10 ಗ್ರಾಂ ಬಂಗಾರದ ಬೆಲೆ 39000 ರೂ ಗಡಿಗೆ

ಬಲು ದುಬಾರಿ ಬಂಗಾರ | ಗಗನಕ್ಕೇರುತ್ತಿದೆ ಬೆಲೆ | 10 ಗ್ರಾಂ ಬಂಗಾರಕ್ಕೆ 39,000 | ಬೆಲೆ ನೋಡಿ ಗ್ರಾಹಕನಿಗೆ ಶಾಕ್ ! 

Gold Price Hits New High on Back of Weaker Rupee reaches Rs 39 thousand Mark

ನವದೆಹಲಿ (ಆ. 23): ಬಂಗಾರದ ಬೆಲೆ ದಾಖಲೆ ಸೃಷ್ಟಿಸುವ ರೀತಿಯಲ್ಲಿ ಗಗನಕ್ಕೇರುತ್ತಿದೆ. ಗುರುವಾರವೂ ಚಿನಿವಾರ ಪೇಟೆಯಲ್ಲಿ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ 150 ರು. ಜಾಸ್ತಿಯಾಗಿದೆ.

ಸೆನ್ಸೆಕ್ಸ್‌ 587 ಅಂಕ, ರುಪಾಯಿ 26 ಪೈಸೆ ಕುಸಿತ

ಈಗ ಪ್ರತಿ 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 39,000 ಗಡಿ ತಲುಪಿದೆ. ಬೆಂಗಳೂರಿನಲ್ಲಿ ಗುರುವಾರ ಪ್ರತಿ 10 ಗ್ರಾಂ ಚಿನ್ನದ ಬೆಲೆ 38,940 ರು. ತಲುಪಿದೆ. ಕಳೆದ ಮೂರು ದಿನಗಳಿಂದಲೂ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದ್ದು, ಗುರುವಾರ ದೆಹಲಿ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನ 38,970 ರು. ದಾಖಲಾಗಿದೆ ಎಂದು ಅಖಿಲ ಭಾರತ ಚಿನ್ನದ ವ್ಯಾಪಾರಿಗಳ ಸಂಘ ತಿಳಿಸಿದೆ.

ಒಳಗಿರುವ ಚಿದಂಬರಂ ಆಸ್ತಿ ಎಷ್ಟು?: ಹೊರಗಿರುವುದು ತುಂಬಿ ತುಳುಕುವಷ್ಟು!

ಅದೇ ರೀತಿ ಬೆಳ್ಳಿ ಬೆಲೆಯೂ ಏರಿಕೆ ಕಂಡಿದ್ದು, ಪ್ರತಿ ಕೇಜಿ ಮೇಲೆ 60 ರು.ನಷ್ಟುಜಾಸ್ತಿಯಾಗಿ 45,100 ರು. ಗಡಿ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಕುಸಿದಿರುವುದು ಹಾಗೂ ಷೇರು ಪೇಟೆಯಲ್ಲಾದ ತಲ್ಲಣದ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲಾಗಿದೆ. ಚಿನ್ನಾಭರಣ ವರ್ತಕರು ನಿರಂತರವಾಗಿ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವುದೂ ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗಿದೆ.

 

Latest Videos
Follow Us:
Download App:
  • android
  • ios