ಸನ್ನಿ ಲಿಯೋನ್ LinkedIn ಅಕೌಂಟ್ ಡಿಲೀಟ್; ಕಂಪನಿ ತಪ್ಪಿಗೆ ಕ್ಷಮೆ ಕೇಳಬೇಕು ಎಂದ ನಟಿ
ನಕಲಿ ಖಾತೆ ಇರಬೇಕೆಂದು ತಪ್ಪು ತಿಳಿದುಕೊಂಡು ಸನ್ನಿ LinkedIn ಡಿಲೀಟ್ ಮಾಡಿದ ಕಂಪನಿ. ಮಾಹಿತಿ ನೀಡದೆ ಡಿಲೀಟ್ ಮಾಡಿರುವುದಕ್ಕೆ ನಟಿ ಬೇಸರ....
ಬಾಲಿವುಡ್ ಮಾದಕ ನಟಿ ಸನ್ನಿ ಲಿಯೋನ್ ಕಳೆದ ಎರಡು ಮೂರು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆಕ್ಟಿವ್ ಆಗಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಲಿಂಕ್ಡ್‌ಇನ್‌ನಲ್ಲೂ ಖಾತೆ ಓಪನ್ ಮಾಡಿದ್ದರು ಆದರೆ ಲಿಂಕ್ಡ್‌ಇನ್ ಸಂಸ್ಥೆ ಇದು ನಕಲಿ ಖಾತೆಯೆಂದು ಮುನ್ಸೂಚನೆ ಕೊಡದೆ ಡಿಲೀಟ್ ಮಾಡಿದ್ದಾರೆ. ಇದರಿಂದ ಬೇಸರವಾಗಿದೆ ಎಂದು ಟ್ವಿಟರ್‌ನಲ್ಲಿ ಸನ್ನಿ ಹಂಚಿಕೊಂಡಿದ್ದಾರೆ.
'ಲಿಂಕ್ಡ್‌ಇನ್ ಆಪ್‌ಗೆ ಸೇರಿಕೊಂಡು ಕೇವಲ ಒಂದು ತಿಂಗಳು ಕಳೆದಿತ್ತು. ನಿಜವಾದ ಸನ್ನಿ ಈ ಅಪ್ ಬಳಸುವುದಿಲ್ಲ ಬಳಸುತ್ತಿಲ್ಲ ಎಂದು ಬ್ಲಾಕ್ ಮಾಡಿದ್ದರು. ಲಿಂಕ್ಡ್‌ಇನ್ ಓಪನ್ ಮಾಡಿರುವುದು ನಾನೇ. ನನಗೆ ಅರ್ಥವಾಗುತ್ತದೆ ನಾನು ಖಾತೆ ಓಪನ್ ಮಾಡಿದ ಕ್ಷಣದಿಂದ ಇದ್ದಕ್ಕಿದ್ದಂತೆ ತುಂಬಾ ಟ್ರಾಫಿಕ್ ಕ್ರಿಯೇಟ್ ಆಗಿದೆ ಎಂದು ಆದರೆ ಯಾವ ಕಾರಣವೂ ಇಲ್ಲ ನನಗೆ ಮುನ್ಸೂಚನೆ ಕೊಡದೆ ಡಿಲೀಟ್ ಮಾಡುವುದಕ್ಕೆ ಲಿಂಕ್ಡ್‌ಇನ್ ಹಕ್ಕಿಲ್ಲ. ಇದರಿಂದ ನನಗೆ ತುಂಬಾ ಬೇಸರವಾಗಿದೆ. ಈ ನಿರ್ಧಾರವನ್ನು ಅವರು ಬದಲಾಯಿಸಬೇಕು. ಮತ್ತಷ್ಟು ಜನರ ಸಂಪರ್ಕ ಬೆಳೆದು ನಾನು ಲಿಂಕ್ಡ್‌ಇನ್ ಎಂಜಾಯ್ ಮಾಡುತ್ತಿದ್ದೆ ಆದರೆ ನನಗೆ ಇ-ಮೇಲ್ ಬರೆಯದೇ ಈ ರೀತಿ ಮಾಡಿರುವುದು ದೊಡ್ಡ ತಪ್ಪು. ಜನರು ಸಲಹೆ ಕೊಟ್ಟರೆ ಪಡೆದುಕೊಳ್ಳುವೆ' ಎಂದು ಸನ್ನಿ ವಿಡಿಯೋ ಮೂಲಕ ಬೇಸರ ವ್ಯಕ್ತ ಪಡಿಸಿದ್ದರು.
Sunny Leone ಪ್ಯಾನ್ ಕಾರ್ಡ್‌ನಿಂದ 2000 ಸಾವಿರ ಸಾಲ ಪಡೆದ ಪುಂಡ!
ಇದಾದ ಎರಡು ಮೂರು ದಿನದಲ್ಲಿ ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಿ ಲಿಂಕ್ಡ್‌ಇನ್‌ಗೆ ಮರುಳಿರುವುದಾಗಿ ತಿಳಿಸಿದ್ದಾರೆ. 'ಎಲ್ಲರಿಗೂ ಸಿಹಿ ಸುದ್ದಿ. ನಾನು ನಿಜವಾದ ಸನ್ನಿ ಎಂದು ಲಿಂಕ್ಡ್‌ಇನ್‌ಗೆ ತಿಳಿದು ನನ್ನ ಖಾತೆಯನ್ನು ನನಗೆ ವಾಪಸ್ ಕೊಟ್ಟಿದ್ದಾರೆ. ನಿಮ್ಮೆಲ್ಲರ ಜೊತೆ ಹೆಚ್ಚಿಗೆ ಮಾತನಾಡುವೆ' ಎಂದು ಸನ್ನಿ ಹೇಳಿದ್ದಾರೆ.
ಸನ್ನಿಗೆ ಗಾಯ:
ಕೆಲವು ವರ್ಷಗಳ ಹಿಂದೆ ಮುಂಬೈನಲ್ಲಿ ಸನ್ನಿ ಮನೆ ಖರೀಸಿದಿದ್ದರು. ಈ ಮನೆಯಲ್ಲಿ ಸನ್ನಿ, ಮತ್ತು ಪತಿ ಹಾಗೂ ಮಕ್ಕಳು ನೆಲೆಸಿದ್ದಾರೆ. ಈ ಮನೆಯ ಬೆಡ್‌ರೂಮ್‌ನಿಂದ ಹೊಸ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ತುಟಿಗೆ ಗಾಯವಾಗಿದೆ ಎಂದು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಸನ್ನಿ ಲಿಯೋನ್ಗೆ (Sunny Leone) ತುಟಿಗೆ ಗಾಯವಾಗಲು ಕಾರಣ ಬೇರೆ ಏನೂ ಅಲ್ಲ, ಬದಲಿಗೆ ಮೊಬೈಲ್! ಆಗಿದ್ದೇನೆಂದರೆ, ಈಕೆ ಮೊಬೈಲ್ ನೋಡುತ್ತಿದ್ದಾಗ ಅದು ಜಾರಿ ಮುಖದ ಮೇಲೆ ಬಿತ್ತಂತೆ. ತುಟಿಯ ಮೇಲೆ ಬಿದ್ದುದರಿಂದ ಬಲವಾಗಿ ಹೊಡೆತ ಬಿದ್ದಿದ್ದು, ಗಾಯವಾಗಿ ರಕ್ತಬಂದಿದೆಯಂತೆ. ಇದನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ರಕ್ತ ಬಂದರೂ, ತಮ್ಮ ಪತಿ ತುಟಿಯ ಬಗ್ಗೆ ಯಾಕೋ ಕೇರೇ ಮಾಡುತ್ತಿಲ್ಲ ಎಂದು ಸನ್ನಿ ಹುಸಿಗೋಪ ತೋರಿಸಿದ್ದಾರೆ. ತಾವು ವಿಡಿಯೋ ಮಾಡಿ ನೋವು ಅನುಭವಿಸುತ್ತಿದ್ದರೂ ಪತಿ ಡ್ಯಾನಿಯಲ್ (Danniel) ಯಾವುದೇ ಚಿಂತೆಯಿಲ್ಲದೇ ನಿಶ್ಚಿಂತೆಯಿಂದ ಮಲಗಿರುವ ಬಗ್ಗೆ ವಿಡಿಯೋದಲ್ಲಿ ಸನ್ನಿ ತೋರಿಸಿದ್ದಾರೆ.
Sunny Leone Shocking Statement: ನನ್ನಷ್ಟು ದಡ್ಡಿ ಯಾರೂ ಇಲ್ಲ, ಸನ್ನಿ ಹೇಳಿದ ಬಾಲಿವುಡ್ ಸತ್ಯ!
ಸನ್ನಿ ಹುಟ್ಟಿದ್ದು ಮೇ 13ರಂದು. ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ಮೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪ್ರೇಕ್ಷಕರ ಮುಂದೆ ಬಂದ ಸನ್ನಿ ಬಳಿಕ ಭಾರತದಲ್ಲಿ ಖ್ಯಾತಿಗಳಿಸಿದರು. ಸನ್ನಿ ಲಿಯೋನ್ ನಟ ಡೇನಿಯಲ್ ವೆಬರ್ ಅವರನ್ನು ವಿವಾಹವಾಗಿದ್ದಾರೆ. ಮೂರು ಮಕ್ಕಳ ತಾಯಿ ಕೂಡ ಹೌದು. ನಿಶಾ, ಆಶರ್ ಮತ್ತು ನೂರ್ ಮಕ್ಕಳ ಪೋಷಕರಾಗಿದ್ದಾರೆ. ಮೂವರು ಮಕ್ಕಳನ್ನು ಸನ್ನಿ ಲಿಯೋನ್ ದಂಪತಿ ದತ್ತು ಪಡೆದಿದ್ದಾರೆ. ಸನ್ನಿ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದಾಗಲೇ ನರ್ಸ್ ಆಗಬೇಕೆಂದು ಓದುತ್ತಿದ್ದರು. ನಂತರ ಸನ್ನಿ ಹೆಸರಿನ ಜೊತೆಗೆ ಲಿಯೋನ್ ಸೇರಿಕೊಂಡು ಸನ್ನಿ ಲಿಯೋನ್ ಆಗಿ ಗುರುತಿಸಿಕೊಂಡರು.