PPF ಬಡ್ಡಿದರ ಏಕೆ ಏರಿಕೆಯಾಗಿಲ್ಲ? ಮುಂದಿನ ದಿನಗಳಲ್ಲಿ ಹೆಚ್ಚಳವಾಗುತ್ತಾ?

ಭಾರತದಲ್ಲಿ ಹೂಡಿಕೆದಾರರ ನೆಚ್ಚಿನ ಆಯ್ಕೆಗಳಲ್ಲಿ ಪಿಪಿಎಫ್ ಕೂಡ ಒಂದಾಗಿತ್ತು. ತೆರಿಗೆ ಪ್ರಯೋಜನದ ಜೊತೆಗೆ ಉತ್ತಮ ರಿಟರ್ನ್ ಸಿಗುವ ಕಾರಣಕ್ಕೆ ಉದ್ಯೋಗಿಗಳು ಈ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ, ಕಳೆದ ಕೆಲವು ವರ್ಷಗಳಿಂದ ಪಿಪಿಎಫ್ ಬಡ್ಡಿದರದಲ್ಲಿ ಯಾವುದೇ ಏರಿಕೆಯಾಗಿಲ್ಲ. ಏ.1ರಂದು ಬಹುತೇಕ ಎಲ್ಲ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. ಆದರೆ, ಪಿಪಿಎಫ್ ಬಡ್ಡಿದರದಲ್ಲಿ ಮಾತ್ರ ಯಾವುದೇ ಬದಲಾವಣೆ ಮಾಡಿಲ್ಲ. ಇದ್ರಿಂದ ಪಿಪಿಎಫ್ ಪ್ರಾಮುಖ್ಯತೆ ಕಳೆದುಕೊಳ್ಳುವುದಿಲ್ಲವೆ? ಮುಂದಿನ ದಿನಗಳಲ್ಲಿ ಬಡ್ಡಿದರ ಹೆಚ್ಚಳವಾಗುತ್ತಾ? ಇಲ್ಲಿದೆ ಮಾಹಿತಿ. 

EPFO Is there scope to increase PPF rates in future Know why PPF interest rate remains unchanged anu

Business Desk: ಏಪ್ರಿಲ್‌-ಜೂನ್‌ ತ್ರೈಮಾಸಿಕಕ್ಕೆಅನ್ವಯವಾಗುವಂತೆ ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಶೇ. 0.7 ಹೆಚ್ಚಳ ಮಾಡಿದೆ. ಆದರೆ, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಬಡ್ಡಿದರದಲ್ಲಿ ಮಾತ್ರ ಯಾವುದೇ ಹೆಚ್ಚಳವಾಗಿಲ್ಲ. ಹಾಗಾಗಿ ಈ ಹಣಕಾಸು ಸಾಲಿನಲ್ಲಿ ಪಿಪಿಎಫ್ ಬಡ್ಡಿದರ ಶೇ.7.1ರಷ್ಟೇ ಇದೆ. ಇದು ಪಿಪಿಎಫ್ ಕಡೆಗೆ ಹೂಡಿಕೆದಾರರು ಹೆಚ್ಚು ಆಸಕ್ತಿ ತೋರದೆ ಇತರ ಸಣ್ಣ ಉಳಿತಾಯ ಯೋಜನೆಗಳೆಡೆಗೆ ವಾಲುವ ಸಾಧ್ಯತೆಯನ್ನು ಹೆಚ್ಚಿಸಿದೆ. ಮುಖ್ಯವಾಗಿ ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ ಸಿಎಸ್ಎಸ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ ಎಸ್ ಸಿ) ಹಾಗೂ ಸುಕನ್ಯಾ ಸಮೃದ್ಧಿ ಯೋಜನೆ (ಎಸ್ ಎಸ್ಎಸ್ ವೈ) ಉತ್ತಮ ಬಡ್ಡಿದರ ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹೂಡಿಕೆದಾರರನ್ನು ಆಕರ್ಷಿಸುತ್ತಿವೆ. ಎಸ್ ಸಿಎಸ್ ಎಸ್, ಎನ್ ಎಸ್ ಸಿ ಹಾಗೂ ಎಸ್ಎಸ್ಎಸ್ ವೈ ಈ ತ್ರೈಮಾಸಿಕದಲ್ಲಿ ಕ್ರಮವಾಗಿ ಶೇ.8.2, ಶೇ.7.7 ಹಾಗೂ ಶೇ.8ರಷ್ಟು ಬಡ್ಡಿದರ ಹೊಂದಿವೆ. ಇನ್ನು ಈ ಬಾರಿಯ ಬಜೆಟ್ ನಲ್ಲಿ ಮಹಿಳೆಯರಿಗಾಗಿ ಘೋಷಿಸಿರುವ ಹಾಗೂ ಏ.1ರಿಂದ ಲಭ್ಯವಿರುವ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (ಎಂಎಸ್ ಎಸ್ ಸಿ) ಕೂಡ ಶೇ.7.5ರಷ್ಟು ಬಡ್ಡಿದರ ಹೊಂದಿದೆ. ಇದು ಪಿಪಿಎಫ್ ಬಡ್ಡಿದರಕ್ಕಿಂತ ಶೇ.0.4ರಷ್ಟು ಹೆಚ್ಚಿದೆ.

ನಿರ್ದಿಷ್ಟ ಸ್ಥಿರ ಠೇವಣಿ (ಎಫ್ ಡಿ) ಯೋಜನೆಗಳು ಕೂಡ ಇದು ಉತ್ತಮ ರಿಟರ್ನ್ಸ್ ನೀಡುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ಒಂದು ಸಾಲಿನಲ್ಲಿ ರೆಪೋ ದರದಲ್ಲಿ ಭಾರೀ ಹೆಚ್ಚಳ ಮಾಡಿದೆ. ಪರಿಣಾಮ ಸ್ಥಿರ ಠೇವಣಿ (ಎಫ್ ಡಿ) ಮೇಲಿನ ಬಡ್ಡಿದರದಲ್ಲಿ ಹೆಚ್ಚಳವಾಗಿದೆ. ಇದರಿಂದ ಇತ್ತೀಚಿನ ದಿನಗಳಲ್ಲಿ ಎಫ್ ಡಿ ಮೇಲಿನ ಹೂಡಿಕೆ ಕೂಡ ಹೆಚ್ಚಿದೆ. ಇನ್ನೊಂದೆಡೆ ಎಲ್ಲ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಹೆಚ್ಚಳವಾದರೂ ಪಿಪಿಎಫ್ ಬಡ್ಡಿದರದಲ್ಲಿ ಮಾತ್ರ 2020ರ ಏಪ್ರಿಲ್-ಜೂನ್ ತ್ರೈಮಾಸಿಕದಿಂದ ಯಾವುದೇ ಬದಲಾವಣೆಯಾಗಿಲ್ಲ. 2020ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಪಿಪಿಎಫ್ ಮೇಲಿನ ಬಡ್ಡಿದರವನ್ನು ಶೇ.7.9ರಿಂದ ಶೇ.7.1ಕ್ಕೆ ಇಳಿಕೆ ಮಾಡಲಾಗಿತ್ತು. ಇದಕ್ಕೂ ಮುನ್ನ 2019ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕೂಡ ಬಡ್ಡಿದರ ಇಳಿಕೆ ಮಾಡಲಾಗಿತ್ತು. ಕೊನೆಯದಾಗಿ ಪಿಪಿಎಫ್ ಬಡ್ಡಿದರದಲ್ಲಿ ಏರಿಕೆ ಮಾಡಿರೋದು 2018ರ ಅಕ್ಟೋಬರ್ ಹಾಗೂ ಡಿಸೆಂಬರ್ ನಡುವೆ. ಈ ಸಮಯದಲ್ಲಿ ಬಡ್ಡಿದರವನ್ನು ಶೇ.7.6ರಿಂದ ಶೇ.8ಕ್ಕೆ ಹೆಚ್ಚಳ ಮಾಡಲಾಗಿತ್ತು. 

ಯಾರೆಲ್ಲ ಐಟಿಆರ್ -1 ಸಹಜ್ ಸಲ್ಲಿಕೆ ಮಾಡ್ಬೇಕು? ಯಾವೆಲ್ಲ ದಾಖಲೆಗಳು ಅಗತ್ಯ? ಇಲ್ಲಿದೆ ಮಾಹಿತಿ

ಪಿಪಿಎಫ್ ಬಡ್ಡಿದರ ಏರಿಕೆಯಾಗುವ ಸಾಧ್ಯತೆಯಿದೆಯಾ?
ಕಳೆದ ಹತ್ತು ವರ್ಷಗಳ ಸರ್ಕಾರಿ ಬಾಂಡ್ ಗಳು ಅಥವಾ G-Sec ಬಾಂಡ್ ಗಳ ದರದಲ್ಲಿ ನೋಡಿದರೆ ಪಿಪಿಎಫ್ ಬೆಂಚ್ ಮಾರ್ಕ್ 25 ಬೇಸಿಸ್ ಪಾಯಿಂಟ್ಸ್ . ಆದರೆ, ಬ್ಯಾಂಕ್ ಬಜಾರ್ ಡಾಟ್ ಕಾಮ್ ಸಿಇಒ ಅದಿಲ್ ಶೆಟ್ಟಿ ಪ್ರಕಾರ 'ಕಳೆದ ತ್ರೈಮಾಸಿಕದಲ್ಲಿ G-Secs ಬಾಂಡ್ ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಪಿಪಿಎಫ್ ದರಗಳನ್ನು ಹೆಚ್ಚಳ ಮಾಡುವ ಸಾಧ್ಯತೆಯಿದೆ.' 

ಕೆಲವೊಮ್ಮೆ ಸಾರ್ವಜನಿಕರ ಅಭಿಪ್ರಾಯಗಳು ಅಥವಾ ಆರ್ಥಿಕತೆಯ ಮೇಲೆ ಯಾವುದೇ ಪರಿಣಾಮ ಬೀರದ ಇತರ ಅಂಶಗಳನ್ನು ಪರಿಗಣಿಸಿ ಈ ಯೋಜನೆಗಳ ಬಡ್ಡಿದರವನ್ನು ಸ್ಥಿರವಾಗಿಡುವ ಅಥವಾ ಹೆಚ್ಚಳ ಮಾಡುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಪಿಪಿಎಫ್ ದರಗಳನ್ನು ಈ ಹಿಂದೆ ಹೆಚ್ಚಳ ಮಾಡಲಾಗಿದೆ. ಹಾಗಾಗಿ ಈ ಸಮಯದಲ್ಲಿ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. 

ನಿಷ್ಕ್ರಿಯವಾಗಿದ್ದ ವಾರಸುದಾರರಿಲ್ಲದ ಖಾತೆಗಳಲ್ಲಿದ್ದ 35000 ಕೋಟಿ ಆರ್‌ಬಿಐ ವಶಕ್ಕೆ

ಪಿಪಿಎಫ್ ಖಾತೆ ಅವಧಿ 15 ವರ್ಷ. ಅದಾದ ಬಳಿಕ ನೀವು ಬಯಸಿದರೆ ಪ್ರತೀ 5 ವರ್ಷಕ್ಕೊಮ್ಮೆ ಅವಧಿ ವಿಸ್ತರಣೆ ಮಾಡಬಹುದು. ಪಿಪಿಎಫ್ ಯೋಜನೆಗಳ ನಿಯಮಗಳು  2019ರ ಅನ್ವಯ ಪಿಪಿಎಫ್ ಖಾತೆ 15 ವರ್ಷಗಳ ಬಳಿಕ ಮೆಚ್ಯೂರ್ ಆದಾಗ ಮೂರು ಆಯ್ಕೆಗಳಿರುತ್ತವೆ. ಒಂದು ಖಾತೆ ಮುಚ್ಚುವುದು ಹಾಗೂ ಎಲ್ಲ ಹಣವನ್ನು ವಿತ್ ಡ್ರಾ ಮಾಡಿಕೊಳ್ಳುವುದು. ಇನ್ನೊಂದು ಹೊಸ ಹೂಡಿಕೆಯಿಲ್ಲದೆ 5 ವರ್ಷಗಳಿಗೆ ಖಾತೆ ಅವಧಿ ವಿಸ್ತರಣೆ ಮಾಡುವುದು. ಹಾಗೆಯೇ ಮತ್ತೊಂದು ಹೊಸ ಹೂಡಿಕೆ ಸಮೇತ ಖಾತೆ ಅವಧಿ ವಿಸ್ತರಣೆ ಮಾಡುವುದು. 
 

Latest Videos
Follow Us:
Download App:
  • android
  • ios