ಕೃತಕ ಬುದ್ಧಿಮತ್ತೆ (AI) ಪ್ರಭಾವದಿಂದಾಗಿ ಉದ್ಯೋಗ ನಷ್ಟದ ಜೊತೆಗೆ ಇದೀಗ ಬಿಲಿಯನ್ ಡಾಲರ್ ಮೌಲ್ಯದ ಬಹುರಾಷ್ಟ್ರೀಯ ಕಂಪನಿಗಳು ದಿವಾಳಿಯಾಗುತ್ತಿವೆ. ಫೋಟೋಗ್ರಫಿ ಕ್ಷೇತ್ರವನ್ನು ಆಳುತ್ತಿದ್ದ 4.8 ಬಿಲಿಯನ್ ಡಾಲರ್ ಮೌಲ್ಯದ ಗೆಟ್ಟಿ ಇಮೇಜಸ್ ಕಂಪನಿಯು ಎಐ ಹೊಡೆತಕ್ಕೆ ಸಿಲುಕಿ ಇದೀಗ ದಿವಾಳಿತನ ಘೋಷಿಸಿದೆ.
ಎಐ ಬಂದ ಬಳಿಕ ಕಾರ್ಪೊರೇಟ್ ಕ್ಷೇತ್ರಗಳಲ್ಲಿ ಉದ್ಯೋಗ ನಷ್ಟ ಆತಂಕ ಹೆಚ್ಚುತ್ತಲೇ ಇದೆ. ಈ ನಡುವೆ ಉದ್ಯೋಗಗಳಷ್ಟೇ ಅಲ್ಲದೆ ಬಿಲಿಯನ್ ಡಾಲರ್ ವ್ಯವಹಾರ ನಡೆಸುತ್ತಿದ್ದ ಬಹುರಾಷ್ಟ್ರೀಯ ಕಂಪನಿಗಳೇ ಎಐ ಹೊಡೆತಕ್ಕೆ ನಷ್ಟದ ಸುಳಿಗೆ ಸಿಲುಕಿ ದಿವಾಳಿ ಆಗುತ್ತಿವೆ. ಎಐ ನೇರ ಹೊಡೆತಕ್ಕೆ ದಿವಾಳಿಯೆದ್ದ ಮೊದಲ ಕಂಪನಿ ಎಂದರೆ ಗೆಟ್ಟಿ(Getty) ಇಮೇಜ್
Getty ಕಂಪನಿ ಯಾರಿಗೆ ತಾನೇ ಗೊತ್ತಿಲ್ಲ?
ಯಾವುದೇ ವಿಷಯಕ್ಕೆ ಸಂಬಂಧಿಸಿದ ಚಿತ್ರ ಬೇಕೆಂದರೆ ಕೊಡುತ್ತಿದ್ದ Getty image. ಬಹುತೇಕ ಮಾಧ್ಯಮಗಳಂತೂ ಸುದ್ದಿಗೆ ಬೇಕಾದ ಚಿತ್ರಗಳಿಗೆ Getty ಯನ್ನೇ ಅವಲಂಭಿಸಿದ್ದವು. ಅಲ್ಲದೆ ಗೂಗಲ್ನಲ್ಲಿ ಯಾವುದೇ ವಿಷಯದ ಇಮೇಜ್ ಸರ್ಚ್ ಮಾಡಿದ್ರೂ ಅಲ್ಲಿ Getty images ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು. ಒಂದು ವರದಿಯ ಪ್ರಕಾರ 4.8 ಬಿಲಿಯನ್ ಡಾಲರ್ ಮೌಲ್ಯ ಹೊಂದಿದ್ದ ಈ ಕಂಪನಿ ಇಂದು ಎಐ ಪರಿಣಾಮವಾಗಿ ಸಾಲ, ನಷ್ಟದ ಹೊರೆ ತಾಳಲಾಗದೆ ದಿವಾಳಿಯಾಗಿರುವುದು ಘೋಷಿಸಿದೆ!
ಹೌದು. ಗೆಟ್ಟಿ ಇಮೇಜಸ್ (Getty Images) ಕಂಪನಿ ಡೆಲಾವೇರ್ನಲ್ಲಿ ‘ಚಾಪ್ಟರ್ 11’ ಬ್ಯಾಂಕ್ರಪ್ಸಿ (ದಿವಾಳಿತನ) ಅರ್ಜಿಸಲ್ಲಿಸಿದೆ. ಹೀಗಾಗಿ ಕಂಪನಿಯನ್ನು ಖಾಸಗೀಕರಣಗೊಳಿಸುವ ಯೋಜನೆಯಿಂದಾಗಿ ಗೆಟ್ಟಿ ಕಂಪನಿಯಲ್ಲಿ ಹೂಡಿಕೆ ಮಾಡಿದ್ದ ಷೇರುದಾರರು ಸಂಪೂರ್ಣ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಫೋಟೋಗ್ರಾಫಿ ಕ್ಷೇತ್ರವನ್ನೇ ಬುಡಮೇಲು ಮಾಡಿದ ಎಐ!
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಬದ ನಂತರ ಐಟಿ ಕ್ಷೇತ್ರಗಳಷ್ಟೇ ಅಲ್ಲದೆ ಫೋಟೋಗ್ರಫಿ ಕ್ಷೇತ್ರವನ್ನೇ ಬುಡಮೇಲು ಮಾಡಿಹಾಕಿದೆ. ಅದಕ್ಕೆ ಮೊದಲ ಬಲಿಯೇ ಗೆಟ್ಟಿ ಕಂಪನಿ. ಎಐ ಬಂದ ಬಳಿಕ ಗೆಟ್ಟಿ ಮಾಧ್ಯಮಗಳು ಸೇರಿ ಜನಸಾಮಾನ್ಯರು ಎಐ ಚಿತ್ರವನ್ನೇ ಅವಲಂಬಿಸಿರುವುದರಿಂದ ಗೆಟ್ಟಿ ನಷ್ಟದಲ್ಲಿದೆ. ಹೀಗಾಗಿ ಇತ್ತೀಚೆಗೆ ಅಂದರೆ 2026ರ ಅಕ್ಟೋಬರ್ 21ರಂದು ಸಲ್ಲಿಸಲಾದ ದಿವಾಳಿ ಘೋಷಣೆ ಅರ್ಜಿಗೆ ಬೃಹತ್ ಸಾಲದ ಹೊರೆ, ಹೂಡಿಕೆದಾರರ ಕಾನೂನು ಹೋರಾಟ,ಶಟರ್ಸ್ಟಾಕ್ (Shutterstock) ಜೊತೆಗಿನ ವಿಲೀನ ಮುರಿದುಬಿದ್ದಿರುವುದು ಪ್ರಮುಖ ಕಾರಣಗಳಾಗಿವೆ.







