15*15*15 ಹಣಕಾಸು ಸೂತ್ರ :15 ವರ್ಷ ತಿಂಗಳಿಗೆ 15 ಸಾವಿರ ರೂ. ಹೂಡಿಕೆ ಮಾಡಿದ್ರೆ 1ಕೋಟಿ ಗಳಿಸ್ಬಹುದು!

ಸಾಮಾನ್ಯವಾಗಿ ಎಲ್ಲರೂ ಹೂಡಿಕೆ ಮಾಡುತ್ತಾರೆ. ಆದರೆ, ಕೆಲವರು ಮಾತ್ರ ಆ ಹೂಡಿಕೆಯಿಂದ ಉತ್ತಮ ರಿಟರ್ನ್ ಗಳಿಸುತ್ತಾರೆ. 15 ವರ್ಷಗಳ ದೀರ್ಘಾವಧಿ ಹೂಡಿಕೆಯಿಂದ ಒಂದು ಕೋಟಿ ರೂ. ಗಳಿಸಬಹುದು. ಆದರೆ, ಇದಕ್ಕೆ ನಿಮಗೆ 15*15*15  ಹಣಕಾಸು ನಿಯಮ ಅಥವಾ ಸೂತ್ರ ತಿಳಿದಿರಬೇಕು. 
 

Financial Rule of 15 15 15 How investing 15000 monthly can make you around 1 crore in 15 years anu

Business Desk:ಹಣ ಯಾರಿಗೆ ತಾನೇ ಬೇಡ ಹೇಳಿ? ಅದರಲ್ಲೂ ಕೋಟಿ ಗಳಿಸೋದು ಹೇಗೆ ಎಂಬುದು ತಿಳಿದ್ರೆ ಹೂಡಿಕೆ ಮಾಡಲು ಯಾರೂ ಹಿಂದೆ ಮುಂದೆ ನೋಡುವುದಿಲ್ಲ ಅಲ್ವಾ? ಭವಿಷ್ಯಕ್ಆಗಿ, ತೆರಿಗೆ ಉಳಿತಾಯಕ್ಕಾಗಿ ವೇತನ ಪಡೆಯುವ ಬಹುತೇಕರು ಹೂಡಿಕೆ ಮಾಡುತ್ತಾರೆ. ಹೂಡಿಕೆಯಿಂದ ಉತ್ತಮ ರಿಟರ್ನ್ ಕೂಡ ನಿರೀಕ್ಷಿಸುತ್ತಾರೆ. ಆದರೆ, ಎಲ್ಲರಿಗೂ ಹೂಡಿಕೆಯ ನಿಯಮ ತಿಳಿದಿರೋದಿಲ್ಲ. ಕೆಲವರು ಮಾತ್ರ ಸಮರ್ಪಕ ಹೂಡಿಕೆ ಮಾಡಿ ಉತ್ತಮ ಆದಾಯ ಗಳಿಸುತ್ತಾರೆ. ಹೂಡಿಕೆ ಮಾಡೋರಿಗೆ 15*15*15 ಹಣಕಾಸು ನಿಯಮದ ಬಗ್ಗೆ ತಿಳಿದಿದ್ರೆ ಕೋಟ್ಯಧೀಶರಾಗೋದು ಸುಲಭದ ಮಾತು. 15*15*15  ಹಣಕಾಸು ನಿಯಮ ಅಥವಾ ಸೂತ್ರದ ಬಗ್ಗೆ ತಿಳಿದಿದ್ರೆ, ದೀರ್ಘಾವಧಿಯಲ್ಲಿ ಹಣಕಾಸಿನ ಸದೃಢತೆ ಸಾಧಿಸಬಹುದು. ಈ ನಿಯಮಕ್ಕೆ ಅಥವಾ ಸೂತ್ರಕ್ಕೆ ಅಂಟಿಕೊಂಡು ನೀವು ಹೂಡಿಕೆ ಮಾಡಿದ್ರೆ ನಿವೃತ್ತಿ ಅಥವಾ ಇತರ ನಿಮ್ಮ ಹಣಕಾಸಿನ ಉದ್ದೇಶಗಳ ಪೂರೈಕೆಗೆ ಅಗತ್ಯ ನಿಧಿಯನ್ನು ನಿರ್ಮಿಸೋದು ಸುಲಭವಾಗುತ್ತದೆ.  ಪ್ರತಿ ತಿಂಗಳು ಆದಾಯದಲ್ಲಿ ಒಂದಿಷ್ಟು ಭಾಗವನ್ನು ಹೂಡಿಕೆ ಮಾಡುವ ಮೂಲಕ ದೀರ್ಘಾವಧಿಯಲ್ಲಿ ಲಕ್ಷ ಅಥವಾ ಕೋಟಿ ಲೆಕ್ಕದಲ್ಲಿ ಹಣ ಸಂಗ್ರಹಿಸಬಹುದು. 

15 ವರ್ಷ ಪ್ರತಿ ತಿಂಗಳು 15 ಸಾವಿರ ರೂ. ಹೂಡಿಕೆ
15 ವರ್ಷಗಳ ಅವಧಿಯಲ್ಲಿ ಪ್ರತಿ ತಿಂಗಳು 15 ಸಾವಿರ ರೂ. ಹೂಡಿಕೆ ಮಾಡುವ ಮೂಲಕ ನೀವು ಒಂದು ಕೋಟಿ ರೂ. ಗಳಿಸಬಹುದು. ಆದರೆ, ಇದಕ್ಕೆ ನೀವು 15*15*15  ಹಣಕಾಸು ನಿಯಮ ತಿಳಿದುಕೊಳ್ಳುವುದು ಅಗತ್ಯ. ಈ ಸೂತ್ರ ನಿಮಗೆ ದೀರ್ಘಾವಧಿಯಲ್ಲಿ ಆರ್ಥಿಕ ಸ್ಥಿರತೆ ಹೊಂದಲು ನೆರವು ನೀಡುತ್ತದೆ. ಈ ಸೂತ್ರದ ಆಧಾರದಲ್ಲಿ ನೀವು ಪ್ರತಿ ತಿಂಗಳು 15 ಸಾವಿರ ರೂ. ಹೂಡಿಕೆ ಮಾಡಿದರೆ ವಾರ್ಷಿಕ ಶೇ.15ರ ಪ್ರಗತಿ ದರದಲ್ಲಿ 15 ವರ್ಷಗಳಲ್ಲಿ ಉತ್ತಮ ಮೊತ್ತವನ್ನು ಸಂಗ್ರಹಿಸಬಹುದು. ಇದಕ್ಕಾಗಿ ನೀವು ಷೇರುಗಳಲ್ಲಿನ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್ ಐಪಿ), ಮ್ಯೂಚುವಲ್ ಫಂಡ್ಸ್ ಅಥವಾ ಇತರ ಹೂಡಿಕೆ ಸಾಧನಗಳಲ್ಲಿ ಹೂಡಿಕೆ ಮಾಡಬೇಕು. ನಿರಂತರವಾಗಿ ನಿಗದಿತ ಮೊತ್ತವನ್ನು ಪ್ರತಿ ತಿಂಗಳು ಹೂಡಿಕೆ ಮಾಡೋದ್ರಿಂದ ನಿಮ್ಮ ಪೋರ್ಟ್ ಫೋಲಿಯೋ ಮೇಲೆ ಮಾರುಕಟ್ಟೆ ಏರಿಳಿತಗಳ ಪರಿಣಾಮ ತಗ್ಗುತ್ತದೆ.

PPF ಖಾತೆದಾರರೇ ಗಮನಿಸಿ; ಇಂದು ಹೂಡಿಕೆ ಮಾಡಿದ್ರೆ ಮಾತ್ರ ನಿಮಗೆ ಅಧಿಕ ರಿಟರ್ನ್ ಸಿಗುತ್ತೆ, ಏಕೆ? ಇಲ್ಲಿದೆ ಮಾಹಿತಿ

ವಾರ್ಷಿಕ ಶೇ.15ರಷ್ಟು ಬೆಳವಣಿಗೆ ದರ ಈ ನಿಯಮದ ಇನ್ನೊಂದು ಪ್ರಮುಖ ಸಂಗತಿ. ಇದು ನಿಮಗೆ ದೊಡ್ಡ ಮೊತ್ತದ ಬೆಳವಣಿಗೆ ದರವಾಗಿ ಕಾಣಿಸಬಹುದು. ಅಲ್ಲದೆ, ಎಷ್ಟು ಗಳಿಸಲು ಸಾಧ್ಯವೆ ಎಂಬ ಅನುಮಾನ ಮೂಡಬಹುದು. ಆದರೆ, ಸುದೀರ್ಘಾವಧಿಯಲ್ಲಿ ಈಕ್ವಿಟಿ ಹೂಡಿಕೆ ಮೂಲಕ ಇದನ್ನು ಸಾಧಿಸಬಹುದು. ಭಾರತದ ಷೇರು ಮಾರುಕಟ್ಟೆ ಕಳೆದ ಕೆಲವು ದಶಕಗಳಿಂದ ವಾರ್ಷಿಕ ಸುಮಾರು ಶೇ.15ರಷ್ಟು ಅಂದಾಉ ರಿಟರ್ನ್ ನೀಡುತ್ತಿದೆ. ಇದು ಬಾಂಡ್ಸ್, ಎಫ್ ಡಿ ಹಾಗೂ ಚಿನ್ನಕ್ಕಿಂತ ಅಧಿಕ ರಿಟರ್ನ್ ನೀಡುತ್ತಿದೆ. 

ಇನ್ನು ನಿಮ್ಮ ಆರ್ಥಿಕ ಗುರಿಗಳನ್ನು ತಲುಪಲು 15 ವರ್ಷಗಳ ಹೂಡಿಕೆ ಅವಧಿ ಅಗತ್ಯ ಕೂಡ. ಈ ದೀರ್ಘಾವಧಿ ಹೂಡಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸುವ ಜೊತೆಗೆ ದೀರ್ಘಾವಧಿಯಲ್ಲಿ ನಿಧಾವಾಗಿ ಬೆಳವಣಿಗೆ ಹೊಂದಲು ನೆರವು ನೀಡುತ್ತದೆ. 

PPF ಬಡ್ಡಿದರ ಏಕೆ ಏರಿಕೆಯಾಗಿಲ್ಲ? ಮುಂದಿನ ದಿನಗಳಲ್ಲಿ ಹೆಚ್ಚಳವಾಗುತ್ತಾ?

ಕೋಟಿ ಗಳಿಸೋದು ಹೇಗೆ?
ನೀವು ಪ್ರತಿ ತಿಂಗಳು 15 ಸಾವಿರ ರೂ. ಹೂಡಿಕೆ ಮಾಡುತ್ತೀರಿ ಎಂದು ಭಾವಿಸಿ. ಇದರ ವಾರ್ಷಿಕ ಬೆಳವಣಿಗೆ ದರ ಶೇ.15. ಹೀಗಿರುವಾಗ 15 ವರ್ಷಗಳ ಬಳಿಕ ನಿಮ್ಮ ಹೂಡಿಕೆ ಮೊತ್ತ ಸುಮಾರು 1.38 ಕೋಟಿ ರೂ.ಗೆ ತಲುಪಿರುತ್ತದೆ. ಈ ದೊಡ್ಡ ಮೊತ್ತ ನಿಮಗೆ ನಿಮ್ಮ ಮಕ್ಕಳ ಶಿಕ್ಷಣ, ಮನೆ ಖರೀದಿ ಅಥವಾ ನಿವೃತ್ತಿ ಸೇರಿದಂತೆ ಅಗತ್ಯ ಹಣಕಾಸಿನ ಗುರಿಗಳನ್ನು ಪೂರೈಸಿಕೊಳ್ಳಲು ನೆರವು ನೀಡುತ್ತದೆ. 


 

Latest Videos
Follow Us:
Download App:
  • android
  • ios