Price Hike: ಸೋಪು, ಶ್ಯಾಂಪುನಿಂದ ಹಿಡಿದು ಟಿವಿ, ಎಸಿ ತನಕ ಎಲ್ಲವೂ ದುಬಾರಿ; ಇದಕ್ಕೇನು ಕಾರಣ? ಇಲ್ಲಿದೆ ಮಾಹಿತಿ

*ನಿತ್ಯ ಬಳಕೆ ವಸ್ತುಗಳ ಬೆಲೆಯೇರಿಕೆಯಿಂದ ಜನಸಾಮಾನ್ಯರು ತತ್ತರ
*ಚಿಲ್ಲರೆ ಹಣದುಬ್ಬರ ಏರಿಕೆ ಪ್ರಭಾವ ವಿವಿಧ ಉತ್ಪನ್ನಗಳ ಎಂಆರ್ ಪಿಯಲ್ಲಿ ಗೋಚರ
*ಇಂಡೋನೇಷ್ಯಾದ ತಾಳೆ ಎಣ್ಣೆ ರಫ್ತು ನಿಷೇಧದಿಂದ ಸೋಪು, ಶಾಂಪು, ಬಿಸ್ಕೆಟ್ಸ್ ದುಬಾರಿ

From Soap Shampoo To TV AC Price Hike Pressure To Continue Across Sectors Know Why

Business Desk:ದೇಶದಲ್ಲಿ ಪ್ರಸ್ತುತ ಹಣದುಬ್ಬರ (Inflation) ಬಹು ಚರ್ಚೆಯ ವಿಷಯವಾಗಿದೆ. ಏಪ್ರಿಲ್ ನಲ್ಲಿ ಗ್ರಾಹಕ ದರ ಸೂಚ್ಯಂಕ (CPI) ಆಧಾರಿತ ಚಿಲ್ಲರೆ ಹಣದುಬ್ಬರ (Retail inflation) ಎಂಟು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದರೆ, ಸಗಟು ಹಣದುಬ್ಬರ (Wholesale Inflation) ದರ ಕೂಡ 14 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಶೇ.15ರ ಗಡಿ ದಾಟಿದೆ. ಹೆಚ್ಚುತ್ತಿರುವ ಚಿಲ್ಲರೆ ಹಣದುಬ್ಬರದ ಪ್ರಭಾವ ಈಗಾಗಲೇ ವಿವಿಧ ಉತ್ಪನ್ನಗಳ ಎಂಆರ್ ಪಿಯಲ್ಲಿ ( MRP) ಗೋಚರಿಸಲು ಪ್ರಾರಂಭಿಸಿದೆ. ಅದ್ರಲ್ಲೂ ನಿತ್ಯ ಬಳಕೆಯ ಎಫ್ ಎಂಸಿಜಿ (FMCG) ಉತ್ಪನ್ನಗಳಾದ ಸೋಪ್ (Soap), ಶ್ಯಾಂಪು (Shampoo) ಹಾಗೂ ಬಿಸ್ಕೆಟ್ಸ್ (biscuits) ಬೆಲೆಯಲ್ಲಿ ಹೆಚ್ಚಳವಾಗಿದೆ. ಹಾಗೆಯೇ ಟಿವಿ (TV), ಎಸಿ (AC) ಹಾಗೂ ಹೋಟೆಲ್ ದರಗಳು ಕೂಡ ಏರಿಕೆ ಹಾದಿಯಲ್ಲಿವೆ. 

ಇತ್ತೀಚೆಗೆ ಇಂಡೋನೇಷ್ಯಾ (Indonesia) ತಾಳೆ ಎಣ್ಣೆ (palm oil) ರಫ್ತಿನ (export) ಮೇಲೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಭಾರತಕ್ಕೆ ಪೂರೈಕೆ ನಿಂತಿದೆ. ಪರಿಣಾಮ ತಾಳೆ ಎಣ್ಣೆ ಬಳಕೆಯಾಗುವ ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಸೋಪು, ಶಾಂಪು, ನೂಡಲ್ಸ್, ಚಾಕೋಲೇಟ್ಸ್, ಬಿಸ್ಕೆಟ್ಸ್ ತಯಾರಿಕೆಯಲ್ಲಿ ತಾಳೆ ಎಣ್ಣೆಯನ್ನು ಕಚ್ಚಾ ವಸ್ತುವನ್ನಾಗಿ ಬಳಸಲಾಗುತ್ತದೆ. ಹೀಗಾಗಿ ತಾಳೆ ಎಣ್ಣೆ ಕೊರತೆ ಕೇವಲ ಅದರ ಬೆಲೆಯನ್ನು ಮಾತ್ರವಲ್ಲ, ಅದನ್ನು ತಯಾರಿಕೆಯಲ್ಲಿ ಬಳಸುವ ಉತ್ಪನ್ನಗಳ ಉತ್ಪಾದನ ವೆಚ್ಚವನ್ನು ಕೂಡ ಹೆಚ್ಚಿಸಿದೆ. ಪರಿಣಾಮ ತಾಳೆ ಎಣ್ಣೆ ಕಚ್ಚಾ ವಸ್ತುವಾಗಿ ಬಳಸಲ್ಪಡುವ ಎಲ್ಲ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗಿದೆ.

Ban On Food Export:ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಆಹಾರ ರಫ್ತಿನ ಮೇಲೆ ನಿಷೇಧ ಹೇರಲು ಕಾರಣವೇನು? ಇಲ್ಲಿದೆ ಮಾಹಿತಿ

ಭಾರತದಲ್ಲಿ ಎಫ್ ಎಂಸಿಜಿ (FMCG) ಉತ್ಪನ್ನಗಳ ತಯಾರಿಕೆಯಲ್ಲಿ ಜನಪ್ರಿಯತೆ ಗಳಿಸಿರುವ ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ (HUL) ತನ್ನ ಉತ್ಪನ್ನಗಳ ಬೆಲೆಯನ್ನು ಶೇ15ರಷ್ಟು ಹೆಚ್ಚಿಸಿದೆ. ಸನ್ ಸಿಲ್ಕ್ ಶ್ಯಾಂಪು ಬೆಲೆ 8ರೂ.-10 ರೂ. ಏರಿಕೆಯಾಗಿದೆ. ಹಾಗೆಯೇ 100ಎಂಎಲ್ ಕ್ಲಿನಿಕ್ ಪ್ಲಸ್ ಶ್ಯಾಂಪು ಬೆಲೆಯಲ್ಲಿ ಕೂಡ ಶೇ.15ರಷ್ಟು ಹೆಚ್ಚಳವಾಗಿದೆ. ಇನ್ನು ಪಿಯರ್ಸ್ 125 ಗ್ರಾಂ ಸೋಪಿನ ಬೆಲೆಯಲ್ಲಿ ಶೇ. 2.4 ಹಾಗೂ ಮಲ್ಟಿಪ್ಯಾಕ್ ಬೆಲೆಯಲ್ಲಿ ಶೇ.3.7 ಏರಿಕೆಯಾಗಿದೆ. ಲಕ್ಸ್ ಸೋಪ್ ಬೆಲೆಯಲ್ಲಿ ಶೇ.9ರಷ್ಟು ಹೆಚ್ಚಳವಾಗಿದೆ. ಗ್ಲೋ ಹಾಗೂ ಲವ್ಲಿ ಬೆಲೆಯಲ್ಲಿ ಶೇ.6-8 ಏರಿಕೆಯಾಗಿದ್ದರೆ, ಪಾಂಡ್ಸ್ ಟಾಲ್ಕಂ ಪೌಡರ್ ಬೆಲೆಯಲ್ಲಿ ಶೇ.5-7 ಹೆಚ್ಚಳವಾಗಿದೆ. ಇನ್ನು ಸ್ಕಿನ್ ಕ್ಲೆನ್ಸಿಂಗ್ ಬೆಲೆಯಲ್ಲಿ ಕೂಡ ಶೇ.3-20 ಹೆಚ್ಚಳ ಮಾಡಲಾಗಿದೆ. ಬ್ಲೂಮ್ ಬರ್ಗ್ ವರದಿ ಪ್ರಕಾರ ಸರ್ಫ್ ಎಕ್ಸೆಲ್ ಬೆಲೆ ಜನವರಿಯಲ್ಲಿ ಶೇ. 20ರಷ್ಟು ಏರಿಕೆ ಕಂಡಿದೆ. 

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ  ಟಿವಿ, ವಾಷಿಂಗ್ ಮಷಿನ್ ಹಾಗೂ ಫ್ರಿಜ್ ಸೇರಿದಂತೆ ಗೃಹ ಬಳಕೆ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನ ಕಂಪನಿಗಳ ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿವೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಎಲೆಕ್ಟ್ರಾನಿಕ್ಸ್ ಹಾಗೂ ಅಪ್ಲಿಯನ್ಸ್ ಸ್ ಉತ್ಪಾದಕರ ಸಂಘಟನೆ (CEAMA) ಇತ್ತೀಚೆಗೆ ತಿಳಿಸಿತ್ತು. 

ಮತ್ತೆ ಮರಳಿ ಬಂದಿದೆ ಹಣದುಬ್ಬರದ ದಿನಗಳು, WPI 1998 ಬಳಿಕ ಮೊದಲ ಬಾರಿ ಶೇ. 15ಕ್ಕಿಂತ ಹೆಚ್ಚು!

ಇನ್ನು ರಷ್ಯಾ (Russia) ಹಾಗೂ ಉಕ್ರೇನ್ (Ukraine) ಯುದ್ಧದ ನಡುವೆ ಹೆಚ್ಚುತ್ತಿರುವ ಉತ್ಪನ್ನಗಳ ಬೆಲೆ ಆಹಾರ ತಯಾರಿಕಾ ಕೈಗಾರಿಕೆಗಳ ಉತ್ಪಾದನಾ ವೆಚ್ಚದ ಮೇಲೆ ಪರಿಣಾಮ ಬೀರಿದೆ. ತಕ್ಷಣ ಸೇವೆಗಳನ್ನು ಒದಗಿಸುವ ಡೊಮಿನೋಸ್, ಬಾರ್ಸ್ ಹಾಗೂ ಕೆಫೆಗಳಲ್ಲ ಶೇ.15ರಷ್ಟು ಬೆಲೆ ಹೆಚ್ಚಳ ಮಾಡಲಾಗಿದೆ. 
ಭಾರತದ ಚಿಲ್ಲರೆ (Retail) ಹಣದುಬ್ಬರ (Inflation) ಏಪ್ರಿಲ್ (April) ತಿಂಗಳಲ್ಲಿ 8 ವರ್ಷಗಳ ಗರಿಷ್ಠ ಮಟ್ಟ ಶೇ.7.79 ಏರಿಕೆಯಾಗಿದೆ. ಈ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಗದಿಪಡಿಸಿರೋ ಶೇ.6ರ ಗರಿಷ್ಠ ಸಹನಾ ಮಟ್ಟವನ್ನು  ಸತತ ನಾಲ್ಕನೇ ಬಾರಿ ಮೀರಿದೆ. 

Latest Videos
Follow Us:
Download App:
  • android
  • ios