ಫೇಸ್‌ಬುಕ್‌ನಲ್ಲಿ ಇಂದು ಹೊಸ ಸಮಸ್ಯೆಯೊಂದು ಕಾಣಿಸಿಕೊಂಡಿದೆ. ಇಂದು ಬೆಳಗ್ಗೆ ಹಲವು ಬಳಕೆದಾರರಿಗೆ ತಮ್ಮ ಟೈಮ್‌ಲೈನ್‌ನಲ್ಲಿ ಸೆಲೆಬ್ರಿಟಿಗಳಿಗೆ ಅಭಿಮಾನಿಗಳಿಂದ ಬಂದಿರುವ ಪೋಸ್ಟ್‌ಗಳನ್ನು ಮಾತ್ರ ತೋರಿಸಲಾಗುತ್ತಿತ್ತು. 

ಜಗತ್ತಿನಾದ್ಯಂತ ಬಳಕೆದಾರರಿಗೆ ಫೇಸ್‌ಬುಕ್ (Facebook) ಡೌನ್ ಆಗಿರುವ ಬಗ್ಗೆ ವರದಿಯಾಗಿದೆ. ಪ್ರಪಂಚದಾದ್ಯಂತದ ಹಲವಾರು ಬಳಕೆದಾರರು ಸೆಲೆಬ್ರಿಟಿಗಳ ವಿಲಕ್ಷಣ ಪೋಸ್ಟ್‌ಗಳನ್ನು ಮಾತ್ರ ತೋರಿಸುತ್ತಿದೆ ಎಂದು ಅತಿದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆಯ ಬಗ್ಗೆ ದೂರು ನೀಡುತ್ತಿದ್ದಾರೆ. ಇನ್ನು, ವಿವಿಧ ಅಪ್ಲಿಕೇಶನ್‌ಗಳು ಮತ್ತು ಸೇವೆಗಳ ಡೌನ್‌ಟೈಮ್ ಅನ್ನು ಟ್ರ್ಯಾಕ್ ಮಾಡುವ ಪ್ಲಾಟ್‌ಫಾರ್ಮ್ ಡೌನ್‌ಡಿಕೆಕ್ಟರ್‌ (Downdetector) ಪ್ರಕಾರ - ಈ ಸಮಸ್ಯೆಯು ಭಾರತೀಯ ಕಾಲಮಾನ ಸುಮಾರು 11 ಗಂಟೆಗೆ ಪ್ರಾರಂಭವಾಯಿತು ಮತ್ತು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಹೆಚ್ಚಾಯಿತು ಎಂದು ತಿಳಿದುಬಂದಿದೆ. ಹಾಗೂ, ವೆಬ್‌ಸೈಟ್ ಪ್ರಕಾರ, 60% ಬಳಕೆದಾರರು ಫೇಸ್‌ಬುಕ್ ಅಪ್ಲಿಕೇಶನ್‌ನೊಂದಿಗೆ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಈ ಪೈಕಿ 26% ಮತ್ತು 14% ಬಳಕೆದಾರರು ಕ್ರಮವಾಗಿ Facebook ಫೀಡ್ ಮತ್ತು ವೆಬ್‌ಸೈಟ್‌ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

ಫೇಸ್‌ಬುಕ್‌ ಡೌನ್‌ಟೈಮ್‌ಗೆ ಕಾರಣವೇನು..?
ಪ್ರಸ್ತುತ, ಇತ್ತೀಚಿನ ಅಲಭ್ಯತೆಗೆ ಕಾರಣ ತಿಳಿದು ಬಂದಿಲ್ಲ. ಅಲ್ಲದೆ, ಡೌನ್‌ಟೈಮ್ ಅನ್ನು ಫೇಸ್‌ಬುಕ್ ಇನ್ನೂ ಒಪ್ಪಿಕೊಂಡಿಲ್ಲ ಮತ್ತು ಮೆಟಾ-ಮಾಲೀಕತ್ವದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಹಣದುಬ್ಬರ, ಆರ್ಥಿಕ ಹಿಂಜರಿತ ಭೀತಿಗೆ ನಲುಗಿದ ಮೆಟಾ: ಆದಾಯ ಕುಸಿತ, ಷೇರುಗಳು ಅಲ್ಲೋಲ ಕಲ್ಲೋಲ

Scroll to load tweet…

ಫೇಸ್‌ಬುಕ್ ಸೇವೆಗಳನ್ನು ಮರುಸ್ಥಾಪಿಸಲಾಗಿದೆಯೇ..?
ಡೌನ್‌ಡೆಕ್ಟರ್ ಪ್ರಕಾರ, ಹೆಚ್ಚಿನ ಬಳಕೆದಾರರಿಗೆ ಅಪ್ಲಿಕೇಶನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಈ ಲೇಖನವನ್ನು ಬರೆಯುವ ಸಮಯದಲ್ಲಿ ಸಮಸ್ಯೆಯು ಇನ್ನೂ ಬಳಕೆದಾರರ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೆ, ಬಳಕೆದಾರರು ಫೇಸ್‌ಬುಕ್‌ನಿಂದ ಯಾವುದೇ ನವೀಕರಣ ಅಥವಾ ಸರಿಪಡಿಸುವಿಕೆಯನ್ನು ಸ್ವೀಕರಿಸಿಲ್ಲ.

ಟ್ವಿಟ್ಟರ್‌ನಲ್ಲಿ ಫೇಸ್‌ಬುಕ್‌ ವಿರುದ್ಧ ಟೀಕೆ, ಟ್ರೋಲ್‌ಗಳ ಸುರಿಮಳೆ..!
 ಇತ್ತೀಚಿನ Facebook ಡೌನ್‌ಟೈಮ್ ಕುರಿತು ದೂರು ನೀಡಲು ಜಗತ್ತಿನಾದ್ಯಂತದ ವಿವಿಧ ಬಳಕೆದಾರರು ಮೈಕ್ರೋಬ್ಲಾಗಿಂಗ್ ಸೈಟ್‌ಗೆ ಹೋಗಿದ್ದಾರೆ. ಈ ಬಾರಿ, ಫೇಸ್‌ಬುಕ್ ಗ್ಲಿಚ್ ಸೆಲೆಬ್ರಿಟಿಗಳ ಫೇಸ್‌ಬುಕ್ ವಾಲ್‌ಗೆ ಅವರ ಅಭಿಮಾನಿಗಳಿಂದ ಬಂದಿರುವ ರ್ಯಾಂಡಮ್‌ ಸಂದೇಶಗಳು ಮತ್ತು ಮೀಮ್‌ಗಳಿಂದ ತುಂಬಿದೆ. ಉದಾಹರಣೆಗೆ ದೀಪಿಕಾ ಪಡುಕೋಣೆ, ಸಲ್ಮಾನ್‌ ಖಾನ್‌, ಟಾಮ್ ಕ್ರೂಸ್, ರಿಹಾನ್ನಾ, ಸಚಿನ್ ತೆಂಡೂಲ್ಕರ್ ಮತ್ತು ಗಾರ್ಡನ್ ರಾಮ್ಸೆ ಸೇರಿ ಕೆಲವರನ್ನು ಹೆಸರಿಸಬಹುದು.

Scroll to load tweet…

“ಫೇಸ್‌ಬುಕ್ ಹ್ಯಾಕ್ ಆಗಿದೆಯೋ ಏನೋ? ನನ್ನ ಟೈಮ್‌ಲೈನ್‌ನಲ್ಲಿ ಸೆಲೆಬ್ರಿಟಿಗಳ ವಾಲ್‌ ಮೇಲೆ ಪೋಸ್ಟ್ ಮಾಡುವ ಜನರಿಂದ ತುಂಬಿದೆ" ಎಂದು ಬಳಕೆದಾರರು ಟ್ವಿಟ್ಟರ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ. "ಬೇರೆಯವರ ಫೇಸ್‌ಬುಕ್ ಟೈಮ್‌ಲೈನ್ ಪ್ರಸಿದ್ಧ ವ್ಯಕ್ತಿಗಳ ವಾಲ್‌ಗಳ ಮೇಲೆ ರ್ಯಾಂಡಮ್‌ ಬಾಟ್‌ಗಳಿಂದ ತುಂಬಿದೆಯೇ? ಫೇಸ್‌ಬುಕ್ ಹ್ಯಾಕ್ ಆಗಿದೆಯೇ?," ಎಂದು ಮತ್ತೊಬ್ಬರು ಬರೆದಿದ್ದಾರೆ.

ಫೇಸ್‌ಬುಕ್‌ನಲ್ಲಿ ಭಾರೀ ಬದಲಾವಣೆ: ಶೀಘ್ರದಲ್ಲೇ ಟಿಕ್‌ಟಾಕ್‌ನಂತಹ ವೈಶಿಷ್ಟ್ಯಗಳು ಬಿಡುಗಡೆ

ಬರೀ ಸಂದೇಶಗಳು ಮಾತ್ರ ಹಲವರು ಫೇಸ್‌ಬುಕ್‌ಗೆ ಏನಾಗಿದೆ ಎಂದು ಟ್ರೋಲ್‌ಗಳ ಸುರಿಮಳೆ ಸುರಿಸಿದ್ದಾರೆ. ಅಲ್ಲದೆ, ಫೇಸ್‌ಬುಕ್‌ ಸಮಸ್ಯೆ ಬಗ್ಗೆ ಸಾಕಷ್ಟು ಮೀಮ್‌ಗಳನ್ನು ಮಾಡಲಾಗಿತ್ತು. ಹಲವರು ಮಾರ್ಕ್‌ ಜುಕರ್‌ಬರ್ಗ್‌ ವಿರುದ್ಧ ಟ್ರೋಲ್‌ ಮಾಡಿದ್ದಾರೆ. ಇನ್ನು, ಹಲವರು ತಮ್ಮ ಫೇಸ್‌ಬುಕ್‌ ಟೈಮ್‌ಲೈನ್‌ಗಳಲ್ಲಿ ಬರುತ್ತಿದ್ದ ಸಂಬಂಧವಿಲ್ಲದ ಪೋಸ್ಟ್‌ಗಳ ಸ್ಕ್ರೀನ್‌ಶಾಟ್‌ ಅನ್ನೂ ತೆರೆದು ಟ್ವಿಟ್ಟರ್‌ನಲ್ಲಿ ಟ್ವೀಟ್‌ ಮಾಡಿಕೊಂಡಿದ್ದಾರೆ. ಇನ್ನು, ಕೆಲವರು ಈ ಸಮಸ್ಯೆಯನ್ನು ಟ್ರೋಲ್‌ ಮಾಡುತ್ತಾ ಎಂಜಾಯ್‌ ಮಾಡುತ್ತಿದ್ದರು. 

Scroll to load tweet…

ನಿಮಗೂ ಸಹ ಫೇಸ್‌ಬುಕ್‌ನಲ್ಲಿ ಇಂದು ಈ ಸಮಸ್ಯೆ ಕಾಣಿಸಿಕೊಂಡಿತ್ತಾ..?