Asianet Suvarna News Asianet Suvarna News

ಡಿಜಿಟಲ್ ಇಂಡಿಯಾ: ಒಂದೇ ತಿಂಗಳಲ್ಲಿ 10 ಕೋಟಿ ಯುಪಿಐ ವಹಿವಾಟು ದಾಖಲೆ

ದೇಶದಲ್ಲಿ 7 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಯುಪಿಐ (ಯುನೈಟೆಡ್‌ ಪೇಮೆಂಟ್‌ ಇಂಟರ್‌ಫೇಸ್‌) ಒಂದು ತಿಂಗಳ ಅವಧಿಯಲ್ಲಿ 10 ಕೋಟಿ ಪಾವತಿ ಅಥವಾ ವಹಿವಾಟುಗಳನ್ನು ದಾಖಲಿಸಿದೆ.

For the first time in 7 years in the country, UPI has recorded 10 crore transactions in a month akb
Author
First Published Sep 1, 2023, 7:10 AM IST

ನವದೆಹಲಿ: ದೇಶದಲ್ಲಿ 7 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಯುಪಿಐ (ಯುನೈಟೆಡ್‌ ಪೇಮೆಂಟ್‌ ಇಂಟರ್‌ಫೇಸ್‌) ಒಂದು ತಿಂಗಳ ಅವಧಿಯಲ್ಲಿ 10 ಕೋಟಿ ಪಾವತಿ ಅಥವಾ ವಹಿವಾಟುಗಳನ್ನು ದಾಖಲಿಸಿದೆ. ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೋರೇಶನ್‌ ಆಫ್‌ ಇಂಡಿಯಾ (ಎನ್‌ಪಿಸಿಐ) ಬಿಡುಗಡೆ ಮಾಡಿರುವ ವರದಿ ಪ್ರಕಾರ ಆ.1ರಿಂದ 30ರವರೆಗೆ ದೇಶದಲ್ಲಿ 15.18 ಲಕ್ಷ ಕೋಟಿ ರು. ಮೌಲ್ಯದ 10.24 ಕೋಟಿ ವಹಿವಾಟುಗಳು ದಾಖಲಾಗಿದೆ.

31ನೇ ತಾರೀಖಿನ ಮೊದಲೇ ಈ ದಾಖಲೆಯಾಗಿದ್ದು ಇದು ಯುಪಿಐ ವ್ಯವಸ್ಥೆ ಪ್ರಾರಂಭವಾದ 7 ವರ್ಷಗಳಲ್ಲಿ ಇಷ್ಟುಪ್ರಮಾಣದ ವಹಿವಾಟು ಇದೇ ಮೊದಲು. ಅಂದರೆ ಫೋನ್‌ಪೇ, ಗೂಗಲ್‌ಪೇ, ಪೇಟಿಎಂ ಸೇರಿದಂತೆ ಆನ್‌ಲೈನ್‌ನಲ್ಲಿ ಹಣಕಾಸಿನ ವಹಿವಾಟು ನಡೆಸುವ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಒಟ್ಟು 10 ಕೋಟಿ ಬಾರಿ ಪಾವತಿಗಳು ನಡೆದಿವೆ. ಕಳೆದ ಜುಲೈನಲ್ಲಿ 9.96 ಕೋಟಿ ವಹಿವಾಟು ದಾಖಲಾಗಿದ್ದವು. ಈ ಪೈಕಿ ಫೋನ್‌ ಪೇ ಶೇ.47, ಗೂಗಲ್‌ ಪೇ ಶೇ.35 ಮತ್ತು ಪೇಟಿಎಂ ಶೇ.13ರಷ್ಟುಪಾಲನ್ನು ಹೊಂದಿದ್ದು ಉಳಿದ ಪ್ರಮಾಣದಲ್ಲಿ ಇತರ ಪ್ಲ್ಯಾಟ್‌ಫಾರ್ಮ್‌ಗ ಳಲ್ಲಿ ವಹಿವಾಟು ನಡೆದಿದೆ. 2019ರ ಅಕ್ಟೋಬರ್‌ನಲ್ಲಿ ಮೊದಲ ಬಾರಿ 1 ಕೋಟಿ ಯುಪಿಐ ಪಾವತಿ ದಾಖಲಾಗಿದ್ದವು

ಡಿಜಿಟಲ್ ಪಾವತಿಯಲ್ಲಿ ಮರ್ಚೆಂಟ್ UPI ಪ್ಲಗಿನ್ ಕ್ರಾಂತಿ, ಬಳಕೆ ಎಷ್ಟು ಸುರಕ್ಷಿತ?

UPI Payment: ತರಕಾರಿ ಮಾರ್ಕೆಟ್‌ನಲ್ಲಿ QR Code ಸ್ಕ್ಯಾನ್‌ ಮಾಡಿ ಹಣ ಪಾವತಿಸಿದ ಜರ್ಮನಿ ಸಚಿವ!

Follow Us:
Download App:
  • android
  • ios