ಜನಪ್ರಿಯ ವಿಡಿಯೋ ಅಪ್ಲಿಕೇಶನ್ ಟಿಕ್‌ಟಾಕ್‌ ಪೈಪೋಟಿಯ ನಡುವೆ ಜಾಹೀರಾತು ಆದಾಯ ಕುಸಿತದಿಂದ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಈ ವಾರ Google ಮಾತೃ ಸಂಸ್ಥೆ Alphabet Inc. ಮತ್ತು Microsoft ನಿಂದ ದುರ್ಬಲ ಗಳಿಕೆಯ ವರದಿಗಳನ್ನು Meta ನ ನಿರಾಶಾದಾಯಕ ಫಲಿತಾಂಶಗಳು ಅನುಸರಿಸಿವೆ. 

ಫೇಸ್‌ಬುಕ್‌, ವಾಟ್ಸಾಪ್‌ ಹಾಗೂ ಇನ್ಸ್ಟಾಗ್ರಾಮ್‌ ಒಡೆತನದ ಮೆಟಾ ಕಂಪನಿ ಇತ್ತೀಚೆಗೆ ನಾನಾ ಕಾರಣಗಳಿಂದ ಸುದ್ದಿಯಾಗುತ್ತಿದೆ. ಮೊನ್ನೆಯಷ್ಟೇ ವಾಟ್ಸಾಪ್‌ ಭಾರತ ಸೇರಿ ಹಲವೆಡೆ 2 ಗಂಟೆಗಳ ಸೇವೆ ಸ್ಥಗಿತಗೊಂಡಿತ್ತು. ಈಗ ಮೆಟಾ ಸಂಸ್ಥೆ ತನ್ನ Q3 ಆದಾಯ ಹಾಗೂ ಲಾಭವನ್ನು ಪ್ರಕಟಿಸಿದೆ. ತನ್ನ ಆದಾಯವು ಸತತ ಎರಡನೇ ತ್ರೈಮಾಸಿಕಕ್ಕೆ ಕುಸಿದಿದೆ ಎಂದು ಮೆಟಾ ವರದಿ ಮಾಡಿದೆ. ಜನಪ್ರಿಯ ವಿಡಿಯೋ ಅಪ್ಲಿಕೇಶನ್ ಟಿಕ್‌ಟಾಕ್‌ ಪೈಪೋಟಿಯ ನಡುವೆ ಜಾಹೀರಾತು ಆದಾಯ ಕುಸಿತದಿಂದ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಈ ವಾರ Google ಮಾತೃ ಸಂಸ್ಥೆ Alphabet Inc. ಮತ್ತು Microsoft ನಿಂದ ದುರ್ಬಲ ಗಳಿಕೆಯ ವರದಿಗಳನ್ನು Meta ನ ನಿರಾಶಾದಾಯಕ ಫಲಿತಾಂಶಗಳು ಅನುಸರಿಸಿವೆ. 

ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ಮೂರು ತಿಂಗಳ ಅವಧಿಯಲ್ಲಿ ಮೆಟಾ 4.4 ಅಮೆರಿಕ ಬಿಲಿಯನ್‌ ಡಾಲರ್‌ ಅಥವಾ ಪ್ರತಿ ಷೇರಿಗೆ 1.64 ಡಾಲರ್‌ ಲಾಭ ಗಳಿಸಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ 9.19 ಬಿಲಿಯನ್ ಡಾಲರ್‌ ಅಥವಾ ಪ್ರತಿ ಷೇರಿಗೆ $3.22 ಲಾಭಕ್ಕಿಂತ 52% ಕಡಿಮೆಯಾಗಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. 

ಇದನ್ನು ಓದಿ: ಮಾಯವಾಗುತ್ತಿದ್ದಾರೆ Facebook ಹಿಂಬಾಲಕರು: ಮಾರ್ಕ್‌ ಜುಕರ್‌ಬರ್ಗ್‌ಗೂ 10 ಸಾವಿರ ಫಾಲೋವರ್ಸ್ ಇಲ್ಲ..!

ಇನ್ನೊಂದೆಡೆ, ಮೆಟಾ ಸಂಸ್ಥೆಯ ಆದಾಯ ಸಹ 29.01 ಬಿಲಿಯನ್‌ ಡಾಲರ್‌ನಿಂದ 27.71 ಬಿಲಿಯನ್‌ ಡಾಲರ್‌ಗೆ ಅಂದರೆ ಶೇ. 4 ರಷ್ಟು ಕುಸಿತ ಕಂಡಿದೆ ಎಂದೂ ಮಾರ್ಕ್‌ ಜುಕರ್‌ಬರ್ಗ್‌ ಒಡೆತನದ ಮೆಟಾ ಸಂಸ್ಥೆ ವರದಿ ಮಾಡಿದೆ. Q2 ಅವಧಿಯಲ್ಲಿ ಶೇ. 1 ರಷ್ಟು ಆದಾಯ ಕುಸಿತಗೊಂಡಿದ್ದ ಮೆಟಾ ಆದಾಯ ಈ ಬಾರಿ ಶೇ. 4 ರಷ್ಟು ಕುಸಿದಿದೆ.

ಇತ್ತೀಚಿನ ತ್ರೈಮಾಸಿಕದಲ್ಲಿ 27.4 ಬಿಲಿಯನ್‌ ಡಾಲರ್‌ ಆದಾಯದ ಮೇಲೆ ಪ್ರತಿ ಷೇರಿಗೆ 1.90 ಬಿಲಿಯನ್‌ ಡಾಲರ್‌ ಗಳಿಕೆಯನ್ನು ವಿಶ್ಲೇಷಕರು ನಿರೀಕ್ಷಿಸಿದ್ದರು ಎಂದು ಫ್ಯಾಕ್ಟ್‌ಸೆಟ್ ಹೇಳಿದೆ. ವಾಲ್‌ಸ್ಟ್ರೀಟ್‌ ಅಂದಾಜಿಗಿಂತ ಆದಾಯ ಕಡಿಮೆಯಾಗಿದೆ ಎಂದೂ ಹೇಳಲಾಗಿದೆ.

ಇನ್ನು, ಫೇಸ್‌ಬುಕ್‌ ಆಪ್‌ ದಿನನಿತ್ಯ ಬಳಕೆದಾರರ ಸಂಖ್ಯೆ 1.984 ಬಿಲಿಯನ್‌ಗೆ ಹೆಚ್ಚಾಗಿದೆ. ಕಳೆದ ತ್ರೈಮಾಸಿಕ ಅವಧಿಗೆ ಹೋಲಿಸಿದರೆ 16 ಮಿಲಿಯನ್‌ ಬಳಕೆದಾರರು ಹೆಚ್ಚಾಗಿದ್ದಾರೆ ಎಂದೂ ಹೇಳಿದೆ. 2021 ರ 4ನೇ ತ್ರೈಮಾಸಿಕ ಅವಧಿಯಲ್ಲೂ 1 ಮಿಲಿಯನ್‌ನಷ್ಟು ಫೇಸ್‌ಬುಕ್‌ ದಿನನಿತ್ಯ ಬಳಕೆದಾರರು ಕಡಿಮೆಯಾಗಿದ್ದರು. 

ಇದನ್ನೂ ಓದಿ: Facebook Hacked..? ಸೆಲೆಬ್ರಿಟಿ ಪೋಸ್ಟ್‌ಗಳನ್ನು ಮಾತ್ರ ತೋರಿಸುತ್ತಿದ್ದ ಮೆಟಾ..!

ಈ ಮಧ್ಯೆ, Q4 ಅವಧಿಯಲ್ಲೂ ಆದಾಯ ಕುಸಿಯಬಹುದೆಂದು ಮೆಟಾ ಸಂಸ್ಥೆ ಅಂದಾಜಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 3.5 ನಿಂದ ಶೇ. 11 ರಷ್ಟು ಆದಾಯ ಕುಸಿತ ಕಾಣಬಹುದೆಂದು ಹೇಳಲಾಗಿದೆ. ಹಾಗೆ, 30 ಬಿಲಿಯನ್‌ ಡಾಲರ್‌ನಿಂದ 32.5 ಬಿಲಿಯನ್‌ ಡಾಲರ್‌ ವರೆಗೆ ಆದಾಯ ನಿರೀಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

Q3 ಅವಧಿಯ ಲಾಭ ಹಾಗೂ ಆದಾಯ ಕುಸಿತ ಕಡಿಮೆಯಾಗಿರುವ ವರದಿ ಹೊರಬರುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲೂ ಮೆಟಾ ಷೇರುಗಳ ಮೌಲ್ಯ ಕುಸಿತ ಕಂಡಿದೆ. Q4 ಅವಧಿಯಲ್ಲೂ ಆದಾಯ ಕುಸಿಯಬಹುದೆಂದು ಅಂದಾಜಿಸಿರುವ ಕಾರಣ ಶೇ. 18 ರಷ್ಟು ಷೇರುಗಳ ಮೌಲ್ಯ ಕುಸಿತ ಕಂಡಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ನೂತನ ಗೌಪ್ಯತೆ ವೈಶಿಷ್ಟ್ಯಗಳನ್ನು ಪ್ರಕಟಿಸಿದ WhatsApp: ಇನ್ಮುಂದೆ ಸೈಲೆಂಟ್‌ ಆಗಿ ಗ್ರೂಪ್‌ಗಳಿಂದ ಎಕ್ಸಿಟ್‌ ಆಗಿ..!