Asianet Suvarna News Asianet Suvarna News

ಚಿನ್ನ ಹೊಸ ದಾಖಲೆ: ಈಗ 10 ಗ್ರಾಂಗೆ 40,220 ರೂ.!

ಚಿನ್ನ ಹೊಸ ದಾಖಲೆ: ಈಗ 10 ಗ್ರಾಂಗೆ 40,220 ರೂ.!| ಇದೇ ವಾರದ ಆರಂಭದಲ್ಲಿ ₹40೦ ಸಾವಿರ ಗಡಿ ದಾಟಿ ಕೆಳಗೆ ಇಳಿದಿದ್ದ ಚಿನ್ನ

Gold price tops record Rs 40000 mark as recession fears deepen
Author
Bangalore, First Published Aug 30, 2019, 8:04 AM IST

ನವದೆಹಲಿ[ಆ.30]: ಜಾಗತಿಕ ಬೆಳವಣಿಗೆ ಹಾಗೂ ಬಂಗಾರದ ಮೇಲೆ ಹೂಡಿಕೆಯು ಸುರಕ್ಷಿತ ಎಂಬ ಸಾರ್ವಜನಿಕರ ನಂಬಿಕೆ ಪರಿಣಾಮ ಗುರುವಾರವೂ ಚಿನ್ನದ ಬೆಲೆ ಮತ್ತಷ್ಟು ಗಗನಕ್ಕೇರಿದೆ.

ಒಂದೇ ದಿನ 10 ಗ್ರಾಂ ಚಿನ್ನ ದ ದರ ₹250 ಏರಿಕೆಯಾ ಗಿ ₹40,220ಗೆ ತಲುಪಿ, ವಹಿವಾಟು ಮುಗಿಸಿದೆ. ಇದೇ ವಾರದ ಆರಂಭದಲ್ಲಿ ₹40೦ ಸಾವಿರ ಗಡಿ ದಾಟಿ ಕೆಳಗೆ ಇಳಿದಿದ್ದ ಚಿನ್ನ, ₹40 ಸಾವಿರ ಮೇಲೆ ವಹಿವಾ ಟು ಮುಗಿಸುತ್ತಿರುವುದು ಚಿನಿವಾರ ಪೇಟೆ ಇತಿಹಾಸದ ಲ್ಲಿ ಇದೇ ಮೊದಲು.

ಏತನ್ಮಧ್ಯೆ, ನಾಣ್ಯ ತಯಾರಕರು, ಜಾಗತಿಕ ಮಾರುಕಟ್ಟೆ ಹಾಗೂ ಉದ್ಯಮ ಘಟಕಗಳಿಂದ ಬೇಡಿಕೆಯಿಂದ ಕೇಜಿ ಬೆಳ್ಳಿ ದರ ₹200 ಏರಿದ್ದು, ಬೆಳ್ಳಿಗೆ ₹49,050 ಬೆಲೆ ನಿಗದಿಯಾಗಿದೆ.

Follow Us:
Download App:
  • android
  • ios