ಪ್ರಕೃತಿ ಕ್ರೂರಿಯಾ? ಹೊಸ ಚರ್ಚೆ ಹುಟ್ಟು ಹಾಕಿದ ಫೋಟೋ
ಈ ಫೋಟೋ ನಿಸರ್ಗವನ್ನು ಪರಿಚಯಿಸುತ್ತದೆ ಎಂದಿದ್ದಾರೆ. ಚಿರತೆ ಬೇಟೆಯಾಡುವ ಫೋಟೋ ಸೆರೆ ಹಿಡಿದ ಛಾಯಾಗ್ರಾಹಕರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ರಾಂಚಿ: ಐಎಫ್‌ಎಸ್ ಅರಣ್ಯಾಧಿಕಾರಿ ಸಾಕೇತ್ ಬಡೋಲಾ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಮಂಗನ ಮರಿಯೊಂದನ್ನು ಚಿರೆತೆ ಬೇಟೆಯಾಡುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಪ್ರಕೃತಿ ರಚನೆಯನ್ನು ವಿವರಿಸುತ್ತದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಪ್ರಕೃತಿಯಲ್ಲಿ ಪ್ರಾಣಿಗಳು ಆಹಾರಕ್ಕಾಗಿ ಮತ್ತೊಂದು ಪ್ರಾಣಿಯ ಮೇಲೆ ಅವಲಂಬಿತವಾಗಿವೆ. ಇದನ್ನು ಆಹಾರ ಸರಪಳಿ ಎಂದು ಕರೆಯುತ್ತಾರೆ. ಇಂದು ಜೀವಿ ಬದುಕಲು ಮತ್ತೊಂದನ್ನು ಬೇಟೆಯಾಡೋದು ಪ್ರಕೃತಿಯ ನಿಯಮವಾಗಿದೆ. ಈ ಪ್ರಕೃತಿ ನಿಯಮವನ್ನು ವಿವರಿಸುವ ಫೋಟೋವನ್ನು ಅಧಿಕಾರಿ ಸಾಕೇತ್ ಬಡೋಲಾ ಹಂಚಿಕೊಂಡಿದ್ದಾರೆ.
ಈ ಫೋಟೋವನ್ನು ಹಂಚಿಕೊಂಡಿರುವ ಸಾಕೇತ್ ಬಡೋಲಾ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. ಈ ಫೋಟೋ ಅನೇಕರಿಗೆ ನೋವುಂಟು ಮಾಡಬಹುದು. ಮರಿಮಂಗ ಜೀವ ಉಳಿಸಿಕೊಳ್ಳಲು ಪರದಾಡುತ್ತಿರೋದು ಎಲ್ಲರಿಗೂ ನೋವು ತರಿಸುತ್ತದೆ. ಮತ್ತೊಂದು ಬದಿಯಲ್ಲಿ ಚಿರತೆಗೂ ಸಹ ಅದು ಬದುಕುಳಿಯುವ ಪ್ರಶ್ನೆಯಾಗಿದೆ. ಚಿರತೆಗೆ ಬದುಕಲು ಆಹಾರ ಬೇಕು ಅಲ್ಲವೇ? ಚಿರತೆಗೂ ಇದು ನಿರ್ಣಾಯಕ ಪರಿಸ್ಥಿತಿ ಎಂಬುದನ್ನು ಕೆಲವೇ ಸಾಲುಗಳಲ್ಲಿ ಸೂಕ್ಷ್ಮವಾಗಿ ಬರೆದುಕೊಂಡಿದ್ದಾರೆ.
ಬೇರ‍್ಯಾವ ದಾರಿಯೂ ಇರಲಿಲ್ಲ, ಜೀವ ಉಳಿಬೇಕಿತ್ತು, 20 ಅಡಿಯಿಂದ ಜಿಗಿದ 8 ತಿಂಗಳ ಗರ್ಭಿಣಿ; ಆಮೇಲೆ ಏನಾಯ್ತು?
ಫೋಟೋ ಕ್ಲಿಕ್ಕಿಸಿದ್ಯಾರು?
ಇದು ಪ್ರಕೃತಿ. ಇದು ಎಲ್ಲಾ ಆಯಾಮಮಗಳನ್ನು ಪರಿಗಣಿಸಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಸಾಕೇತ್ ಬಡೋಲಾ, ಕೊನೆಗೆ ರಿಚರ್ಡ್ ಡಾಕಿನ್ಸ್ ಅವರ ಪ್ರಕೃತಿ ಕ್ರೂರವಲ್ಲ, ಅದು ಕೇವಲ ಕ್ರೂರತೆಯನ್ನು ಅಸಡ್ಡೆಯಿಂದ ಕಾಣುತ್ತದೆ ಎಂಬ ಸಾಲುಗಳನ್ನು ಉಲ್ಲೇಖಿಸಿದ್ದಾರೆ. ಈ ಫೋಟೋವನ್ನು ಉತ್ತರಾಖಂಡ್‌ನ ರಾಜಾಜಿ ಟೈಗರ್ ರಿಸರ್ವ್‌ನಲ್ಲಿ ಚಂದ್ರಶೇಖರ್ ಚೌಹಾಣ್ ಎಂಬವರು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ.
ರೀಲ್ಸ್‌ಗಾಗಿ 100 ಅಡಿ ಎತ್ತರದಿಂದ ಕೆರೆ ಹಾಕಿದ 18ರ ಯುವಕ, ಲೈಕ್ಸ್ ನೋಡಲು ಆತನೇ ಇಲ್ಲ!
ಸಾಕೇತ್ ಬಡೋಲಾ ಎಕ್ಸ್ ಖಾತೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರ. ಟೈಗರ್ ರಿಸರ್ಸ್‌ನಲ್ಲಿ ಪ್ರಾಣಿಗಳ ಫೋಟೋಗಳನ್ನು ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್‌ಸ್ಟಾಗ್ರಾಂನಲ್ಲಿಯೂ ಸಾಕೇತ್ ಆಕ್ಟಿವ್ ಆಗಿದ್ದಾರೆ.
ನೆಟ್ಟಿಗರ ಅಭಿಪ್ರಾಯ ಏನು?
ಈ ಫೋಟೋ ನೋಡಿದಾಗ ಇದು ತಪ್ಪು ಮತ್ತು ನಿಸರ್ಗ ತುಂಬಾ ಕ್ರೂರ ಅನ್ನಿಸಿತು ಎಂದು ಪ್ರಿನ್ಸಿ ಎಂಬ ಅಳುವ ಎಮೋಜಿ ಹಾಕಿ ಕಮೆಂಟ್ ಮಾಡಿದ್ದಾರೆ. ಈ ಫೋಟೋ ನಿಸರ್ಗವನ್ನು ಪರಿಚಯಿಸುತ್ತದೆ ಎಂದಿದ್ದಾರೆ. ಚಿರತೆ ಬೇಟೆಯಾಡುವ ಫೋಟೋ ಸೆರೆ ಹಿಡಿದ ಛಾಯಾಗ್ರಾಹಕರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.