Asianet Suvarna News Asianet Suvarna News

UPI Payment: ತರಕಾರಿ ಮಾರ್ಕೆಟ್‌ನಲ್ಲಿ QR Code ಸ್ಕ್ಯಾನ್‌ ಮಾಡಿ ಹಣ ಪಾವತಿಸಿದ ಜರ್ಮನಿ ಸಚಿವ!

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅತಿದೊಡ್ಡ ಯಶಸ್ಸುಗಳಲ್ಲಿ ಒಂದಾಗಿರುವ ಯುಪಿಐ ಪೇಮೆಂಟ್‌ ಮಾಡೆಲ್‌ನ ಸ್ವ ಅನುಭವನ್ನು ಜರ್ಮನಿಯ ಸಚಿವ ಪಡೆದುಕೊಂಡಿದ್ದಾರೆ. ಅತ್ಯಂತ ವೇಗವಾಗಿ ಹಣ ವರ್ಗಾವಣೆ ಮಾಡುವ ಈ ಪ್ರಕ್ರಿಯೆಗೆ ಬಹಳ ಆಕರ್ಷಿತರಾಗಿದ್ದಾರೆ.
 

German minister Volker Wissing first hand experience of India UPI payment model san
Author
First Published Aug 20, 2023, 7:12 PM IST

ನವದೆಹಲಿ (ಆ.20): ಭಾರತದಲ್ಲಿರುವ ಜರ್ಮನ್‌ ರಾಯಭಾರ ಕಚೇರಿ ದೇಶದ ಡಿಜಿಟಲ್‌ ಮೂಲಸೌಕರ್ಯ ವ್ಯವಸ್ಥೆಯನ್ನು ಅಗಾಧವಾಗಿ ಶ್ಲಾಘನೆ ಮಾಡಿದೆ. ಇದು ದೇಶದ ಅತಿದೊಡ್ಡ ಯಶಸ್ಸಿನ ಕಥೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದೆ. ಜರ್ಮನಿಯ ಡಿಜಿಟಲ್ ಮತ್ತು ಟ್ರಾನ್ಸ್‌ಪೋರ್ಟ್‌ ಇಲಾಖೆಯ ಮಂತ್ರಿ ವೋಲ್ಕರ್ ವಿಸ್ಸಿಂಗ್ ಅವರು ಭಾರತದಲ್ಲಿ ಹಣ ಪಾವತಿ ಮಾಡಲು ಯುಪಿಐ ಮಾರ್ಗವನ್ನು ಬಳಸಿದರು. ಯುಪಿಐ ಪೇಮೆಂಟ್‌ ಅನುಭವದಿಂದ ಅವರು ಬಹಳ ಆಕರ್ಷಿತರಾಗಿದ್ದಲ್ಲದೆ, ಭಾರತದ ಡಿಜಿಟಲ್‌ ಪಾವತಿ ಮಾದರಿಗೆ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಎಕ್ಸ್‌ನಲ್ಲಿ (ಮಾಜಿ ಟ್ವಿಟರ್‌) ಭಾರತದಲ್ಲಿನ ಜರ್ಮನ್‌ ರಾಯಭಾರ ಕಚೇರಿ ಇದರ ಚಿತ್ರಗಳು ಹಾಗೂ ವಿಡಿಯೋಗಳನ್ನು ಪೋಸ್ಟ್‌ ಮಾಡಿದೆ. ಇದರಲ್ಲಿ ವಿಸ್ಸಿಂಗ್‌ ಅವರು ತರಕಾರಿ ಮಾರ್ಕೆಟ್‌ನಲ್ಲಿ ಮಾರಾಟಗಾರನಿಗೆ ಯುಪಿಐ ಪೇಮೆಂಟ್‌ ಮೋಡ್‌ನಲ್ಲಿರುವ ಆಯ್ಕೆಯಾದ ಕ್ಯೂಆರ್‌ ಕೋಡ್‌ ಬಳಸಿಕೊಂಡು ಹಣ ಪಾವತಿ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

'ಡಿಜಿಟಲ್‌ ಮೂಲಸೌಕರ್ಯದಲ್ಲಿ ಇದು ಭಾರತದ ಯಶಸ್ಸಿನ ಕಥೆಗಳಲ್ಲಿ ಒಂದಾಗಿದೆ. ಯುಪಿಐ ಮೂಲಕ ಪ್ರತಿಯೊಬ್ಬರು ಕೆಲವೇ ಸೆಕೆಂಡ್‌ಗಳಲ್ಲಿ ವಹಿವಾಟು ಮಾಡಬಹುದಾಗಿದೆ. ಲಕ್ಷಾಂತರ ಭಾರತೀಯರು ಇದನ್ನು ಬಳಸುತ್ತಾರೆ. ಡಿಜಿಟಲ್ ಮತ್ತು ಟ್ರಾನ್ಸ್‌ಪೋರ್ಟ್‌ ಫೆಡರಲ್ ಸಚಿವ ವಿಸ್ಸಿಂಗ್‌ ಇದನ್ನು ಬಳಸಿದ್ದಾರೆ. ಯುಪಿಐ ಪಾವತಿಗಳ ಸರಳತೆಯನ್ನು ಸ್ವಅನುಭವ ಪಡೆದ ಅವರು ಇದರಿಂದ ಬಹಳ ಆಕರ್ಷಿತರಾಗಿದ್ದಾರೆ' ಎಂದು ಜರ್ಮನಿ ರಾಯಭಾರ ಕಚೇರಿ ಎಕ್ಸ್‌ನಲ್ಲಿ ಬರೆದುಕೊಂಡಿದೆ.

ಆಗಸ್ಟ್ 19 ರಂದು, ವಿಸ್ಸಿಂಗ್ ಬೆಂಗಳೂರಿನಲ್ಲಿ ಜಿ20 ಡಿಜಿಟಲ್ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಿದ್ದರು. ಆಗಸ್ಟ್ 18 ರಂದು ವಿಸ್ಸಿಂಗ್ ಜಿ20 ಡಿಜಿಟಲ್ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದರು.

ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಭಾರತದ ಮೊಬೈಲ್-ಆಧಾರಿತ ವೇಗದ ಪಾವತಿ ವ್ಯವಸ್ಥೆಯಾಗಿದೆ, ಇದು ಗ್ರಾಹಕರು ರಚಿಸಿದ ವರ್ಚುವಲ್ ಪಾವತಿ ವಿಳಾಸವನ್ನು (VPA) ಬಳಸಿಕೊಂಡು ಗ್ರಾಹಕರಿಗೆ ರೌಂಡ್-ದಿ-ಕ್ಲಾಕ್ ಪಾವತಿಗಳನ್ನು ತ್ವರಿತವಾಗಿ ಮಾಡಲು ಅನುಕೂಲ ಮಾಡುತ್ತದೆ. ಇಲ್ಲಿಯವರೆಗೆ, ಶ್ರೀಲಂಕಾ, ಫ್ರಾನ್ಸ್, ಯುಎಇ ಮತ್ತು ಸಿಂಗಾಪುರವು ಫಿನ್‌ಟೆಕ್ ಮತ್ತು ಪಾವತಿ ಪರಿಹಾರಗಳಲ್ಲಿ ಭಾರತದೊಂದಿಗೆ ಪಾಲುದಾರಿಕೆ ಮಾಡಿಕೊಂಡಿವೆ. ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಪಾವತಿ ಕಾರ್ಯವಿಧಾನವನ್ನು ಬಳಸಲು ಭಾರತ ಮತ್ತು ಫ್ರಾನ್ಸ್ ಒಪ್ಪಿಕೊಂಡಿವೆ ಎಂದು ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.

ಡಾಲರ್‌ ಅವಲಂಬನೆ ತಗ್ಗಿಸಲು ಮಹತ್ವದ ಕ್ರಮ: ಮೊದಲ ಸಲ ರುಪಾಯಿಯಲ್ಲೇ ತೈಲ ಬಿಲ್‌ ಪಾವತಿಸಿದ ಭಾರತ

ಇತ್ತೀಚಿನ ಫ್ರಾನ್ಸ್ ಭೇಟಿಯ ವೇಳೆ ಪ್ಯಾರಿಸ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಭಾರತದ ಯುಪಿಐ ಅಥವಾ ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ದೇಶದಲ್ಲಿ ದೊಡ್ಡ ಸಾಮಾಜಿಕ ಪರಿವರ್ತನೆಯನ್ನು ತಂದಿವೆ ಮತ್ತು ಭಾರತ ಮತ್ತು ಫ್ರಾನ್ಸ್ ಸಹ ಇದೇ ಮಾರ್ಗದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. . ಭಾರತ ಮತ್ತು ಫ್ರಾನ್ಸ್,  ಫ್ರಾನ್ಸ್‌ನಲ್ಲಿ ಯುಪಿಐ ಬಳಸಲು ಒಪ್ಪಿಕೊಂಡಿವೆ. ಇಲ್ಲಿನ ಒಪ್ಪಂದದ ಬಳಿಕ ನಾನು ಇಲ್ಲಿಂದ ಹೊರಡುತ್ತೇನೆ. ಆದರೆ, ಇದನ್ನು ಬಳಸಿ ಯಶಸ್ವಿ ಮಾಡಬೇಕಿರುವುದು ನಿಮ್ಮ ಕೆಲಸ. ಮುಂದಿನ ದಿನಗಳಲ್ಲಿ ಐಫೆಲ್ ಟವರ್‌ನಿಂದ ಅದರ ಪ್ರಾರಂಭವನ್ನು ಮಾಡಲಾಗುವುದು ಅಂದರೆ ಭಾರತೀಯ ಪ್ರವಾಸಿಗರು ಈಗ ಐಫೆಲ್ ಟವರ್‌ನಲ್ಲಿ ಯುಪಿಐ ಮೂಲಕ ರೂಪಾಯಿಗಳಲ್ಲಿ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ' ಎಂದಿದ್ದರು.

ಒಂದು ಕಪ್ ಕೆಟ್ಟ ಕಾಫಿಗೆ 11 ಸಾವಿರ; ನನ್ನಿಂದಲೇ ಮೋದಿ UPI ಶುರು ಮಾಡಿದ್ದರು ಎಂದ ಮೇಘನಾ ರಾಜ್!

Follow Us:
Download App:
  • android
  • ios