ಅಮೇಜಾನ್‌ನಲ್ಲಿ ಆರ್ಡರ್ ಮಾಡಿದ್ದು ಒಂದು, ಬಂದಿದ್ದು ಮೂರು; ಆದ್ರೂ ಗ್ರಾಹಕ ಫುಲ್ ಅಪ್ಸೆಟ್
ಈ ಬಳಕೆದಾರ ಅಮೇಜಾನ್‌ನಲ್ಲಿ Vivo Y20A ಸ್ಮಾರ್ಟ್‌ಫೋನ್ ಆರ್ಡರ್ ಮಾಡಿದ್ದರು. ಆದ್ರೆ ಅಮೇಜಾನ್ ಕಳುಹಿಸಿದ್ದ ಪಾರ್ಸೆಲ್ ನೋಡಿ ಶಾಕ್ ಆಗಿದ್ದಾರೆ.
ಆನ್‌ಲೈನ್‌ನಲ್ಲಿ ಶಾಪಿಂಗ್ (Online Shopping) ಮಾಡೋದು ಟ್ರೆಂಡ್ ಆಗಿದೆ. ಅಂಗಡಿಗಳಿಗೆ ಹೋಗಿ ಶಾಪಿಂಗ್ ಮಾಡುವ ಸಮಯ ಯಾರ ಬಳಿಯೂ ಇಲ್ಲ. ಇತ್ತ ಆನ್‌ಲೈನ್‌ನಲ್ಲಿ ಅಮೇಜಾನ್ (Amazon), ಫ್ಲಿಪ್‌ಕಾರ್ಟ್‌ನಂತಹ (Flipkart) ದೈತ್ಯ ಕಂಪನಿಗಳು ಗ್ರಾಹಕರ ಬೆರಳತುದಿಯಲ್ಲಿಯೇ ಎಲ್ಲ ವಸ್ತುಗಳು ಸಿಗುವಂತೆ ಕೆಲಸ ಮಾಡುತ್ತಿವೆ. ಅಮೇಜಾನ್, ಫ್ಲಿಪ್‌ಕಾರ್ಟ್ ಮಾದರಿಯಲ್ಲಿಯೇ ಹಲವು ಆಪ್‌ಗಳು ಆನ್‌ಲೈನ್ ಮಾರುಕಟ್ಟೆಯನ್ನು (Online Market) ಪ್ರವೇಶಿಸಿರುವ ಕಾರಣ ಕಂಪನಿಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ ಗ್ರಾಹಕರನ್ನು ಸೆಳೆಯಲು ಕಂಪನಿಗಳು ಭಾರೀ ರಿಯಾಯ್ತಿಗಳ ಜೊತೆಯಲ್ಲಿ ಮೆಗಾ ಸೇಲ್ ಆಯೋಜಿಸುತ್ತವೆ. ಈ ಎಲ್ಲಾ ಕಾರಣಗಳಿಂದ ಹಳ್ಳಿ ಹಳ್ಳಿಗೂ ಈ ದೈತ್ಯ ಕಂಪನಿಗಳು ಕಾಲಿಟ್ಟಿವೆ. ಮೆಗಾ ಸೇಲ್‌ನಲ್ಲಿ ರಿಯಾಯ್ತಿ ಜೊತೆಯಲ್ಲಿ ಫ್ರೀ ಶಿಪ್ಪಿಂಗ್, ಗಿಫ್ಟ್ ಸೇರಿದಂತೆ ಹಲವು ಆಫರ್‌ಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ.
ಕೆಲವು ಸನ್ನಿವೇಶ ಆನ್‌ಲೈನ್ ಶಾಪಿಂಗ್‌ನಲ್ಲಿ ಮೋಸ ಆಗಿರುವ ಕುರಿತು ವರದಿಗಳು ಪ್ರಕಟವಾಗುತ್ತಿರುತ್ತವೆ. ಇದೀಗ ಇಂತಹುವುದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಮೋಸಕ್ಕೊಳಗಾದ ವ್ಯಕ್ತಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಬಳಕೆದಾರ ಅಮೇಜಾನ್‌ನಲ್ಲಿ Vivo Y20A ಸ್ಮಾರ್ಟ್‌ಫೋನ್ ಆರ್ಡರ್ ಮಾಡಿದ್ದರು. ಆದ್ರೆ ಅಮೇಜಾನ್ ಕಳುಹಿಸಿದ್ದ ಪಾರ್ಸೆಲ್ ನೋಡಿ ಶಾಕ್ ಆಗಿದ್ದಾರೆ.
ಫೋನ್ ಬದಲಾಗಿ ಬಂದಿದ್ದು ಸಾಬೂನು
ನರೇಂದ್ರ ನಾಥ್ ಮಿಶ್ರಾ ಎಂಬವರು ಎಕ್ಸ್ ಖಾತೆಯಲ್ಲಿ ತಮಗಾದ ಮೋಸದ ಕುರಿತು ಬರೆದುಕೊಂಡಿದ್ದಾರೆ. ನನ್ನ ಸಂಬಂಧಿ ಯುವತಿ ಅಮೇಜಾನ್‌ನಲ್ಲಿ ವಿವೋ ವೈ20ಎ ಫೋನ್ ಆರ್ಡರ್ ಮಾಡಿದ್ದರು. ಬಾಕ್ಸ್‌ನಲ್ಲಿ ಫೋನ್ ಬದಲಾಗಿ ಸಾಬೂನಿನ ಮೂರು ತುಂಡುಗಳನ್ನು ಇರಿಸಿ ಕಳುಹಿಸಲಾಗಿದೆ. ನಾವು ಅಮೇಜಾನ್ ಹೆಲ್ಪ್ ಸೆಂಟರ್ ಅವರನ್ನು ಸಂಪರ್ಕಿಸಿದರೂ ಸ್ಪಂದಿಸುತ್ತಿಲ್ಲ. ಆನ್‌ಲೈನ್ ಮಾರ್ಕೆಟಿಂಗ್ ನಿಂದ ಇಷ್ಟು ದೊಡ್ಡ ವಂಚನೆಯಾಗಿದೆ ಎಂದು ಬರೆದುಕೊಂಡಿದ್ದಾರೆ.
ದೇಶದ ಮೂಲ ಬಚ್ಚಿಡುವ ಇ-ಕಾಮರ್ಸ್ ಕಂಪನಿಗಳಿಗೆ 1 ಲಕ್ಷ ದಂಡ, ಜೈಲು ಶಿಕ್ಷೆ!
ನರೇಂದ್ರ ನಾಥ್ ಟ್ವೀಟ್‌ಗೆ ಅಮೇಜಾನ್ ಪ್ರತಿಕ್ರಿಯಿಸಿದ್ದು, ನಾವು ನಿಮ್ಮ ಸಹಾಯಕ್ಕಾಗಿ ಸದಾ ಸಿದ್ಧವಾಗಿರುತ್ತವೆ. ದಯವಿಟ್ಟು ಬಿಲ್ ನಮಗೆ ಕಳುಹಿಸಿ ಎಂದು ಮನವಿ ಮಾಡಿಕೊಂಡಿದೆ. ಹೀಗೆ ನರೇಂದ್ರ ನಾಥ್ ಮಿಶ್ರಾ ಮತ್ತು ಅಮೇಜಾನ್ ನಡುವೆ ಸಂಭಾಷಣೆ ನಡೆದಿದೆ. ಅಂತಿಮವಾಗಿ ಅಮೇಜಾನ್ ಹಣ ಹಿಂದಿರುಗಿಸೋದಾಗಿ ಒಪ್ಪಿಕೊಂಡಿದೆ. ರೀಫಂಡ್ ಮಾಡಲು ಒಪ್ಪಿರುವ ಅಮೇಜಾನ್‌ಗೆ ನರೇಂದ್ರ ನಾಥ್ ಧನ್ಯವಾದ ತಿಳಿಸಿದ್ದಾರೆ.
ಯಾದಗಿರಿ ವ್ಯಕ್ತಿಗೂ ಮೋಸ
ಯಾದಗಿರಿಯ ನಿವಾಸಿ ಶರಣಗೌಡ ಎಂಬವರು ಅಮೆಜಾನ್‌ನಲ್ಲಿ ವ್ಯಾಕ್ಯೂಮ್ ಕ್ಲೀನರ್ ಆರ್ಡರ್ ಮಾಡಿದ್ದರು. ಅಮೇಜಾನ್ ಕಳುಹಿಸಿದ್ದ ಬಾಕ್ಸ್ ತೆರೆದಾಗ ಶರಣಗೌಡರು ಶಾಕ್ ಆಗಿದ್ದರು. ಕೇವಲ ಖಾಲಿ ಬಾಕ್ಸ್ ಶರಣಗೌಡರ ಮನೆಗೆ ಬಂದಿತ್ತು. ಈ ಸಂಬಂಧ ಶರಣಗೌಡರು ಯಾದಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಾಗಾಗಿ ಆನ್‌ಲೈನ್ ಶಾಪಿಂಗ್ ಮಾಡುವಾಗ ತುಂಬಾ ಎಚ್ಚರಿಕೆಯಿಂದಿರಬೇಕು. ಇತ್ತೀಚೆಗೆ ವಂಚನೆ ಪ್ರಕರಣಗಳನ ಸಂಖ್ಯೆ ಹೆಚ್ಚಾಗುತ್ತಿದೆ.
ಆನ್‌ಲೈನ್ ಶಾಪ್ ಮಾಡ್ತೀರಾ.. ಹುಷಾರ್..! ಪುಸ್ತಕದ ಬದಲಿಗೆ ಬಂತು ಡಕೋಟಾ ಫೋನು