ಜೆನ್‌ ಝೀ ಪೀಳಿಗೆಯವರು ಮದ್ಯಪಾನವನ್ನು ಕಡಿಮೆ ಮಾಡಿರುವುದರಿಂದ ಜಾಗತಿಕ ಮದ್ಯೋದ್ಯಮವು ಕಳೆದ 4 ವರ್ಷಗಳಲ್ಲಿ 75 ಲಕ್ಷ ಕೋಟಿ ರೂಪಾಯಿಗಳಷ್ಟು ಭಾರಿ ನಷ್ಟವನ್ನು ಅನುಭವಿಸಿದೆ. ಮಿಲೇನಿಯಲ್‌ಗಳಿಗೆ ಹೋಲಿಸಿದರೆ ಜೆನ್‌ ಝೀಗಳು ಶೇ.20ರಷ್ಟು ಕಡಿಮೆ ಕುಡಿಯುತ್ತಿದ್ದಾರೆ.

ನವದೆಹಲಿ: ಕಳೆದ 4 ವರ್ಷಗಳಲ್ಲಿ ಜಾಗತಿಕ ಮದ್ಯೋದ್ಯಮಕ್ಕೆ ಜೆನ್‌ಝೀಗಳಿಂದಾಗಿ ಬರೋಬ್ಬರಿ 75 ಲಕ್ಷ ಕೋಟಿ ರು. ನಷ್ಟವಾಗಿದೆ. ಇದು 2021ಕ್ಕೆ ಹೋಲಿಸಿದರೆ, ಪ್ರಮುಖ 50 ಮದ್ಯ ಕಂಪನಿಗಳ ಷೇರಿನಲ್ಲಿ ಶೇ.46ರಷ್ಟು ಕುಸಿತ ಎಂದು ಬ್ಲೂಂಬರ್ಗ್‌ ವರದಿ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶೇ.20ರಷ್ಟು ಕುಡಿತ ಕಡಿಮೆ

ಜೆನ್‌ ಝೀಗಳಲ್ಲಿ ಶೇ.21.5ರಷ್ಟು ಮಂದಿ ಮದ್ಯವನ್ನು ಮುಟ್ಟುವುದಿಲ್ಲವಾದರೆ, ಶೇ.39ರಷ್ಟು ಜನ ಅಪರೂಪಕ್ಕೆ ಕುಡಿಯುತ್ತಿದ್ದಾರೆ. ಅವರೂ ಸಹ ಮದ್ಯಕ್ಕೆ ದಾಸರಾಗುವ ಬದಲು ಔಪಚಾರಿಕೆಗೆಂಬಂತೆ ಸ್ವಲ್ಪವೇ ಸೇವಿಸುತ್ತಿದ್ದಾರೆ. ಮಿಲೇನಿಯಲ್‌ಗಳಿಗೆ ಹೋಲಿಸಿದರೆ ಜೆನ್‌ಝೀಗಳು ಶೇ.20ರಷ್ಟು ಕುಡಿತ ಕಡಿಮೆ ಮಾಡಿದ್ದಾರೆ. ಇದಕ್ಕೆ ಮದ್ಯಪಾನದಿಂದ ಆಗುವ ಹಾನಿಯ ಬಗ್ಗೆ ಹೆಚ್ಚಿದ ಅರಿವು, ದರ ಹೆಚ್ಚಳ, ಕೆಲ ಕಡೆ ನಿಷೇಧ, ಪರ್ಯಾಯ ವಸ್ತುಗಳ ಕಡೆಗಿನ ಆಕರ್ಷಣೆ ಪ್ರಮುಖ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: Bagalkot Shivaji Jayanti postponed: ನಾಳೆ ನಡೆಯಬೇಕಿದ್ದ ಭವ್ಯ ಶಿವಾಜಿ ಜಯಂತಿ, ಶೋಭಾಯಾತ್ರೆ ಈ ಒಂದು ಕಾರಣಕ್ಕೆ ದಿಢೀರ್ ಮುಂದೂಡಿಕೆ!

ಆತಂಕವೇಕೆ?:

ನಡುವಯಸ್ಕರಲ್ಲಿ ಮದ್ಯ ಸೇವನೆ ಕಡಿಮೆ ಮಾಡುವ ಟ್ರೆಂಡ್‌ ಕಂಡುಬಂದಿದ್ದರೆ ಮದ್ಯದ ಕಂಪನಿಗಳು ಇಷ್ಟು ಆತಂಕಪಡುವ ಅಗತ್ಯವಿರಲಿಲ್ಲವೇನೋ. ಆದರೆ ಈಗ ಕುಡಿತ ಬಿಟ್ಟಿರುವುದು, ಸದ್ಯೋಭವಿಷ್ಯದ ಪ್ರಮುಖ ಗ್ರಾಹಕರಾಗಬೇಕಾಗಿದ್ದ ಜೆನ್‌ ಝೀಗಳು. ಇದು ಹೀಗೇ ಮುಂದಿನ ಜೆನ್‌ ಆಲ್ಫಾಗೆ ವರ್ಗವಾದರೆ ಅಥವಾ ಇನ್ನೂ ಕಡಿಮೆಯಾದರೆ ಜಾಗತಿಕವಾಗಿ ಎಲ್ಲಾ ಮದ್ಯ ಕಂಪನಿಗಳು ಭಾರೀ ನಷ್ಟ ಅನುಭವಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಮನೆ ಅಂಗಳದಲ್ಲಿ 8-12 ಅಡಿಯ 6 ಹೆಬ್ಬಾವು ಪ್ರತ್ಯಕ್ಷ! ಒಂದೆಡೆ ಇಷ್ಟೊಂದು ಹಾವು ಬಂದಿದ್ಯಾಕೆ?