40,000 ರು. ದಾಟಿ ಬಂದ ಚಿನ್ನದ ಬೆಲೆ!
40000 ರು. ದಾಟಿ ಬಂದ ಚಿನ್ನದ ಬೆಲೆ| ಮುಂಬೈ, ದೆಹಲಿ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ
ನವದೆಹಲಿ[ಆ.27]: ಜಾಗತಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೋಮವಾರ ಮುಂಬೈ ಮತ್ತು ದೆಹಲಿ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಅದರಲ್ಲೂ ಎರಡೂ ಪೇಟೆಗಳಲ್ಲಿ ಸೋಮವಾರ ಮಧ್ಯಂತರ ಅವಧಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ.ಗೆ 40100 ರು. ತಲುಪುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.
ಅಮೆರಿಕ- ಚೀನಾ ನಡುವಣ ವ್ಯಾಪಾರ ಬಿಕ್ಕಟ್ಟು, ಜಾಗತಿಕ ಆರ್ಥಿಕ ಹಿಂಜರಿಕೆ, ಮೊದಲಾದ ಕಾರಣಗಳಿಂದಾಗಿ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದೆ. ಆದರೆ ಅಂತಿಮವಾಗಿ ದೆಹಲಿ ಪೇಟೆಯಲ್ಲಿ ಆಭರಣದ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 675 ರು. ಏರಿಕೆ ಕಂಡು 39500 ರು.ಗೆ ಮತ್ತು ಶುದ್ಧ ಚಿನ್ನ 675 ರು. ಏರಿಕೆ ಕಂಡು 39670ರಲ್ಲಿ ಅಂತ್ಯವಾಗಿದೆ. ಇದು ಕೂಡಾ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ.
ಇದೇ ವೇಳೆ ದೆಹಲಿಯಲ್ಲಿ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 1450 ರು. ಏರಿಕೆ ಕಾಣುವ ಮೂಲಕ 46550 ರು.ಗೆ ತಲುಪಿದೆ.