ಬೆಂಗಳೂರು(ಅ.23): ಅಂತಾರಾಷ್ಟ್ರೀಯ ವ್ಯಾಪಾರದಲ್ಲಿನ ಬದಲಾವಣೆಗಳು, ದೇಶೀಯ ಮಾರುಕಟ್ಟೆಯ ಬೇಡಿಕೆಗಳಿಗೆ ಅನುಗುಣವಾಗಿ, ಹಳದಿ ಲೋಹದ ಬೆಲೆಯಲ್ಲಿ ನಿರಂತರವಾಗಿ ಇಳಿಕೆ ದಾಖಲಾಗುತ್ತಿದೆ.

ನಿರಂತರವಾಗಿ ಇಳಿಯುತ್ತಲೇ ಇದೆ ಚಿನ್ನ: ಅಳೆದು ತೂಗಿ ಕೊಂಡರೆ ಚೆನ್ನ!
ಅದರಲ್ಲೂ ಅಕ್ಟೋಬರ್ ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ದಾಖಲಾಗುತ್ತಿದ್ದು, ಆಭರಣ ಪ್ರೀಯರ ಮೊಗದಲ್ಲಿ ಹರ್ಷದ ಹೊನಲು ಹರಿಸಿರುವುದು ಸುಳ್ಳಲ್ಲ.

ಇಂದಿನ ಮಲ್ಟಿ ಕಮೋಡಿಟಿ ಎಕ್ಸಚೇಂಜ್‌ನಲ್ಲಿ ಚಿನ್ನದ ಬೆಲೆಯಲ್ಲಿ ಶೇ. 0.11ರಷ್ಟು ಇಳಿಕೆ ಕಂಡಿದ್ದು, 10 ಗ್ರಾಂ ಚಿನ್ನದ ಬೆಲೆ ಇದೀಗ 37,850 ರೂ. ಆಗಿದೆ.

ಒಂದು ತಿಂಗಳಲ್ಲಿ ಒಟ್ಟು 1,800 ರೂ. ಇಳಿದ ಬಂಗಾರದ ಬೆಲೆ!

ಕಳೆದ ತಿಂಗಳಲ್ಲಿ 40 ಸಾವಿರ ರೂ. ಗಡಿ ದಾಟಿದ್ದ ಚಿನ್ನದ ದರ, ಕೇವಲ ಒಂದು ತಿಂಗಳ ಅವಧಿಯಲ್ಲಿ 2,150 ರೂ.ನಷ್ಟು ಇಳಿದಿದೆ. ಕಳೆದ ಮೂರು ದಿನಗಳ ಅವಧಿಯಲ್ಲೇ ಗಣನೀಯವಾಗಿ ಇಳಿಕೆ ಕಂಡಿದೆ.

ಅದರಂತೆ ಬೆಳ್ಳಿ ಬೆಲೆಯಲ್ಲೂ ತುಸು ಇಳಿಕೆ ಕಂಡು ಬಂದಿದ್ದು, ಮಲ್ಟಿ ಕಮೋಡಿಟಿ ಎಕ್ಸಚೇಂಜ್‌ನಲ್ಲಿ ಶೇ.0.01ರಷ್ಟು ಕಡಿಮೆಯಾಗಿದೆ. ಒಂದು ಕೆಜಿ ಬೆಳ್ಳಿ ಬೆಲೆ ಇದೀಗ 45,387 ರೂ.ಆಗಿದೆ.

2 ಸಾವಿರ ರೂ. ಇಳಿದ ಬಂಗಾರ: 10 ಗ್ರಾಂ ಗೆ ಟೊಟಲ್ ಬೆಲೆ ಎಷ್ಟಂದ್ರ?

ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಚಿನ್ನ-ಬೆಳ್ಳಿ ಬೆಲೆಗಳಲ್ಲಿ ಇಳಿಕೆಯಾಗಿರುವುದು, ದೇಶೀಯ ಮಾರುಕಟ್ಟೆಯಲ್ಲಿ ಖರೀದಿ ಭರಾಟೆಗೆ ಕಾರಣವಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಪ್ರತಿ ಔನ್ಸ್‌ಗೆ 1,484.12 ಡಾಲರ್ ಆಗಿದೆ. ಅಮೆರಿಕ-ಚೀನಾ ನಡುವಿನ ವಾಣಿಜ್ಯ ಸಮರದ ಕಾವು ಕಡಿಮೆಯಾಗುತ್ತಿರುವುದು ಬೆಲೆ ಇಳಿಕೆಗೆ ಕಾರಣ ಎಂದು ನಂಬಲಾಗಿದೆ.

3 ದಿನ ಆಯ್ತು ಬಂಗಾರದ ಬೆಲೆ ಇಳಿದು: ಖರೀದಿ ಮಾಡಲ್ವಾ ತಿಳಿದೂ ತಿಳಿದು!

ಅಕ್ಟೋಬರ್ 23ರ ಟಾಪ್ 10 ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: