Linkedin layoff: ವೃತ್ತಿಪರ ನೆಟ್‌ವರ್ಕಿಂಗ್ ವೇದಿಕೆಯಾದ ಲಿಂಕ್ಡ್‌ಇನ್‌, 600ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಕಂಪನಿಯು ಆದಾಯದಲ್ಲಿ ಬೆಳವಣಿಗೆ ಕಂಡರೂ, ಆದ್ಯತೆಗಳನ್ನು ಪೂರೈಸಲು ಮೂಲಸೌಕರ್ಯದಲ್ಲಿ ಹೆಚ್ಚು ಹೂಡಿಕೆ ಮಾಡುವ ಕಾರಣ ನೀಡಿ ಈ ಕಠಿಣ ನಿರ್ಧಾರವನ್ನು ಕೈಗೊಂಡಿದೆ.

ಕ್ಯಾಲಿಫೋರ್ನಿಯಾ: ಟೆಕ್‌ ಕ್ಷೇತ್ರದಲ್ಲಿ ಉದ್ಯೋಗಿಗಳ ವಜಾ ಪರ್ವ ಮುಂದುವರಿದಿದ್ದು, ವೃತ್ತಿಪರ ನೆಟ್‌ವರ್ಕಿಂಗ್ ವೇದಿಕೆಯಾಗಿರುವ ಲಿಂಕ್ಡ್‌ಇನ್‌ 600ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾ ಮಾಡಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಮೆಟಾ ಕಂಪನಿಯ 8000 ಜನರ ವಜಾ ಬೆನ್ನಲ್ಲೇ ವಿಷಯ ಹೊರಬಿದ್ದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶೇ.5ರಷ್ಟು ಜನರನ್ನು ಕೆಲಸದಿಂದ ತೆಗೆದುಹಾಕುವುದಾಗಿ ಸಿಇಒ ಡೇನಿಯಲ್ ಶಪೆರೋ ಘೋಷಿಸಿದ್ದರು.

ಇತ್ತೀಚೆಗಷ್ಟೇ ತನ್ನ ಒಟ್ಟು ಉದ್ಯೋಗಿಗಳ ಪೈಕಿ ಶೇ.5ರಷ್ಟು ಜನರನ್ನು ಕೆಲಸದಿಂದ ತೆಗೆದುಹಾಕುವುದಾಗಿ ಸಿಇಒ ಡೇನಿಯಲ್ ಶಪೆರೋ ಘೋಷಿಸಿದ್ದರು. ಕಳೆದ ವಾರ ಹೊರಡಿಸಲಾಗಿದ್ದ ಅಧಿಸೂಚನೆಯ ಪ್ರಕಾರ, ಜು.13ರಿಂದ 606 ಜನರ ಲಿಂಕ್ಡ್‌ಇನ್‌ ಜತೆಗಿನ ಔದ್ಯೋಗಿಕ ಸಂಬಂಧ ಕೊನೆಗೊಳ್ಳಲಿದೆ.

ಇದರಲ್ಲಿ ಬಹುಪಾಲು (352) ಉದ್ಯೋಗಿಗಳು ಮೌಂಟೇನ್ ವ್ಯೂ ಕಚೇರಿಯಲ್ಲಿದ್ದವರು

ಇದರಲ್ಲಿ ಬಹುಪಾಲು (352) ಉದ್ಯೋಗಿಗಳು ಮೌಂಟೇನ್ ವ್ಯೂ ಕಚೇರಿಯಲ್ಲಿದ್ದವರು. ಸಿಇಒ ಡೇನಿಯಲ್ ಶಪೆರೋ ಇತ್ತೀಚೆಗಷ್ಟೇ ಜಾಗತಿಕವಾಗಿ ಶೇ.5ರಷ್ಟು ಉದ್ಯೋಗಿಗಳನ್ನು (875ರಷ್ಟು ಜನರನ್ನು) ತೆಗೆದುಹಾಕಲು ಮುಂದಾಗಿದ್ದು, ‘ಕಂಪನಿಯ ಆದ್ಯತೆಗಳನ್ನು ಪೂರೈಸಲು ಅಗತ್ಯವಾದ ಮೂಲಸೌಕರ್ಯದಂತಹ ಕ್ಷೇತ್ರಗಳ ಮೇಲೆ ಹೆಚ್ಚು ಹೂಡಿಕೆ ಮಾಡಬೇಕಿದೆ’ ಎಂದು ಹೇಳಿದ್ದರು. ಲಿಂಕ್ಡ್‌ಇನ್ ತನ್ನ 3ನೇ ತ್ರೈಮಾಸಿಕ ಗಳಿಕೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇ.12ರಷ್ಟು ಆದಾಯದ ಬೆಳವಣಿಗೆ ಕಂಡಿರುವ ಹೊರತಾಗಿಯೂ ಈ ನಿರ್ಧಾರ ಮಾಡಲಾಗಿದೆ