ನವದೆಹಲಿ(ನ.08): ಅಪನಗದೀಕರಣಕ್ಕೆ ಇಂದಿಗಗೆ ಭರ್ತಿ ಮೂರು ವರ್ಷ ತುಂಬಿದೆ. ಕೇಂದ್ರ ಸರ್ಕಾರ ಇಂದು ಅಪನಗದೀಕರಣದ ಮೂರನೇ ವರ್ಷಾಚರಣೆ ಮಾಡುತ್ತಿದೆ. 

ದೇಶದ ಅರ್ಥ ವ್ಯವಸ್ಥೆಯ ಪಥ ಬದಲಿಸಿದ ಅಪನಗದೀಕರಣದ ಸಕಾರಾತ್ಮಕ ಹಾಗೂ ನಕಾರಾತ್ಮಕ ಪರಿಣಾಮಗಳ ಕುರಿತು ಚರ್ಚೆ ನಡೆಯುತ್ತಿದೆ.

ಡಿಮಾನಿಟೈಸೇಶನ್ ಗೆ 3 ವರ್ಷ: ಅಪನಗದೀಕರಣ ಮತ್ತೆ ಆದರೂ ಆಗಬಹುದು!

ಈ ಮಧ್ಯೆ ದೇಶದ ಆರ್ಥಿಕ ಸ್ಥಿತಿ ಸುಧಾರಣೆಗಾಗಿ 2 ಸಾವಿರ ಮುಖ ಬೆಲೆಯ ನೋಟುಗಳನ್ನು ರದ್ದಗೊಳಿಸುವುದು ಉತ್ತಮ ಎಂದು ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಅಭಿಪ್ರಾಯಪಟ್ಟಿದ್ದಾರೆ.

2 ಸಾವಿರ ರೂ. ಬಹುತೇಕ ನೋಟುಗಳು ಈಗ ಚಲಾವಣೆಯಲ್ಲಿಲ್ಲ ಎಂದಿರುವ ಗರ್ಗ್, ಕಾಳ ಧನಿಕರು ಭಾರೀ ಪ್ರಮಾಣದಲ್ಲಿ 2 ಸಾವಿರ ರೂ ಮುಖ ಬೆಲೆಯ ನೋಟುಗಳನ್ನು ಗುಪ್ತವಾಗಿ ಕೂಡಿಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. 

ದೇಶಕ್ಕಾಗಿ ಕಷ್ಟ ಇಷ್ಟ ಎಂದ ಭಾರತೀಯ: ಅಪನಗದೀಕರಣಕ್ಕೆ 3 ವರ್ಷದ ಐತಿಹ್ಯ!

ಈ ಹಿನ್ನೆಲೆಯಲ್ಲಿ 2 ಸಾವಿರ ರೂ. ಮುಖ ಬೆಲೆಯ ನೋಟುಗಳ ಅಪನಗದೀಕರಣ ಆಗಲೂಬಹುದು ಎಂದು ಗರ್ಗ್ ಸುಳಿವು ನೀಡಿದ್ದಾರೆ.

2 ಸಾವಿರ ರೂ. ಮುಖ ಬೆಲೆಯ ನೋಟುಗಳು ದೇಶದಲ್ಲಿ ಚಲಾವಣೆಯಲ್ಲಿರುವ ಒಟ್ಟಾರೆ ನೋಟುಗಳ ಪೈಕಿ ಶೇ.33 ರಷ್ಟು ಪಾಲು ಹೊಂದಿವೆ. ಆದರೆ ಈ ಪೈಕಿ ಸಾಕಷ್ಟು ನೋಟುಗಳು ಈಗ ಚಲಾವಣೆಯಲ್ಲೇ ಇಲ್ಲ. ಇವುಗಳನ್ನು ಅಕ್ರಮವಾಗಿ ಕಾಳಧನಿಕರು ದಾಸ್ತಾನು ಮಾಡಿಟ್ಟಿರುವ ಶಂಕೆ ಇದೆ ಎಂದು ಗರ್ಗ್ ತಿಳಿಸಿದ್ದಾರೆ.

ನೋಟ್ ಬ್ಯಾನ್ ವರ್ಷಾಚರಣೆ ದಿನವೇ ಬ್ಯಾಡ್ ನ್ಯೂಸ್: ಮೋದಿ ಮೂಡ್ ಹಾಳು ಮಾಡಿದ ಮೂಡಿ!