Asianet Suvarna News Asianet Suvarna News

ಶೋರೂಮ್‌ಗೆ ಹೋಗೋದೇ ಬೇಡ, ಫ್ಲಿಪ್‌ಕಾರ್ಟ್‌ನಲ್ಲಿ ಬುಕ್‌ ಮಾಡಿದ್ರೆ ಮನೆಗೆ ಬರುತ್ತೆ ಬೈಕ್‌, ಆಫರ್‌ಗಳೂ ಭರ್ಜರಿ!

ಫ್ಲಿಪ್‌ಕಾರ್ಟ್ ಈಗ ತನ್ನ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಹೀರೋ, ಬಜಾಜ್, ಟಿವಿಎಸ್ ಸೇರಿದಂತೆ ಹಲವು ಪ್ರಮುಖ ಬ್ರ್ಯಾಂಡ್‌ಗಳ ದ್ವಿಚಕ್ರ ವಾಹನಗಳು ಈಗ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. ಗ್ರಾಹಕರಿಗೆ ಹಣಕಾಸು ಮತ್ತು ವಿಮೆಯಂತಹ ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತಿದೆ.

Flipkarts Two Wheeler Bonanza: Petrol and Electric Bikes Delivered to Your Doorstep
Author
First Published Sep 24, 2024, 5:20 PM IST | Last Updated Sep 24, 2024, 5:20 PM IST

ಬೆಂಗಳೂರು: ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವವರಿಗೆ ಫ್ಲಿಪ್‌ಕಾರ್ಟ್ ಈಗ ಹೊಸದೊಂದು ಅವಕಾಶ ನೀಡಿದೆ. ಭಾರತದ ಸ್ವದೇಶಿ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಆಗಿರುವ ಫ್ಲಿಪ್ ಕಾರ್ಟ್ ಈಗ ಆನ್‌ಲೈನ್‌ನಲ್ಲಿ ದ್ವಿಚಕ್ರ ವಾಹನಗಳನ್ನು ಶಾಪಿಂಗ್ ಮಾಡುವ ಹೊಸ ಅವಕಾಶವನ್ನು ಗ್ರಾಹಕರಿಗೆ ನೀಡಿದೆ. ಪೆಟ್ರೋಲ್ ಹಾಗೂ ಇಲೆಕ್ಟ್ರಿಕ್ ದ್ವಿಚಕ್ರವಾಹನಗಳು ಇನ್ನು ಮುಂದೆ ಈ ಫ್ಲಿಪ್‌ಕಾರ್ಟ್ ಆನ್‌ಲೈನ್ ಮಾರುಕಟ್ಟೆಯಲ್ಲಿ ಲಭ್ಯವಿದೆ. 

ಪ್ರಮುಖ ದ್ವಿಚಕ್ರ ವಾಹನ ಬ್ರ್ಯಾಂಡ್ ಗಳಾದ ಹೀರೋ, ಬಜಾಜ್, ಟಿವಿಎಸ್, ಓಲಾ, ಚೇತಕ್, ಜಾವ, ಎಜ್ಡಿ, ವಿಡಾ, ಏಥರ್ ಮತ್ತು ಇನ್ನೂ ಹಲವು ದ್ವಿಚಕ್ರವಾಹನಗಳನ್ನು  ಫ್ಲಿಪ್ಕಾರ್ಟ್‌ ಗ್ರಾಹಕರಿಗೆ ಆನ್‌ಲೈನ್ ಮೂಲಕ ಮಾರಾಟ ಮಾಡಲಿದೆ. ದೇಶದ 700 ನಗರಗಳ 12,000 ಕ್ಕೂ ಹೆಚ್ಚು ಪಿನ್ ಕೋಡ್ ಗಳಲ್ಲಿ ಈ ದ್ವಿಚಕ್ರ ವಾಹನಗಳನ್ನು ಪೂರೈಸುವ ಸೌಲಭ್ಯವನ್ನು ಫ್ಲಿಪ್ ಕಾರ್ಟ್ ಹೊಂದಿದ್ದು, ತನ್ನ ಗ್ರಾಹಕರಿಗೆ ಸರಿಸಾಟಿಯಿಲ್ಲದ, ಕೈಗೆಟುಕುವ ದರ ಮತ್ತು ವಿಶ್ವಾಸಾರ್ಹತೆಯೊಂದಿಗೆ ಸೇವೆ ಸಲ್ಲಿಸುತ್ತಿದೆ. ಈ ವಾಹನಗಳ ಸವಾರಿ ಮೂಲಕ ಆಕರ್ಷಕ ಸ್ಟೈಲ್ ನೊಂದಿಗೆ ಹಬ್ಬದ ಆಚರಣೆಯನ್ನು ಇನ್ನಷ್ಟು ರಂಗಾಗುವಂತೆ ಮಾಡಬಹುದು ಎಂದು ಫ್ಲಿಪ್‌ಕಾರ್ಟ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ. 

ಹಳೇ ವಾಹನ ಖರೀದಿ, ಅಪಘಾತ ವೇಳೆ ಮಾಲೀಕತ್ವ ಪರಿಶೀಲನೆ ಈಗ ಸುಲಭ, ಚೆಕಿಂಗ್ ಹೇಗೆ?

ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಶೇ.5 ರಷ್ಟು ರಿಯಾಯ್ತಿ
ಇನ್ನು ಈ ಈ ಫ್ಲಿಪ್‌ಕಾರ್ಟ್ ಆನ್‌ಲೈನ್‌ ಪ್ಲಾಟ್ ಫಾರ್ಮ್‌ನಲ್ಲಿ ವಾಹನಗಳನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಶೇ.5 ರಷ್ಟು ರಿಯಾಯ್ತಿಯನ್ನು ಫ್ಲಿಪ್‌ಕಾರ್ಟ್ ಒದಗಿಸುತ್ತಿದೆ. ಇದರ ಜೊತೆಗೆ ಪ್ರಮುಖ ಬ್ಯಾಂಕುಗಳಿಂದ ವಿಶೇಷ ಡೀಲ್‌ ಗಳು, ಸೂಪರ್ ಕಾಯಿನ್‌ಗಳ ಮೂಲಕ ಲಾಯಲ್ಟಿ ಪ್ರಯೋಜನ ಸೇರಿದಂತೆ ಇನ್ನೂ ಹಲವಾರು ಕೊಡುಗೆಗಳನ್ನು ಗ್ರಾಹಕರಿಗೆ ಫ್ಲಿಪ್‌ಕಾರ್ಟ್‌ ನೀಡುತ್ತಿದೆ. 
 
ಈ ಬಗ್ಗೆ ಮಾತನಾಡಿದ ಫ್ಲಿಫ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ವಿಭಾಗದ ಉಪಾಧ್ಯಕ್ಷ ಜಗಜೀತ್ ಹಾರೊಡೆ ಅವರು, 'ಫ್ಲಿಪ್‌ಕಾರ್ಟ್‌ನಲ್ಲಿ ನಮ್ಮ ಗ್ರಾಹಕರಿಗೆ ದ್ವಿಚಕ್ರ ವಾಹನದ ಶಾಪಿಂಗ್ ಅನುಭವವನ್ನು ನೀಡಲು ನಾವು ಸಮರ್ಪಿತರಾಗಿದ್ದೇವೆ. ಇಲ್ಲಿ ಗ್ರಾಹಕರಿಗೆ ಬೇರೆಲ್ಲೂ ಇಲ್ಲದ ಅನುಕೂಲತೆ ಮತ್ತು ಪಾರದರ್ಶಕತೆಯನ್ನು ಒದಗಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ನಗರ ಅಥವಾ ಸೆಮಿ ಅರ್ಬನ್ ಪ್ರದೇಶದಲ್ಲಿದ್ದರೂ ಪ್ರತಿಯೊಬ್ಬ ಗ್ರಾಹಕರು ತಮಗಿಷ್ಟವಾದ ಪರಿಪೂರ್ಣವಾದ ದ್ವಿಚಕ್ರ ವಾಹನವನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಖರೀದಿಸಬಹುದಾಗಿದೆ. ನಮ್ಮ ವ್ಯವಸ್ಥೆಯು ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲಿದೆ. ಆತ್ಮವಿಶ್ವಾಸದಿಂದ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ನಮ್ಮ ಗ್ರಾಹಕರಿಗೆ ಅಧಿಕಾರ ನೀಡಲು ನಾವು ಹೊಸ ವೈಶಿಷ್ಟ್ಯತೆಗಳನ್ನು ಪರಿಚಯಿಸಿದ್ದೇವೆ. ಕೈಗೆಟುಕುವ ಬೆಲೆ, ನಂಬಿಕೆ ಮತ್ತು ವ್ಯಾಪಕ ಶ್ರೇಣಿಯ ಆಯ್ಕೆಯ ಮೂಲಕ ಅಸಾಧಾರಣ ಮೌಲ್ಯವನ್ನು ನೀಡುವ ಮೂಲಕ ಫ್ಲಿಪ್ ಕಾರ್ಟ್ ದ್ವಿಚಕ್ರ ವಾಹನ ಖರೀದಿದಾರರಿಗೆ ಪ್ರಮುಖ ತಾಣವಾಗಿದೆ ಎಂಬುದನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದರು.

ಅಮೇಜಾನ್‌ನಲ್ಲಿ ಆರ್ಡರ್ ಮಾಡಿದ್ದು ಒಂದು, ಬಂದಿದ್ದು ಮೂರು; ಆದ್ರೂ ಗ್ರಾಹಕ ಫುಲ್ ಅಪ್ಸೆಟ್

ಫ್ಲಿಪ್‌ಕಾರ್ಟ್‌ನ ಪ್ರಾಡಕ್ಟ್ ನ ಮುಖ್ಯಸ್ಥ ರವಿ ಕೃಷ್ಣನ್ ಅವರು ಮಾತನಾಡಿ, 'ಫ್ಲಿಪ್‌ಕಾರ್ಟ್‌ನಲ್ಲಿ ದ್ವಿಚಕ್ರ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ತಡೆ ರಹಿತ, ಅನುಕೂಲಕರ ಮತ್ತು ಪಾರದರ್ಶಕ ಅನುಭವವನ್ನು ನೀಡಲು ನಾವು ಬದ್ಧರಾಗಿದ್ದೇವೆ. ನಮ್ಮ ಪ್ಲಾಟ್‌ಫಾರ್ಮ್ ವಿಮೆ ಮತ್ತು ನೋಂದಣಿ ಸೇರಿದಂತೆ ಬಳಕೆದಾರ ಸ್ನೇಹಿ ಆನ್-ರೋಡ್ ದರವನ್ನು ನೀಡುತ್ತದೆ. ಗ್ರಾಹಕರು ಸಂಪೂರ್ಣ ಖರೀದಿ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲೇ ಪೂರ್ಣಗೊಳಿಸಬಹುದಾಗಿದೆ. ವಿಮೆ, ನೋಂದಣಿ ಮತ್ತು ಹಣಕಾಸು ವಿಚಾರಗಳಿಗೆ ಸಂಬಂಧಿಸಿದಂತೆ ಪರಿಣತರಿಂದ ಆಡಿಯೋ/ವಿಡಿಯೋ ಮಾರ್ಗದರ್ಶನವನ್ನೂ ನೀಡಲಾಗುತ್ತದೆ. 

ಕಳೆದ ವರ್ಷದ ಆಗಸ್ಟ್ ತಿಂಗಳಿಂದ ಈ ವರ್ಷದ ಆಗಸ್ಟ್ ತಿಂಗಳವರೆಗೆ ಫ್ಲಿಪ್ ಕಾರ್ಟ್ ನಲ್ಲಿ ದ್ವಿಚಕ್ರ ವಾಹನಗಳ ಬೇಡಿಕೆ 6 ಪಟ್ಟು ಹೆಚ್ಚಾಗಿದೆ. ಕಮ್ಯೂಟರ್ಸ್, ಸ್ಕೂಟರ್ ಮತ್ತು ಪ್ರೀಮಿಯಂ ದ್ವಿಚಕ್ರ ವಾಹನಗಳ ಬೇಡಿಕೆಯಲ್ಲಿ ಬೆಳವಣಿಗೆಯಾಗಿದ್ದು, ವಿಶೇಷವಾಗಿ ಎಲೆಕ್ಟ್ರಿಕ್ ವಿಭಾಗದ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಆರಂಭಿಕ ಹಂತದ ಬೈಕ್‌ಗಳಿಂದ ಹೈ-ಎಂಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ
ಹೆಚ್ಚಿನ ಗ್ರಾಹಕರು ಆಸಕ್ತಿ ತೋರಿದ್ದಾರೆ. ಭಾರತೀಯ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಮತ್ತು ದ್ವಿಚಕ್ರ ವಾಹನ ಮಾರುಕಟ್ಟೆ ಬೆಳವಣಿಗೆಗೆ ಕೊಡುಗೆ ನೀಡಲು ಫ್ಲಿಪ್ ಕಾರ್ಟ್ ಬದ್ಧವಾಗಿದೆ ಎಂದು ಫ್ಲಿಪ್‌ಕಾರ್ಟ್ ಪ್ರಕಟಣೆಯಲ್ಲಿ ತಿಳಿಸಿದೆ. 

Latest Videos
Follow Us:
Download App:
  • android
  • ios