66,300 ಆಗಿದ್ದರೆ ದೆಹಲಿಯಲ್ಲಿ 60,900 ಮುಂಬೈನಲ್ಲಿ 62,300 ಹಾಗೂ ಕೋಲ್ಕತ್ತದಲ್ಲೂ ರೂ. 60,900 ಗಳಾಗಿದೆ.