Asianet Suvarna News Asianet Suvarna News

ಇಸ್ರೋ ಮಾಜಿ ವಿಜ್ಞಾನಿ ಸ್ಟಾರ್ಟಪ್‌ ಮಾಲೀಕನಾದ ರೋಚಕ, ಸ್ಪೂರ್ತಿದಾಯಕ ಕಥೆ

ಉತಯ್ ಕುಮಾರ್ ತಮ್ಮ ಡ್ರೈವರ್‌ಗಳಿಗೆ ಸಂಬಳವನ್ನು ನೀಡುವುದಿಲ್ಲ, ಬದಲಿಗೆ, ಇದು 70:30 ಆದಾಯವನ್ನು ಹಂಚಿಕೆ ಮಾಡುತ್ತಾರೆ. ಕೆಲವು ಚಾಲಕರು ಹೊಸ ಕಾರುಗಳನ್ನು ಸೇರಿಸುವ ಮೂಲಕ ಉದ್ಯಮವನ್ನು ಬೆಳೆಸುವ ಮಾಲೀಕತ್ವವನ್ನು ತೆಗೆದುಕೊಂಡಿದ್ದಾರೆ

Ex ISRO scientist utay kumar now owns a S T taxi startup mrq
Author
First Published May 25, 2024, 5:44 PM IST

ರಾಕೆಟ್ ಸೈಂಟಿಸ್ಟ್  ಅಥವಾ ಪಿಎಚ್‌ಡಿ ಪದವೀದರ  ನಿಮ್ಮ ಊಬರ್ ಡ್ರೈವರ್ ಆಗಿ ಬಂದರೆ ಹೇಗಿರುತ್ತೆ ಎಂಬುದನ್ನು ಒಮ್ಮೆ ಯೋಚಿಸಿ. ಈ ರೀತಿ ತಮಗಾದ ಅನುಭವನ್ನು ಉದ್ಯಮಿ ರಾಮಭದ್ರನ್ ಸುಂದರಮ್ ಲಿಂಕ್ಡ್‌ಇನ್ ನಲ್ಲಿ ಹಂಚಿಕೊಂಡಿದ್ದಾರೆ. ಮನೆಯಿಂದ ತಮ್ಮನ್ನು ಪಿಕ್ ಮಾಡಿದವರು ಒಬ್ರು ಇಸ್ರೋದ ಮಾಜಿ ವಿಜ್ಞಾನಿ ಎಂಬ ವಿಷಯ ಕೇಳಿ ರಾಮಭದ್ರನ್ ಚಕಿತಗೊಂಡಿದ್ದರು. 

ಯಾರು ಆ ಮಾಜಿ ವಿಜ್ಷಾನಿ?

ಉತಯ್ ಕುಮಾರ್ ಬಾಹ್ಯಾಕಾಶ ಸಂಸ್ಥೆ ಇಸ್ರೋದಲ್ಲಿ ( Indian Space Research Organization) ವಿಜ್ಞಾನಿಯಾಗಿ ಕೆಲಸ ಮಾಡಿದ್ದರು.  ಉತಯ್ ಕುಮಾರ್ ಮೂಲತಃ ತಮಿಳುನಾಡಿನ ಕನ್ಯಾಕುಮಾರಿಯ ನಿವಾಸಿ. ಶಿಕ್ಷಣ ಪೂರ್ಣಗೊಳಿಸಿದ ಉತಯ್ ಕುಮಾರ್ ತಮ್ಮ ಕನಸಿನ ಉದ್ಯೋಗವನ್ನುಇಸ್ರೋದಲ್ಲಿ ಪಡೆದುಕೊಂಡು ವೃತ್ತಿಜೀವನವನ್ನು ಆರಂಭಿಸಿದ್ದರು.

ಇಸ್ರೋದಲ್ಲಿ ಅಂಕಿಅಂಶಗಳ ತಂತ್ರಜ್ಞರಾಗಿ ಉತಯ್ ಕುಮಾರ್ ವೃತ್ತಿ ಆರಂಭಿಸಿದ್ದರು. ಇವರ ಅಂಕಿ ಅಂಶಗಳ ಲೆಕ್ಕಾಚಾರ ಇಂಧನ ಸಂಗ್ರಹ ಸಾಮಾರ್ಥ್ಯವನ್ನು ಖಚಿತಪಡಿಸುತ್ತಿತ್ತು. ಸ್ಯಾಟ್‌ಲೈಟ್‌ಗಳ ಉಡಾವಣೆಯಲ್ಲಿ ಉತಯ್ ಕುಮಾರ್ ನಿರ್ಣಾಯಕ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು. 

ನಂತರ ಉತಯ್ ಕುಮಾರ್ ಸಹಾಯಕ ಪ್ರಾಧ್ಯಪಕರಾಗಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ಕೆಲಸ ಮಾಡಿದರು. ಆದ್ರೂ ಅತಿದೊಡ್ಡ ಬಾಹ್ಯಾಕಾಶ ಸಂಸ್ಥೆ ಮತ್ತು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರೂ ಉತಯ್ ಕುಮಾರ್ ಅವರಿಗೂ ಮಾಡುವ ಕೆಲಸದಲ್ಲಿ ತೃಪ್ತಿ ಇರಲಿಲ್ಲ. ಕೊನೆಗೆ ಉತಯ್ ಕುಮಾರ್ ಅವರನ್ನು ಸೆಳೆದಿದ್ದು, ಸ್ಟಾರ್ಟ್‌ಅಪ್. 

2017ರಲ್ಲು ಶುರುವಾಯ್ತು ಎಸ್‌ಟಿ ಕ್ಯಾಬ್

ಮಾಡುವ ಕೆಲಸದಲ್ಲಿ ಹೊಸತನ ಮಾಡಬೇಕೆಂಬ ಹಂಬಲದಿಂದ ಸ್ಟಾರ್ಟ್‌ಪ್‌ಗ್ ಕಾಲಿರಿಸಿದ ಉತಯ್ ಕುಮಾರ್ ಸ್ನೇಹಿತರ ಬೆಂಬಲದಿಂದ 2017ರಲ್ಲಿ ಎಸ್‌ಟಿ ಕ್ಯಾಬ್ ಆರಂಭಿಸಿದರು. ಎಸ್‌ ಅಂದ್ರ ತಂದೆ ಸುಕುಮಾರನ್ ಮತ್ತು ಟಿ ಅಂದ್ರೆ ತಾಯಿ ತುಳಸಿ ಅವರ ಹೆಸರಾಗಿತ್ತು.

ಎಸ್ ಟಿ ಕ್ಯಾಬ್ ಅಂದ್ರೆ ಟ್ಯಾಕ್ಸಿ ಸೇವೆ ಆಲ್ಲ. ಇದುಅಭಿವೃದ್ಧಿ ಹೊಂದುತ್ತಿರುವ ಉದ್ಯಮವಾಗಿದ್ದು, ವಾರ್ಷಿಕ 2 ಕೋಟಿ ರೂಪಾಯಿ ಆದಾಯವನ್ನು ಕೊಡಲಿದೆ. ಉತಯ್ ಕುಮಾರ್ ಎಲ್ಲಾ ಚಾಲಕರನ್ನು ನೌಕರರಂತೆ ಕಾಣಲಿಲ್ಲ. ಬದಲಾಗಿ ಎಲ್ಲರನ್ನು ಪಾಲುದಾರರು ಎಂದು ಪರಿಗಣಿಸಿ, ಅವರಿಗೆ ಆದಾಯದಲ್ಲಿನ ಶೇ.70ರಷ್ಟು ಭಾಗ ನೀಡಲು ನಿರ್ಧರಿಸಿದರು. ಈ ಒಂದು ನಿರ್ಣಯದಿಂದ ಚಾಲಕರೇ ಹೆಚ್ಚು ಗ್ರಾಹಕರನ್ನು ತಂದರು. 

ರೀಲ್ಸ್‌ಗಾಗಿ 100 ಅಡಿ ಎತ್ತರದಿಂದ ಕೆರೆ ಹಾಕಿದ 18ರ ಯುವಕ, ಲೈಕ್ಸ್ ನೋಡಲು ಆತನೇ ಇಲ್ಲ!

ಪ್ರತಿ ಸದಸ್ಯರ ಬಗ್ಗೆಯೂ ಪ್ರತ್ಯೇಕ ಕಾಳಜಿ

ಉತಯ್ ಕುಮಾರ್ ಹಣ ಗಳಿಸೋದಕ್ಕೂ ಹೆಚ್ಚಿನ ಕೆಲಸ ಮಾಡಿದರು. ತಮ್ಮ ಸ್ಟಾರ್ಟ್‌ಪ್ ಟೀಂನಲ್ಲಿ ಕೆಲಸ ಮಾಡುವವರ ಪ್ರತಿಯೊಬ್ಬರ ಬಗ್ಗೆಯೂ ಉತಯ್ ಕುಮಾರ್ ವಿಶೇಷ ಕಾಳಜಿ ತೆಗೆದುಕೊಂಡರು. ಸಿಬ್ಬಂದಿಗೆ ಮನೆ ನಿರ್ಮಾಣ, ಅವರ ಮಕ್ಕಳ ಶಿಕ್ಷಣಕ್ಕೂ  ಉತಯ್ ಕುಮಾರ್ ಬೆಂಬಲ ನೀಡಿದರು. ಆದರೆ ಇಂತಹ ನಿರ್ಧಾರಗಳು ಕಂಪನಿಯ ಆರ್ಥಿಕ ಪರಿಸ್ಥಿತಿ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತೆ ಎಂಬುದು ಗೊತ್ತಿದ್ರೂ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು. 

2020ರ ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಉತಯ್ ಕುಮಾರ್ ಎದೆಗುಂದಲಿಲ್ಲ. ಪಿಪಿಇ ಕಿಟ್ ಮಾದರಿಯ ಹೆಚ್ಚು ಸುರಕ್ಷಿತ ಹಜ್ಮತ್ ಸೂಟ್ ಧರಿಸಿ ದೂರದ ಪ್ರಯಾಣಗಳನ್ನು ನಡೆಸುವ ಮೂಲಕ ಕೆಲಸ ಮುಂದುವರಿಯುವಂತೆ ನೋಡಿಕೊಂಡರು. ಉತಯ್ ಕುಮಾರ್ ಅವರ ಆರಂಭಿಕ ಕಥೆಯು ಕೇವಲ ವೃತ್ತಿಜೀವನದ ಬದಲಾವಣೆಗಿಂತ ಹೆಚ್ಚಾಗಿತ್ತು. ಉದ್ಯಮಿ ಸುಂದರಂ ಅವರು ಉತಯ ಕುಮಾರ್ ಅವರಿಂದ ಸ್ಟಾರ್ಟಪ್ ನಾಯಕತ್ವದ ಬಗ್ಗೆ ಸಾಕಷ್ಟು ಕಲಿತರು ಎಂದು ಬರೆದುಕೊಂಡಿದ್ದಾರೆ.

ಪ್ರಕೃತಿ ಕ್ರೂರಿಯಾ? ಹೊಸ ಚರ್ಚೆ ಹುಟ್ಟು ಹಾಕಿದ ಫೋಟೋ

ವಿಸ್ತರಣೆಯಾಗ್ತಿದೆ ಎಸ್‌ಟಿ ಕ್ಯಾಬ್ ಗಾತ್ರ 

IT/ITES ಕಂಪನಿಗಳು ಎಸ್‌ ಐ ಕ್ಯಾಬ್‌ಗೆ ಪ್ರತಿದಿನ ಮೂರು ಪಿಕ್‌-ಅಪ್‌ ಮತ್ತು ಡ್ರಾಪ್-ಅಪ್‌ ನೀಡುವ ಅವಕಾಶವನ್ನು ನೀಡಿತು. ಒಂದು ಟ್ರಿಪ್‌ಗೆ ಕಂಪನಿಗೆ 2,500 ರೂಪಾಯಿ ನೀಡುತ್ತಿತ್ತು. ಇದು ಎಸ್‌ಟಿ ಕ್ಯಾಬ್‌ ಆರ್ಥಿಕವಾಗಿ ಸ್ಟ್ರಾಂಗ್‌ ಆಗೋದಕ್ಕೆ ಕಾರಣವಾಯ್ತು. ಇದೀಗ ಎಸ್‌ಟಿ ಕ್ಯಾಬ್ ಸಿನಿಮಾ ಉದ್ಯಮಕ್ಕೂ ವಿಸ್ತರಣೆಯಾಗಿದೆ.

ಉತಯ್ ಕುಮಾರ್ ತಮ್ಮ ಡ್ರೈವರ್‌ಗಳಿಗೆ ಸಂಬಳವನ್ನು ನೀಡುವುದಿಲ್ಲ, ಬದಲಿಗೆ, ಇದು 70:30 ಆದಾಯವನ್ನು ಹಂಚಿಕೆ ಮಾಡುತ್ತಾರೆ. ಕೆಲವು ಚಾಲಕರು ಹೊಸ ಕಾರುಗಳನ್ನು ಸೇರಿಸುವ ಮೂಲಕ ಉದ್ಯಮವನ್ನು ಬೆಳೆಸುವ ಮಾಲೀಕತ್ವವನ್ನು ತೆಗೆದುಕೊಂಡಿದ್ದಾರೆ ಎಂದು ಉದ್ಯಮಿ ರಾಮಭದ್ರನ್ ಸುಂದರಮ್ ಹೇಳುತ್ತಾರೆ.

Latest Videos
Follow Us:
Download App:
  • android
  • ios