02:18 PM (IST) Jul 07

ಸ್ವಿಗ್ಗಿ, ಜೊಮೊಟೊ ಡೆಲಿವರಿ ಬಾಯ್ಸ್‌ಗೆ ಭರ್ಜರಿ ಕೊಡುಗೆ: 4 ಲಕ್ಷ ರೂ. ವಿಮಾ ಸೌಲಭ್ಯ

ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರಾಗಿ ದುಡಿಯುತ್ತಿರುವ ಗಿಗ್‌ ವರ್ಕರ್ಸ್‌ಗಳಾದ ಸ್ವಿಗ್ಗಿ, ಜೊಮಾಟೋ, ಅಮೆಜಾನ್, ಮುಂತಾದ ಇ-ಕಾಮರ್ಸ್ ಸಂಸ್ಥೆಗಳ ನೌಕರರಿಗೆ (ಡೆಲಿವರಿ ಬಾಯ್‌ಗಳಿಗೆ) 2 ಲಕ್ಷ ರೂ.ಗಳ ಜೀವವಿಮಾ ಹಾಗೂ 2 ಲಕ್ಷ ರೂ.ಗಳ ಅಪಘಾತ ವಿಮಾ ಸೌಲಭ್ಯ ಸೇರಿ ಒಟ್ಟು 4 ಲಕ್ಷ ರೂ.ಗಳ ವಿಮಾ ಸೌಲಭ್ಯ ಕಲ್ಪಿಸಲಾಗುವುದು. ಸಂಪೂರ್ಣ ವಿಮಾ ಕಂತನ್ನು ಸರ್ಕಾರದ ವತಿಯಿಂದ ಭರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

02:00 PM (IST) Jul 07

ಯಾವ್ಯಾವ ಇಲಾಖೆಗೆ ಅನುದಾನ ಸಿಕ್ಕಿದ್ದೆಷ್ಟು?

01:57 PM (IST) Jul 07

ಬಿಜೆಪಿ ಸರಕಾರದ ಈ ಯೋಜನೆಗಳಿಗೆ ಕೊಕ್

ವಿದ್ಯಾನಿಧಿ, ಜಿಲ್ಲೆಗೊಂದು ಗೋಶಾಲೆ, ಎಪಿಎಂಸಿ ಕಾಯ್ದೆ ರದ್ದು....

ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದು..

ವಿವೇಕ ಶಾಲೆ ಅಭಿವೃದ್ಧಿ ಯೋಜನೆ..
ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ...

ಮಹಿಳಾ ಸ್ತ್ರೀ ಸಾಮರ್ಥ್ಯ ಯೋಜನೆ. - ಮಹಿಳೆಯರ ಸ್ವಸಹಾಯ ಸಂಘಗಳಿಗೆ ೫ ಲಕ್ಷ ರೂ ಸಹಾಯಧನ ನೀಡುವುದು..

ಭೂಸಿರಿ ಯೋಜನೆ - ರೈತರಿಗೆ ೧೦ ಸಾವಿರ ರೂ ಕೊಡೋದು..

ಶ್ರಮಶಕ್ತಿ ಯೋಜನೆ - ಕೃಷಿ ಮಹಿಳೆಯರಿಗೆ ೫೦೦ ರೂ ಪ್ರತಿ ತಿಂಗಳು ನೀಡುವುದು..

ಅಗ್ನಿ ವೀರ ಯೋಜನೆಗೆ ಸೇರುವ ಎಸ್ ಸಿ ಎಸ್ ಟಿ ಯುವಕರಿಗೆ ತರಬೇತಿ ನೀಡುವ ಯೋಜನೆ ಕೋಕ್..

ಮಕ್ಕಳ‌ ಬಸ್ - ಉಚಿತ ಬಸ್ ಯೋಜನೆ 

01:54 PM (IST) Jul 07

5 ಗ್ಯಾರಂಟಿ ಯೋಜನೆಗೆ 52 ಸಾವಿರ ಮೀಸಲು

01:34 PM (IST) Jul 07

ಇದು ನಾಲಾಯಕ್ ಬಜೆಟ್: ಆರ್. ಅಶೋಕ

ಐದು ಗ್ಯಾರಂಟಿಗಳನ್ನು ಈಡೇರುಸಲು ಆದಾಯ ಹೆಚ್ಚು ತೋರಿಸಿದ್ದಾರೆ. ಅದರ ಮುಖಾಂತರ ನಮ್ಮ ಗ್ಯಾರಂಟಿ ಈಡೇರಿಸುತ್ತೇವೆ ಅಂತಾ ಹೇಳ್ತಿದಾರೆ. ಇವರ ಗ್ಯಾರಂಟಿಗಳನ್ನು ಇನ್ನೂ ಲೇಟ್ ಮಾಡ್ತಾರೆ. ಇದು ನಾಲಾಯಕ್ ಬಜೆಟ್, ಎಂದ ಮಾಜಿ ಸಚಿವ ಆರ್.ಅಶೋಕ್.

01:31 PM (IST) Jul 07

ಜಿಲ್ಲೆಗೊಂದು ಗೋಶಾಲೆ ತೆರೆಯುವ ಹಿಂದಿನ ಸರ್ಕಾರದ ಯೋಜನೆಗೆ ಕೊಕ್

ಗೋ ಸಂರಕ್ಷಣೆ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದ ಬಿಜೆಪಿ ಸರಕಾರದ ಗೋ ಶಾಲೆ ಯೋಜನಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕೊಕ್ ನೀಡಲು ನಿರ್ಧರಿಸಿದ್ದು, ಯಾವುದೋ ಅನುದಾನ ಮೀಸಲಿಟ್ಟಿಲ್ಲ. 

01:23 PM (IST) Jul 07

ನಕಲಿ ಅಂಕಪಟ್ಟಿ ಹಾವಳಿ ತಡೆಗೆ ಕ್ರಮ, ಅಕಾಡೆಮಿಕ್ ನೋಂದಣಿ ಕಡ್ಡಾಯ

ನಕಲಿ ಅಂಕಪಟ್ಟಿ ಹಾವಳಿ ತಡೆಗೆ ಕ್ರಮ, ಅಕಾಡೆಮಿಕ್ ನೋಂದಣಿ ಕಡ್ಡಾಯ
ನೇಮಕಾತಿಯಲ್ಲಿ ಎನ್ಎಡಿ/ಡಿಜಿ ಲಾಕರ್ ಅಂಕಪಟ್ಟಿ ಕಡ್ಡಾಯ
ಡಯಾಲಿಸಿಸ್ ಕೇಂದ್ರಗಳ ಹೆಚ್ಚಳ, 219ಕ್ಕೆ ಏರಿಕೆ
ಗ್ರಾಮೀಣ ಪ್ರದೇಶಗಳ ಆರೋಗ್ಯ ಕೇಂದ್ರ 23 ಕೇಂದ್ರ ಮೇಲ್ದರ್ಜೆಗೆ
ಪುನಿತ್ ಸ್ಮರಣಾರ್ಥ ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿ ತಪಾಸಣೆ ಕೇಂದ್ರಕ್ಕೆ 6 ಕೋಟಿ
ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ 5 ಲಕ್ಷವರೆಗೆ ಶೂನ್ಯ ಬಡ್ಡಿ ಸಾಲ
ಮೈಸೂರು, ಕಲಬುರಗಿ, ಬೆಳಗಾವಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ದೇಶದಲ್ಲೇ ಮೊದಲ ಅಂಗಾಗ ಜೋಡಣೆ ಆಸ್ಪತ್ರೆ ಸ್ಥಾಪನೆಗೆ ನಿರ್ಧಾರ
4 ಸಾವಿರ ವಿಶೇಷಚೇತನರಿಗೆ ದ್ವಿಚಕ್ರ ವಾಹನ, 30 ಕೋಟಿ
ಮಹಿಳಾ ಉದ್ಯಮಿಗಳ ಸಾಲದ ಮಿತಿ 2ರಿಂದ 5 ಕೋಟಿ ಹೆಚ್ಚಳ
ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ 60 ಕೋಟಿ ಅನುದಾನ
172 ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದೆ
19 ಕೆರೆಗಳಿಗೆ ನೀರು ತುಂಬಿಸಲು 770 ಕೋಟಿ ಹಣ ಮೀಸಲು 
ಬೆಳಗಾವಿ, ದಾವಣಗೆರೆ, ಬಳ್ಳಾರಿ, ಹಾವೇರಿ, ಗದಗ, ಬೀದರ್, 
ಉತ್ತರ ಕನ್ನಡ, ವಿಜಯನಗರ, ಕೊಪ್ಪಳ, ಕಲಬುರಗಿ 
ಯಾದಗಿರಿ ಸೇರಿ ಒಟ್ಟು 823,99 ಕೆರೆಗಳನ್ನು ತುಂಬಿಸಲು ನಿರ್ಧಾರ
ವೃತ್ತಿಪರ ಶಿಕ್ಷಣ ಸಾಲಕ್ಕೆ 75 ಕೋಟಿ ಅನುದಾನ, 1 ಲಕ್ಷವರೆಗೆ ಸಾಲ
ಅಬಕಾರಿ ತೆರಿಗೆ ಶೇ. 20ರಷ್ಟು ಹೆಚ್ಚಳ - ಎಲ್ಲಾ ರೀತಿಯ ಮದ್ಯದ ಬೆಲೆ ಏರಿಕೆ
ಬಿಯರ್ ಮೇಲಿನ ಅಬಕಾರಿ ಸುಂಕ ಶೇ. 10ರಷ್ಟು ಹೆಚ್ಚಳ - ಬಿಯರ್ ದರ ಏರಿಕೆ
ಹಿಂದೂಯೇತರ ಧಾರ್ಮಿಕ ಸಂಸ್ಥೆಗಳಿಗೆ ತಸ್ತಿಕ್, 48 ಸಾವಿರದಿಂದ 60 ಸಾವಿರಕ್ಕೆ ಏರಿಕೆ
ಜೈನರ ಪುಣ್ಯಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ಅನುದಾನ
ಕ್ರಿಶ್ಚಿಯನ್ ಅಭಿವೃದ್ಧಿ ನಿಗಮಕ್ಕೆ 100 ಕೋಟಿ
ಮೈಸೂರು, ಕಲಬುರಗಿ, ಹುಬ್ಬಳ್ಳಿ ಗುರುದ್ವಾರಕ್ಕೆ 5 ಕೋಟಿ, ಗ್ರಂಥಿಗಳಿಗೆ ಮಾಸಿಕ ಗೌರವ ಧನ
ಹಲಸೂರಿಗೆ ಗುರುದ್ವಾರಕ್ಕೆ 25 ಕೋಟಿ
ನೇಕಾರರಿಗೆ ಮಾಸಿಕ 250 ಯೂನಿಟ್ ವಿದ್ಯುತ್ ಉಚಿತ

01:21 PM (IST) Jul 07

ರಾಜ್ಯಾದ್ಯಂತ ಮಹಿಳೆಯರಿಗೆ ಪ್ರತ್ಯೇಕ ಡ್ರೈವಿಂಗ್ ಸ್ಕೂಲ್

ವಧು ವರರ ಮದುವೆ ನೋಂದಣಿ ಸರಳೀಕರಣ, ಆನ್‌ಲೈನ್‌ನಲ್ಲಿ ನೋಂದಣಿ. 

ಪುನೀತ್ ರಾಜಕುಮಾರ್ ಸ್ಮರಣಾರ್ಥ ಆರೋಗ್ಯ ವ್ಯವಸ್ಥೆಗೆ 6 ಕೋಟಿ ಮೀಸಲು

ಡೆಲಿವರಿ ಬಾಯ್ಸ್ಗೆ ಜೀವವಿಮೆ, 2 ಲಕ್ಷ ರೂ. ಅಪಘಾತ ವಿಮೆ
ಪ್ರತಿ ತಾಲೂಕಿನ ಒಬ್ಬ ಯುವ ಪದವೀಧರರಿಗೆ ಮುಖ್ಯಮಂತ್ರಿ ಫೆಲೋಶಿಪ್
ರೈತರಿಗೆ ಶೂನ್ಯ ಬಡಿದರದ ಸಾಲ ಮಿತಿಯನ್ನ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ
ಗುಡ್ಡಗಾಡು ಪ್ರದೇಶದ ರೈತರಗೆ ಪಿಕ್ ವ್ಯಾನ್ ಖರೀದಿಗೆ 7 ಲಕ್ಷದವರೆಗೆ ಸಾಲ
ಶಿಡ್ಲಘಟ್ಟದಲ್ಲಿ 75 ಕೋಟಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ
ಜಾನುವಾರು ಆಕಸ್ಮಿಕ ಮೃತಪಟ್ಟರೆ 5 ಸಾವಿರ ರೂ. ಪರಿಹಾರ ನೀಡಲಾಗುವುದು
ರೈತರ ಗೋದಾಮು ನಿರ್ಮಾಣಕ್ಕೆ ಸಹಾಯಧನ
ಚಿಕ್ಕಬಳ್ಳಾಪುರ, ಕೋಲಾರದ 296 ಕೆರೆಗಳಿಗೆ ನಿರು ತುಂಬುವ ಯೋಜನೆ
ಚಿಕ್ಕಬಳ್ಳಾಪುರ, ಕೋಲಾರದ 296 ಕೆರೆಗಳಿಗೆ 529 ಕೋಟಿ ಅನುದಾನ
ಶಾಲಾ ಕಾಲೇಜು ಕೊಠಡಿ ನಿರ್ಮಾಣಕ್ಕೆ 550 ಕೋಟಿ ಅನುದಾನ
ಶಾಲಾ ಕಾಲೇಜು ಶೌಚಾಲಯ ನಿರ್ಮಾಣಕ್ಕೆ 200 ಕೋಟಿ ಅನುದಾನ
ಶಾಲಾ ಕಾಲೇಜು ಕೊಠಡಿ ದುರಸ್ಥಿಗೆ 100 ಕೋಟಿ ಅನುದಾನ
ಪಿಯು ಕಾಲೇಜುಗಳ ನಿರ್ವಹಣೆಗೆ 150 ಕೋಟಿ ಅನುದಾನ
ಶಾಲೆ ಕಾಲೇಜುಗಳ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ವಾರಕ್ಕೆ 1 ಬಾರಿ
9 ಹಾಗೂ 10ನೇ ತರಗತಿಗೂ ವಿಸ್ತರಣೆ
ಗ್ರಂಥಾಲಯಗಳ ಪುಸ್ತಕ ಖರೀದಿಗೆ 10 ಕೋಟಿ

01:19 PM (IST) Jul 07

ದೇಶದಲ್ಲೇ ಮೊದಲ ಅಂಗಾಗ ಜೋಡಣೆ ಆಸ್ಪತ್ರೆ ಸ್ಥಾಪನೆಗೆ ನಿರ್ಧಾರ

ಗ್ರಾಮೀಣ ಪ್ರದೇಶಗಳ ಆರೋಗ್ಯ ಕೇಂದ್ರ 23 ಕೇಂದ್ರ ಮೇಲ್ದರ್ಜೆಗೆ
ಪುನಿತ್ ಸ್ಮರಣಾರ್ಥ ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿ ತಪಾಸಣೆ ಕೇಂದ್ರಕ್ಕೆ 6 ಕೋಟಿ
ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ 5 ಲಕ್ಷವರೆಗೆ ಶೂನ್ಯ ಬಡ್ಡಿ ಸಾಲ
ಮೈಸೂರು, ಕಲಬುರಗಿ, ಬೆಳಗಾವಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ದೇಶದಲ್ಲೇ ಮೊದಲ ಅಂಗಾಗ ಜೋಡಣೆ ಆಸ್ಪತ್ರೆ ಸ್ಥಾಪನೆಗೆ ನಿರ್ಧಾರ
4 ಸಾವಿರ ವಿಶೇಷಚೇತನರಿಗೆ ದ್ವಿಚಕ್ರ ವಾಹನ, 30 ಕೋಟಿ
ಮಹಿಳಾ ಉದ್ಯಮಿಗಳ ಸಾಲದ ಮಿತಿ 2ರಿಂದ 5 ಕೋಟಿ ಹೆಚ್ಚಳ
ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ 60 ಕೋಟಿ ಅನುದಾನ
172 ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದೆ
19 ಕೆರೆಗಳಿಗೆ ನೀರು ತುಂಬಿಸಲು 770 ಕೋಟಿ ಹಣ ಮೀಸಲು 

01:17 PM (IST) Jul 07

ಹೊಸ ನೀರಾವರಿ ಯೋಜನೆಗಳಿಲ್ಲ

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಆರ್ಥಿಕ ಶಿಸ್ತು ಉಲ್ಲಂಘನೆ ಹಿನ್ನೆಲೆಯಲ್ಲಿ ಜಲಸಂಪನ್ಮೂಲ, ನಗರಾಭಿವೃದ್ಧಿ ಹಾಗೂ ಲೋಕೋಪಯೋಗಿ ಸೇರಿದಂತೆ ಹಲವು ಇಲಾಖೆಗಳ ಕಾಮಗಾರಿ
94,933 ಸಾವಿರ ಕೋಟಿ ರೂ. ಕಾಮಗಾರಿಗಳಿಗೆ ವಿತ್ತೀಯ ನೀತಿ ಮೀರಿ ಅನುಮೋದನೆ
2023-24 ರ ಅಂತ್ಯಕ್ಕೆ 2,55,102 ಕೋಟಿ ರೂ ಬಾಕಿ ಕಾಮಗಾರಿ
ಇದನ್ನ ಪೂರ್ಣಗೊಳಿಸಲು ಆರು ವರ್ಷಗಳ ಕಾಲ ಬೇಕು
ಹಾಗಾಗಿ ಈ ಸರ್ಕಾರಕ್ಕೆ ಹೊಸ ಯೋಜನೆಗಳನ್ನ ಹಮ್ಮಿಕೊಳ್ಳುವುದು ಸವಾಲು
ಪರೋಕ್ಷವಾಗಿ ಹೊಸ ನೀರಾವರಿ, ರಸ್ತೆ ಯೋಜನೆಗಳಿಲ್ಲ ಎಂದ ಬಜೆಟ್...

01:15 PM (IST) Jul 07

ಅಲ್ಪಸಂಖ್ಯಾತ ಕಲ್ಯಾಣಕ್ಕೆ ಆದ್ಯತೆ..

ರಾಮನಗರ,ಬೆಳಗಾವಿ, ದಾವಣಗೆರೆ, ಕಲಬುರಗಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ,ಅಲ್ಪಸಂಖ್ಯಾತ ಯುವಜನರಿಗೆ ಕೌಶಲ್ಯ ತರಬೇತಿಯನ್ನು 4 ಕೋಟಿ ವೆಚ್ಚದಲ್ಲಿ ಪ್ರಾರಂಭ
ಸ್ವಾವಲಂಬಿ ಸಾರಥಿ ಯೋಜನೆ ಅಡಿ ಅಲ್ಪಸಂಖ್ಯಾತ ನಿರುದ್ಯೋಗಿ ಯುವಕರಿಗೆ 4 ಚಕ್ರ ವಾಹನ ಪಡೆಯಲಿ 3‌ಲಕ್ಷ ಸಹಾಯಧನ..
ರಾಜ್ಯದಲ್ಲಿ 40 ಸಾವಿರಕ್ಕಿಂತ ವಕ್ಫ ಆಸ್ತಿಗಳಿದ್ದು ಸಂರಕ್ಷಣೆ ಮತ್ತು‌ ಅಭಿವೃದ್ಧಿ ಗಾಗಿ 50. ಕೋಟಿ ಅನುದಾನ‌.
ಜೈನರ ಪ್ರಮುಖ ಪುಣ್ಯ ಕ್ಷೇತ್ರಗಳ ಅಭಿವೃದ್ಧಿಗೆ 25 ಕೋಟಿ ಅನುದಾನ.
ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಗೆ ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸ್ಥಾಪನೆ 100ಕೋಟಿ ಅನುದಾನ
ಹಜ್ ಭವನದಲ್ಲಿ‌ ಅಲ್ಪಸಂಖ್ಯಾತ ಯುವಕರಿಗೆ 10 ತಿಂಗಳ ಕಾಲ ವಸತಿ ಸಹಿತ ಐ ಎ ಎಸ್,ಕೆ ಎ ಎಸ್ ತರಬೇತಿಗಳನ್ನ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಿಂದ ಪ್ರಾರಂಭ.
ಹಲಸೂರಿನಲ್ಲಿರುವ ಗುರುದ್ವಾರ ದ ಅಭಿವೃದ್ಧಿ ಗೆ 25 ಕೋಟಿ ಅನುದಾನ

01:14 PM (IST) Jul 07

ಸಾಮರಸ್ಯ ಹಾಳುಗೆಡುವವ ಹಿಂದಿನ ಸರಕಾರದ ಪಠ್ಯಕ್ಕೆ ಕೊಕ್

ಸಾಮರಸ್ಯ ಮತ್ತು ಸಹಬಾಳ್ವೆಯ ಮನೋಭಾವ ಮೂಡಿಸುವಂತಿರಬೇಕು ಶಿಕ್ಷಣದ ವ್ಯವಸ್ಥೆ. ಈ ಆಶಯಕ್ಕೆ ವಿರುದ್ಧವಾದ ಪಠ್ಯಗಳನ್ನು ಹಿಂದಿನ ಸರ್ಕಾರವು ಪಠ್ಯ ಪರಿಷ್ಕರಣೆಯಲ್ಲಿ ಸೇರ್ಪಡೆಗೊಳಿಸಿದ್ದು, ಅವುಗಳನ್ನು ಪ್ರಸಕ್ತ ಸಾಲಿನಿಂದಲೇ ಕೈಬಿಡಲು ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಸೌಲಭ್ಯಗಳನ್ನು ನೀಡಲು ಶಾಲಾ ಕೊಠಡಿಗಳಿಗೆ 310 ಕೋಟಿ ರೂ.ಗಳು ಹಾಗೂ ಪದವಿ ಪೂರ್ವ ಕಾಲೇಜು ಕೊಠಡಿಗಳಿಗೆ 240 ಕೋಟಿ ರೂ. ಸೇರಿದಂತೆ ಒಟ್ಟು 550 ಕೋಟಿ ರೂ.ಗಳ ವೆಚ್ಚದಲ್ಲಿ 8,311 ಕೊಠಡಿಗಳ ನಿರ್ಮಾಣ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು.

 ವಿದ್ಯಾರ್ಥಿಗಳ ಶಿಕ್ಷಣ ಮತ್ತು ಆರೋಗ್ಯದ ದೃಷ್ಟಿಯಿಂದ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ, ಕಡಿಮೆ ಶೌಚಾಲಯಗಳಿರುವ 5,775 ಶಾಲೆಗಳಲ್ಲಿ ಹಾಗೂ 150 ಕಾಲೇಜುಗಳಲ್ಲಿ ಶೌಚಾಲಯ ಘಟಕಗಳನ್ನು ನರೇಗಾ ಯೋಜನೆಯ ಸಂಯೋಜನೆಯೊಂದಿಗೆ 200 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು. ಹಳೆಯ ಶಾಲಾ ಕಾಲೇಜು ಕಟ್ಟಡಗಳು ಹಾಗೂ ಮಳೆಯಿಂದಾಗಿ ಶಿಥಿಲಗೊಂಡಿರುವ 3,833 ಶಾಲೆಗಳು ಹಾಗೂ 724 ಪದವಿ ಪೂರ್ವ ಕಾಲೇಜು ಕೊಠಡಿಗಳನ್ನು 100 ಕೋಟಿ ರೂ.ಗಳ ವೆಚ್ಚದಲ್ಲಿ ದುರಸ್ತಿಗೊಳಿಸುವ ಮೂಲಕ ಬಳಕೆಗೆ ಯೋಗ್ಯಗೊಳಿಸಲಾಗುವುದು.

01:09 PM (IST) Jul 07

ರಾಜ್ಯದಲ್ಲಿ ಇನ್ನಾದರೂ ನಿಲ್ಲುತ್ತಾ ನೈತಿಕ ಪೊಲೀಸ್‌ಗಿರಿ?

ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ ತಡೆಯಲು ನಿರ್ದಾಕ್ಷಿಣ್ಯ ಕ್ರಮ... 
2125 ಪೊಲೀಸ್ ವಸತಿ ಗೃಹ ನಿರ್ಮಾಣಕ್ಕೆ 450 ಕೋಟಿ. 
ಪೊಲೀಸರ ಹಳೆಯ ವಾಹನ ಬದಲಾವಣೆಗಾಗಿ 100 ಕೋಟಿ..
ಪೊಲೀಸ್ ಇಲಾಖೆ ಮೂಲಭೂತ ಸೌಕರ್ಯಗಳ ಉನ್ನತೀಕರಣಕ್ಕೆ ಕ್ರಮ. 
ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ಒದಗಿಸಲಾಗಿದೆ..
ಬೆಂಗಳೂರಿನಲ್ಲಿ 5 ಟ್ರಾಫಿಕ್ ಸ್ಟೇಷನ್, 6 ಮಹಿಳಾ ಸ್ಟೇಷನ್ ನಿರ್ಮಿಸಲಾಗುವುದು.
ಬೆಂಗಳೂರಿನಲ್ಲಿ ಪೊಲೀಸ್ ಕಟ್ಟಡಗಳ ಬಲಪಡಿಸಲು 2454 ಕೋಟಿ ಅನುದಾನ

01:08 PM (IST) Jul 07

ಪೊಲೀಸ್ ಠಾಣೆ ಉನ್ನತೀಕರಣಕ್ಕೆ 20 ಕೋಟಿ ರೂ.

CCD, CID, CEN ಠಾಣೆಗಳ ಉನ್ನತಿಕರಣಕ್ಕೆ 10 ಕೋಟಿ ರೂ ಮೀಸಲು
ದಿನ ನಿತ್ಯದ ಸವಾಲು ಎದುರಿಸಲು ಅಗತ್ಯ ತರಬೇತಿಗಾಗಿ 20 ಕೋಟಿ ರೂ.
ಡ್ರೋಣ್ ಕ್ಯಾಮರಾ, ಕಣ್ಗಾವಲು, ಬಾಡಿ ವೋರ್ನ್ ಕ್ಯಾಮರಾ ಒದಗಿಸಲು ಕ್ರಮ.
ಕೇಂದ್ರ ಕಾರಾಗೃಹಗಳಲ್ಲಿ 10 ಕೋಟಿ. ರೂ ವೆಚ್ಚSTP ನಿರ್ಮಾಣ. 
5 ಕೇಂದ್ರ ಕಾರಾಗೃಹಗಳಲ್ಲಿ 5 ಕೋಟಿ ವೆಚ್ಚದಲ್ಲಿ ವಾಚ್ ಟವರ್ ನಿರ್ಮಾಣ
ಖೈದಿಗಳಿಗೆ ಕೈಶಲ್ಯ ತರಬೇತಿಗಾಗಿ ಕಾರ್ಯಾಗಾರಕ್ಕೆ ಕ್ರಮ
ಆರೋಪಿಗಳನ್ನ ವಿಡಿಯೋ ಕಾರ್ಫರೆನ್ಸ್ ಮೂಲಕ ಕೋರ್ಟಿಗೆ ಹಾಜರು ಪಡಿಸುವ ವ್ಯವಸ್ಥೆಗಾಗಿ 3 ಕೋಟಿ ಅನುದಾನ

01:06 PM (IST) Jul 07

ವಾಟರ್ ಆಡಿಟ್ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪ

ಜನಜೀವನ್ ಮಿಷನ್ ಯೋಜನೆಯ ಲೋಪ ಪತ್ತೆ ಹಚ್ಚಲು ತನಿಖೆ
ಬಾಹ್ಯ ಸಂಸ್ಥೆಯಿಂದ ತನಿಖೆ ನಡೆಸುವ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪ
ಯೋಜನೆ ಜಾರಿಯಲ್ಲಿ ತಪ್ಪುಗಳು, ಲೋಪದೋಷಗಳ ಬಗ್ಗೆ ತನಿಖೆ
ಲೋಪ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಎಂದು ಬಜೆಟ್ ನಲ್ಲೇ ಘೋಷಣೆ

01:01 PM (IST) Jul 07

ಕೈ ಗ್ಯಾರಂಟಿಗೆ ಲಾಟ್ರಿ, 52 ಸಾವಿರ ಕೋಟಿ ಭರ್ಜರಿ!

ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ಘೋಷಣೆ ಮಾಡುತ್ತಲೇ ಹೊಸ ಸರ್ಕಾರದ ಬಜೆಟ್‌ ಮಂಡಿಸಿದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಸಿದ್ಧರಾಮಯ್ಯ, ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷ ಘೋಷಣೆ ಮಾಡಿದ್ದ ಐದು ಗ್ಯಾರಂಟಿ ಯೋಜನೆಗಳಿಗೆ ಬಜೆಟ್‌ನಲ್ಲಿ ದೊಡ್ಡ ಪಾಲನ್ನು ಮೀಸಲಿಟ್ಟಿದ್ದಾರೆ. ಐದು ಗ್ಯಾರಂಟಿ ಯೋಜನೆಗಾಗಿ ಸರ್ಕಾರ 52 ಸಾವಿರ ಕೋಟಿ ಮೀಸಲಿಟ್ಟರುವುದಾಗಿ ಸಿದ್ಧರಾಮಯ್ಯ ಘೋಷಣೆ ಮಾಡಿದೆ. 'ನಮ್ಮ ಐದು ಗ್ಯಾರಂಟಿ ಯೋಜನೆಗಳಿಂದಾಗಿ ಒಂದು ವರ್ಷದಲ್ಲಿ ಸುಮಾರು 52,000 ಕೋಟಿ ರೂ.ಗಳನ್ನು ಅಂದಾಜು 1.30 ಕೋಟಿ ಕುಟುಂಬಗಳಿಗೆ ತಲುಪಿಸುವುದರಿಂದ ಪ್ರತೀ ಕುಟುಂಬಕ್ಕೆ ಮಾಸಿಕ 4,000 ರಿಂದ 5,000 ರೂ.ಗಳಷ್ಟು, ಅಂದರೆ, ವಾರ್ಷಿಕವಾಗಿ ಸರಾಸರಿ 48,000 ದಿಂದ 60,000 ರೂ.ಗಳಷ್ಟು ಹೆಚ್ಚುವರಿ ಆರ್ಥಿಕ ನೆರವು ನೀಡಿದಂತಾಗುತ್ತದೆ. ಇದು ಸಾರ್ವತ್ರಿಕ (Universal basic income) ಮೂಲ ಎಂಬ ಪರಿಕಲ್ಪನೆಯನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿ, ಅಭಿವೃದ್ಧಿಯ ಹೊಸ ಮಾದರಿಯನ್ನು ರೂಪಿಸುವ ಉದ್ದೇಶ ಹೊಂದಿದೆ' ಎಂದು ಬಜೆಟ್‌ ಭಾಷಣದಲ್ಲಿ ಸಿದ್ಧರಾಮಯ್ಯ ಹೇಳಿದ್ದಾರೆ.

ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

12:59 PM (IST) Jul 07

ಕೆರೆ ಸುತ್ತ ಜೀವ ಪರಿಸರ ಉಳಿಸಿಕೊಂಡು, ಅಂತರ್ಜನ ಮಟ್ಟ ಹೆಚ್ಚಿಸಲು ಯೋಜನೆ

ರಾಜ್ಯದ ವಿವಿಧ ಜಿಲ್ಲೆಗಳ ಕೆರೆಗಳಿಗೆ ನೀರು ತುಂಬಿ ಈ ಜಿಲ್ಲೆಗಳ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಗೊಂಡು ರೈತರು ಸಂತಸಗೊಂಡಿದ್ದಾರೆ. ಪ್ರಸ್ತುತ ಎರಡನೇ ಹಂತದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಯೋಜನೆಯನ್ನು 529 ಅನುಷ್ಠಾನಗೊಳಿಸಲಾಗುವುದು. 296 ಕೆರೆಗಳನ್ನು ಮತ್ತು ತುಂಬಿಸಲು ಸರಕಾರ ಉತ್ಸುಕವಾಗಿದೆ.

ಕೆರೆಗಳ ಸುತ್ತ ಜೀವಪರಿಸರವನ್ನು ಉಳಿಸಿಕೊಂಡು, ಅವುಗಳ ಪುನರುಜ್ಜಿವನಗೊಳಿಸುವುದಕ್ಕಾಗಿ ಕೆರೆಗಳ ಬಳಕೆದಾರರ ಸಂಘಗಳನ್ನು ಬಲಿಷ್ಠಗೊಳಿಸಿ ಕೆರೆ ಅಭಿವೃದ್ಧಿಗೆ ಪಾಲುದಾರರನ್ನಾಗಿ ಮಾಡಲು ಅರ್ಥಪೂರ್ಣ ಕ್ರಿಯಾಯೋಜನೆ ಸಿದ್ಧಪಡಿಸಲಾಗುವುದು.

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ 'ಶಿಕ್ಷಣವು ವಿಮೋಚನಾ ಶಕ್ತಿಯಾಗಿದೆ. ಮತ್ತು ನಮ್ಮ ಕಾಲದಲ್ಲಿ ಜನತಂತ್ರವನ್ನು ಸ್ಥಾಪಿಸುವ ಶಕ್ತಿಯೂ ಆಗಿದೆ; ಶಿಕ್ಷಣವು ಜಾತಿ ಮತ್ತು ವರ್ಗದ ನಿರ್ಬಂಧಗಳನ್ನು ತೊಲಗಿಸಿ, ಹುಟ್ಟಿನಿಂದ ಅಥವಾ ಇನ್ನಾವುದೇ ಪರಿಸ್ಥಿತಿಯಿಂದ ಉದ್ಭವಿಸಿದ ಅಸಮಾನತೆಗಳನ್ನು ನಿವಾರಿಸುತ್ತದೆ'.

ಶ್ರೀಮತಿ ಇಂದಿರಾ ಗಾಂಧಿ 86. ಶಾಲಾ ಶಿಕ್ಷಣ ಮಗುವಿನ ವ್ಯಕ್ತಿತ್ವ ನಿರ್ಮಾಣದಲ್ಲಿ, ಆ ಮೂಲಕ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣವು ಮಕ್ಕಳ ಶಾರೀರಿಕ ಹಾಗೂ ಭಾವನಾತ್ಮಕ ಬೆಳವಣಿಗೆಗೆ, ಜ್ಞಾನ ಮತ್ತು ಮನೋವಿಕಾಸಕ್ಕೆ ಪೂರಕವಾಗಿರುವಂತೆ ಯೋಜನೆ ರೂಪಿಸಲು ಚಿಂತನೆ.

12:57 PM (IST) Jul 07

ಮದ್ಯಪ್ರಿಯರಿಗೆ ಶಾಕ್, ಜೇಬಿಗೆ ಕತ್ತರಿ ಗ್ಯಾರಂಟಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24ನೇ ಸಾಲಿನಲ್ಲಿ 3,24,478 ಕೋಟಿ ರೂ. ಗಾತ್ರದ ಬಜೆಟ್‌ ಮಂಡನೆ ಮಾಡಿದ್ದಾರೆ. ಆದರೆ, ಗ್ಯಾರಂಟಿ ಯೋಜನೆಗಳ ಜಾರಿಗೆ ಹೆಚ್ಚಿನ ಅನುದಾನ ಬೇಕಿದ್ದರಿಂದ ಅಬಕಾರಿ ಸುಂಕವನ್ನು ಶೇ.20 ಹೆಚ್ಚಳ ಮಾಡುವ ಮೂಲಕ ಮದ್ಯದ ದರವನ್ನು ಹೆಚ್ಚಳ ಮಾಡಿದ್ದಾರೆ.

ಎಷ್ಟು ಹೆಚ್ಚಳ?

12:55 PM (IST) Jul 07

ಬಿಜೆಪಿ ಸರಕಾರದ ಯೋಜನೆಗಳಿಗೆ ಕೊಕ್

ಹಿಂದಿನ ಸರ್ಕಾರದ ಹಲವು ಯೋಜನೆಗಳಿಗೆ ‌ಕೋಕ್. ವಿದ್ಯಾಸಿರಿ, ವಿವೇಕ ಯೋಜನೆ ಪ್ರಸ್ತಾಪ ಇಲ್ಲ. 

12:53 PM (IST) Jul 07

ಪುನೀತ್ ಹೆಸರಲ್ಲಿ ಹೃದ್ರೋಗ ಆಸ್ಪತ್ರೆ

ಕರ್ನಾಟಕ ರತ್ನ ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಸ್ಮರಣಾರ್ಥವಾಗಿ ಹಠಾತ್‌ ಹೃದಯ ಸಂಬಂಧ ಸಾವುಗಳನ್ನು ತಡೆಗಟ್ಟಲು ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್ ಅಥವಾ Automated External Defibrillator ಗಳನ್ನು ಜಿಲ್ಲಾ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲಾಗುವುದು ಎಂದು ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ.

ಏನಿದು ಯೋಜನೆ?