Asianet Suvarna News Asianet Suvarna News

ಫೇಸ್ಬುಕ್‌ಗೂ ಬಂತು ಥ್ರೆಡ್: ಬಿಡುಗಡೆಯಾದ ದಿನವೇ 1 ಕೋಟಿಗೂ ಹೆಚ್ಚು ಬಳಕೆದಾರರು

ಎಲಾನ್‌ ಮಸ್ಕ್ ಒಡೆತನದ ಜನಪ್ರಿಯ ಮೈಕ್ರೋಬ್ಲಾಗಿಂಗ್‌ ಸಾಮಾಜಿಕ ಜಾಲತಾಣ ಟ್ವೀಟರ್‌ಗೆ ಪ್ರತಿಯಾಗಿ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂನ ಮಾತೃಕಂಪನಿ ಮೆಟಾದಿಂದ ‘ಥ್ರೆಡ್‌’ ಎಂಬ ಹೊಸ ಉಚಿತ ಆ್ಯಪ್‌ ಬಿಡುಗಡೆಯಾಗಿದೆ. 

Facebook also got the thread like twitter more than 1 crore users on the day of release akb
Author
First Published Jul 7, 2023, 8:50 AM IST

ಲಂಡನ್‌: ಎಲಾನ್‌ ಮಸ್ಕ್ ಒಡೆತನದ ಜನಪ್ರಿಯ ಮೈಕ್ರೋಬ್ಲಾಗಿಂಗ್‌ ಸಾಮಾಜಿಕ ಜಾಲತಾಣ ಟ್ವೀಟರ್‌ಗೆ ಪ್ರತಿಯಾಗಿ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂನ ಮಾತೃಕಂಪನಿ ಮೆಟಾದಿಂದ ‘ಥ್ರೆಡ್‌’ ಎಂಬ ಹೊಸ ಉಚಿತ ಆ್ಯಪ್‌ ಬಿಡುಗಡೆಯಾಗಿದೆ. ಅನಾವರಣಗೊಂಡ ಏಳು ತಾಸಿನಲ್ಲೇ ಒಂದು ಕೋಟಿ ಗ್ರಾಹಕರನ್ನು ಸೆಳೆಯುವ ಮೂಲಕ ಮಾರ್ಕ್ ಝಕರ್‌ಬಗ್‌ರ್‍ ಒಡೆತನದ ಈ ಆ್ಯಪ್‌ ಟ್ವೀಟರ್‌ಗೆ ಸಡ್ಡು ಹೊಡೆಯಲು ಸಜ್ಜಾಗಿದೆ.

ಬುಧವಾರ ಏಕಕಾಲಕ್ಕೆ ಆ್ಯಪಲ್‌ ಹಾಗೂ ಗೂಗಲ್‌ ಆ್ಯಂಡ್ರಾಯ್ಡ್‌ ಆ್ಯಪ್‌ ಸ್ಟೋರ್‌ಗಳಲ್ಲಿ ಹೊಸ ‘ಥ್ರೆಡ್‌’ ಆ್ಯಪ್‌ ಭಾರತವೂ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಗೊಂಡಿತು. ಇದು ಪ್ರಸಿದ್ಧ ಫೋಟೋ ಶೇರಿಂಗ್‌ ಆ್ಯಪ್‌ ಇನ್‌ಸ್ಟಾಗ್ರಾಂನ ಬರಹದ ಅವತರಣಿಕೆಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್‌ಸ್ಟಾದಲ್ಲಿ ಹೇಗೆ ಜನರು ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೋ ಹಾಗೆ ಈ ಆ್ಯಪ್‌ನಲ್ಲಿ ಬರಹಗಳನ್ನು ಶೇರ್‌ ಮಾಡಬಹುದು. ಬಿಡುಗಡೆಯಾದ ಕೆಲವೇ ಸಮಯದಲ್ಲಿ ಪಾಪ್‌ ಸ್ಟಾರ್‌ ಶಕೀರಾ ಮುಂತಾದ ಸೆಲೆಬ್ರಿಟಿಗಳು ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರು. ಮಾರ್ಕ್ ಝಕರ್‌ಬಗ್‌ರ್‍ (Mark Zuckerberg) ಪ್ರತಿ ಗಂಟೆಗೊಮ್ಮೆ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡವರ ಸಂಖ್ಯೆಯನ್ನು ಪ್ರಕಟಿಸಿ ಸಂತಸ ವ್ಯಕ್ತಪಡಿಸಿದರು.

15 ಸೋಶಿಯಲ್‌ ಮೀಡಿಯಾ ಇನ್‌ಫ್ಲ್ಯುಯೆನ್ಸರ್‌ಗಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್‌!

ಪದೇಪದೇ ನಿಯಮಗಳನ್ನು ಬದಲಿಸುವ ಮೂಲಕ ಇತ್ತೀಚೆಗೆ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿರುವ ಎಲಾನ್‌ ಮಸ್ಕ್ ಅವರ ಟ್ವೀಟರ್‌ಗೆ ಪ್ರತಿಯಾಗಿ ಈ ಆ್ಯಪ್‌ ಅನ್ನು ಜನಪ್ರಿಯಗೊಳಿಸುವುದು ಮೆಟಾದ ಉದ್ದೇಶವಾಗಿದೆ.

ಮಸ್ಕ್ ವ್ಯಂಗ್ಯ:

ಥ್ರೆಡ್‌ ಬಗ್ಗೆ ವ್ಯಕ್ತಿಯೊಬ್ಬರು ಟ್ವೀಟ್‌ ಮಾಡಿ ‘ಇದು ಟ್ವೀಟರ್‌ನ ಕಾಪಿ ಪೇಸ್ಟ್‌’ ಎಂದಿದ್ದಾರೆ. ಇದಕ್ಕೆ ಟ್ವೀಟರ್‌ ಮುಖ್ಯಸ್ಥ ಮಸ್ಕ್ ಅವರು ಸ್ಮೈಲಿ ಎಮೋಜಿ ಹಾಕಿ ಪ್ರತಿಕ್ರಿಯೆ ನೀಡಿ ಥ್ರೆಡ್ಸ್‌ ಬಗ್ಗೆ ವ್ಯಂಗ್ಯವಾಡಿದ್ದಾರೆ.

 

ಹೇಗಿದೆ ಥ್ರೆಡ್‌ ಆ್ಯಪ್‌?

ಥ್ರೆಡ್‌ ಆ್ಯಪ್‌ನಲ್ಲೂ ಟ್ವೀಟರ್‌ ಮಾದರಿಯಲ್ಲಿ ಲೈಕ್‌, ರೀಪೋಸ್ಟ್‌, ರಿಪ್ಲೈ ಅಥವಾ ಕೋಟ್‌ ಬಟನ್‌ಗಳಿವೆ. ಟ್ವೀಟರ್‌ನಲ್ಲಿ 280 ಅಕ್ಷರಗಳ ಮಿತಿಯಿದ್ದರೆ, ಥ್ರೆಡ್‌ನಲ್ಲಿ 500 ಅಕ್ಷರಗಳ ಮಿತಿಯಿದೆ. ಲಿಂಕ್‌ಗಳು, ಫೋಟೋಗಳು ಹಾಗೂ 5 ನಿಮಿಷ ಅವಧಿಯ ವಿಡಿಯೋಗಳನ್ನು ಕೂಡ ಟೆಕ್ಸ್ಟ್‌ಜೊತೆ ಇದರಲ್ಲಿ ಪೋಸ್ಟ್‌ ಮಾಡಬಹುದು. ಇನ್‌ಸ್ಟಾಗ್ರಾಂ ಬಳಕೆದಾರರು ಅದೇ ಯೂಸರ್‌ ಐಡಿಯೊಂದಿಗೆ ಇದರಲ್ಲಿ ಲಾಗಿನ್‌ ಆಗಬಹುದು. ಹೊಸ ಗ್ರಾಹಕರು ಮೊದಲು ಇನ್‌ಸ್ಟಾಗ್ರಾಂ ಖಾತೆ ತೆರೆದು, ಬಳಿಕ ಇಲ್ಲಿಗೆ ಲಾಗಿನ್‌ ಆಗಬೇಕು.


Karnataka Budget 2023 Live Updates | ಕರ್ನಾಟಕ ಬಜೆಟ್...

Follow Us:
Download App:
  • android
  • ios